| ಜಯಶ್ರೀ ಜೆ. ಅಬ್ಬಿಗೇರಿ
ವ್ಯಕ್ತಿಯೊಬ್ಬ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ. ಅದೇ ಸಮಯಕ್ಕೆ ಎಣ್ಣೆ ಬ್ಯಾರೆಲ್ಗಳ ಟ್ರಕ್ಗೆ ಬೆಂಕಿ ತಗುಲಿತ್ತು. ಟ್ರಕ್ನ ಚಾಲಕ ಡ್ರಮ್ಗಳ ಮಧ್ಯೆ ಸಿಲುಕಿದ್ದ. ರಸ್ತೆಯಲ್ಲಿ
ಕಷ್ಟದಲ್ಲಿ ಇದ್ದವರನ್ನು ಪಾರು ಮಾಡುವುದು ಅತ್ಯುತ್ತಮ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಹಿಂಜರಿಯುವುದು ಸಾಮಾನ್ಯ ಮಾನವ ವರ್ತನೆ ಎಂಬಂತಾಗಿದೆ. ಆದರೆ ನಾವು ಇದಕ್ಕಿಂತ ಮೇಲೆ ಹೋಗಬೇಕು. ಪ್ರಪಂಚದಲ್ಲಿ ಪ್ರಬುದ್ಧ ಚಿಂತಕರು, ಪ್ರಕಾಂಡ ಪಂಡಿತರು, ಜ್ಞಾನವಂತರು, ಬುದ್ಧಿವಂತರು ಹೇರಳವಾಗಿ ಇದ್ದಾರೆ. ಅವರ ಅಗತ್ಯತೆಯೂ ನಮಗಿದೆ. ಆದರೆ, ಈಗ ನಮಗೆ ಹೃದಯವಂತರ ಅಗತ್ಯ ಹೆಚ್ಚಿದೆ. ಜಗದ ಎಲ್ಲ ಮಾಧುರ್ಯವೂ ಜನರ ಸೇವೆಯಲ್ಲೇ ಇದೆ. ಆದರ್ಶಪುರುಷರೆಲ್ಲ ಸಹಜೀವಿಗಳ ಸೇವೆ ಮಾಡಲು ಹೇಳಿದ್ದಾರೆ. ಅದರಲ್ಲೂ ಕಷ್ಟದಲ್ಲಿರುವ ಮನುಷ್ಯನ ಸೇವೆ ಮಾಡಿದಾಗ ಅವರ ಕಂಗಳಲ್ಲಿ ಕಾಣುವ ಕೃತತೆಯ ಭಾವವನ್ನು ಅನುಭವಿಸಿದವರಿಗೆ ಜೀವನ ಸಾರ್ಥಕವೆಂಬ ಭಾವ ಮೂಡುತ್ತದೆ. ನಮ್ಮ ಪರಿಸ್ಥಿತಿ ಚೆನ್ನಾಗಿದೆ. ಉಣ್ಣುವುದಕ್ಕೆ, ಉಡುವುದಕ್ಕೆ ತೊಂದರೆಯಿಲ್ಲ. ಬೇರೆಯವರ ಬಗ್ಗೆ ನಾವೇಕೆ ಚಿಂತಿಸಬೇಕು ಎಂಬ ಅಭಿಪ್ರಾಯ ಸರಿಯಲ್ಲ. ನಮ್ಮಲ್ಲಿ ಅನುಕಂಪ, ಸಹಾನುಭೂತಿ ಇರಬೇಕು. ಪಕ್ಕದ ಮನೆಗೆ ಬೆಂಕಿ ಬಿದ್ದರೆ ನಮ್ಮ ಮನೆ ಸಹ ಉಳಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕು. ಕಷ್ಟದ ಕ್ಷಣಗಳು ಹೊರಟು ಹೋಗಲಿವೆ ಎನ್ನುವ ಧೈರ್ಯದೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕು. ಕಷ್ಟಗಳು ತಬ್ಬಿಬ್ಬುಗೊಳಿಸುತ್ತವೆ. ಆದರೆ ಅವು ಕ್ಷಣಿಕವೆಂದುಕೊಂಡರೆ ಮನಸ್ಸು, ಬುದ್ಧಿ ಸರಿಯಾಗಿ ಕೆಲಸ ಮಾಡುತ್ತವೆ. ಆಗ ಬದುಕು ಬೆಳಕಿನತ್ತ ನಡೆಯುತ್ತದೆ.
(ಲೇಖಕಿ ಇಂಗ್ಲಿಷ್ ಉಪನ್ಯಾಸಕಿ)
(ಪ್ರತಿಕ್ರಿಯಿಸಿ: manollasavv@gmail.com)