ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಗ್ರಿ: ಕಡಲೆ ಬೇಳೆ-2 ಚಮಚ ಉದ್ದಿನ ಬೇಳೆ-1 ಚಮಚ ಕೊತ್ತಂಬರಿ ಬೀಜ-1 ಚಮಚ ಕಾಳು ಮೆಣಸು-7-8 ಒಣಕೊಬ್ಬರಿ ತುರಿ-3 ಚಮಚ ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಕಡಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಬೀಜ, ಕಾಳು ಮೆಣಸು, ಒಣಕೊಬ್ಬರಿ ತುರಿಗಳನ್ನು ಹುರಿದು ತರಿತರಿಯಾಗಿ ಮಸಾಲೆ ತಯಾರಿ ಸಿಡಿ. 2 ಕಪ್ ನೀರು ಕಾಯಲಿರಿಸಿ ಎರಡು ಚಮಚದಷ್ಟು ಮಸಾಲೆ ಪುಡಿ, ಬೆಲ್ಲ, ಉಪ್ಪು ಹಾಕಿ ಕುದಿಸಿ. ತುಪ್ಪ-ಜೀರಿಗೆಗಳ ಒಗ್ಗರಣೆ ಮಾಡಿ ಸೇರಿಸಿ.
| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು