ಅಂಕಣ

ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

ಪ್ರಶ್ನೆ : ಒಬ್ಬ ಹೆಣ್ಣಿಗೆ ಆಕೆಯ ತವರು ಮನೆಯಿಂದ ಬಂದ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲು ಇದೆ? ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಪಾಲು ಇದೆಯೋ ಅಥವಾ ಗಂಡು ಮಕ್ಕಳಿಗೂ ಪಾಲು ಇದೆಯೋ ತಿಳಿಸಿ.

ಉತ್ತರ: ತಾಯಿಗೆ ತವರಿನಿಂದ ಬಂದ ಆಸ್ತಿ ಆಕೆಯ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಆಕೆ ಬದುಕಿರುವವರೆಗೆ ಅದರಲ್ಲಿ ಯಾವ ಮಕ್ಕಳಿಗೂ ಪಾಲು ಇರುವುದಿಲ್ಲ. ಆಕೆ ತನ್ನ ಜೀವಿತ ಕಾಲದಲ್ಲಿ ಈ ಆಸ್ತಿಯನ್ನು ಬೇರೆಯವರಿಗೆ ದಾನ, ಕ್ರಯ ,ವಿಲ್‌ ಇತ್ಯಾದಿ ರೂಪದಲ್ಲಿ ಪರಭಾರೆ ಮಾಡದಿದ್ದರೆ, ಆಗ, ತಾಯಿ ತೀರಿಕೊಂಡ ನಂತರ ಆಕೆಯ ಆಸ್ತಿ, ಆಕೆಯ ಪತಿಗೆ ಮತ್ತು ಎಲ್ಲ ಮಕ್ಕಳಿಗೂ ಸಮಪಾಲಾಗಿ ಬರುತ್ತದೆ. ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಎನ್ನುವ ವ್ಯತ್ಯಾಸವಿರುವುದಿಲ್ಲ.