ಅಂಕಣ

ಜೀವನದ ಗುರಿ ಹೇಗಿರಬೇಕು?

| ಪ್ರಸಾದ್​ ಸುಂದರ ರಾವನ್​

ಮೀನಾ ಮತ್ತು ಪದ್ಮಾ ಆಪ್ತ ಗೆಳತಿಯರು. ಮೀನಾ ಜೀವನೋಪಾಯಕ್ಕೆ ಮೀನು ಮಾರಿದರೆ ಪದ್ಮಾ ಹೂವು ಮಾರುತ್ತಾಳೆ. ಒಂದು ಸಂಜೆ ಸಂತೆಯಲ್ಲಿ ತನ್ನ ಮೀನುಗಳನ್ನು ಮಾರಿ ಮನೆಗೆ ಮರಳುವಾಗ ಮೀನಾ ತನ್ನ ಗೆಳತಿಯನ್ನು ಕಂಡಳು. ಗೆಳತಿಯ ಒತ್ತಾಯಕ್ಕೆ ಅವಳ ಮನೆಯಲ್ಲೇ ಅಂದಿನ ರಾತ್ರಿ ಕಳೆಯಲು ಒಪ್ಪಿದಳು. ರಾತ್ರಿ ಊಟ, ಮಾತುಕತೆಗಳ ನಂತರ ನಿದ್ದೆ ಮಾಡಲು ಮಲಗುವ ಕೊಠಡಿಗೆ ಹೋದರು. ಕೊಠಡಿಯಲ್ಲಿ ಅನೇಕ ಸುಗಂಧ ಪರಿಮಳ ಸುವಾಸನೆಯುಳ್ಳ ಹೂವಿನ ಬುಟ್ಟಿಗಳು. ಇಂತಹ ಸುಗಂಧಭರಿತ ಕೊಠಡಿಯಲ್ಲಿ ತನ್ನ ಪ್ರಿಯ ಸಖಿಗೆ ಸುಖನಿದ್ರೆ ಬರುವುದೆಂಬ ನಂಬಿಕೆ ಪದ್ಮಾಗೆ. ವಿಪರ್ಯಾಸವೆಂದರೆ ಬಹಳ ಹೊತ್ತು ಹೊರಳಾಡಿದರೂ ನಿದ್ದೆ ಬರದೇ ಮೀನಾ ಪದ್ಮಾಯನ್ನು ಎಬ್ಬಿಸಿದಳು. ಇಂತಹ ಪರಿಮಳ ಸೂಸುವ ವಾತವರಣವಿದ್ದರೂ ಹೇಗೆ ಆಕೆಗೆ ನಿದ್ದೆ ಬರುತ್ತಿಲ್ಲವೆಂದು ಪದ್ಮಾಗೆ ಪರಮಾಶ್ಚರ್ಯ. ಹೋಗಲಿ. ನಿದ್ದೆ ಬರಲು ಏನು ಮಾಡಿದರೆ ಅನುಕೂಲವಾಗುತ್ತದೆಂದು ಕೇಳಲು, ತನ್ನ ಮೀನಿನ ಬುಟ್ಟಿಯನ್ನು ತನ್ನ ಬಳಿ ಇಟ್ಟುಕೊಳ್ಳುವುದಕ್ಕಾಗಿ ಮೀನಾ ಕೇಳಿಕೊಂಡಳು. ಆಗಲಿ ಎಂದು ಪದ್ಮಾ ತಾನೇ ಹೋಗಿ ಮೀನಿನ ಬುಟ್ಟಿಯನ್ನು ಮೂಗು ಮುಚ್ಚಿಕೊಂಡು ತಂದಳು.

ಬುಟ್ಟಿಗೆ ಕೊಂಚ ನೀರನ್ನು ಚಿಮುಕಿಸಿ ಮೀನಾ ಆ ಮೀನಿನ ವಾಸನೆಯಲ್ಲಿಯೇ ಸಂತೋಷವಾಗಿ ಮಲಗಿದಳು. ಆದರೆ ಪದ್ಮಾಗೆ ಮೀನಿನ ವಾಸನೆಯಿಂದ ನಿದ್ದೆಯೇ ಬರದೇ ಒದ್ದಾಡಿದಳು. ಕೊನೆಗೆ ಹೂವು ಬುಟ್ಟಿ ಸಮೇತ, ಪದ್ಮಾ ಮತ್ತೊಂದು ಕೊಠಡಿಗೆ ಹೋಗಿ ಮಲಗಿದಳು. ಇದನ್ನೇ "ಅವರದ್ದು ಅವರಿಗೇ' ಎಂದು ಶ್ರೀರಾಮಕಷ್ಣ ಪರಮಹಂಸರು ಹಿಂದೆಯೇ ನುಡಿದಿರುವ ಕಥೆ.

ಸೂ$್ಮವಾಗಿ ಗಮನಿಸಿದರೆ ನಮ್ಮ ಸ್ಥಿತಿಯೂ ಒಂದು ರೀತಿಯಲ್ಲಿ ಹಾಗೆಯೇ ಇದೆ. ಇಂದ್ರಿಯ ಜೀವನಕ್ಕಿಂತ ಕೋಟಿ ಕೋಟಿ ಪಾಲು ಆನಂದಭರಿತ ಜೀವನವೊಂದು ಉಂಟು. ಆದರೆ ನಮಗೆ ಅದು ಬೇಡವಾಗಿದೆ. ಇಹ ಜೀವನವನ್ನೇ, ಇಂದ್ರಿಯ ಜೀವನವನ್ನೇ ನಾವು ಪರಮಾದ್ಭುತ ಎಂದು ಭಾವಿಸಿ ದೆವಿಕ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕಾದರೆ ಒದ್ದಾಡುತ್ತೇವೆ. ನಮ್ಮ ಋಷಿ&ಮುನಿಗಳು ಏಕನಿಷ್ಠ ತಪಸ್ಸಿನಿಂದ ಅಂತರಂಗದಲ್ಲಿ ಇಂದ್ರಿಯ ಬಾಳಾಟವನ್ನೂ ಮೀರಿರುವಂತಹ ದೆವಿಕ ಹಾಗೂ ಆಧ್ಯಾತ್ಮಿಕ ಬಾಳನ್ನು ಕಂಡು ಕೋಟಿ ಕೋಟಿ ಪಾಲು ಆನಂದವನ್ನು ಅನುಭವಿಸಿದರು. ಮನುಕುಲದ ಒಳಿತಿಗಾಗಿ ತಾವು ಕಂಡನುಭವಿಸಿಸದ್ದನ್ನು ಉಣಬಡಿಸಲು ಸಂಸತಿ, ಸಂಸ್ಕಾರ, ಹಬ್ಬ, ಹರಿದಿನ ಇತ್ಯಾದಿಯಾಗಿ ನಾನಾ ರೀತಿಯಲ್ಲಿ ನಮಗೆ ಎಟಕುವ ರೀತಿಯಲ್ಲಿ ಹಾಕಿಕೊಟ್ಟಿದ್ದಾರೆ. ಆದರೆ ಈ ಯಾವುದರಲ್ಲೂ ಇಂದ್ರಿಯ ಜೀವನವನ್ನು ಹಳಿಯಲಿಲ್ಲ. "ಇಂದ್ರಿಯ ಸುಖ ಹಾಗೂ ಇಂದ್ರಿಯಾತೀತ ಸುಖ (ಭೋಗಮಯ ಜೀವನ ಹಾಗೂ ಯೋಗಮಯ ಜೀವನ) ಜೊತೆ ಜೊತೆಗೇ ಇರಬೇಕೆನ್ನುವುದೇ ನಮ್ಮ ಜೀವನದ ಗುರಿಯಾಗಬೇಕು' ಎಂಬ ಶ್ರೀರಂಗ ಮಹಾಗುರುವಿನ ಮಾತು ಇಲ್ಲಿ ಸ್ಮರಣೀಯ.

(ಲೇಖಕರು ಸಂಸತಿ ಚಿಂತಕರು)

(ಪ್ರತಿಕ್ರಿಯಿಸಿ: manollasavv@gmail.com)