ಉತ್ತರ: ವಿಚ್ಛೇದಿತ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಶಕ್ತಿ ಇಲ್ಲದೇ ಹೋದರೆ, ಆಕೆ ಮರು ಮದುವೆ ಆಗಿರದೇ ಇದ್ದರೆ, ಆಕೆಯ ವಿಚ್ಛೇದಿತ ಪತಿ ಆಕೆಗೆ ಜೀವನಾಂಶ ಕೊಡಲೇಬೇಕಾಗುತ್ತದೆ. ವಿಚ್ಛೇದನ ಜೀವನಾಂಶದ ಹಕ್ಕನ್ನು ಕುಂಠಿತಗೊಳಿಸುವುದಿಲ್ಲ. ನಿಮ್ಮ ಪೂರ್ವ ಪತ್ನಿಗೆ ಕೆಲಸ ಸಿಗುವವರೆಗೆ ಅಥವಾ ಆಕೆ ಮರು ಮದುವೆ ಆಗುವವರೆಗೆ ನೀವು ಆಕೆಗೆ ಜೀವನಾಂಶ ಕೊಡಲೇ ಬೇಕಾಗುತ್ತದೆ.
ವಿಚ್ಛೇದನದ ಆದೇಶವನ್ನು ನಿಮ್ಮ ಪೂರ್ವ ಪತ್ನಿ ಚಾಲೆಂಜ್ ಮಾಡಿರದೇ ಹೋದರೂ ಆಕೆಗೆ ಜೀವನಾಂಶದ ಹಕ್ಕು ಇರುತ್ತದೆ.