ಅಂಕಣ

ಸಮಾಜಕ್ಕೆ ಗಂಡ ಬೇಕು, ಅದಕ್ಕೇ ಡಿವೋರ್ಸ್‌ ಕೊಡಲ್ಲ ಅಂತ ಲವರ್‌ ಜತೆಗಿದ್ದಾಳೆ: ಕಾನೂನು ಸಲಹೆ ಕೊಡಿ ಮೇಡಂ...

suchetana
ನನ್ನ ಮದುವೆಯಾಗಿ ಏಳು ವರ್ಷವಾಗಿದೆ. ಆರು ತಿಂಗಳು ಮಾತ್ರ ಇಬ್ಬರೂ ಒಟ್ಟಿಗೇ ಇದ್ವಿ. ಪತ್ನಿಗೆ ಬೇರೆ ಸಂಬಂಧ ಇರೋದ್ರಿಂದ ತವರಿಗೆ ಹೋದವಳು ಬರಲೇ ಇಲ್ಲ. ಕೇಳಿದರೆ ‘ನನಗೆ ನೀನು ಇಷ್ಟ ಇಲ್ಲ . ಒತ್ತಾಯ ಮಾಡಿ ಕರೆದುಕೊಂಡು ಹೋದರೆ ಸಾಯುತ್ತೇನೆ’ ಅಂತ ಹೆದರಿಸುತ್ತಾಳೆ.

ಲವರ್‌ ಜತೆಗೆ ಇರುತ್ತೇನೆ, ಆದ್ರೆ ನಿನ್ನನ್ನು ಬಿಡುವುದಿಲ್ಲ. ಸಮಾಜದ ಕಣ್ಣಿಗೆ ಗಂಡ ಬೇಕು ಅಂತಿದ್ದಾಳೆ. ವಿಚ್ಛೇದನ ಕೊಡು ಅಂದರೆ ಒಪ್ಪುತ್ತಿಲ್ಲ. ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರುಕೊಟ್ಟರೆ ಅಲ್ಲಿಗೂ ಬರಲಿಲ್ಲ. ಈಗ ಸುಮ್ಮ ಸುಮ್ಮನೆ ವರದಕ್ಷಿಣೆ ಬೇಡಿಕೆ ಮಾಡಿದೆ ಎಂದು ಹೇಳಿ ಲಾಯರ್ ನೋಟಿಸ್ ಕೊಟ್ಟು ಧಮ್ಕಿ ಹಾಕಿದ್ದಾಳೆ. ನಾನು ಏನು ಮಾಡಬೇಕು ತಿಳಿಸಿ

ಉತ್ತರ: ನೀವು ಮೊದಲಿಗೆ ಲಾಯರ್ ನೋಟಿಸಿಗೆ ಸರಿಯಾದ ಪ್ರತ್ಯುತ್ತರ ಕಳಿಸಿ. ನಂತರ ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ, ನಿಮ್ಮ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು , ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ವ್ಯವಸ್ಥೆ ಮಾಡಲು ಕೇಳಿಕೊಳ್ಳಿ. ಕೇಂದ್ರದವರು ಇಬ್ಬರನ್ನೂ ಕರೆಯಿಸಿ , ಮಧ್ಯಸ್ಥಿಕೆಗಾರರ ಮೂಲಕ ಮಾತಾಡಲು ಅವಕಾಶ ಮಾಡಿಕೊಡುತ್ತಾರೆ. ಆಗ ರಾಜೀ ಸೂತ್ರಕ್ಕೆ ಬರಬಹುದು.

ಒಂದು ವೇಳೆ ನಿಮ್ಮ ಪತ್ನಿ ಯಾವುದಕ್ಕೂ ಒಪ್ಪದಿದ್ದರೆ, ನಿಮಗೆ ಹಂಡತಿ ಬೇಕು ಎನ್ನುವುದಾದರೆ ಆಗ ನೀವು ಅವಳ ವಿರುದ್ಧ “ ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ” ಪ್ರಕರಣ ದಾಖಲಿಸಿ. ಅಥವಾ, ನಿಮಗೆ ಆಕೆಯಿಂದ ವಿಚ್ಛೇದನ ಬೇಕಿದ್ದರೆ, ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ.