| ಮಹಾಬಲಮೂರ್ತಿ ಕೊಡ್ಲೆಕೆರೆ
ಶ್ರಾವಣ ತಿಂಗಳು ಬಂತೆಂದರೆ ಸೂರ್ಯನ ಉರಿಬಿಸಿಲಿಗೆ ಕರುಣೆ ಒದಗಿ, ವರ್ತಮಾನದ ದಾರಿಯಲ್ಲಿ ನೆಲವು ತಂಪಾಗುವ ಸಮಯ ಎಂದೇ ಅರ್ಥ. ನೆಲವು ತಂಪಾದಾಗ ಮನಸ್ಸೂ ಹಗುರ. ಸಾರ್ಥಕ ಬದುಕಿಗೆ ಅವಶ್ಯವಾದ ಅಷ್ಟ ಸಿದ್ಧಿಗಳನ್ನು ಭಾರತೀಯ ಪರಂಪರೆ ಚೆನ್ನಾಗಿ ವ್ಯಾಖ್ಯಾನಿಸುತ್ತದೆ. ಅಷ್ಟಸಿದ್ಧಿಗಳಲ್ಲಿ ಹೆಸರಿಸಿದ ಅಣಿಮಾ, ಲಘಿಮಾ, ಮಹಿಮಾ, ಗರಿಮಾ, ಪ್ರಾಪ್ತಿ, ಈಶಿತ್ವ,
ನಮ್ಮ ಆತ್ಮದಲ್ಲಿಯೇ ಹರಳುಗಟ್ಟಿಸಿಕೊಳ್ಳುವ ಕ್ರಿಯೆಗೆ ಗುರು ಕಲಿಸಿದ ಅರಿವನ್ನು, ನಮ್ಮ ಬೌದ್ಧಿಕ ಸಂಪನ್ನತೆಗೆ ಸಾರ್ಥಕತೆ ಒದಗಿಸುವ ಜೀವನ ಕ್ರಮಕ್ಕೆ ಮುಂದಾಗಬೇಕು. ಆಖೈರಿಗೆ ಸತ್ಯದರ್ಶನವನ್ನು ಆತ್ಮದ ಅನುಭೂತಿಯಿಂದಲೇ ಪಡೆಯಲು ನಾವು ಮುಂದಾಗಬೇಕು ಎನ್ನುವುದನ್ನು ಲಾಗಾಯ್ತಿನಿಂದ ನಮ್ಮ ಆರ್ಷೆಯ ಪರಂಪರೆ ಬೋಧಿಸಿಕೊಂಡೇ ಬಂದಿದೆ.
ಗ್ರೀಷ್ಮ ಋತು ಮುಗಿದು ವರ್ಷ ಋತು ಈ ಇಳೆಯನ್ನು ಆವರಿಸಿಕೊಳ್ಳುವ ಪರ್ವ ಕಾಲ ಶ್ರಾವಣ ಮಾಸದ ಪ್ರಾರಂಭದಿಂದಲೇ ಶುರುಗೊಳ್ಳುತ್ತದೆ. ಹೀಗಾಗಿ ಉಲ್ಲಸಿತವಾಗಿಸಲು ಸಕಾಲವಾದ ವರ್ಷ ಋತುವಿನ ಮೊದಲರ್ಧಭಾಗವಾದ ಶ್ರಾವಣ ಮಾಸದಲ್ಲಿ ನೆಲದಲ್ಲಿ ಬಿತ್ತಿದ ಬೀಜಗಳು ಸಮೃದ್ಧವಾದ ನೀರಿನಿಂದ ನೆನೆದ ಕಾರಣದಿಂದ ಮೊಳಕೆಯೊಡೆದು ಹೊರಬರುತ್ತವೆ. ನೆಲವೆಲ್ಲ ಹಸಿರ ಹೊದಿಕೆಯಲ್ಲಿ (ಭೂರಮೆಯನ್ನು ಹಸಿರು ಹಚ್ಚಡದಲ್ಲಿ) ಸಂಭ್ರಮಿಸುವುದನ್ನು, ಒಡೆಯಲಾಗದ ಕಠಿಣ ತೊಗಟೆಗಳು, ಬೀಜದ ಕವಚಗಳು ನೆಲದ ಆರ್ದ್ರತೆಯಿಂದಾಗಿ ಮೃದುವಾಗಿ ಜೀವದ ನೆತ್ತಿ ಒಡೆದು ಹೊರಬಂದಾಗ ಅಷ್ಟಸಿದ್ಧಿಗಳಲ್ಲಿ ಮೊದಲರ್ಧಗಳಾದ ಸೂಕ್ಷ್ಮ, ಅಗಾಧ, ಭಾರ ಮತ್ತು ಹಗುರತ್ವದ ಮಹತ್ವವನ್ನು ನಮಗೆ, ನಮ್ಮ ಕಣ್ಣಿಗೆ ಒದಗಿಸಿಕೊಡುತ್ತವೆ, ಶಕ್ತಿರೂಪಗಳಾಗುತ್ತವೆ.
ಅಷ್ಟಸಿದ್ಧಿಗಳ ಅಂತ್ಯಾರ್ಧಗಳು: ಪ್ರಾಪ್ತಿ, ಈಶಿತ್ವ, ವಶಿತ್ವ ಹಾಗೂ ಶ್ಲೋಕಗಳು ಜೀವನದಲ್ಲಿ ಏನಾದರೊಂದನ್ನು ಸಾಧಿಸುವ ದಿಸೆಯತ್ತ ಬಲವನ್ನು ನಮಗೆ ಸಂಚಯಿಸಿಕೊಡುತ್ತವೆ. ಪ್ರಾಪ್ತಿ ಎಂದರೆ ಸಹಜವಾಗಿಯೇ ಎಲ್ಲರಿಗೂ ತಿಳಿದ ಅಂಶವಾಗಿದೆ. ಈಶಿತ್ವದಿಂದಾಗಿ ನಾವು ನಮ್ಮ ಪ್ರಭಾವವನ್ನು ಅನ್ಯರಲ್ಲಿ ಸೃಷ್ಟಿಸಬಹುದಾದ ವಿಚಾರ. ವಶಿತ್ವ ಎಂದರೆ ಪ್ರಭಾವದಿಂದಾಗಿ ನಾವು ನಿರಂಕುಶ ಮತಿಗಳಾಗದ ಹಾಗೆ ವಶಿತ್ವವನ್ನು ಸಾಧಿಸಿಕೊಳ್ಳಬೇಕು. ವಶಿತ್ವ ಎಂದರೆ ಇಂದ್ರಿಯ ನಿಗ್ರಹ. ಹೀಗೆ ಈ ಎಲ್ಲ ಪ್ರಾಪ್ತಿ, ಪ್ರಭಾವಿಸುವ, ಇಂದ್ರಿಯ ನಿಗ್ರಹದ ಸಂದರ್ಭಕ್ಕೆ ಬೇಕಾದ ಶ್ಲೋಕ (ಪಠಣ, ಓದು, ಸಂವಹನ) ಜೀವನವನ್ನು ಅರ್ಥಪೂರ್ಣವಾಗಿಸುವ ಔನ್ನತ್ಯಕ್ಕೆ ನಿಖರವಾದ ಮಾರ್ಗವನ್ನು ಹುಡುಕಿಕೊಡುತ್ತದೆ. ಒಟ್ಟಿನಲ್ಲಿ ನಮ್ಮನ್ನು ಸೂಕ್ಷ್ಮದಿಂದ ಅಗಾಧತೆಗೂ, ಅಗಾಧತೆಯಿಂದ ಸಮೃದ್ಧಿಯ ಭಾರಕ್ಕೂ, ಭಾರವು ಕ್ರೂರತ್ವಕ್ಕೂ ರೂಪಾಂತರವಾಗದ ಹಾಗೆ ಹಗುರತ್ವಕ್ಕೂ ಸಾಗುತ್ತ ಹೋಗುವಂತೆ ಮಾಡುವಲ್ಲಿ ಅವಶ್ಯವಾದ ಪ್ರಾಪ್ತಿ, ಕೀರ್ತಿ, ಇಂದ್ರಿಯ ನಿಗ್ರಹಗಳಿಂದ ಸಾತ್ವಿಕ ಸಂಸ್ಕಾರದ, ಅಧ್ಯಾತ್ಮದ ಚಿಂತನದಲ್ಲಿ ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು. ಅಂತೂ ಮುಖ್ಯವಾಗಿ ಓದಬೇಕು. ಓದು ಸಫಲತೆ ಒದಗಿಸಬೇಕು.
ಓದಿಗೆ ಸಂಪನ್ನವಾದ ಸಮಯ: ವೇದ, ವೇದ ಸಂಪ್ರಾಪ್ತ, ಉಪವೇದ, ಶ್ರುತಿ, ಅರಣ್ಯಕ, ಉಪನಿಷತ್ತುಗಳೆಲ್ಲ ಪಂಡಿತರ ಪಾಲಿಗಿದ್ದಿರಬಹುದು. ಆದರೆ ನಮ್ಮ ಅಷ್ಟಾದಶ ಪುರಾಣಗಳಲ್ಲಿನ ಕತೆಗಳು, ಉಪಕತೆಗಳು, ಕತೆಗಳ ಮೂಲಕವಾದ ಜೀವನ ದರ್ಶನಗಳು ಸಾಮಾನ್ಯರಲ್ಲಿ ಸಾಮಾನ್ಯರಿಗೂ ವೇದಾಂತದ ಗಟ್ಟಿ ಬೇರುಗಳನ್ನು, ವಿಜ್ಞಾನ, ಪ್ರಪಂಚ, ಪಂಚಭೂತಾತ್ಮಕವಾದ ಸರ್ವತ್ರ ಭೌತಿಕ ಶಕ್ತಿಮಿತಿಗಳ ಅರಿವನ್ನು ಕಟ್ಟಿಕೊಡುವಂತಹ ಶಕ್ತಿ ಹೊಂದಿವೆ. ಶ್ರಾವಣ ಮಾಸ ಹಬ್ಬಗಳ ಮಾಸ. ಧರ್ವರ್ಥ ಕಾಮ ಮೋಕ್ಷಗಳ ಒಳಾರ್ಥಗಳು ಏನು, ಎತ್ತ, ಹೇಗೆ ಎನ್ನುವ ಬಗೆಗಿನ ಬಹುಮಹತ್ವದ ಅಂಶಗಳನ್ನು ತೆರೆದಿಡುವುದರೊಂದಿಗೆ ಅಷ್ಟಾದಶ ಪುರಾಣಗಳನ್ನು ನಾವೇ ಓದಬಹುದಾದ, ಅಥವಾ ಶ್ರವಣದ ಮೂಲಕ ಅಂದರೆ ಪುರಾಣ ಪ್ರವಚನಗಳನ್ನು ಅನ್ಯರು ನಡೆಸಿಕೊಡುವಾಗ ಅಷ್ಟಾದಶ ಪುರಾಣಗಳಲ್ಲಿ ಅಡಕವಾದ ಎಲ್ಲಾ ವಿವರಗಳನ್ನು ಅರಿಯಲು ಸುಲಭದ ದಾರಿಯನ್ನು ಒದಗಿಸಿಕೊಡುತ್ತದೆ. ಅಷ್ಟಾದಶ ಪುರಾಣಗಳು ಪಾಪ ಪುಣ್ಯಗಳ ಬಗೆಗೆ, ಜೀವ ವಿಕಸನದ
ಬಗೆಗೆ, ಆರೋಗ್ಯದೊಂದಿಗೆ ಸಂಭ್ರಮಿಸುವ ದೇಹ ಸಂಪತ್ತನ್ನು ಕಾಪಾಡಿಕೊಳ್ಳು ವುದು ಹೇಗೆಂಬುದರ ಬಗೆಗೆ ತಿಳಿಸಿಕೊಡುತ್ತವೆ. ಅಲ್ಲದೆ, ಆಧುನಿಕ ಜೀವಶಾಸ್ತ್ರ ಯಾವರೀತಿ ಡಿಎನ್ಎ, ಆರ್ಎನ್ಎ, ಜೀವಕೋಶ, ಜೀವಕೋಶಗಳ ವಿಕೃತಿಗೆ ಕಾರಣವಾಗುವ ವಿಷಕಾರಕ ವಸ್ತುಗಳ ಬಗೆಗೆ ತಿಳಿಸುತ್ತ ಅರ್ಬುದ, ಗುಹ್ಯರೋಗ, ಅಜೀರ್ಣ, ರಾಜಯಕ್ಷಗಳ ಬಗೆಗೆ ತಿಳುವಳಿಕೆ ಕೊಡುತ್ತದೋ, ಎಲುಬು, ನರ, ಮಾಂಸ, ರಕ್ತಗಳ ಸೂಕ್ಷ್ಮಗಳನ್ನು ತಿಳಿಸಿಕೊಡುತ್ತದೋ ಆ ಎಲ್ಲ ವಿಚಾರಗಳ ಬಗ್ಗೆಯೂ ಅಷ್ಟಾದಶ ಪುರಾಣಗಳು ಬೆಳಕು ಚೆಲ್ಲುತ್ತವೆ ಎಂಬುದು ವಿಶೇಷ.
ಹೀಗಾಗಿ ಶ್ರಾವಣ ಮಾಸ ಶ್ರವಣಕ್ಕೂ, ಪಠಣಕ್ಕೂ, ದೇಹ ಸೌಖ್ಯಕ್ಕೂ, ಅರಿವಿನ ವಿಸ್ತಾರಕ್ಕೂ, ಭೂಮಿಯ ಫಲವಂತಿಕೆಯ ಕಾರಣದಿಂದ ಸೃಷ್ಟಿಗೊಳ್ಳುವ ಬದುಕಿನ ಧರ್ವರ್ಥ ಕಾಮ ಮೋಕ್ಷಗಳಿಗೆ ಆರೋಗ್ಯಕರ ಸಂವರ್ಧನೆ ಒದಗಿಸುವ ಮೂಲಕ್ಕಾಗಿನ ಶಕ್ತಿಗೂ ಅವಕಾಶ ಒದಗಿಸುತ್ತದೆ. ಅಧ್ಯಾತ್ಮದ ಮೂಲಕವಾದ ಎಚ್ಚರಿಕೆ ನೀಡಿ ತಪು್ಪಗಳು ಘಟಿಸದಂತೆ ಜೀವನ ಕಚ್ಚಿಕೊಳ್ಳುವ ಶ್ರವಣಕ್ಕೆ ಕಾರಣವಾಗಿ, ನಿರಂತರವಾದ ಹರ್ಷಕ್ಕೆ ವರ್ಷಋತುವಿಗೆ ಸೌಧವಾಗುತ್ತದೆ.
(ಲೇಖಕರು ಜ್ಯೋತಿಷ ವಿಜ್ಞಾನ ಸಂಶೋಧಕರು)