ಆದರೆ ಇದು ಚೀನಾದ ಗನ್ಸು ಪ್ರಾಂತ್ಯದಲ್ಲಿದಲ್ಲಿ ಗುಡ್ಡ ಬೆಟ್ಟಗಳಿಂದ ಕೂಡಿರುವ ಸುಂದರ ತಾಣ. ಲಕ್ಷಾಂತರ ವರ್ಷಗಳಿಂದ ರಾಶಿ ಬಿದ್ದು, ಖನಿಜಗಳ ಸಣ್ಣಸಣ್ಣ ಗುಡ್ಡಗಳು ನಿರ್ಮಾಣ
ವಾದವು. ಕ್ರಮೇಣ ಮಳೆ ಮತ್ತು ಗಾಳಿಗೆ ಕೆಂಪು ಮರಳುಗಲ್ಲುಗಳ ಸವೆತದಿಂದ ಅವುಗಳ ಮೇಲೆ ಪದರಗಳು ಸೃಷ್ಟಿಯಾದವು.
ಆ ಪದರಗಳು ಭಿನ್ನ ಭಿನ್ನ ಬಣ್ಣಗಳನ್ನು ಹೊಂದಿರುವುದರಿಂದ ಗುಡ್ಡ ಈ ರೀತಿ ಮನಮೋಹಕವಾಗಿ ಕಾಣಿಸುತ್ತದೆ.