"ಬಡವನಿಗೆ ಬಡತನವಲ್ಲದೆ ನೂರಾರು ಕಷ್ಟಗಳು ಮೆಮೇಲೆ ಬಂದಿರುತ್ತವೆ. ತನ್ನನ್ನು ನಂಬಿದವರು ಹಸಿದಿರುತ್ತಾರೆ. ಪ್ರಾಮಾಣಿಕನಾಗಿದ್ದರೂ ಎದ್ದು ನಿಲ್ಲಲು ಸಹಾಯ ಸಿಗುವುದಿಲ್ಲ. ಮಾಡಬೇಕೆಂದಿರುವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಮತ್ತು ಅವನು ಕಳೆದುಕೊಳ್ಳುವ ಎಲ್ಲ ಸಾಮಾಜಿಕ, ಆರ್ಥಿಕ ನಷ್ಟವನ್ನು ತಮ್ಮ ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಒಂದಷ್ಟು ಜನ ಕಾದು ಕುಳಿತಿರುತ್ತಾರೆ'. ಈ ಮಾತನ್ನು "ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು' ಎನ್ನುವ ಪುಸ್ತಕದಲ್ಲಿ ಓದುತ್ತಿದ್ದೆ. ಆಗ ತಣ ಮನಸ್ಸಿಗೆ ಹೊಳೆದದ್ದು ಕೆಲವು ದಿನಗಳಲ್ಲಿ ಓದಿದ್ದ "CRAFTS OF INDIA' ಎಂಬ ಪುಸ್ತಕದ ಹಲವಾರು ಲೇಖನಗಳು. "ಹ್ಯಾಂಡ್ಮೇಡ್ ಇನ್ ಇಂಡಿಯಾ'
ಕಾಶ್ಮೀರದ ಕೆಮಗ್ಗದ ಕಾರ್ಪೆಟ್ಗಳು, ಶಾಲುಗಳು, ಅದರಲ್ಲೂ ಕುರಿಯ ರೋಮಗಳನ್ನು ಸಂಗ್ರಹಿಸಿ ಮಾಡುವ ಪಷ್ಮೀನ ಶಾಲುಗಳು ಜಗದ್ವಿಖ್ಯಾತ ವಾದವುಗಳು. ಆ ಕಲಾವಿದರು ಒಂದು ಶಾಲನ್ನು, ಕಾರ್ಪೆಟನ್ನು ತಯಾ ರಿಸಲು ಆರು ತಿಂಗಳುಗಳಿಂದ ಒಂದು ವರ್ಷ ತೆಗೆದುಕೊಳ್ಳುತ್ತಾರೆ. ಅವರು ಕೊಡುವಂತಹ ವಸ್ತುಗಳನ್ನು ಅಂಗಡಿಯವರು ವ್ಯಾಪಾರಕ್ಕೆ ಉಪಯೋಗಿ ಸುತ್ತಾರೆ ಅಥವಾ ವಿದೇಶಕ್ಕೆ ಕಳುಹಿಸುತ್ತಾರೆ. ಆರು ತಿಂಗಳ ಕಾಲ ದುಡಿದ ಅವನಿಗೆ ದೊರಕುವಂತಹ ಅಲ್ಪ ಮೊತ್ತದಿಂದ ಅವನು ಜೀವನ ಮಾಡಬೇಕು. ಒಂದು ರೇಷ್ಮೇಸಿರೆ ಅಥವಾ ಕಾರ್ಪೆಟ್ ಅಥವಾ ಇನ್ಯಾವುದೋ ವಸ್ತು ತಯಾರಿಸಬೇಕಾದರೆ ಒಂದು ತಿಂಗಳಿಂದ ಆರುತಿಂಗಳವರೆಗೆ ಸಮಯ ಬೇಕಿದ್ದರೆ ಆತನ ಸಹನೆ ಎಷ್ಟಿರಬೇಕು? ಆತ ಮಾಡುವ ಕಲೆ, ವತ್ತಿಯ ಮೇಲೆ ಗೌರವ ಮತ್ತು ಶ್ರದ್ಧೆ ಎಷ್ಟಿರಬೇಕು ಎಂದು ಊಹಿಸಿಕೊಳ್ಳೋಣ. ಅದೇ ಆ ವಸ್ತುಗಳು ತಯಾರಾದಾಗ ಅವನಿಗೆ ಸಿಗುವಂತಹ ಮಾನ್ಯತೆ ಎಷ್ಟು? ಇತ್ತೀಚೆಗಷ್ಟೇ ಕೆಲವು ಗುಡಿಕೆಗಾರಿಕೆಗೆ ಸರ್ಕಾರದಿಂದ ಮಾನ್ಯತೆ ದೊರೆತಿದೆ. ಹಿಂದೆ ಕೆಲವು ರಾಜರಿಂದ ದೊರಕಿರಬಹುದು.
ಹಾಸ್ಯಕ್ಕೊಂದು ಕತೆ ಇದೆ. ಒಂದು ರಾಜ್ಯದಲ್ಲಿ ಬಹಳ ತೆಳುವಾದ ಬಟ್ಟೆಯನ್ನು ತಯಾರಿಸುವ ನಿಪುಣ ಕಲಾವಿದನಿದ್ದ. ಅವನ ಪ್ರಖ್ಯಾತಿ ಕೇಳಿದ ರಾಜ ಅವನನ್ನು ಕರೆಸಿ, "ನನಗೊಂದು ಒಳ್ಳೆಯ ದಿರಸು ತಯಾರಿಸಿಕೊಡು' ಎಂದ. ಈತ ನೂಲು ತೆಗೆದು ಒಳ್ಳೆಯ ಬಟ್ಟೆ ತಯಾರಿಸಿ ರಾಜನಿಗೆ ಕೊಟ್ಟ. ರಾಜ ಅದನ್ನು, ರಾಜದರ್ಬಾರಿನ ದಿವಸ ಅಥವಾ ಮೆರವಣಿಗೆಯಲ್ಲಿ ಹೋಗುವ ದಿವಸ ಧರಿಸಿದ. ಅವನ ಮೆಯೆಲ್ಲ ಕಾಣುತ್ತಿತ್ತು. ಎಷ್ಟೆಂದರೆ ರಾಜನ ಮೆಮೇಲಿರುವ ಕೂದಲು ಕೂಡ ಕಾಣಿಸುತ್ತಿದೆ. ಆದರೆ ರಾಜ ತಾನು ಶ್ರೇಷ್ಠ ಕಲಾವಿದನಿಂದ ನೇಯ್ದಿರುವ ಬಟ್ಟೆ ಧರಿಸಿದ್ದೇನೆ ಎಂಬ ಅಭಿಮಾನದಲ್ಲಿ ಬೀಗುತ್ತ ಮೆರವಣಿಗೆಯಲ್ಲಿ ಹೊರಟಿದ್ದ. ರಾಜನಾದುದರಿಂದ ಯಾರಿಗೂ ಹೇಳುವುದಕ್ಕೆ ಧೆರ್ಯವಿಲ್ಲ. ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಒಂದುಮನೆಯ ಮಾಳಿಗೆಯಲ್ಲಿ ನಿಂತಿದ್ದ ಮಗುವೊಂದು ಗಟ್ಟಿಯಾಗಿ, "ಅಮ್ಮ ರಾಜ ಬೆತ್ತಲೆ ಇದ್ದಾನೆ' ಎಂದು ಕಿರುಚಿತು. ಆಗ ರಾಜನಿಗೆ ತನ್ನ ಮೆಮೇಲೆ ಇರುವ ಬಟ್ಟೆ ನವಿರಾಗಿದ್ದು, ಅದರ ಪಾರದರ್ಶಕತೆ ಅರಿವಿಗೆ ಬಂತು. ಹಾಗೆ ಮಗು ಸತ್ಯ ಹೇಳುವವರೆಗೂ ಗೊತ್ತಾಗದ ಸತ್ಯ, ಈ ಗುಡಿಕೆಗಾರಿಕೆಯಲ್ಲಿದೆ. ಇಂದು ಆ ಕಲಾವಿದರೆಲ್ಲ ಮರೆಯಾಗಿದ್ದಾರೆ. ಅವರ ಮಕ್ಕಳು ಆ ಉದ್ಯೋಗ ಬಿಟ್ಟು, ಶಿಣ ಪಡೆದು ಬೇರೆ ಉದ್ಯೋಗ ಹೊಂದಿದ್ದಾರೆ. ಸ್ವರ್ಣಕಾರರಿಗೆ ಅಂದರೆ ಚಿನ್ನದ ಕೆಲಸ ಮಾಡುವವರಿಗೆ ಕಲೆ ಬಹಳ ಸ್ವಾಭಾವಿಕವಾಗಿ ಬಂದಿರುತ್ತದೆ. ಉದಾಹರಣೆಗೆ ನಮ್ಮ ಸ್ವರ್ಣಕಾರರ ಕುಟುಂಬದಲ್ಲಿ ಅಥವಾ ಆ ಮನೆತನದಲ್ಲಿ ಹುಟ್ಟಿದವರು ನಾಲ್ಕೆ$ದುಗೆರೆ ಎಳೆದರೆ ಸಾಕು ಚಿತ್ರ ತಯಾರಾಗುತ್ತದೆ.
ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಮೂಲಕ ಮಾಡುವ ಚಿತ್ರಕಲಾ ಸ್ಪರ್ಧೆ "ಅಂಚೆ&ಕುಂಚ' ಕಾರ್ಯಕ್ರಮದಲ್ಲಿ ಪ್ರತಿವರ್ಷ ವಿವಿಧ ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ&ಪ್ರಶಸ್ತಿಗಳನ್ನು ಪಡೆಯುತ್ತಿದ್ದರು. ಡಾ. ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ ಒಮ್ಮೆ ಶ್ರೀೇತ್ರಕ್ಕೆ ಬಂದಿದ್ದರು. "ಅಂಚೆ&ಕುಂಚ' ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಆ ವರ್ಷ ಬಹುಮಾನ ಬಂದ ವಿದ್ಯಾರ್ಥಿಯ ಹೆಸರನ್ನು ಕೇಳಿದರು. ಆತನ ಹೆಸರಿನ ಜೊತೆಗಿದ್ದ ಸರ್ನೇಮ್ನ್ನು ಗಮನಿಸಿ ಕಲಾಂರವರು, "ಹೋ ನೀನು ಇಂತಹ ಜಾತಿಗೆ ಸಂಬಂಧಪಟ್ಟವನು ಇರಬೇಕಲ್ಲವೇ?' ಎಂದು ಕೇಳಿದರು. ಆತ ಹೌದೆಂದ. "ನಿನ್ನ ರಕ್ತದಲ್ಲಿಯೇ ಈ ಕಲೆ ಇದೆ. ನೀನು ಅದನ್ನು ಬಿಡಬೇಡ' ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ನಿಜ, ನಾನು ಅನೇಕ ಜನರಿಗೆ ಹೇಳುತ್ತಿದ್ದೇನೆ. ನಿಮ್ಮ ಕುಲಕಸುಬನ್ನು ಬಿಡಬೇಡಿ. ಈಗ ಆಧುನಿಕವಾಗಿ ಎಲ್ಲ ಕಲೆಗಳಿಗೆ ಬೆಲೆ ಬಂದಿದೆ. ಕಲೆಯನ್ನು ಸುಧಾರಣೆ, ಮಾರ್ಪಾಡು ಮಾಡ್ಕೊಳ್ಳಿ. ಆಧುನಿಕತೆಗೆ ಹೊಂದಿಸಿಕೊಳ್ಳಿ. ಚಿನ್ನದ ಕೆಲಸ ಮಾಡುವವರು ಅಥವಾ ಮರದ ಕೆಲಸ ಮಾಡುವವರು ಅವರು ಮುಟ್ಟಿದರೆ ಅದು ಕಲೆಯಾಗುತ್ತದೆ. ಭಾರತವನ್ನು ವಿಶ್ವಸಂಸ್ಥೆಯ ಪುರಾತತ್ವ ವಿಭಾಗವು ಶ್ರೇಷ್ಠ ಕಲೆಯ ಸಂಪತ್ತೆಂದು ಗುರುತಿಸಿದೆ. ಆದರೆ ಆಧುನಿಕತೆ ಹೆಸರಿನಲ್ಲಿ ಶಿಲ್ಪಕಲೆ ನಾಶವಾಗುತ್ತಿದೆ. ಕಟ್ಟಡಗಳು ಹಾಗೂ ದೇವಾಲಯಗಳು ಸಿಮೆಂಟಿನಿಂದಲೇ ರಚಿತವಾಗತೊಡಗಿವೆ.
1965ನೇ ಇಸವಿಗೆ ನನ್ನ ತಂದೆ ರತ್ನವರ್ಮ ಹೆಗ್ಗಡೆ, ಮಾತಶ್ರೀ ರತ್ನಮ್ಮನವರ ಪ್ರೇರಣೆಯಿಂದ ಶ್ರೀಬಾಹುಬಲಿ ಮೂರ್ತಿಯನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಿದರು. ಆದರೆ ಶಿಲ್ಪಗಳೆಲ್ಲಿ? ಏಕಶಿಲಾ ಮೂರ್ತಿಯೇ ರಚನೆಯಾಗಬೇಕು. ಅಂದು ಕಾರ್ಕಳದಲ್ಲಿ ರೆಂಜಾಳ ಗೋಪಾಲಕಷ್ಣ ಶೆಣೆಯವರ ಬಗ್ಗೆ ವಿಶ್ವಾಸವಿಟ್ಟು ಅವರನ್ನು ಕೇಳಿಕೊಂಡರು. ಶೆಣೆಯವರು ಒಪ್ಪಿದ್ದು ಇತಿಹಾಸ ಹಾಗೂ ಭಗವದಿಚ್ಛೆ. ಮೂರ್ತಿ ನಿರ್ಮಾಣಕ್ಕೆ ನೂರಕ್ಕೂ ಮಿಕ್ಕಿ ಶಿಲ್ಪಿಗಳು ತಮಿಳುನಾಡಿನಿಂದ ಬಂದರು (ಕರ್ನಾಟಕದಲ್ಲಿ ಗುಂಪಾಗಿ ಕೆಲಸ ಮಾಡಬಲ್ಲ ಶಿಲ್ಪಿಗಳಿರಲಿಲ್ಲ). ಮೂರ್ತಿ ನಿರ್ಮಾಣವಾಗಿ 1972ರಲ್ಲಿ ಕೆಲಸ ಮುಕ್ತಾಯವಾದಾಗ ಆ ಶಿಲ್ಪಿಗಳು ಕರ್ನಾಟಕದಲ್ಲಿಯೇ ಉಳಿದುಕೊಂಡರು. ಹೊಸ ಶಿಲ್ಪಿಗಳ ಗುಂಪುಗಳು ರಚನೆಯಾಗಿ ಶಿಲಾಮಯ ದೇವಸ್ಥಾನಗಳು ರಚನೆಯಾದವು. ಇಂದು ಕರ್ನಾಟಕದಲ್ಲಿ ಸಣ್ಣ ಹಳ್ಳಿಗಳಲ್ಲೂ ಶಿಲಾಮಯ ದೇವಾಲಯಗಳು ನಿರ್ಮಾಣವಾಗುತ್ತಿವೆ. ಕನ್ನಡಿಗರೂ ಕೆಲಸ ಕಲಿತು ಶಿಲ್ಪಿಗಳಾಗಿದ್ದಾರೆ.
"ಗಹ ಕೆಗಾರಿಕೆ ಮತ್ತು ಗುಡಿಕೆಗಾರಿಕೆ ದೇಶದ ಅಮೂಲ್ಯ ಸಂಪತ್ತು. ಅದನ್ನು ಉಳಿಸಿಕೊಳ್ಳಿ, ರಸಿಕೊಳ್ಳಿ' ಎಂದು ಗಾಂಧೀಜಿ ಹೇಳುತ್ತಿದ್ದರು. ಇಂದು ಅನೇಕ ಸಂಟನೆಗಳು, ಸಂಸ್ಥೆಗಳು ಮತ್ತು ಕಟ್ಟಡಗಳ ವಿನ್ಯಾಸಗಾರರು, ಒಳಾಂಗಣ ವಿನ್ಯಾಸಗಾರರು ಗ್ರಾಮೀಣ ಕಲಾವಿದರ ಬಗ್ಗೆ ಗಮನ ಹರಿಸಿ, ಅವರಿಂದ ತಯಾರಿಸಲ್ಪಟ್ಟ ವಿಶಿಷ್ಟ ಕಲೆಗಳನ್ನು ತಮ್ಮ ಕಟ್ಟಡದ ವಿನ್ಯಾಸಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಲಾವಿದರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕಲಾವಿದರರನ್ನು ಪೋಷಿಸಿ ಬೆಳೆಸಬೇಕಾಗಿದೆ, ಅವರ ಬಡತನವನ್ನು ದೂರ ಮಾಡಬೇಕಿದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)