ಅಂಕಣ

ಪುಂಡಿ ಸೊಪ್ಪಿನ ವೈವಿಧ್ಯಗಳು: ಚಿತ್ರಾನ್ನ

ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು: ಒಂದು ಚಿಕ್ಕ ಕಟ್ಟು ಪುಂಡಿಸೊಪ್ಪು ಒಂದು ಚಮಚ ಜೀರಿಗೆ ಒಂದು ಚಮಚ ಎಳ್ಳು ಒಂದು ಚಮಚ ಉದ್ದಿನಬೇಳೆ ಅರ್ಧ ಬಟ್ಟಲು ಒಣಕೊಬ್ಬರಿ ತುರಿ ಎರಡು ಒಣಮೆಣಸಿನಕಾಯಿ ಎರಡು ಹಸಿಮೆಣಸಿನಕಾಯಿ ಕರಿಬೇವು ಕೊತ್ತಂಬರಿ ಒಂದು ಚಮಚ ಎಣ್ಣೆ ಕಾಲು ಕಪ್ ಶೇಂಗಾಬೀಜ ಒಂದು ದೊಡ್ಡ ಬೌಲ್ ಉದುರಾಗಿ ಮಾಡಿಟ್ಟುಕೊಂಡ ಅನ್ನ.

ಮಾಡುವುದು ಹೀಗೆ : ಮೊದಲು ಪುಂಡಿಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಅರ್ಧ ಚಮಚ ಜೀರಿಗೆ ಎಳ್ಳು ಉದ್ದಿನಬೇಳೆ ಕರಿಬೇವು ಒಣಕೊಬ್ಬರಿ ತುರಿ ಇವುಗಳನ್ನು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಜೀರಿಗೆ ಕರಿಬೇವು ಒಣಮೆಣಸಿನಕಾಯಿ ಶೇಂಗಾಬೀಜ ಅರಿಶಿಣ ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಹಸಿಮೆಣಸಿನಕಾಯಿ ಮತ್ತು ಪುಂಡಿಸೊಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿ. ಇದಕ್ಕೆ ಮಾಡಿಟ್ಟುಕೊಂಡ ಪುಡಿ ಸೋಪ್ಪು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಅನ್ನ ಹಾಕಿ ಕೈಯಾಡಿಸಿ. ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

| ಲತಾ ಜೋಶಿ ಬ್ಯಾಡಿಗಿ