ಅಂಕಣ

ಪುಂಡಿ ಸೊಪ್ಪಿನ ವೈವಿಧ್ಯಗಳು: ಮುದ್ದೆಪಲ್ಯ

ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು: ಒಂದು ದೊಡ್ಡ ಕಟ್ಟು ಪುಂಡಿಸೊಪ್ಪು ದೊಡ್ಡ ಈರುಳ್ಳಿ ಕಾಲು ಕಪ್ ಶೇಂಗಾ ಬೀಜ ಅರ್ಧ ಚಮಚ ಜೀರಿಗೆ ನಾಲ್ಕು ಹಸಿಮೆಣಸಿನಕಾಯಿ ಒಂದು ಬಟ್ಟಲು ಕಾಯಿತುರಿ ಕೊತ್ತಂಬರಿ ಸೊಪ್ಪು ಅರ್ಧ ಚಮಚ ಮೆಂತೆಕಾಳು ಕಾಲು ಚಮಚ ಅರಿಶಿಣ ಕಾಲು ಕಪ್ ಅಕ್ಕಿರವೆ ಎಂಟು ಎಸಳು ಬೆಳ್ಳುಳ್ಳಿ ನಾಲ್ಕು ಚಮಚ ಎಣ್ಣೆ ಎಂಟು ಎಲೆ ಕರಿಬೇವು.

ಮಾಡುವುದು ಹೀಗೆ: ಪುಂಡಿಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ. ದಪ್ಪ ತಳದ ಪಾತ್ರೆಗೆ ಕತ್ತರಿಸಿದ ಪದಾರ್ಥಗಳ ಜತೆಗೆ ಶೇಂಗಾಬೀಜ, ಜೀರಿಗೆ, ಉಪ್ಪು, ಅರಿಶಿಣ, ಅಕ್ಕಿರವೆ, ಎಣ್ಣೆ ಹಾಕಿ ಎರಡು ಕಪ್ ನೀರು ಹಾಕಿ ಮುಚ್ಚಿ. 10 ನಿಮಿಷಗಳ ಕಾಲ ಬೇಯಿಸಿ. ಬೇರೊಂದು ಬಾಣಲೆೆಯಲ್ಲಿ ಎಣ್ಣೆಗೆ ಸಾಸಿವೆ, ಅರಿಶಿಣ, ಬೆಳ್ಳುಳ್ಳಿ, ಕರಿಬೇವು ಒಗ್ಗರಣೆ ಮಾಡಿ ಮುದ್ದೆಪಲ್ಯಕ್ಕೆ ಸೇರಿಸಿ.

| ಲತಾ ಜೋಶಿ ಬ್ಯಾಡಿಗಿ