ಪ್ರಶ್ನೆ: ನನ್ನ ಪತ್ನಿ ಸರ್ಕಾರಿ ಸೇವೆಯಲ್ಲಿರುವಾಗ (ದಿನಾಂಕ: 03-11-2016 ರಂದು) ನಿಧನರಾಗಿದ್ದು, ನನ್ನ ಮಗನಿಗೆ ಅನುಕಂಪ ಆಧಾರದ ಉದ್ಯೋಗಕ್ಕಾಗಿ ದಿನಾಂಕ: 30-05-2017ರಂದು ಅರ್ಜಿ ಸಲ್ಲಿಸಲಾಗಿದೆ. ಆದರೆ, ಅರ್ಜಿ ಸಲ್ಲಿಸಿ 5 ವರ್ಷಗಳು ಕಳೆದಿದ್ದರೂ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಈಗಲೂ ಉದ್ಯೋಗ ಕೇಳಲು ಅವಕಾಶವಿದೆಯೇ?
| ಜೆ. ಪ್ರಭುಕುಮಾರ್, ಗುಡಿಬಂಡೆ
ಉತ್ತರ: 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕಾತಿ) ನಿಯಮಾವಳಿಯ ನಿಯಮ 4ರಂತೆ ಅರ್ಜಿ ಸಲ್ಲಿಸಿದ್ದರೆ ಈಗಲೂ ನಿಮ್ಮ ಪತ್ನಿಯ ಇಲಾಖಾ ನೇಮಕಾತಿ ಪ್ರಾಧಿಕಾರವನ್ನು ಕೇಳಬಹುದು. ಈ ನಿಯಮದಂತೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ಅನುಕಂಪದ ನೇಮಕಾತಿ ನೀಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಕೃತಿ ನೋಡಬಹುದು.