ಮಹಿಳಾ ಶಿಕ್ಷಣ, ಸಬಲೀಕರಣ ಬೆಂಬಲಿಸುವ ನಿಟ್ಟಿನಲ್ಲಿ ಜಗತ್ತಿನ ಇಂಟರ್ನೆಟ್ ದಿಗ್ಗಜ ಕಂಪನಿ ಗೂಗಲ್ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿ ವೃತ್ತಿ ಮುಂದುವರಿಸಲು ಬಯಸುವ ಯುವತಿಯರು ಈ ಸ್ಕಾಲರ್ಶಿಪ್ ಪಡೆಯಲು ಅರ್ಹರು. ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಫಾರ್ ವುಮೆನ್ ಇನ್ ಕಂಪ್ಯೂಟರ್ ಸೈನ್ಸ್ ಎಂಬುದು ಸ್ಕಾಲರ್ಶಿಪ್ ಹೆಸರು. ಶಾರ್ಟ್ಲಿಸ್ಟ್ ಆದ ವಿದ್ಯಾರ್ಥಿಗಳು 2022-23ರಲ್ಲಿ 1,000 ಅಮೆರಿಕನ್ ಡಾಲರ್ (ಅಂದಾಜು 74,000 ರೂ.) ಸ್ಕಾಲರ್ ಶಿಪ್ ಪಡೆಯಲಿದ್ದಾರೆ.
ವೈವಿಧ್ಯತೆ, ಸಮಾನತೆ, ಒಳಗೊಳ್ಳುವಿಕೆ, ನವೋನ್ವೇಷಣೆ ಕುರಿತ ಬದ್ಧತೆ ಮತ್ತು ಶೈಕ್ಷಣಿಕ ಸಾಧನೆಗಳು ಅರ್ಜಿದಾರರ ಆಯ್ಕೆಯಲ್ಲಿ ಮಾನದಂಡವಾಗಿ ಪರಿಗಣಿಸಲ್ಪಡುತ್ತದೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ ಪದವಿಯ ಪೂರ್ಣ ಪ್ರಮಾ ಣದ ತರಗತಿಗೆ ಪ್ರವೇಶ ಪಡೆದ ಯುವತಿಯರು ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವಿದ್ಯಾರ್ಥಿನಿಯರು ತಮ್ಮ ರೆಸ್ಯೂಮೆ/ಸಿವಿಯನ್ನು ಮತ್ತು ಎರಡು 400 ಪದಗಳ ಪ್ರಬಂಧವನ್ನು ಇಂಗ್ಲಿಷ್ನಲ್ಲಿ ಬರೆದು ಗೂಗಲ್ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಕೆಗೆ ಈ ಕೊಂಡಿ ಬಳಸಿ- https://tinyurl.com/ffpx5em5