ದಾಳಿಂಬೆ ಉತ್ಪಾದನೆಯಲ್ಲಿ ಭಾರತ ವಿಶ್ವದ ಪ್ರಮುಖ ರಾಷ್ಟ್ರವಾಗಿದೆ. ದೇಶದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ದಾಳಿಂಬೆ ವಿಸ್ತೀರ್ಣ, ಉತ್ಪಾದನೆ ಮತ್ತು ರಫ್ತುಗಳಲ್ಲಿ ಸ್ಥಿರವಾದ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರ, ದಾಳಿಂಬೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನದಲ್ಲಿ ಕರ್ನಾಟಕ, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳಿವೆ. ಜಾಗತಿಕ ಮಾರುಕಟ್ಟೆಯ ವಿಚಾರಕ್ಕೆ ಬರುವುದಾದರೆ 2018ರ ಅಂಕಿ-ಅಂಶದಂತೆ ದಾಳಿಂಬೆಯ ಮಾರುಕಟ್ಟೆ ಮೌಲ್ಯ ರೂ. 59,860 ಕೋಟಿ. ಇದು 2026ರ ವೇಳೆಗೆ ರೂ. 1,68,922ಕ್ಕೆ ಏರಿಕೆಯಾಗುವ ಅಂದಾಜಿದೆ. ಹಾಗಾಗಿ ದಾಳಿಂಬೆ ಬೆಳೆಗೆ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಬೇಡಿಕೆ ಹೆಚ್ಚಳವಾಗೋದು ನಿಶ್ಚಿತ.
ದಾಳಿಂಬೆ ಕೃಷಿಯಲ್ಲಿದೆ ಆದಾಯದ ಸಿಹಿ: ದಾಳಿಂಬೆ ಕೃಷಿ ಮಾಡಿ 10 ಲಕ್ಷ, 20 ಲಕ್ಷ , 30 ಲಕ್ಷ , 1 ಕೋಟಿ, 2 ಕೋಟಿ ಸಂಪಾದಿಸಿರುವ ಅನೇಕ ರೈತರು ಕರ್ನಾಟಕದಲ್ಲೇ ಇದ್ದಾರೆ. ಒಂದು ಎಕರೆ ದಾಳಿಂಬೆ ಕೃಷಿ ಮಾಡಲು ಆರಂಭದಲ್ಲಿ ಸಸಿ ವೆಚ್ಚ, ಡ್ರಿಪ್ ಖರ್ಚು, ಗೊಬ್ಬರ, ಕೆಲಸದವರ ಕೂಲಿ ಎಲ್ಲವೂ ಸೇರಿ ಒಂದರಿಂದ ಒಂದೂವರೆ ಲಕ್ಷ ಖರ್ಚು ಬರುತ್ತದೆ. ಎಕರೆಗೆ 300 ದಾಳಿಂಬೆ ಗಿಡಗಳನ್ನು ಬೆಳಸಬಹುದು. ಒಳ್ಳೆಯ ಇಳುವರಿ ತೆಗೆದರೆ ಒಂದು ಎಕರೆ ದಾಳಿಂಬೆಯಿಂದ 10ರಿಂದ 12 ಲಕ್ಷ ಆದಾಯ ಪಡೆಯಬಹುದು. ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮಾರ್ಗದರ್ಶನ ಮಾಡಿರುವ ಪ್ರಗತಿಪರ ರೈತ ಚಂದ್ರಾರೆಡ್ಡಿ ದಾಳಿಂಬೆ ಬೆಳೆದು 1.5 ಕೋಟಿ ಸಂಪಾದಿಸಿದ್ದಾರೆ. ಮತ್ತೊಬ್ಬ ಯಶಸ್ವಿ ಕೃಷಿಕ ರಾಮಕೃಷ್ಣ, ದಾಳಿಂಬೆಯಿಂದ 35 ಲಕ್ಷ ಗಳಿಸಿದ್ದಾರೆ.
ದಾಳಿಂಬೆಗೆ ಅಗತ್ಯ ಹವಾಗುಣ, ಕಾಡುವ ರೋಗಗಳು: ಈ ಬೆಳೆಯು ಹವಾಗುಣದ ಕಠಿಣ ಪರಿಸ್ಥಿತಿಯನ್ನು ತಡೆದುಕೊಳ್ಳುವ ಬೆಳೆಯಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಬರನಿರೋಧಕ ಶಕ್ತಿ ಕೂಡ ಹೊಂದಿದೆ. ದಾಳಿಂಬೆ ಬರ-ಸಹಿಷ್ಣು ಮತ್ತು ಮೆಡಿಟರೇನಿಯನ್ ಚಳಿಗಾಲ ಮಳೆಗಾಲದ ಹವಾಮಾನ ಅಥವಾ ಬೇಸಿಗೆಯ ಮಳೆಯ ವಾತಾವರಣದಲ್ಲಿ ಒಣ ಪ್ರದೇಶಗಳಲ್ಲಿ ಬೆಳೆಯಬಹುದು. ಆರ್ದ್ರ ಪ್ರದೇಶಗಳಲ್ಲಿ, ಶಿಲೀಂಧ್ರ ರೋಗಗಳಿಂದ ಬೇರು ಕೊಳೆಯುವ ಸಾಧ್ಯತೆಗಳಿವೆ. ಅಂದ್ರೆ ಅತಿಯಾದ ನೀರು ನಿಲ್ಲುವ, ಮಳೆ ಬರುವ ಪ್ರದೇಶಗಳಲ್ಲಿ ಇದನ್ನು ಬೆಳೆಯೋದು ಅಷ್ಟು ಸೂಕ್ತವಲ್ಲ. ಮಲೆನಾಡಿನ ವಾತಾವರಣಕ್ಕೆ ಅಷ್ಟಾಗಿ ಒಗ್ಗಲ್ಲ. ದಾಳಿಂಬೆಯಲ್ಲಿ ಕೀಟಬಾಧೆ ನಿಯಂತ್ರಣ ಬಹಳ ಮುಖ್ಯ. ದಾಳಿಂಬೆಯನ್ನು ಕಾಡುವ ದುಂಡಾಣು ಅಂಗಮಾರಿ ರೋಗ ಎಷ್ಟೋ ರೈತರು ದಾಳಿಂಬೆ ಬೆಳೆಯನ್ನು ಬಿಟ್ಟು ಬೇರೆ ಬೆಳೆಗಳತ್ತ ಮುಖ ಮಾಡುವಂತೆ ಮಾಡಿದೆ.
ದಾಳಿಂಬೆ ತಳಿಗಳು: ದಾಳಿಂಬೆಯ ಪ್ರಮುಖ ತಳಿಗಳನ್ನು ಹೆಸರಿಸೋದಾದ್ರೆ ಮೃದುಲಾ/ಆರಕ್ತ, ರುಬಿ ರೆಡ್, ಕೇಸರ್ / ಭಗವಾ /ಸಿಂಧೂರ, ಭಾಗ್ವಾ, ಜಿಬಿಜಿ 1, ಜ್ಯೋತಿ ಮತ್ತು ಜಿ-137. ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣಿನ ಗುಣಮಟ್ಟ ಆಧರಿಸಿ ತಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಸಿ ಮಾಡಿದ ಸಸಿಗಳನ್ನು ಪಡೆದರೆ ಉತ್ತಮ ಇಳುವರಿ ಸಿಗುತ್ತದೆ ಎನ್ನುತ್ತಾರೆ ರೈತರು. ಪ್ರತಿ ದಾಳಿಂಬೆ ಸಸಿಗೆ ಮಾರುಕಟ್ಟೆಯಲ್ಲಿ ಸುಮಾರು 40 ರೂಪಾಯಿ ಬೆಲೆ ಇದೆ.
ದಾಳಿಂಬೆ ಆರೋಗ್ಯ ಗುಣಗಳು: ದಾಳಿಂಬೆಯಲ್ಲಿರುವ ಅಂಶ ನೆನಪಿನ ಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ದಿನಗಳಲ್ಲಿ ಅತಿಯಾಗಿ ಕಾಡುತ್ತಿರುವ ಅಧಿಕ ರಕ್ತದೊತ್ತಡದ ಸಮಸ್ಯೆಗೂ ರಾಮಬಾಣ ದಾಳಿಂಬೆ. ದಾಳಿಂಬೆ ಜ್ಯೂಸ್ನ್ನು ಪ್ರತಿನಿತ್ಯವೂ ಕುಡಿಯುವುದರಿಂದ ಕೊಲೆಸ್ಟ್ರಾಲ್ ಸುಧಾರಿಸುತ್ತದೆ ಎನ್ನುತ್ತಾರೆ ವೈದ್ಯರು. ದಾಳಿಂಬೆಯು ಕೇವಲ ನಮ್ಮ ದೇಹದೊಳಗಿನ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ, ಚರ್ಮದ ಸೌಂದರ್ಯವನ್ನು ವೃದ್ಧಿಸುತ್ತದೆ. ಚರ್ಮರೋಗ ತಜ್ಞರ ಪ್ರಕಾರ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ದಾಳಿಂಬೆ ತುಂಬಾ ಒಳ್ಳೆಯದು. ಹಲವಾರು ರೀತಿಯ ಕ್ಯಾನ್ಸರ್ ತಡೆಗಟ್ಟುವ ಅಂಶಗಳು ಕೂಡ ದಾಳಿಂಬೆಯಲ್ಲಿ ಅಡಕವಾಗಿವೆ.
ಅದೆಷ್ಟೋ ರೈತರು ತಮ್ಮ ಭೂಮಿಗೆ ಅನುಗುಣವಾಗಿ ಯಾವ ಬೆಳೆ ಬೆಳೆಯಬಹುದು? ದಾಳಿಂಬೆ ಬೆಳೆ ಬೆಳೆಯಲು ಎಷ್ಟು ಬಂಡವಾಳ ಬೇಕು? ಇದಕ್ಕಾಗಿ ಸರ್ಕಾರದಿಂದ ಏನಾದ್ರು ಸವಲತ್ತುಗಳಿವೆಯಾ? ದಾಳಿಂಬೆ ಬೆಳೆಗೆ ಭೂಮಿ ಸಿದ್ಧತೆ ಮಾಡೋದು ಹೇಗೆ? ಯಾವ ಗೊಬ್ಬರ ಸೂಕ್ತ? ಬೇಕಾಗುವ ಅಗತ್ಯ ಮೂಲಸೌಕರ್ಯಗಳಾವುವು? ಹೀಗೆ ಸೂಕ್ತ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಇದನ್ನು ಮನಗಂಡಿರುವ ಇಂಡಿಯನ್ ಮನಿ ಡಾಟ್ ಕಾಮ್ ತನ್ನ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ದಾಳಿಂಬೆ ಕೃಷಿ ಕೋರ್ಸ್ ಅನ್ನು ರೂಪಿಸಿದೆ. ದಾಳಿಂಬೆ ಕೃಷಿಯಲ್ಲಿ ಸಾಕಷ್ಟು ಹಣ ಸಂಪಾದಿಸಿರುವ ರೈತರು ಇಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ, ಇನ್ನೇಕೆ ತಡ ಆದಷ್ಟು ಬೇಗ ದಾಳಿಂಬೆ ಕೃಷಿ ಮಾಡಿ ಕೋಟಿ ಗಳಿಸುವುದು ಹೇಗೆ ಎಂಬ ಕೋರ್ಸ್ ನೋಡಲಾರಂಭಿಸಿ. ಆದಾಯ ಗಳಿಸಲು ಈ ಬೆಳೆ ನಿಮಗೂ ಸೂಕ್ತ ಅನಿಸಿದರೆ ದಾಳಿಂಬೆ ಕೃಷಿ ಆರಂಭಿಸಿ ಹಣ ಸಂಪಾದಿಸಿ.