ಅಂಕಣ

ಕಾಶಿ ಪೀಠದ ಡಿಜಿಟಲ್​ ಕ್ರಾಂತಿ: ಆನ್​ಲೈನ್​ ಮೂಲಕ ಗುರುಕುಲ ಶಿಕ್ಷಣ ಯಶಸ್ವಿ

ಇಡೀ ಜಗತ್ತನ್ನು ಬಾಧಿಸುತ್ತಿರುವ ಕರೊನಾ ಜನರ ಜೀವನ ವಿಧಾನವನ್ನೇ ಬದಲಿಸಿದೆ. ಶಾಲಾ & ಕಾಲೇಜುಗಳ ಬೋಧನೆಯು ಆನ್​ಲೈನ್​ ಆಗಿರುವುದಂತೂ ಸಹಜವೇ. ಅದೇ ರೀತಿ ವೇದ, ಜ್ಯೋತಿಷ್ಯ, ಸಂಸತಪಾಠ ಕಲಿಸುವ ಪ್ರಾಚಿನ ಗುರುಕುಲವೊಂದು ಕೂಡ ಸಮರ್ಥವಾಗಿ ಆಧುನಿಕ ಡಿಜಿಟಲ್​ ಪ್ಲಾಟ್​ಫಾರ್ಮ್​ ಬಳಸುತ್ತಿದೆ. ಜೂಮ್​ ಆ್ಯಪ್​ ಮೂಲಕ ನಡೆಯುತ್ತಿರುವ ಕೋರ್ಸ್​ನ ಮೊದಲ ಬ್ಯಾಚ್​ ಈಗಾಗಲೇ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಸದ್ಯ ಎರಡನೇ ಬ್ಯಾಚ್​ನ ತರಗತಿಗಳು ನಡೆಯುತ್ತಿವೆ.

| ಪ್ರಶಾಂತ ರಿಪ್ಪನ್​ಪೇಟೆ

ಕಳೆದ ಒಂದೂವರೆ ವರ್ಷದಿಂದ ಇಡೀ ಜಗತ್ತನ್ನು ಬಾಧಿಸುತ್ತಿರುವ ಕರೊನಾ ಮಹಾಮಾರಿ ಸಂಪೂರ್ಣ ಜನಜೀವನವನ್ನೇ ಬದಲಿಸಿಬಿಟ್ಟಿದೆ. ಲಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಈ ಸೋಂಕು ಶಾರೀರಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಲವರನ್ನು ದುರ್ಬಲಗೊಳಿಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಾನವನ ಆತ್ಮವಿಶ್ವಾಸ ವೃದ್ಧಿಸಬೇಕಾಗಿದ್ದ ಆಧ್ಯಾತ್ಮಿಕ ೇತ್ರ ಕೂಡ ಸ್ತಬ್ಧವಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಬದಲಾದ ಪರಿಸ್ಥಿತಿಯಲ್ಲಿ ಡಿಜಿಟಲ್​ ಪ್ಲಾಟ್​ಫಾಮ್​ರ್ ಮೂಲಕ ಸಂಸತ ಶಿಣ ನೀಡಲು ಕೆಲವು ಧಾರ್ಮಿಕ ಸಂಸ್ಥೆಗಳು ಮುಂದಾಗಿರುವುದು ಗಮನಾರ್ಹ ಅಂಶ. ಇದಕ್ಕೆ ಪೂರಕವಾಗಿ ದೇಶದ ಪ್ರಾಚಿನ ಗುರುಕುಲ ಎಂಬ ಹೆಗ್ಗಳಿಕೆ ಹೊಂದಿರುವ, ಕಾಶಿ ಜಂಗಮವಾಡಿ ಮಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲವು ಮಹತ್ವದ ಕ್ರಾಂತಿಯನ್ನೇ ಮಾಡಿದೆ.

ಕಳೆದ ಶ್ರಾವಣ ಮತ್ತು ಅಧಿಕ ಮಾಸದಲ್ಲಿ ಆನ್​ಲೈನ್​ ಮೂಲಕ ಏರ್ಪಡಿಸಿದ್ದ ಅಭಿಷೇಕ, ಮಹಾಪೂಜೆ ಹಾಗೂ ಜಗದ್ಗುರುಗಳ ಪ್ರವಚನ ಯಶಸ್ವಿಯಾದ ನಂತರ, ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆನ್​ಲೈನ್​ ಗುರುಕುಲ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದರು. ಜಗದ್ಗುರುಗಳ ಚಿಂತನೆಗೆ ಪೂರಕವಾಗಿ ಪುಣೆ ನಗರದಲ್ಲಿರುವ ತಂತ್ರರೂ, ಪೀಠದ ಶಿಷ್ಯರೂ ಆದ ಸುಭಾಷ್​ ಚೌಕವಾಲೆ, ಬಸವರಾಜ್​ ವಾಮಾ, ಶ್ರದ್ಧಾ ಚೌಕವಾಲೆ ಇವರು ಆನ್​ಲೈನ್​ ಗುರುಕುಲಕ್ಕೆ ಬೇಕಾದ ತಂತ್ರಾನವನ್ನು ರೂಪಿಸಿದರು. ಹೀಗೆ ಸಿದ್ಧಗೊಂಡ ಆನ್​ಲೈನ್​ ಗುರುಕುಲಕ್ಕೆ ಪ್ರಧಾನ ಶಾಖೆಯಿಂದ ಪಂಡಿತ್​ ಮಲ್ಲಿಕಾರ್ಜುನ ಶಾಸಿ, ಆಂಧ್ರಪ್ರದೇಶದ ಶಾದ್​ನಗರ ಶಾಖೆಯ ಸಂಗಯ್ಯಸ್ವಾಮಿ, ಮಹಾರಾಷ್ಟ್ರದಿಂದ ಶ್ರೀ ಮಣಿಕಂಠ ಶಿವಾಚಾರ್ಯರು, ಹೈದರಾಬಾದ್​ನಿಂದ ಗಣೇಶ ಶಾಸಿ, ತಿರುಪತಿ ಸಂಸತ ವಿಶ್ವವಿದ್ಯಾಲಯದ ಡಾ. ಕುಮಾರ ಬಾಗೇವಾಡಿಮಠ ಹಾಗೂ ಡಾ. ಪರಮೇಶ ಹಿರೇಮಠ ಇವರನ್ನು ಪ್ರಾಧ್ಯಾಪಕರನ್ನಾಗಿ ನೇಮಿಸಲಾಯಿತು. ಇವರೆಲ್ಲರ ನೇತೃತ್ವದಲ್ಲಿ ವೇದ, ಸೊತ್ರ, ಶ್ರೀರುದ್ರ, ಜ್ಯೋತಿಷ್ಯ, ಸಂಸತ ಹೀಗೆ ವಿವಿಧ ತರಗತಿಗಳನ್ನು ಆರಂಭಿಸಲಾಯಿತು. ಈಗಾಗಲೇ ಮೊದಲ ಬ್ಯಾಚ್​ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಸದ್ಯ ಎರಡನೇ ಬ್ಯಾಚ್​ಗೆ ತರಗತಿಗಳು ನಡೆಯುತ್ತಿವೆ. ಪ್ರತಿದಿನ ನಿಗದಿತ ಸಮಯಕ್ಕೆ ಜೂಮ್​ ಆ್ಯಪ್​ ಮೂಲಕ ನಡೆಯುವ ಆನ್​ಲೈನ್​ ಕ್ಲಾಸ್​ನಲ್ಲಿ ಏಕ ಕಾಲಕ್ಕೆ 100 ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಅಂತಹ ನಾಲ್ಕೆದು ತರಗತಿಗಳು ನಿತ್ಯವೂ ನಡೆಯುತ್ತವೆ. ತರಗತಿಯ ನಂತರ ಅಂದಿನ ಪಾಠದ ಆಡಿಯೋ ಮತ್ತು ಪಠ್ಯವನ್ನು ವಾಟ್ಸ್​ಆ್ಯಪ್​ ಮೂಲಕ ಕಳಿಸುವುದರಿಂದ ಮನೆಯಲ್ಲಿ ಮತ್ತೊಮ್ಮೆ ಅಭ್ಯಾಸ ಮಾಡಲು ಸಹಕಾರಿಯಾಗಿದೆ. ಅಧ್ಯಾಪಕರ ಜತೆಗೆ ಸ್ವತ@ ಕಾಶಿ ಜಗದ್ಗುರುಗಳು ಕೂಡ ಪ್ರತಿ ನಿತ್ಯ ಒಂದು ಗಂಟೆ ಸಂಸತ ಸುಭಾಷಿತ ವಿಶ್ಲೇಷಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ಧಾರ್ಮಿಕ ಪ್ರವಚನ ನೀಡುತ್ತಾರೆ. ಸಾವಿರಾರು ಜನ ಈ ಕಾರ್ಯಕ್ರಮವನ್ನು ವೀಸುತ್ತಾರೆ. ಹೀಗೆ ಆನ್​ಲೈನ್​ ಗುರುಕುಲ ಆರಂಭವಾಗಿ ಕೆಲವೇ ತಿಂಗಳಲ್ಲಿ ಜನಪ್ರಿಯವಾಗಿದೆ.ಬದಲಾದ ಪರಿಸ್ಥಿತಿಯಲ್ಲಿ ಆನ್​ಲೈನ್​ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಧರ್ಮ ಸಂಸ್ಕಾರವನ್ನು ನೀಡುವ ಕೆಲಸ ಕಾಶಿ ಪೀಠದಿಂದ ಯಶಸ್ವಿ ಯಾಗಿದೆ. ಶುಲ್ಕದ ಹೊರೆ ಇಲ್ಲದೆ ಕೇವಲ ಪ್ರಾಧ್ಯಾಪಕರಿಗೆ ಗುರುದಣೆ ನೀಡುವ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಸಂಸತ ಅಭ್ಯಾಸ ಮಾಡಲು ಇದು ಸದವಕಾಶವಾಗಿದೆ. ಈ ತಂತ್ರಾನ ಬಳಸಿಕೊಂಡು ಎಲ್ಲ ಮಠ ಮಂದಿರಗಳು ಧಾರ್ಮಿಕ ಶಿಣ ಬೋಧನೆಗೆ ಒತ್ತು ನೀಡುವ ಅನಿವಾರ್ಯತೆ ಇದೆ. ಕಾಶಿಪೀಠದ ಗುರುಕುಲ ಕುರಿತ ಹೆಚ್ಚಿನ ಮಾಹಿತಿಗೆ 8554992334 ಸಂಪರ್ಕಿಸಬಹುದು.

ಪ್ರಾಚಿನ ಗುರುಕುಲಕ್ಕೆ ಆಧುನಿಕ ಸ್ಪರ್ಶ

ಯುಗ ಯುಗಗಳ ಇತಿಹಾಸವುಳ್ಳ ಕಾಶಿ ಪೀಠದ ಗುರುಕುಲದಲ್ಲಿ ದೇಶದ ವಿವಿಧ ಪ್ರಾಂತಗಳ ಸಾವಿರಾರು ಜನ ಅಧ್ಯಯನ ಮಾಡಿ ವಿದ್ವಾಂಸರಾಗಿದ್ದಾರೆ. ಅಂತಹ ಗುರುಕುಲಕ್ಕೆ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಎಂದು ನಾಮಕರಣವಾಗಿ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ 2020ರಲ್ಲಿ ನಡೆದ ಶತಮಾನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಪ್ರಾಚಿನ ಗುರುಕುಲವು ಆಧುನಿಕ ತಂತ್ರಾನಗಳನ್ನು ಬಳಸಿಕೊಂಡು ಆಸಕ್ತರಿಗೆ ಸಂಸತ ಪಾಠವನ್ನು ಆರಂಭಿಸಿದೆ. ಪ್ರಪ್ರಥಮವಾಗಿ ಶಿವಪೂಜೆಗೆ ಪೂರಕವಾದ ಶ್ರೀ ರುದ್ರ ತರಗತಿ ಆರಂಭಿಸಿ ವಿದ್ಯಾರ್ಥಿಗಳನ್ನು ಆಹ್ವಾನಿಸಿದಾಗ ದೇಶ ವಿದೇಶದ ನೂರಾರು ಆಸಕ್ತರು ಹೆಸರು ನೊಂದಾಯಿಸಿಕೊಂಡರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ತರಗತಿಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಕೇವಲ ಆರು ತಿಂಗಳ ಅವಧಿಯಲ್ಲಿ ಸುಮಾರು 600ಕ್ಕೂ ಹೆಚ್ಚು ಶಿಣಾರ್ಥಿಗಳು

ಆನ್​ಲೈನ್​ ಶಿಣ ಪಡೆದಿದ್ದಾರೆ.

ಪ್ರದೇಶ, ವಯೋಮಾನದ ರ್ನಿಬಂಧವಿಲ್ಲ

ಭೌತಿಕವಾಗಿ ಕ್ಲಾಸ್​ರೂಮ್​ನಲ್ಲಿ ನಡೆಯುವ ನೇರ ತರಗತಿಗಳಿಗೆ ಪ್ರದೇಶದ ಮತ್ತು ವಯೋಮಾನದ ಕೆಲವು ರ್ನಿಬಂಧಗಳಿರುತ್ತವೆ. ಆದರೆ ಆನ್​ಲೈನ್​ ತರಗತಿಗಳಿಗೆ ಅಂತಹ ರ್ನಿಬಂಧಗಳಿಲ್ಲ. ಸಂಸತ ಮತ್ತು ಆಧ್ಯಾತ್ಮ ವಿಷಯದಲ್ಲಿ ಆಸಕ್ತಿ ಇರುವ ಎಲ್ಲ ವಯೋಮಾನದವರು ಪ್ರವೇಶ ಪಡೆಯಲು ಸಾಧ್ಯ. ಈ ಸೌಕರ್ಯವನ್ನು ಸದುಪಯೋಗ ಪಡಿಸಿಕೊಂಡು ಕೆಲವರು ಕುಟುಂಬ ಸಮೇತರಾಗಿ ಪ್ರವೇಶ ಪಡೆದುಕೊಂಡಿರುವುದು ಅಚ್ಚರಿಯ ಸಂಗತಿ. ಆನ್​ಲೈನ್​ ಗುರುಕುಲದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಅಭ್ಯಾಸ ಮಾಡಲು ಅವಕಾಶವಿರುವುದರಿಂದ ದೇಶದ ಎಲ್ಲ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಪ್ರವೇಶ ಪಡೆದಿದ್ದಾರೆ. ಅಮೆರಿಕ, ಇಂಗ್ಲೆಂಡ್​, ಸಿಂಗಾಪುರ, ಜರ್ಮನಿ, ಜಪಾನ್​ ದೇಶದಲ್ಲಿರುವ ಅನಿವಾಸಿ ಭಾರತೀಯರು ಹಾಗೂ ವಿಶೇಷವಾಗಿ ಬಾಂಗ್ಲಾ ಮತ್ತು ರಷ್ಯಾದ ಮೂಲ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆನ್​ಲೈನ್​ ಶಿಣದ ಪ್ರಯೋಜನ ಪಡೆಯುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿರುವ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸುಕರಾಗಿದ್ದು, ಬ್ರಿಟನ್​ನಲ್ಲಿ ಪ್ರತ್ಯೇಕ ಶಾಖೆಯನ್ನೇ ತೆರೆಯಲಾಗಿದೆ.

ಪ್ರೇರಣೆ ನೀಡಿದ ಮಾದರಿ ಕಾರ್ಯ

ಕಾಶಿ ಪೀಠದ ಕಾರ್ಯದಿಂದ ಪ್ರೇರಿತರಾದ ಶ್ರೀಶೈಲ ಜಗದ್ಗುರುಗಳು ಕೂಡ ಯಡೂರ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಗುರುಕುಲದ ಮೂಲಕ ಆನ್​ಲೈನ್​ ಶಿಣಕ್ಕೆ ಮುಂದಾಗಿದ್ದಾರೆ. ಪ್ರಾಚಾರ್ಯ ಶ್ರೀಶೈಲ ಹಿರೇಮಠ ಅವರ ನೇತೃತ್ವದಲ್ಲಿ ಈಗಾಗಲೇ ಚಂಡಿಯಾಗದ ಕುರಿತು ಪಾಠ ಮತ್ತು ಪ್ರಾತ್ಯಕೆಯನ್ನು ಆನ್​ಲೈನ್​ನಲ್ಲಿ ಪ್ರಾರಂಭಿಸಿದ್ದಾರೆ. ಸಿಯರಿಗಾಗಿ ಲಲಿತಾಸಹಸ್ರನಾಮ, ವಿಷ್ಣು ಸಹಸ್ರನಾಮದ ತರಗತಿಗಳನ್ನು ಆರಂಭಿಸಲಾಗಿದ್ದು, ನೂರಾರು ಜನ ಪಾಲ್ಗೊಂಡಿದ್ದಾರೆ.