ಅಂಕಣ

ಜನಮತ| ಕನ್ನಡ ಕಾಯಕ ಪಡೆ, ಕನ್ನಡ ಬೆಳೆಸುವತ್ತ ಮುನ್ನಡೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ರಾಜ್ಯದ ಮುಖ್ಯಮಂತ್ರಿಗಳಿಂದ ಅನುಮೋದನೆಗೊಂಡಿರುವ ‘ಕನ್ನಡ ಕಾಯಕ ಪಡೆ’ಯ ಯೋಚನೆ ಮತ್ತು ಯೋಜನೆ ನಿಜಕ್ಕೂ ಕಿರಾಣಿ ಅಂಗಡಿಯಿಂದ ಆಮೆಜಾನ್, ಫ್ಲಿಪ್​ಕಾರ್ಟ್​ನವರೆಗೂ ಕನ್ನಡವನ್ನು ಬಳಸಲು ಮತ್ತು ಬೆಳೆಸಲು ಇಂಬು ತುಂಬುವಂತಿದೆ.

ಕರುನಾಡ ಮಾತೃಭಾಷೆಯಾದ ಹೃದಯರ್ಸ³ ಕನ್ನಡವನ್ನು ಬಳಸಿ, ಬೆಳೆಸಿ ಉಳಿಸುವ ಸಲುವಾಗಿ ಈ ವರ್ಷ ರಾಜ್ಯ ಸರ್ಕಾರವು ‘ಕನ್ನಡ ಕಾಯಕ ವರ್ಷ’ ವನ್ನು ಆಚರಿಸಲು ನಿರ್ಧರಿಸಿದೆ. ಈ ‘ಕನ್ನಡ ಕಾಯಕ ವರ್ಷ’ದ ಮುಖ್ಯ ಹೆಜ್ಜೆಗಳಲ್ಲೊಂದು ‘ಕನ್ನಡ ಕಾಯಕ ಪಡೆ’. 21 ಸೂತ್ರಗಳನ್ನು ಒಳಗೊಂಡಿರುವ ಈ ಪಡೆಯ ಮುಖ್ಯಾಂಶದ ತಿರುಳನ್ನು ನೋಡಿದಾಗ ಸಾರ್ವಜನಿಕರ ಪಾತ್ರವೇ ಆ ’ಕನ್ನಡ ಕಾಯಕ ಪಡೆ’ಯ ಕೇಂದ್ರಬಿಂದು ಎಂಬುದು ಮನದಟ್ಟಾಗುತ್ತದೆ. ಅಲ್ಲದೆ ‘ಕನ್ನಡಿಗರು ದಿನನಿತ್ಯದ ಸಂವಹನಗಳಲ್ಲಿ ಕನ್ನಡವನ್ನು ಬಳಸಿದರೆ, ಕನ್ನಡದ ಬೆಳೆಯುತ್ತದೆ ಮತ್ತು ಉಳಿಯುತ್ತದೆ’ ಎಂಬುದನ್ನು ಸರ್ಕಾರ 21 ಸೂತ್ರಗಳ ಮೂಲಕ ಮನದಟ್ಟು ಮಾಡಲು ಯತ್ನಿಸಿದೆ.

ಇಂಗ್ಲಿಷ್, ಹಿಂದಿ ಹಾಗೂ ಇನ್ನಿತರ ಅನ್ಯ ಭಾಷೆ ಮತ್ತು ಭಾಷಿಕರನ್ನು ಗೌರವಿಸುವುದರೊಂದಿಗೆ ಕನ್ನಡದ ದಿನಪತ್ರಿಕೆ, ಪುಸ್ತಕಗಳನ್ನು ಓದುವುದು, ದೈನಂದಿನ ಕಚೇರಿ ಮತ್ತು ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಿ, ಅನ್ಯಭಾಷಿಕರಿಗೂ ಕನ್ನಡವನ್ನು ಕಲಿಸಿ-ಬಳಸುವಂತೆ ಪ್ರೇರೇಪಿಸಲು ಸಾರ್ವಜನಿಕರ ಸಹಭಾಗಿತ್ವ ತುಂಬ ಮುಖ್ಯ. ಕನ್ನಡ ಕಟ್ಟುವ ‘ಕಾಯಕ’ದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ರೂಪುಗೊಂಡಿರುವ ಈ ಕಾರ್ಯಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ಕನ್ನಡದ ಭಾಷೆ ಮುನ್ನಡೆ ಸಾಧಿಸುವುದರಲ್ಲಿ ಎರಡು ಮಾತಿಲ್ಲ.

| ಅನೀಶ್ ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)