ಅಂಕಣ

ಕನಸು ಶ್ರೀಮಂತವಾಗಿರಬೇಕು

ರಮೇಶ್​ ಕುಮಾರ್​​ ಬಿ ಎಡಮೋಳೆ

| ಡಾ.ಗಣಪತಿ ಹೆಗಡೆ

ಭಿಕ್ಷುಕನೊಬ್ಬ ನಿತ್ಯವೂ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಹರೀಶನಿಗೆ ಈತನನ್ನು ಕಂಡರೆ ತಾತ್ಸಾರಭಾವ. ಇನ್ನೂ ಪ್ರಾಯದಲ್ಲಿದ್ದಾನೆ, ದುಡಿದು ತಿನ್ನಬಹುದಾದ ವಯಸ್ಸಿದೆ. ಕಟ್ಟುಮಸ್ತಾದ ಶರೀರ. ಆದರೂ ಇವರೆಲ್ಲ ಯಾಕೆ ಭಿಕ್ಷೆ ಬೇಡುತ್ತಾರೋ ಎಂಬುದು ಅವನ ತಾತ್ಸಾರಭಾವನೆಗೆ ಕಾರಣ. ಅವನ ಭಿಾವೃತ್ತಿಯನ್ನು ಹೇಗಾದರೂ ಬಿಡಿಸಬೇಕು. ಅವನನ್ನು ಸರಿದಾರಿಗೆ ತರಬೇಕು ಎಂದು ಛಲತೊಟ್ಟ ಹರೀಶ. ಮರುದಿನ ಯಥಾಪ್ರಕಾರ ಭಿಕ್ಷುಕ ಹರೀಶನ ಮನೆಯ ಮುಂದೆ ಬಂದ.

ಮನೆಯಿಂದ ಹೊರಗೆ ಬಂದ ಹರೀಶ& "ನೋಡಪ್ಪ! ನಿನಗೆ ಇನ್ನೂ ದುಡಿದು ತಿನ್ನುವ ಶಕ್ತಿಯಿದೆ. ಎಲ್ಲಾದರೂ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಬಹುದಲ್ಲವೇ?' ಎಂದು ಪ್ರಶ್ನಿಸಿದ. "ನಮಗೆಲ್ಲ ಯಾರು ಕೆಲಸ ಕೊಡಬೇಕು ಸ್ವಾಮೀ, ಹತ್ತು ರೂಪಾಯಿ ಕೊಡೋಕೆ ಹಿಂದೆ&ಮುಂದೆ ನೋಡೋವ್ರು ಇರೋವಾಗ ಇನ್ನು ಕೆಲಸ ಬೇರೇ ಕೊಡ್ತಾರಾ? ಸರಿ ಭಿೆಕೊಡಿ' ಎಂದ. "ನೀನು ಬದಲಾಗಲು ನಾನೇ ಸಹಾಯ ಮಾಡ್ತೀನಿ. ನಾಳೆ ಬೆಳಗಾದರೆ ನಿನಗೆ ಒಂದು ಲಕ್ಷ ರೂಪಾಯಿ ಕೊಡ್ತೇನೆ. ಒಟ್ಟಿನಲ್ಲಿ ನಿನ್ನ ಬದುಕು ಬದಲಾಗಬೇಕು. ಆದರೆ, ಒಂದು ಲಕ್ಷ ರೂಪಾಯಿ ಕೊಟ್ಟರೆ ಅದರಿಂದ ಏನ್ಮಾಡ್ತೀಯಾ?' ಎಂದು ಪ್ರಶ್ನಿಸಿದ.

"ಇನ್ನೇನ್​ ಮಾಡಕ್ಕಾಗುತ್ತೆ? ಹೆಂಗಿದ್ರೂ ಈಗ ಭಿೆ ಬೇಡ್ತಾ ಇರೋ ತಟ್ಟೆ ಹಳೇದಾಗಿದೆ, ಅದನ್ನು ಬಿಸಾಕಿ, ಬೆಳ್ಳೀದೋ ಚಿನ್ನದ್ದೋ ತಟ್ಟೆ ಮಾಡಿಸ್ಕೊಂಡು, ಅದರಲ್ಲಿ ಭಿೆ ಬೇಡ್ತೀನಿ' ಎಂದ ಭಿಕ್ಷುಕ. ಹರೀಶನಿಗೆ ಭ್ರಮನಿರಸನವಾಯಿತು. ಇದು ಬದಲಾಗದ ಬದುಕು. ಇದು ಕನಸುಗಳನ್ನೇ ಕಾಣದ ಜೀವ. ಬದುಕು ಬರಡಾಗಿದ್ದರೇನು ಕನಸು ಶ್ರೀಮಂತವಾಗಿರಬೇಕು ಎಂಬ ಅರಿವೇ ಇಲ್ಲದವನು. ಬದುಕು ಬಡತನದ ಬೇಗೆಯಿಂದ ಬಳಲಿರಬಹುದು. ಆದರೆ ಕನಸಿಗೆ ಬಡತನ ಬರಬಾರದು. "ಕಣ್ಣಿಲ್ಲದವನ ಜೊತೆ ಸುಖವಾಗಿ ಬದುಕಬಹುದು, ಕನಸಿಲ್ಲದವನ ಜೊತೆ ಜೀವನ ಕಷ್ಟ' ಇದು ಪ್ರಸಿದ್ಧವಾದ ಮಾತು.

ನಮ್ಮ ಕನಸ್ಸುಗಳೇ ನಮ್ಮ ಭವಿಷ್ಯವನ್ನು ಬದಲಾಯಿಸಬಲ್ಲ ಮಹಾನ್​ ಶಕ್ತಿಗಳು. ಅಂತಹ ಮಹೋನ್ನತವಾದ ಕನಸುಗಳಿಲ್ಲದಿದ್ದರೆ ಜೀವನಕ್ಕೇನು ಬೆಲೆ? ನಾವು ಕಾಣುವ ಕನಸು ಉನ್ನತ, ಅನನ್ಯ, ಅದ್ಭುತ, ಉತಷ್ಟ ಹಾಗೂ ಗುಣಮಟ್ಟದ್ದಾಗಿರಬೇಕು. ಆ ಕನಸು ನನಸಾದಾಗ ನಮ್ಮ ಪ್ರಗತಿಯ ಜೊತೆಗೆ ಸಮಾಜದ ಸ್ಥಿತಿಯೂ ಉನ್ನತವಾಗಬೇಕು. ಕನಸುಗಳು ದೊಡ್ಡದಾದಷ್ಟು ಲ ದೊಡ್ಡದಾಗುತ್ತದೆ. ಅದ್ದರಿಂದಲೇ ಎಂದಿಗೂ ಕನಸು ಕಾಣುವಲ್ಲಿ ಬಡತನವಿರಬಾರದು. ಕನಸೇ ತಾನೆ ನಮ್ಮೆಲ್ಲರನ್ನೂ ಏಳ್ಗೆಯ ದಾರಿಯಲ್ಲಿ ಮುನ್ನಡೆಸುವ ಉತ್ಸಾಹದ ಶಕ್ತಿ. ಅಂತಹ ಶಕ್ತಿಯೊಂದು ನಮಗೇ ಅರಿವಿಲ್ಲದಂತೆ ನಮ್ಮಲ್ಲಿಯೇ ಅಡಗಿದೆ. ಅದನ್ನು ಸಾಕಾರಗೊಳಿಸಿಕೊಳ್ಳಬೇಕು. ನಿರ್ಧಾರ ತಳೆದಷ್ಟು ಶ್ರೀವಾಗಿ ನಾವು ಉನ್ನತಿಯತ್ತ ಸಾಗುತ್ತೇವೆ. ವ್ಯಕ್ತಿ ಬಡವನಾದರೆ ಚಿಂತೆಯಿಲ್ಲ. ಅವನ ದೂರದೃಷ್ಟಿ ಹೊಂದಿದ ರ್ನಿದಿಷ್ಟ ಗುರಿಗಳಿಂದ ಕೂಡಿದ ಕನಸುಗಳೇ ಅವನನ್ನು ಶ್ರೀಮಂತಗೊಳಿಸುತ್ತವೆ. ಅಂತಹ ಕನಸುಗಳನ್ನು ನನಸು ಮಾಡಿಕೊಳ್ಳುವ ಮನಸ್ಸಿದ್ದರೆ ಅವನಿಗೆ ಅದನ್ನು ಸಾಧಿಸುವ ಮಾರ್ಗವೂ ಗೋಚರಿಸುತ್ತದೆ. ಆ ಮಾರ್ಗವನ್ನು ಅನುಸರಿಸಿ ಸಾಧನೆ ಮಾಡಬಹುದು. ಆದರೆ ಎಂದೂ ಬತ್ತದ ಉತ್ಸಾಹವಿರಬೇಕಷ್ಟೆ. ಆದ್ದರಿಂದ ರ್ನಿದಿಷ್ಟವಾದ ಗುರಿಯನ್ನು ತಲುಪಲು ಕನಸುಗಳನ್ನು ಕಾಣಲೇಬೇಕು. "ಇಷ್ಟೇ ನನ್ನ ಪ್ರಪಂಚ, ನನ್ನ ಸಾಮರ್ಥ್ಯ, ಯೋಗ್ಯತೆ' ಎಂಬ ಉದಾಸೀನ ಭಾವನೆ ಮಾತ್ರ ನಮ್ಮೆದುರು ಎಂದೂ ಸುಳಿಯಬಾರದು.

(ಲೇಖಕರು ಸಂಸತ ಉಪನ್ಯಾಸಕರು)

(ಪ್ರತಿಕ್ರಿಯಿಸಿ: manollasavv@gmail.com)