ಅಂಕಣ

ಘಮಘಮಿಸುವ ಸೈಡ್ ಡಿಷ್​ಗಳು: ವೆಜ್ ಸಾಗು

malli

ಚಪಾತಿ ಪೂರಿ ಹಾಗೂ ದೋಸೆ ರೊಟ್ಟಿ ಇತ್ಯಾದಿ ತಿನಿಸು ಮಾಡಿದಾಗ ಅವುಗಳನ್ನು ಸವಿಯುವುದಕ್ಕಾಗಿ ಕೆಲವೊಂದು ಸೈಡ್​ಡಿಷ್​ಗಳನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ 2, ಬೀನ್ಸ್, ಕ್ಯಾರೆಟ್ 2, ಹಸಿ ಬಟಾಣಿ ಕಾಳು 100 ಗ್ರಾಮ್, ಈರುಳ್ಳಿ 2 (ಮಸಾಲೆಗೆ: ಕಾಯಿತುರಿ 1/2 ಕಪ್ಣ್​ಹುರಿಗಡಲೆ 2 ಚಮಚ ಬೆಳ್ಳುಳ್ಳಿ 6-8 ಎಸಳು  ಶುಂಠಿ1/4 ಇಂಚು ಹಸಿಮೆಣಸು 4-5 ಒಂದು ಸಣ್ಣ ತುಂಡು ಲವಂಗ 2 ಏಲಕ್ಕಿ 2 ಕರಿಮೆಣಸು 3 ಕೊತ್ತಂಬರಿಸೊಪ್ಪು 1 ಹಿಡಿಯಷ್ಟು ಕೊತ್ತಂಬರಿ ಬೀಜ 2 ಚಮಚಜೀರಿಗೆ1 ಚಮಚ ) ಅರಿಶಿನಪುಡಿ 1 ಚಮಚ ಉಪ್ಪು ರುಚಿಗೆ ತಕ್ಕಷ್ಟು ನಿಂಬೆ ರಸ ಸ್ವಲ್ಪ ಒಗ್ಗರಣೆಗೆ: ಎಣ್ಣೆ 3 ಚಮಚ ಸಾಸಿವೆ 1 ಚಮಚ ಕರಿಬೇವು 5-6 ಎಸಳು.

ಮಾಡುವ ವಿಧಾನ: ತರಕಾರಿಗಳನ್ನೆಲ್ಲ ಚೆನ್ನಾಗಿ ತೊಳೆದು ಹೆಚ್ಚಿಕೊಂಡು ಕುಕ್ಕರ್ ನಲ್ಲಿ 1/4 ಕಪ್ ನೀರು, ಸ್ವಲ್ಪ ಉಪ್ಪು, ಅರಿಶಿಣ ಹಾಕಿ ಬೇಯಿಸಿಕೊಳ್ಳಿ. ಮಿಕ್ಸಿಯಲ್ಲಿ ಮಸಾಲೆಗೆಂದು ತಿಳಿಸಿದ ಸಾಮಗ್ರಿಗಳನ್ನು ನೀರು ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಒಗ್ಗರಣೆ ಹಾಕಿ ಅದಕ್ಕೆ ನೀರುಳ್ಳಿ ಹಾಕಿ ಫ್ರೖೆ ಮಾಡಿ ನಂತರ ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಬೇಯಿಸಿದ ತರಕಾರಿಗಳನ್ನು ಹಾಕಿ ಸ್ವಲ್ಪ ಉಪ್ಪು ಹಾಗು ನಿಂಬೆ ರಸ ಹಾಕಿ ಕುದಿಸಿ.

| ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ