ಅಂಕಣ

ಅಣ್ಣ, ಅಕ್ಕ ಮೃತಪಟ್ಟರೆ ಅವರ ಮಕ್ಕಳಿಗೂ ಆಸ್ತಿಯಲ್ಲಿ ಪಾಲು ಕೊಡಬೇಕಾ? ಕಾನೂನು ಏನು ಹೇಳುತ್ತದೆ ನೋಡಿ..

ನಮ್ಮ ತಂದೆ ತೀರಿಹೋಗಿ ತುಂಬಾ ವರ್ಷಗಳಾಗಿವೆ. ನನ್ನ ಜತೆ ಹುಟ್ಟಿದವರು ಒಬ್ಬ ಅಣ್ಣ ಮತ್ತು ಇಬ್ಬರು ಅಕ್ಕಂದಿರು. ಈಗ ಅಣ್ಣ ಮತ್ತು ಒಬ್ಬ ಅಕ್ಕ ತೀರಿಹೋಗಿದ್ದಾರೆ. ತೀರಿ ಹೋಗಿರುವ ಅಕ್ಕನ ಮಕ್ಕಳು ನಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ. ಅವರಿಗೂ ಪಾಲು ಕೊಡಬೇಕಾಗುತ್ತದೆ ಇಲ್ಲವೋ ಎಂದು ತಿಳಿಸಿ.

ಉತ್ತರ: ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಅವರ ಎಲ್ಲ ಮಕ್ಕಳಿಗೂ ಸಮಪಾಲು ಇರುತ್ತದೆ. ಮಕ್ಕಳಲ್ಲಿ ಯಾರಾದರೂ ತೀರಿಹೋಗಿದ್ದರೆ, ಅಂತಹ ಮಕ್ಕಳ ಭಾಗ, ಆ ಮಕ್ಕಳ ವಾರಸುದಾರರಿಗೆ ಸಮವಾಗಿ ಸಲ್ಲುತ್ತದೆ. ಹೀಗಾಗಿ ನೀವು ನಿಮ್ಮ ಅಕ್ಕನ ಮಕ್ಕಳಿಗೆ ಭಾಗ ಕೊಡಬೇಕಾಗುತ್ತದೆ. ಅವರು ಒಪ್ಪಿದರೆ ರಾಜಿ ಮಾಡಿಕೊಂಡು ಹೆಚ್ಚೂ ಕಡಿಮೆ ತೆಗೆದುಕೊಳ್ಳುವುದು ಒಳ್ಳೆಯದು.