ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹಂತ ಹಂತದ ಅನುಷ್ಠಾನ ಜಾರಿಯಲ್ಲಿದೆ. ಬದಲಾದ ಜಗತ್ತಿನಲ್ಲಿ ಕೌಶಲ ಆಧಾರಿತ ಶಿಕ್ಷಣದ ಅಗತ್ಯ ಹಿಂದೆ ಎಂದಿಗಿಂತಲೂ ಈಗ ಹೆಚ್ಚಾಗಿದೆ. ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕ ಶಿಕ್ಷಣವೂ ಪಾಮುಖ್ಯತೆ ಪಡೆದಿದೆ. ಕೌಶಲ ಆಧಾರಿತ ಶಿಕ್ಷಣ ಈಗ ಕೇವಲ ವೃತ್ತಿ ಶಿಕ್ಷಣಕ್ಕೆ ಸೀಮಿತವಲ್ಲ. ಸಾಮಾನ್ಯ ಪದವಿ, ಸ್ನಾತಕೋತ್ತರ ಶಿಕ್ಷಣದಲ್ಲೂ ಕೌಶಲ ಆಧಾರಿತ ಶಿಕ್ಷಣದ ಅಗತ್ಯ ಹೆಚ್ಚಾಗಿದೆ. ಇತ್ತೀಚಿನ ಆರೇಳು ವರ್ಷಗಳ ಅವಧಿಯಲ್ಲಿ ವಿಶೇಷವಾಗಿ ಕರೊನಾ ಅವಧಿಯ ನಂತರದಲ್ಲಿ ಬದಲಾದ ಸನ್ನಿವೇಶದಲ್ಲಿ ಕೌಶಲ ಆಧಾರಿತ ಶಿಕ್ಷಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕೌಶಲ ಆಧಾರಿತ ಶಿಕ್ಷಣದ ಚಿತ್ರಣವೂ ಬದಲಾಗಿದೆ. ‘ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2021’ರ ಅಂಕಿ ಅಂಶ ಪ್ರಕಾರ ಶೇಕಡ 45.9 ಭಾರತೀಯ ಯುವಜನತೆ ಉದ್ಯೋಗ ಹೊಂದಿದವರು. ಶೇಕಡ 85.92 ಯುವಜನತೆ ಕಲಿಕೆಯ ಹಂತದಲ್ಲಿ ದೊರೆಯದ ಕೌಶಲಗಳನ್ನು ಇಂಟರ್ನ್ಶಿಪ್ ಮೂಲಕ ಪಡೆಯಲು ಬಯಸುತ್ತಿದ್ದಾರೆ. ಉದ್ಯೋಗಕ್ಕೆ ಅಗತ್ಯವಿರುವ ಕೌಶಲದ ಕೊರತೆ ಕಲಿಕೆಯ ಹಂತದಲ್ಲಿ ಕಾಡುತ್ತಿರುವುದು ಈ ಅಂಕಿಅಂಶಗಳಿಂದ ವ್ಯಕ್ತವಾಗುವ ಮುಖ್ಯ ಅಂಶ. ಇದೇ ರೀತಿ, ಇತ್ತೀಚಿನ ವರ್ಷಗಳಲ್ಲಿ ಫ್ರೀಲ್ಯಾನ್ಸ್ ಕೆಲಸ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. 2 ಕೋಟಿಗೂ ಅಧಿಕ ಜನ ಪೂರ್ಣ ಪ್ರಮಾಣದಲ್ಲಿ ಫ್ರೀಲ್ಯಾನ್ಸ್ ಕೆಲಸಗಳನ್ನು ಕಂಡುಕೊಂಡಿದ್ದಾರೆ. ದೆಹಲಿ, ಓಡಿಶಾ, ಉತ್ತರ ಪ್ರದೇಶಗಳು ಕೌಶಲ ಅಭಿವೃದ್ಧಿ ಪಡಿಸುತ್ತಿರುವ ಮುಂಚೂಣಿ ರಾಜ್ಯಗಳು. ಹೆಚ್ಚು ಉದ್ಯೋಗ ಒದಗಿಸುತ್ತಿರುವ ಕೋರ್ಸ್ಗಳನ್ನು ಗಮನಿಸಿದರೆ, ಮೊದಲ ಮೂರು ಸ್ಥಾನಗಳಲ್ಲಿ ಬಿ.ಇ, ಬಿ.ಟೆಕ್ (46.82% ), ಎಂ.ಬಿ.ಎ (46.59%) ಮತ್ತು ಬಿ.ಎ (42.72%) ಕೋರ್ಸ್ಗಳಿವೆ.
ಸರ್ಕಾರದ ಪಾತ್ರ: ನಾವೀನ್ಯತೆ, ಅನ್ವೇಷಣೆ, ನವೋದ್ಯಮ ಈ ಕುರಿತು ಗಮನಹರಿಸುತ್ತಿರುವ ಸರ್ಕಾರ, ಆಧುನಿಕ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಕೈಗಾರಿಕೋದ್ಯಮ ಕ್ಷೇತ್ರಗಳು ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಇದರ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನ ಇದ್ದರಷ್ಟೆ ಸಾಲದು; ನುರಿತ ಮಾನವ ಸಂಪನ್ಮೂಲದ ಅಗತ್ಯವೂ ಇದೆ. ಇದಕ್ಕೆಲ್ಲ ಕೌಶಲವೇ ಬಂಡವಾಳ. ಪ್ರಸ್ತುತ ಸನ್ನಿವೇಶದಲ್ಲಿ ‘ಉದ್ಯೋಗಕ್ಕಾಗಿ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಉದ್ಯೋಗ’ ಎನ್ನುವುದು ಸರ್ಕಾರದ ಮೂಲ ಮಂತ್ರ.
ಪ್ರಮುಖ ಯೋಜನೆ: ವಿಶಿಷ್ಟ ಕೌಶಲ ಅಭಿವೃದ್ದಿ ಸಂಸ್ಥೆಗಳ ನೆರವು ಯೋಜನೆ; ವಿಶೇಷ ಅಭಿವೃದ್ಧಿ ಯೋಜನೆ; ನಬಾರ್ಡ್ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ಯೋಜನೆ - ಈ ಯೋಜನೆಗಳ ಪ್ರಕಾರ ನೂತನ ಕೇಂದ್ರ ಪ್ರಾಯೋಗಿಕ ತರಬೇತಿ ವಿಶಿಷ್ಟ ಬೋಧನಾ ಕ್ರಮ ಅಳವಡಿಕೆಯಾಗಿದೆ. ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಗಳಲ್ಲೂ ಕೌಶಲ ತರಬೇತಿ ನೀಡಲಾಗುತ್ತಿದೆ. ಸೋಲಾರ್ ನಿರ್ವಹಣಾ ತರಬೇತಿ. ಹೊಲಿಗೆ ತರಬೇತಿ ಸಂವಹನ ಕೌಶಲ, ವ್ಯವಹಾರಿಕ ಜ್ಞಾನ, ಮೊಬೈಲ್ ರಿಪೇರಿಂಗ್ ಕೋರ್ಸ್, ಎಲ್ಇಡಿ ಲೈಟ್ ರಿಪೇರಿಂಗ್, ಸಿ.ಸಿ ಟಿವಿ ಟೆಕ್ನೀಶಿಯನ್ ಹಾಗೂ ಇನ್ನಿತರ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ ಪ್ರಕಾರ ಕೌಶಲ ಅಭಿವೃದ್ಧಿಗಾಗಿ ನಿರುದ್ಯೋಗಿಗಳಿಗೆ ಸಹಾಯವಾಗುವ ಯೋಜನೆ ಸ್ವ ಉದ್ಯೋಗಕ್ಕಾಗಿ ಧನಸಹಾಯ ಯೊಜನೆ ಲಭ್ಯವಿದೆ. ಇದಕ್ಕೆ ಸಂಬಂಧಿಸಿದ ಇನ್ನಿತರ ಅಂಶಗಳನ್ನು ಡಿಡಿಡಿ.kಚ್ಠಠಜಚ್ಝkಚ್ಟ.ಟಞ ನ ಮೂಲಕ ಅರ್ಜಿ ಸಲ್ಲಿಸಬಹುದು. ಕರೊನಾ ಅವಧಿಯಲ್ಲಿ ಪ್ರಾಯೋಗಿಕ ತರಗತಿಗಳು ಮತ್ತು ಕೌಶಲ್ಯಾಧಾರಿತ ಕಲಿಕೆಗಳು ಬಹುಮಟ್ಟಿನಲ್ಲಿ ಕ್ಷೀಣಿಸಿದ್ದು ಇದು ಯುವ ಜನತೆಯ ಭವಿಷ್ಯಕ್ಕೆ ತೊಡಕಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಆದರೆ ಈ ಪರಿಸ್ಥಿತಿಗೆ ಒಗ್ಗಿಕೊಂಡು ಬಿ.ಎಫ್.ಎಸ್.ಐ, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಇಂಜಿನಿಯರಿಂಗ್, ಇಂಟರ್ವಿುೕಡಿಯೇಟ್ ಆರ್ಟ್ಸ್, ಇಂಟರ್ನೆಟ್ ಕ್ಷೇತ್ರಗಳು ಸಕ್ರಿಯವಾಗಿ ಮುನ್ನಡೆಯುತ್ತಿವೆ. ಅವುಗಳ ಜತೆಗೆ ಹೆಜ್ಜೆ ಹಾಕುವುದು ಸದ್ಯದ ಅಗತ್ಯ ಎಂಬುದು ಸಾಬೀತಾಗಿರುವ ಅಂಶ.
ಇದು ಕೌಶಲ ಯುಗ. 21ನೇ ಶತಮಾನ ಅಠಿಜ್ಛಿಜ್ಚಿಜಿಚ್ಝ ಜ್ಞಿಠಿಛ್ಝಿ್ಝಜಛ್ಞಿ್ಚ, Mಚ್ಚಜಜ್ಞಿಛಿ ್ಝಚ್ಟ್ಞ್ಞ ನಂತಹ ಹೊಸ ಅನ್ವೇಷಣೆಗಳ ಮೂಲಕ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಜಗತ್ತಿನ ಆಧುನಿಕ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಕೌಶಲಗಳು ಅತ್ಯಗತ್ಯ. ಶಿಕ್ಷಣವು ಜ್ಞಾನದ ಅರಿವನ್ನು ನೀಡಿದರೆ, ಸುಂದರ ಬದುಕು ಕಟ್ಟಿಕೊಳ್ಳಲು ಕೌಶಲ ಬೇಕು. ಆದ್ದರಿಂದ ಮೌಲ್ಯಯುತ ಶಿಕ್ಷಣದಲ್ಲಿ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ.
| ಸುವೀರ್ ಜೈನ್ ವಿದ್ಯಾರ್ಥಿ
ಕಳೆದ ನಾಲ್ಕಾರು ವರ್ಷಗಳ ಅವಧಿಯಲ್ಲಿ ಡಿಜಟಲ್ ಜಗತ್ತು ಬೆಳೆದ ರೀತಿ ಗಮನಿಸಿದರೆ, ಕರೊನಾ ನಂತರದ ಅವಧಿಯಲ್ಲಿ ಅದು ಹಿಂದೆಂದಿಗಿಂತಲೂ ಹೆಚ್ಚು ವೇಗ ಪಡೆದುಕೊಂಡಿದೆ. ಈ ರೀತಿ ಪ್ರಭಾವ ವಿಸ್ತರಿಸಿಕೊಂಡ ಡಿಜಿಟಲ್ ಜಗತ್ತಿನಲಿ ಜನರನ್ನು ತಲುಪುವುದು ಸುಲಭ ಸಾಧ್ಯವಾಗುತ್ತಿದೆ. ಹೆಚ್ಚಿನವರು ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ. ಹೀಗಾಗಿ ಹೊಸ ಉದ್ಯಮವನ್ನು ಆರಂಭಿಸಿದರೆ ನಿರೀಕ್ಷಿತ ಗ್ರಾಹಕರನ್ನು ತಲುಪಲು ಕಡಿಮೆ ಅವಧಿ ಸಾಕು. ಇದನ್ನೇ ಕೇಂದ್ರೀಕರಿಸಿಕೊಂಡು ಇ-ಕಾಮರ್ಸ್ ವೆಬ್ಸೈಟ್ಗಳು, ಫೇಸ್ಬುಕ್ ಪೇಜ್ಗಳ ಮೂಲಕ ಗ್ರಾಹಕರನ್ನು ಸಂಪಾದಿಸಲು ಸಾಧ್ಯವಾಗುತ್ತಿದೆ. ಉದ್ಯೋಗ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತಿವೆ. ಉದ್ದಿಮೆದಾರರೆಲ್ಲ ತಮ್ಮ ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಡಿಜಿಟಲ್ ಮಾಧ್ಯಮದ ಮೊರೆ ಹೋಗಿದ್ದಾರೆ. ಇ-ಕಾಮಸ್ ವೆಬ್ ತಾಣಗಳು, ಬ್ಲಾಗ್ ನಿರ್ವಹಣೆ, ಕಂಟೆಂಟ್ ಮಾರ್ಕೆಟಿಂಗ್, ವೆಬ್ಸೈಟ್ ಡಿಸೈನ್, ಸೋಷಿಯಲ್ ಮೀಡಿಯಾ ಪ್ರಮೋಷನ್ ಮುಂತಾದ ಕೆಲಸಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ವರ್ಕ್ಫ್ರಮ್ ಹೋಮ್ ಕಲ್ಪನೆ ಸಾಕಾರವಾಗಿದ್ದು, ಉದ್ಯೋಗಿಗಳು ಬಹುಪಾಲು ಮನೆಯಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಡಿಜಿಟಲ್ ವೇದಿಕೆಯಲ್ಲಿ ವ್ಯವಹಾರ ಹೆಚ್ಚಾಗಿದೆ. 2018ರ ವೇಳೆ (ಡಾಲರ್)350ಬಿಲಿಯನ್ನಷ್ಟಿದ್ದ ಡಿಜಿಟಲ್ ಮಾರುಕಟ್ಟೆಯ ಗಾತ್ರ, 2025ರ ವೇಳೆಗೆ 3.2ಟ್ರಿಲಿಯನ್ನಷ್ಟು ಆಗುವುದೆಂದು ಅಂದಾಜಿಸಲಾಗಿದೆ. ಮನೆಯಲ್ಲಿದ್ದುಕೊಂಡು ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿದೆ. ಭಾರತದಲ್ಲಿ ಪ್ರಸ್ತುತ ವರ್ಷದಲ್ಲಿ ಶೇ.27ರಷ್ಟು ಜನ ವಿವಿಧ ಡಿಜಿಟಿಲ್ ವೇದಿಕೆಗಳಿಂದ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ. 2021ರ ಅವಧಿಯಲ್ಲಿ ಶೇ.89ರಷ್ಟು ಕಂಪೆನಿಗಳು ಡಿಜಿಟಲ್ ವ್ಯವಹಾರದ ಯಶಸ್ಸಿನ ತಂತ್ರಗಳನ್ನು ಅಳವಡಿಸಿಕೊಂಡಿವೆ. ವಿವಿಧ ಕಂಪೆನಿಗಳು ಡಿಜಿಟಲೀಕರಣಗೊಂಡು ಶೇ.40ರಷ್ಟು ಕಾರ್ಯದ ಶ್ರೇಷ್ಟತೆಯನ್ನು ಕಂಡುಕೊಳ್ಳು ಸಾಧ್ಯವಾಗಿದೆ. ಭಾರತದಲ್ಲಿ ಪ್ರಸ್ತುತ ಶೇ.67ರಷ್ಟು ಉದ್ಯೋಗಿಗಳು ಡಿಜಿಟಿಲ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. 2025ರ ವೇಳೆಗೆ ಭಾರತದಲ್ಲಿ ಈಗಿರುವ ಡಿಜಿಟಲ್ ಪರಿಣಿತ ಕೆಲಸಗಾರರಿಗಿಂತ 9ಪಟ್ಟು ಹೆಚ್ಚು ನುರಿತ ಕೆಲಸಗಾರರ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಡಿಜಿಟಲ್ ವೇದಿಕೆಗಳ ಮೂಲಕ ಕುಳಿತಲ್ಲೇ ಸಂಪಾದನೆ ಮಾಡುವ ಅವಕಾಶವಿದೆ. ಇದಕ್ಕಾಗಿ ನಮ್ಮಲ್ಲಿರುವ ಜ್ಞಾನ ಹಾಗೂ ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಸಮಾಜಕ್ಕೆ ಡಿಜಿಟಲ್ ವ್ಯವಸ್ಥೆ ವರದಾನವಾಗಿ ಬದಲಾಗುತ್ತಿದೆ. ಅನ್ವೇಷಣೆಯ ಆಸಕ್ತಿಯೊಂದಿಗೆ ಮುನ್ನಡೆದಾಗ ಡಿಜಿಟಲ್ ವ್ಯವಸ್ಥೆ ಹೊಸ ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತದೆ.
ಪ್ರತಿಯೊಂದು ಬಿಕ್ಕಟ್ಟು ಹೊಸ -ಹೊಸ ಸಮಸ್ಯೆ ಗಳನ್ನು ಸೃಷ್ಟಿಸುತ್ತದೆ. ಅದರಲ್ಲೂ ಕೋವಿಡ್-19 ಕೂಡ ಇದಕ್ಕೆ ಹೊರತಲ್ಲ. ಮಾರಕ ಕರೊನಾ ಕಾರಣ ಜಗತ್ತಿನ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದಿದೆ. ಬೇಡಿಕೆ ಕುಸಿತ, ಉತ್ಪಾದನೆ ಕುಂಟಿತ, ಉದ್ಯೊಗ ಕಡಿತ, ಜಿಡಿಪಿ ಕುಸಿತ ಕಾಡಿದೆ. ಇವೆಲ್ಲದರ ನಡುವೆ, ಕೋವಿಡ್ ನಂತರದ ಜಗತ್ತಿನಲ್ಲಿ ಸಂಕಷ್ಟ ತಂದುಕೊಟ್ಟ ಅವಕಾಶವನ್ನು ಬಳಸಿಕೊಂಡು ಭಾರತದ ಅರ್ಥ ವ್ಯವಸ್ಥೆ ಚೇತರಿಕೆಯಲ್ಲಿದೆ ಎಂಬುದು ಸಮಾಧಾನದ ವಿಚಾರ. ಲಾಕ್ಡೌನ್ ಪರಿಣಾಮ ಏಪ್ರಿಲ್ ತಿಂಗಳೊಂದರಲ್ಲೇ ದೇಶದ ಸುಮಾರು 12 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಅಂಶದತ್ತ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿಎಂಐಇ) ಬೆಟ್ಟು ಮಾಡಿದೆ. ಸಮೀಪದ ಭವಿಷ್ಯದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬಾಗಿಲು ಹಾಕುವ ಸಾಧ್ಯತೆ ಇದ್ದು, ಇನ್ನಷ್ಟು ಉದ್ಯೋಗ ನಷ್ಟವಾಗಲಿದೆ ಎಂಬುದು ತಜ್ಞರ ವಿಶ್ಲೇಷಣೆ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಇತರ ಕ್ಷೇತ್ರಗಳಲ್ಲಿ ಆರ್ಥಿಕ ನೆರವು, ಪರ್ಯಾಯ ವ್ಯವಸ್ಥೆ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಾಗಿದ್ದರೂ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಇದೂ ಕೂಡ ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಹಲವು ಸಂಗತಿಗಳು ಬಿಡಿಸಲಾಗದ ಕಗ್ಗಂಟಾಗಿ ಸರಕಾರದ ಶಿಕ್ಷಣ ಇಲಾಖೆ, ಖಾಸಗಿ ಶಿಕ್ಷಣ
ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಚಿಂತೆಗೀಡು ಮಾಡಿವೆ. ಕೋವಿಡ್19 1ನೇ ಅಲೆ ಆರಂಭವಾದಾಗಿನಿಂದ ಶಾಲೆಗಳು ಹೆಚ್ಚೂ ಕಡಿಮೆ ಬಂದ್ ಆಗಿವೆ. ಸರಿಯಾಗಿ ಪ್ರಾಯೋಗಿಕ ತರಗತಿಗಳು ನಡೆಯುತ್ತಿಲ್ಲ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವು ಕಡಿಮೆಯಾಗುತ್ತಾ ಇದೆ. ಹೀಗಾಗಿ ಉದ್ಯೋಗಗಳು ಕೈತಪ್ಪಿ ಹೋಗುತ್ತಿದ್ದು, ಬಹುತೇಕ ಎಲ್ಲರಲ್ಲೂ ಗೊಂದಲ ಆತಂಕ ಮನೆಮಾಡಿದೆ.
ಕರೊನಾ ಕಾರಣಕ್ಕೆ ವೈಯಕ್ತಿಕವಾಗಿ ಸಮಸ್ಯೆಯಾಗಿದ್ದು ಶಿಕ್ಷಣದ ವಿಚಾರದಲ್ಲಿ. ವೃತ್ತಿಪರ ಕೋರ್ಸ್ ಅನ್ನು ಸ್ನಾತಕೋತ್ತರ ಅಧ್ಯಯನಕ್ಕೆ ಆಯ್ಕೆ ಮಾಡಿದ್ದು, ಅದರ ಪ್ರಾಯೋಗಿಕ ಅನುಭವಕ್ಕೆ ಹೆಚ್ಚು ಅವಕಾಶ ಸಿಗದಂತಾಯಿತು. ಇಂಟರ್ನ್ಶಿಪ್ಗೂ ಅವಕಾಶ ಕಡಿಮೆಯಾಗಿದೆ. ಉದ್ಯೋಗ ಕ್ಷೇತ್ರದ ಸವಾಲು ಬೆಟ್ಟದಂತೆ ಗೋಚರಿಸತೊಡಗಿದೆ.
| ಅರುಣ್ ಕಿರಿಮಂಜೇಶ್ವರ ವಿದ್ಯಾರ್ಥಿ