ಅಂಕಣ

ಹೊಸ ಪರ್ವಕ್ಕೆ ಸವಿಸವಿ ಡ್ರೖೆಫ್ರೂಟ್ಸ್ ಖೀರು

ಬೇಕಾಗುವ ಸಾಮಾಗ್ರಿಗಳು: ಹಾಲು 1ಲೀಟರ್, ಶ್ಯಾವಿಗೆ 70ಗ್ರಾಂ, ಗೋಡಂಬಿ 20ಗ್ರಾಂ, ಬಾದಾಮಿ 20ಗ್ರಾಂ, ಪಿಸ್ತಾ 15ಗ್ರಾಂ, ಒಣ ಖರ್ಜೂರ 5-10, ದ್ರಾಕ್ಷಿ 20ಗ್ರಾಂ, ತುಪ್ಪ 3ಟೇಬಲ್ ಚಮಚ, ಕಂಡೆನ್ಸ್  ಮಿಲ್ಕ್ 200ಗ್ರಾಂ, ಸಕ್ಕರೆ 2ಟೇಬಲ್ ಚಮಚ, ಕೇಸರಿ ದಳಗಳು ಸ್ವಲ್ಪ, ಏಲಕ್ಕಿ ಪುಡಿ 1/2ಟೀ ಚಮಚ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಹಾಲನ್ನು ಹಾಕಿ ಮುಕ್ಕಾಲು ಭಾಗ ಕುದಿಸಿ. ತುಪ್ಪದಲ್ಲಿ ಗೋಡಂಬಿ, ಬಾದಾಮಿ ಮತ್ತು ಪಿಸ್ತಾ, ಒಣ ಖರ್ಜೂರ, ದ್ರಾಕ್ಷಿ, ಶ್ಯಾವಿಗೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ಬಿಸಿ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿ ಐದು ನಿಮಿಷಗಳ ನಂತರ ಅದನ್ನು ಕುದಿಯುವ ಹಾಲಿಗೆ ಬೆರೆಸಿ. ಕುದಿಯುತ್ತಿರುವ ಹಾಲಿಗೆ ಹುರಿದ ಶ್ಯಾವಿಗೆಯನ್ನು ಹಾಕಿ. ಶ್ಯಾವಿಗೆಯು ಐದು ನಿಮಿಷಗಳ ಕಾಲ ಚೆನ್ನಾಗಿ ಹಾಲಿನಲ್ಲಿ ಬೆಂದ ನಂತರ ಸಕ್ಕರೆಯನ್ನು ಹಾಕಿ ಕುದಿಸಿ. ಸಕ್ಕರೆ ಕರಗಿದ ನಂತರ ಹುರಿದ ಒಣ ಹಣ್ಣುಗಳನ್ನು ಹಾಕಿ ಮಿಶ್ರಣ ಮಾಡಿ.ಈಗ ಕಂಡೆನ್ಸ್ ್ಡ ಮಿಲ್ಕ್ ಹಾಕಿ ಮಿಶ್ರಣ ಮಾಡಿ. ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ ಒಲೆಯಿಂದ ಇಳಿಸಿ.