ಅವಳು ನಾನು ಕೋರ್ಟಿಗೆ ಬರುವುದೇ ಇಲ್ಲ ಎನ್ನುತ್ತಾಳೆ. ನನ್ನ ಗತಿ ಏನು? ನನಗೆ ಕಾನೂನಿನಲ್ಲಿ ದಾರಿಯೇ ಇಲ್ಲವೇ?
ಉತ್ತರ: ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕುವ ಸಮಯದಲ್ಲಿ /ಪ್ರಕರಣ ದಾಖಲಿಸುವ ಸಮಯದಲ್ಲಿ ಮಾತ್ರ ವಿಚ್ಛೇದನಕ್ಕೆ ಇಬ್ಬರ ಒಪ್ಪಿಗೆ ಇದ್ದರೆ ಸಾಲದು. ನ್ಯಾಯಾಲಯ ವಿಚ್ಛೇದನದ ಆದೇಶ ಮಾಡುವ ದಿನದವರೆಗೂ ಒಪ್ಪಿಗೆ ಮುಂದುವರೆದಿರಬೇಕು. ಸಾಮಾನ್ಯವಾಗಿ ವಿಚ್ಛೇದನಕ್ಕೆ ದಾಖಲೆ ಸಲ್ಲಿಸಿದಾಗಲಿನಿಂದ ಹದಿನೆಂಟು ತಿಂಗಳ ಒಳಗೆ ವಿಚ್ಛೇದನದ ಆದೇಶವನ್ನು ನ್ಯಾಯಾಲಯ ಮಾಡುತ್ತದೆ.
ಹಾಗೆ ಆದೇಶ ಮಾಡುವ ಮುಂಚೆ ದಂಪತಿಯಿಬ್ಬರಿಗೂ ವಿಚ್ಛೇದನ ಪಡೆಯುವ ಇಚ್ಚೆ ಇನ್ನೂ ಮುಂದುವರೆದಿದೆಯೇ ಎನ್ನುವುದನ್ನು ನ್ಯಾಯಾಲಯ ಖಚಿತ ಪಡಿಸಿಕೊಂಡೇ ಆದೇಶ ಮಾಡಬೇಕಾಗುತ್ತದೆ. ಆದರೆ ಪತಿ ಪತ್ನಿಯರಲ್ಲಿ ಒಬ್ಬರು ಪ್ರಕರಣ ದಾಖಲಿಸಿ ಆ ನಂತರ ನ್ಯಾಯಾಲಯಕ್ಕೆ ಬರದೇ ಹೋದರೆ ನ್ಯಾಯಾಲಯ ವಿಚ್ಛೇದನದ ಆದೇಶವನ್ನು ಮಾಡುವ ಹಾಗಿಲ್ಲ.
ಈ ಆದೇಶದ ಮೇಲೆ ಅಪೀಲು ಹಾಕಿದರೂ ನಿಮಗೆ ವಿಚ್ಛೇದನದ ಆದೇಶ ಸಿಗದೇ ಹೋಗಬಹುದು. ಆದರೆ ಆ ನಂತರ ನೀವು ಸುಪ್ರೀಂ ಕೋರ್ಟಿಗೆ ಹೋದಾಗ ಸಂವಿಧಾನದ 142 ಪರಿಚ್ಛೇದದ ಕೆಳಗೆ ತಮ್ಮ ವಿಶಿಷ್ಟ ಅಧಿಕಾರವನ್ನು ಉಪಯೋಗಿಸಿ ಸುಪ್ರೀಂಕೋರ್ಟ್ ಮಾತ್ರ ನಿಮಗೆ ವಿಚ್ಛೇದನದ ಆದೇಶವನ್ನು ಕೊಡಬಹುದು. ಈ ಬಗ್ಗೆ ಸುಪ್ರೀಂಕೋರ್ಟ್ನ ಎ.ವಿ.ಜಿ.ವಿ.ರಾಮು ವಿರುದ್ಧ ಎ.ಎಸ್.ಆರ್ .ಭಾರತಿ (ಎ.ಐ.ಆರ್ 2018 ಎಸ್.ಸಿ.ಸಿ. ಪುಟ ಸಂಖ್ಯೆ 202) ಪ್ರಕರಣದಲ್ಲಿಯ ತೀರ್ಪು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತದೆ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ vijayavani.net ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.