ಶೂನ್ಯ ಮುದ್ರೆಯನ್ನು ಆಕಾಶ ಶಮಕ್ ಮುದ್ರೆ ಎಂದೂ ಕರೆಯುತ್ತಾರೆ. ಆಕಾಶ ಎಂದರೆ ಈಥರ್/ಸ್ಪೇಸ್ ಮತ್ತು ಶಮಕ್ ಎಂದರೆ ನಂದಿಸುವವನು ಅಥವಾ ಕಡಿಮೆ ಮಾಡುವುದು ಎಂದರ್ಥ. ನಗರ ಪ್ರದೇಶದಲ್ಲಿ ಕೆಲವೊಮ್ಮೆ ಶಬ್ದ ಮಾಲಿನ್ಯ ಅತಿಯಾದಾಗ ಕಿವಿಗೆ ಕಿರಿ ಕಿರಿ ಎನಿಸುತ್ತದೆ. ತುಂಬಾ ಹೊತ್ತು ಶಬ್ದವನ್ನು ಕೇಳಿದಾಗ ಕಿವಿಗೆ ಹರಟೆಯಾಗಿ ತೊಂದರೆಯಾಗುತ್ತದೆ. ಈ ಶೂನ್ಯ ಮುದ್ರೆ ಕಿವಿಯಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಕಿವಿಯ ತೊಂದರೆಯಿಂದ ಕೆಲವೊಮ್ಮೆ ಬರುವ ವಾಂತಿ ನಿಯಂತ್ರಣಕ್ಕೆ ಕೂಡ ಶೂನ್ಯ ಮುದ್ರೆ ಸಹಕಾರಿಯಾಗುತ್ತದೆ.
ಮಾಡುವ ವಿಧಾನ: ಶೂನ್ಯ ಮುದ್ರೆ ಮಾಡುವ ವಿಧಾನ ಹೀಗಿದೆ: ಮಧ್ಯದ ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸಿ ಇಡಿ. ನಂತರ ಹೆಬ್ಬೆರಳನ್ನು ಮಧ್ಯದ ಬೆರಳಿನ ಮೇಲೆ ಇಡಿ. ಉಳಿದ ತೋರು ಬೆರಳು, ಉಂಗುರ ಬೆರಳು ಮತ್ತು ಕಿರುಬೆರಳುಗಳು ನೇರವಾಗಿರಲಿ. ಸುಮಾರು 30 ರಿಂದ 40 ನಿಮಿಷ ಶೂನ್ಯ ಮುದ್ರೆಯನ್ನು ಮಾಡಿದ ಬಳಿಕ 10 ನಿಮಿಷ ಪ್ರಾಣ ಮುದ್ರೆಯನ್ನು ಮಾಡಿದರೆ ಮುಖ್ಯವಾಗಿ ಕಿವಿಗೆ ಸಂಬಂಧಪಟ್ಟ ಕಿರಿಕಿರಿಗಳು, ನೋವುಗಳು ದೂರವಾಗುತ್ತವೆ. ಮುದ್ರೆಯನ್ನು ಎರಡೂ ಕೈಯಲ್ಲಿ ಅಭ್ಯಾಸ ಮಾಡಿ.
ಪ್ರಯೋಜನವೇನು?: ಶೂನ್ಯ ಮುದ್ರೆಯ ಅಭ್ಯಾಸದಿಂದ ಶ್ರವಣ ಮತ್ತು ಸಮತೋಲನ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅವುಗಳೆಂದರೆ ಚಲನೆಯ ಕಾಯಿಲೆ, ವರ್ಟಿಗೋ ತೀವ್ರವಾದ ನೋವು, ಶ್ರವಣ ನಷ್ಟ ಮತ್ತು ಟೆನ್ನಿಟಸ್ ಮುಂತಾದ ಕಿವಿ ಅಸ್ವಸ್ಥತೆಗಳು,ದೇಹದಲ್ಲಿ ಎಲ್ಲಿಯಾದರೂ ಮರಗಟ್ಟುವಿಕೆ, ನರಮಂಡಲ ಮತ್ತು ತ್ಯಾಜ್ಯ ನಿಮೂಲನೆಗೆ ಸಂಬಂಧಿಸಿದ ದೋಷಗಳಿಗೆ ಪ್ರಯೋಜನಕಾರಿಯಾಗಿದೆ. ಕಿವುಡುತನ ಸಮಸ್ಯೆಯ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿಯಾಗುತ್ತದೆ. ಕಿವಿಯಲ್ಲಿ ಒಂಥರಾ ಶಬ್ದ ಆಗುವುದು ಕಡಿಮೆಯಾಗುತ್ತದೆ. ಟಿನಿಟಸ್ ಸಮಸ್ಯೆಯನ್ನು ಈ ಮುದ್ರೆಯ ನಿರಂತರ ಅಭ್ಯಾಸದಿಂದ ಸಾಕಷ್ಟು ನಿಯಂತ್ರಿಸಬಹುದು. ಆದರೆ ಹುಟ್ಟಿನಿಂದ ಬಂದ ಕಿವುಡು ತನಕ್ಕೆ ಈ ಶೂನ್ಯ ಮುದ್ರೆ ಸಹಾಯವಾಗುವುದಿಲ್ಲ. ತಲೆ ಸುತ್ತುವಿಕೆ (ವರ್ಟಿಗೋ) ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ತಲೆ ನೋವು ನಿಯಂತ್ರಣವಾಗುತ್ತದೆ. ಕಿವಿ ಸೋರುವ ತೊಂದರೆ ಇದ್ದವರು ಈ ಮುದ್ರೆಯ ಮೂಲಕ ಸಾಕಷ್ಟು ನಿಯಂತ್ರಿಸಬಹುದು. ಚಿಕ್ಕ ಮಕ್ಕಳ ತೊದಲು ಮಾತನ್ನು ಸರಿಪಡಿಸಲು ಈ ಶೂನ್ಯ ಮುದ್ರೆಯನ್ನು ಅಭ್ಯಾಸ ಮಾಡಿಸಿ, ಅನಂತರ ಪ್ರಾಣ ಮುದ್ರೆಯನ್ನು ಅಭ್ಯಾಸ ಮಾಡಿಸಿದರೆ ತೊದಲು ಸಮಸ್ಯೆಯನ್ನು ನಿವಾರಿಸಬಹುದು. ದೇಹದಲ್ಲಿ ಉಂಟಾಗುವ ಮರಗಟ್ಟುವಿಕೆಯನ್ನು ಈ ಮುದ್ರೆಯಿಂದ ಗುಣಪಡಿಸಬಹುದು. ಆಧ್ಯಾತ್ಮಿಕ ಜಾಗ್ರತಿಗೆ ಈ ಮುದ್ರೆ ಸಹಾಯವಾಗುತ್ತದೆ. ನಂಬಿಕೆ, ಭಕ್ತಿ, ಶ್ರದ್ಧೆಯಿಂದ ಮುದ್ರೆಗಳನ್ನು ಅಭ್ಯಾಸ ಮಾಡಿ. ಮುದ್ರೆಗಳನ್ನು ಅಭ್ಯಾಸ ಮಾಡುವಾಗ ಕೈಗಳ ಬೆರಳುಗಳು ಮೃದುವಾಗಿರಲಿ. ಮುದ್ರೆಗಳನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡುವುದು ಅತ್ಯಂತ ಸೂಕ್ತವಾಗಿದೆ.