ಅಂಕಣ

ಜ್ವಲಂತ ಸಮಸ್ಯೆ ಬಗೆಹರಿಸಿ: ಜನಮತ

Webdesk - Ravikanth
ಭಾರತ ಸ್ವಾತಂತ್ರ್ಯಪ್ರಾಪ್ತಿಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಇದು ಸಾರ್ಥಕತೆಯ, ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ಸಮಯ. ಆದರೆ, ಇದೇ ಸಂದರ್ಭದಲ್ಲಿ ದೇಶ ಹಲವು ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಅವುಗಳ ನಿವಾರಣೆ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಕರೊನಾ ಕಂಟಕದಿಂದ ನಮ್ಮ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಏರುತ್ತಲೇ ಇದೆ. ಲಾಕ್​ಡೌನ್​ನಿಂದಾಗಿ ಕಾರ್ವಿುಕರು, ಮರದ ಕೆಲಸಗಾರರಿಗೆ, ಕಬ್ಬಿಣದ ಕೆಲಸಗಾರರಿಗೆ, ಕಲಾಕುಸುರಿಯಲ್ಲಿ ನಿರತರಾಗಿದ್ದವರಿಗೆ ಕೆಲಸವೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ವಣವಾಗಿದೆ.

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಅನುಭವದ ನುಡಿಯಂತೆ ಜೀವನ ನಡೆಸುತ್ತಿದ್ದವರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಧ್ಯಮ ವರ್ಗದವರ ಸಮಸ್ಯೆಗಳಿಗಂತೂ ಲೆಕ್ಕವೇ ಇಲ್ಲ. ಜತೆಗೆ ಬೆಲೆಏರಿಕೆ ಎಂಬುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದಿನ ಕಳೆಯುವುದಾದರೆ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆದ್ದರಿಂದ, ಸರ್ಕಾರ ಮೊದಲು ಈ ಸಮಸ್ಯೆಗಳ ಪರಿಹಾರದ ಹಾದಿಯನ್ನು ಶೋಧಿಸಬೇಕು. ಜನರಲ್ಲಿ ವಿಶ್ವಾಸ ತುಂಬುವ ಜತೆಗೆ ಆರ್ಥಿಕ ಚೇತರಿಕೆಗೆ ಅವಶ್ಯಕ ಹೆಜ್ಜೆಗಳನ್ನು ಇರಿಸಬೇಕು.

| ವಿ. ಬಾಲಕೃಷ್ಣ ಶಿರ್ವ ಪ್ರಾಧ್ಯಾಪಕರು, ಕಟಪಾಡಿ (ಉಡುಪಿ ಜಿಲ್ಲೆ)