ಅಂಕಣ

ರಾಮರಾಜ್ಯ ಸಾಕಾರವಾಗಲಿ: ರಾಷ್ಟ್ರೀಯ ಅಸ್ಮಿತೆಯ ಮರುಸ್ಥಾಪನೆ

ಕೋಟಿ ಕೋಟಿ ಜನರ ಶತಮಾನಗಳ ಹೆಬ್ಬಯಕೆಯಾದ ರಾಮಮಂದಿರದ ಉದ್ಘಾಟನೆ ಇಂದು ನೆರವೇರುತ್ತಿದೆ. ಭಕ್ತಿ, ಸಮರ್ಪಣೆ, ರಾಷ್ಟ್ರಧರ್ಮದ ಮೌಲ್ಯಗಳು ರಾರಾಜಿಸುತ್ತಿರುವುದು ರಾಷ್ಟ್ರೆೊತ್ಥಾನದ ನಿಟ್ಟಿನಲ್ಲಿ ಮಹತ್ವದ ಸಂಗತಿ. ಶ್ರೀರಾಮ ಮಂದಿರ ನಿರ್ವಣದ ಮೂಲಕ ಭಾರತದ ಇತಿಹಾಸದಲ್ಲಿ ಮತ್ತೊಂದು ವಿಶಿಷ್ಟ ಅಧ್ಯಾಯ ಸೇರ್ಪಡೆಯಾದಂತಾಗಿದೆ.

ಸುದೀರ್ಘ ಹೋರಾಟಕ್ಕೆ ಸ್ವಾಭಿಮಾನದ ವಿಜಯ ಸಿಕ್ಕಿದೆ. ಶ್ರೀರಾಮ ಮಂದಿರವೆಂದರೆ ಅದು ರಾಷ್ಟ್ರಮಂದಿರವೇ. ಹೀಗಾಗಿ, ಈ ಸಂಭ್ರಮದಲ್ಲಿ ಇಡೀ ಭಾರತ ಏಕತೆಯ ಸೂತ್ರದಲ್ಲಿ ಒಂದಾಗುತ್ತಿದೆ. ರಾಷ್ಟ್ರೀಯ ಅಸ್ಮಿತೆಯು ಮಂದಿರ ನಿರ್ವಣದ ಮೂಲಕ ಮರುಸ್ಥಾಪನೆಯಾಗಿರುವುದು ಸಂತಸದ ಸಂಗತಿ. ರಾಮೋತ್ಸವದ ರಂಗು ದೇಶದೆಲ್ಲಡೆ ಸಂಭ್ರಮದ ಜತೆಗೆ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ, ಮಾನವೀಯತೆಯ ಮೌಲ್ಯಗಳನ್ನು ಸ್ಥಾಪಿಸುತ್ತಿದ್ದು, ಭಾರತದ ಆತ್ಮವಾಗಿರುವ ಅಧ್ಯಾತ್ಮ ಈ ಮೂಲಕ ಮರುಚೇತನ ಪಡೆಯುತ್ತಿದೆ. ಈ ನೆಲದ ಪರಂಪರೆ ಮೊದಲಿನ ವೈಭವಕ್ಕೆ ಮರಳುತ್ತಿದೆ.

ಮಂದಿರವು ಭವ್ಯವಾಗಿ ತಲೆಯೆತ್ತಿದ್ದು, ಅಯೋಧ್ಯೆಯು ಮುಂದಿನ ದಿನಗಳಲ್ಲಿ ಜಾಗತಿಕ ಧಾರ್ವಿುಕ, ಪ್ರವಾಸೋದ್ಯಮ ತಾಣವಾಗಿ ಕಂಗೊಳಿಸಲಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಈ ವಿಶಾಲ ದೇಶವನ್ನು ಏಕಸೂತ್ರದಲ್ಲಿ ಬೆಸೆಯುವ ಭಾವಸೇತುವಾಗಿದ್ದಾನೆ. ಈ ಭವ್ಯ ದೇಗುಲವು ಆಧುನಿಕ ಭಾರತದ ಸಾಂಸ್ಕೃತಿಕ ಹೆಗ್ಗುರುತಾಗಲಿದೆ, ಜನರ ಆಶೋತ್ತರಗಳನ್ನು ಬಿಂಬಿಸಲಿದೆ. ಏಕೆಂದರೆ, ಈ ದೇಗುಲ ನಿರ್ವಣದ ಕನಸು ನನಸಾಗುವುದರ ಹಿಂದೆ ದೀರ್ಘ ಪ್ರಯತ್ನವಿದೆ, ಸಾವಿರಾರು ಜನರ ಬಲಿದಾನವಿದೆ ಮತ್ತು ಲಕ್ಷಾಂತರ ಜನರ ಹೋರಾಟವಿದೆ. ಹೀಗಾಗಿ ರಾಮಮಂದಿರವು ಧಾರ್ವಿುಕ ಪ್ರಭಾವಳಿ ಜತೆಗೆ ಸಾಮಾಜಿಕ ಮತ್ತಿತರ ಅನೇಕ ಸಂಗತಿಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದೆ. ಆದ್ದರಿಂದ ರಾಮಮಂದಿರವನ್ನು ನಾವು ಆದರ್ಶದ ಪ್ರತಿರೂಪವಾಗಿಯೂ ಕಾಣಬೇಕಾಗುತ್ತದೆ. ಅಂದರೆ, ವರ್ತಮಾನ ಮತ್ತು ಭವಿಷ್ಯದಲ್ಲಿ ಭಾರತ, ಭಾರತವಾಸಿಗಳು ಹಾಗೂ ಆಡಳಿತಗಾರರು ಸಾಗಬೇಕಾದ ಹಾದಿಯ ಬಗ್ಗೆ ಇಲ್ಲಿ ಹೊಳಹುಗಳು ಸಿಗುತ್ತವೆ.

ರಾಮನ ಆದರ್ಶ ದೇಶಕ್ಕೆ ತೋರುಗಂಬವಾಗಬೇಕು. ರಾಮ ತನ್ನ ರಾಜ್ಯದ ಎಲ್ಲ ಪ್ರಜೆಗಳನ್ನೂ ಸರಿಸಮಾನವಾಗಿ ಪರಿಭಾವಿಸುತ್ತಿದ್ದ. ಬಡವರು, ದೀನರಿಗೆ ರಾಮನ ಆಡಳಿತದಲ್ಲಿ ಸಾಂತ್ವನ ಸಿಗುತ್ತಿತ್ತು. ರಾಮ ಧರ್ಮದ ಪ್ರತಿರೂಪ. ನಮ್ಮ ಆಡಳಿತಗಾರರು- ಉನ್ನತ ಹಂತದಿಂದ ಹಿಡಿದು ಪಂಚಾಯಿತಿ ಮಟ್ಟದವರೆಗೆ- ರಾಮನ ಜೀವನ ಮತ್ತು ತತ್ತ್ವವನ್ನು ಸರಿಯಾಗಿ ಅಭ್ಯಸಿಸಿ, ಅಲ್ಲಿನ ಉತ್ತಮಾಂಶಗಳನ್ನು ತಾವೂ ಅಳವಡಿಸಿಕೊಳ್ಳಲು ಯತ್ನಿಸಬೇಕು. ಜನರು ಕೂಡ ರಾಮರಾಜ್ಯದ ಆದರ್ಶದ ಸ್ಥಾಪನೆಯ ಹಾದಿಯಲ್ಲಿ ತಂತಮ್ಮ ಕೊಡುಗೆೆ ನೀಡಬೇಕು. ಅಂದಾಗ ಭಾರತ ಶಕ್ತಿ್ತಾಲಿ ಮಾತ್ರವಲ್ಲದೆ, ಜಾಗತಿಕವಾಗಿ ಮಾರ್ಗದರ್ಶಿ ಸ್ಥಾನದಲ್ಲಿಯೂ ಮೆರೆಯಬಹುದು.