ಅಂಕಣ

ಫ್ಯಾಮಿಲಿ ಕೋರ್ಟ್‌ ವಿಚ್ಛೇದನ ಆದೇಶ ಕೊಟ್ಟ ತಕ್ಷಣ ಮರುಮದುವೆ ಆಗಬಹುದಾ?

suchetana
ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಒಬ್ಬ ಹುಡುಗ ನನಗಾಗಿ ಕಾಯ್ತಾ ಇದ್ದಾನೆ. ಅವನ ಜೊತೆ ಮದುವೆ ಆಗ ಬೇಕಿದೆ. ನಾನು ಎಷ್ಟು ದಿನ ಕಾಯ ಬೇಕು?

ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ.

ಹಾಗೂ ಒಂದು ವೇಳೆ ನಿಮ್ಮ ಪೂರ್ವ ಪತಿ ಅಪೀಲು ದಾಖಲು ಮಾಡಿದರೆ, ಆ ಅಪೀಲು ವಜಾ ಆಗುವವರೆಗೆ ನೀವು ಮರುಮದುವೆ ಆಗುವಂತಿಲ್ಲ. ಒಂದುವೇಳೆ ನಿಮ್ಮ ಪತಿ ನಿಗದಿತ ಕಾಲಮಿತಿಯ ಒಳಗೆ ಅಪೀಲೇ ದಾಖಲು ಮಾಡದೇ ಇದ್ದರೆ, ಆಗ ನೀವು ಮರುಮದುವೆ ಆಗಬಹುದು.

ಯಾವುದಕ್ಕೂ ನೀವು ನಿಮ್ಮ ವಿಚ್ಛೇದನದ ಪ್ರಕರಣದ ಸಂಖ್ಯೆಯನ್ನು ಹಾಕಿ, ಆ ಪ್ರಕರಣದ ಆದೇಶದ ಮೇಲೆ ಅಪೀಲು ದಾಖಲಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಪ್ಯೂಟರಿನ ಸಹಾಯದಿಂದ ಪರೀಕ್ಷಿಸಿ , ಆ ನಂತರ ಮರುಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.