ಅಂಕಣ

ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡ ಕರೊನಾ ರೋಗ ಅದೇ ಚೀನಾದ 839 ಕಿ.ಮೀ. ದೂರದ ಶಾಂಘೈ ನಗರಕ್ಕೆ ಹಬ್ಬಲಿಲ್ಲ! 15,000 ಕಿ.ಮೀ. ಅಂತರದಲ್ಲಿರುವ ಅಮೆರಿಕದ ನ್ಯೂಯಾರ್ಕ್​ಗೆ ಏಕೆ ಹಬ್ಬಿತು?

ಪಾಕ್​ನಲ್ಲಿ ಡೆಮಾಕ್ರಸಿ ಬರೀ ನಾಟಕ, ಡಂಭದ ಬಯಲಾಟ. ಒಬ್ಬ ನಾಯಕನನ್ನು ಹಿಡಿದರೆ ಆಯ್ತು, ರಾಷ್ಟ್ರವೇ ಮಣಿಯುತ್ತದೆ. ಅಂತಲೇ ಈವರೆಗೆ ಅಮೆರಿಕ, ಬ್ರಿಟನ್​ಗಳು ಅಲ್ಲಿ ಗೊಂಬೆ-ಪಪೆಟ್ ಆಡಳಿತಗಾರರನ್ನು ಕೂಡಿಸಿ, ಸೇನೆ ಬೆಳೆದು ಕೊಬ್ಬುವಂತೆ ಮಾಡಿದ್ದವು! ಈಗ ಅದನ್ನೇ ಚೀನಾ ಮಾಡುತ್ತಿದೆ!

ಜೋಯಿಸರಲ್ಲದೆಯೂ, ಒಬ್ಬರು ನಡೆಯುತ್ತಿರುವ ಸಂಗತಿಗಳ ಸಂದರ್ಭ, ದಿಕ್ಕು, ವೇಗಗಳನ್ನು ತ್ವರೆಯಾಗಿ ಗಮನಿಸಿದರೆ ತಿಳಿದುಬರುವ ಮುನ್ನಿನ ದೃಶ್ಯಗಳನ್ನು ಕುರಿತು ಬರೆಯುವುದು ಅಪರಾಧವಾಗಲಾರದು. ಫುಟ್​ಬಾಲ್ ಆಟದಲ್ಲಿ ಸಿಕ್ಕವರು ಸಿಕ್ಕಂತೆ, ಸಿಕ್ಕ ದಿಕ್ಕಿಗೆ ಚೆಂಡನ್ನು ಒದೆಯುತ್ತ ಬಂದರೂ, ತ್ವರಿತ ಗತಿಯಲ್ಲಿ ಲಾಭಕ್ಕೆ ಬಳಸುವ ಒಬ್ಬ ಚತುರನಿಗೆ ಅವ್ಯವಸ್ಥೆಯಲ್ಲೂ ಒಂದು ವ್ಯವಸ್ಥೆ ಕಾಣುವುದು ಸಾಧ್ಯ. ವೀಕ್ಷಕ ವಿವರಣಕಾರನ ಕಣ್ಣಿಗೆ ಅದು ಕಾಣುವಂತೆ ಇಲ್ಲೂ ಕಂಡರೆ ಆಶ್ಚರ್ಯವಿಲ್ಲ.

ನನ್ನ ಸ್ನೇಹಿತರೊಬ್ಬರು ಸಂಗತಿಗಳನ್ನು ಹೀಗೆ ಒಗ್ಗೂಡಿಸಿದರು. ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡ ಕರೊನಾ ರೋಗ ಅದೇ ಚೀನಾದ 839 ಕಿ.ಮೀ. ದೂರದ ಶಾಂಘೈ ನಗರಕ್ಕೆ ಹಬ್ಬಲಿಲ್ಲ! 1152 ಕಿ.ಮೀ. ದೂರದ ಅಲ್ಲಿನ ಬೀಜಿಂಗ್​ಗೆ ಹರಡಲಿಲ್ಲ. ದೂರದ 15,000 ಕಿ.ಮೀ. ಅಂತರದಲ್ಲಿರುವ ಅಮೆರಿಕದ ನ್ಯೂಯಾರ್ಕ್​ಗೆ ಏಕೆ ಹಬ್ಬಿತು? ಇಟಲಿಯ 8,695 ಕಿ.ಮೀ. ದೂರಕ್ಕೆ ಹರಡಿ ಸಾವಿರಾರು ಜನರನ್ನು ಏಕೆ ಕೊಂದಿತು? 3695 ಕಿ.ಮೀ. ದೂರದ ಭಾರತಕ್ಕೆ ಹೇಗೆ ಬಂತು? ಇರಾನೋ? ಚೀನಾದ ಉದ್ದಿಮೆ ನಗರಗಳು ಏಕೆ ಸುರಕ್ಷಿತ? ಇಲ್ಲಿ ಏನೋ ಕಿರಾತ ತಂತ್ರ ಇದೆಯಲ್ಲವೇ? ಚೀನಾ ಏನನ್ನು ಯಾರಿಂದ ಮುಚ್ಚಿಡುತ್ತಿದೆ? ‘ನಾನು ಅಪರಾಧಿಯಲ್ಲ’ ಎಂದೇಕೆ ಅರಚುತ್ತಿದೆ? ಕರೊನಾದ ಆರಂಭದ ಸ್ಯಾಂಪಲ್ ಅನ್ನು ಏಕೆ ನಾಶಪಡಿಸಲಾಯಿತು? ಕಂಡುಹಿಡಿದ ಡಾಕ್ಟರನ್ನು, ಪ್ರಕಟಿಸಿದ ಪತ್ರಿಕಾಕಾರರನ್ನು ಏಕೆ ಸಾಯಿಸಲಾಯಿತು? ಉಳಿದ ದೇಶಗಳು ‘ಏನಾಯಿತು’ ಎಂದು ಚೀನಾವನ್ನು ಕೇಳಿದಾಗ ಆ ಕಿರಾತ ರಾಷ್ಟ್ರ ಏಕೆ ನಿರಾಕರಿಸಿತು? ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಪಾಲು ಇದೆಯೇ? ‘ಅಂತಾರಾಷ್ಟ್ರೀಯ ವಿಮಾನ ಹಾರಾಟದ ಬಗ್ಗೆ ಏನೂ ಎಚ್ಚರಿಕೆಯ ಅವಶ್ಯವಿಲ್ಲ, ಏಕೆಂದರೆ ಈ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇಪದೆ ದಾರಿ ತಪ್ಪಿಸಿದ್ದೇಕೆ?

ವುಹಾನ್​ನಿಂದ 5 ಲಕ್ಷ ಜನರನ್ನು ಯಾವುದೇ ವೈದ್ಯಕೀಯ ಪರೀಕ್ಷೆಯು ಇಲ್ಲದೇ ಚೀನಾ ಹೊರಗೆ ಕಳುಹಿಸಿದ್ದು ಏಕೆ? ಏನನ್ನು ಹರಡಲು? ಇಟಲಿಯಲ್ಲಿ ಫೆಬ್ರವರಿ 6 ರ ತನಕ ಒಂದೇ ಸಣ್ಣ ಕೇಸು ಇದ್ದು, ಚೀನಾವು ‘ನಾವು ಚೀನೀಯರು, ವೈರಾಣುಗಳಲ್ಲ, ಅಪ್ಪಿಕೊಳ್ಳಿ’ ಎಂದು ಘೋಷಿಸಿದ್ದು ಏಕೆ? ಇದು ಸುಳ್ಳೇ? ಟೂರಿಸ್ಟರಿಗೆ ಮೋಸದ ಪ್ರದರ್ಶನ ಫಲಕಗಳಲ್ಲಿ City Of Love, Come, Embrace' ಎಂದು ಬರೆಸಿದ್ದು, ಕುರುಕ್ಷೇತ್ರ ಯುದ್ಧಾನಂತರದ ಧೃತರಾಷ್ಟ್ರನ ಭೀಮಾಲಿಂಗನವನ್ನು ನೆನಪಿಸುವುದಿಲ್ಲವೇ?

ಇನ್ನೊಂದತ್ತ ನೋಡಿ. ಮಾರ್ಚ್ 27 (ಗುರುವಾರ)ರಂದು ಗೋಕಾಕಿನಲ್ಲಿ ಪೊಲೀಸರು ಒಂದು ಮಸೀದಿಯಲ್ಲಿ ಒಗ್ಗೂಡಿದ್ದ ಮುಸ್ಲಿಂರನ್ನು ಬೆತ್ತ ಹಿಡಿದು ಬಡಿದು ಚದುರಿಸಿದ ದೃಶ್ಯವನ್ನು ನಾವು ಟಿವಿಗಳಲ್ಲಿ ನೋಡಿದೆವು! ನೋಡಿದೆವಲ್ಲಾ? ಹೇಳಿ-ಮುಸ್ಲಿಮರಿಗೆ ಶುಕ್ರವಾರದ ನಮಾಜು ಕಡ್ಡಾಯ ಹೊರತು, ಅಲ್ಲಿ ಗುರುವಾರ ಏನು ಮಾಡುತ್ತಿದ್ದರು? ಪೊಲೀಸರು ಪತ್ತೆ ಹಚ್ಚಿದ ಇಂಥ ಅಕಾಲಿಕ ಪ್ರಾರ್ಥನಾ ಸಂಘಟನೆಗಳು ಬೇರೆ ಎಲ್ಲೆಲ್ಲಿ ನಡೆದವು? ವಿದೇಶೀ ಮೌಲ್ವಿಗಳನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು ಆಕಸ್ಮಿಕವೇ? ಅವರಿಗೆ ರೋಗ ಅಂಟಿತ್ತೇ? ಯಾವ ರೋಗ? ಕಮ್ಯುನಲ್ ವೈರಸ್ ಇರಬಹುದೇನಿರಯ್ಯಾ? ಇತ್ತ ಭಾರತದ ಸ್ನೇಹಿ ರಾಷ್ಟ್ರಗಳು ಅಮೆರಿಕ, ಇರಾನ್, ಐರೋಪ್ಯ ರಾಷ್ಟ್ರಗಳು ತಂತಮ್ಮ ಸಮಸ್ಯೆಗಳಲ್ಲೇ ಇದ್ದು ನಮ್ಮ ಸಂಭವನೀಯ ಸಹಾಯಕ್ಕೆ ಸಕಾಲಕ್ಕೆ ಬಾರದಂತೆ ತಡೆದುದು ಆಕಸ್ಮಿಕವೇ? ಇರಾನ್ ನಮ್ಮ ತೈಲ ಆಮದಿನ ಮುಖ್ಯ ದೇಶ. ಈಚೆಗೆ ಪಾಕಿಸ್ತಾನವನ್ನು ಕೈ ಬಿಟ್ಟ ಅಮೆರಿಕ ಭಾರತದ ಕೈ ಹಿಡಿದು, ಚೀನಾ ವಿರುದ್ಧ ಜಂಟಿ ಸಮರಾಭ್ಯಾಸ ಮಾಡುತ್ತಿದ್ದುದು ಸೌತ್ ಚೀನಾ ಸಮುದ್ರದಲ್ಲಿ, ಅದು ಚೀನಾಕ್ಕೆ ಆತಂಕವಾಗಿತ್ತಲ್ಲ. ಮರೆತಿರಾ?

ಚೀನಾಕ್ಕೆ ಗೊತ್ತು ಸಮೀಪದ ಸ್ಪರ್ಧಿ, ಶತ್ರು, ಆಪತ್ತಿನ ನೆಲೆ ಭಾರತ ಅಂತ! ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಯುದ್ಧ ವಿಜ್ಞಾನಾದಿಗಳಲ್ಲಿ, ಮೋದಿ ಯುಗದಲ್ಲಿ ಭಾರತವು ದಾಪುಗಾಲಿಡುತ್ತ, ಅನೇಕ ಕಡೆ ತನಗಿಂತ ಹೆಚ್ಚು ಪ್ರಗತಿ ಸಾಧಿಸಿ ವಿಶ್ವದ ರಾಷ್ಟ್ರಗಳಿಗೆ ಬೆರಗು ಮೂಡಿಸಿದೆ ಎಂದು ಚೀನಾಕ್ಕೆ ಆತಂಕ, ಭಯ, ತಲ್ಲಣ! ಈಗಿನ ಜಾಗತಿಕ ಸನ್ನಿವೇಶದಲ್ಲಿ ಪ್ರಾಬಲ್ಯ ಸಾಧಿಸಲು ದೇಶಗಳಿಗೆ ವಾಣಿಜ್ಯ ಕ್ಷೇತ್ರವೇ ಯುದ್ಧಕಣ! ಭಾರತ ಈ ದಿಸೆಯಲ್ಲಿ ಮೋದಿ ನೇತೃತ್ವದಲ್ಲಿ, ಅವರ ವಿದೇಶಿ ಪ್ರವಾಸಗಳಲ್ಲಿ ಮಿತ್ರರನ್ನೂ ಸಂಪಾದಿಸಿ, ಬಲವನ್ನೂ ವೃದ್ಧಿಪಡಿಸಿಕೊಂಡು, ಸೇನಾ ಬಲದಲ್ಲೂ ಮುನ್ನಡೆ ಸಾಧಿಸಿ, ತನಗೆ ಸವಾಲಾಗಿರುವುದನ್ನು ಚೀನಾ ಸಹಿಸುತ್ತಿಲ್ಲ! ಅತಿ ದೊಡ್ಡ ಪ್ರಜಾಬಾಹುಳ್ಯದ ದೈತ್ಯ ರಾಷ್ಟ್ರ, ಈವರೆಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಭಾರತದಲ್ಲಿ ನಿರಾತಂಕವಾಗಿತ್ತು! ಸೋನಿಯಾ, ಮನಮೋಹನ ಸಿಂಗ್, ರಾಹುಲ್, ಇನ್ನಿತರ ಚೇಲಾಗಳ ಗುಲಾಮಿ ಬುದ್ಧಿ, ನಡತೆ ಚೀನಾಗೆ ಅನಕೂಲವಾಗಿತ್ತು! ಈಗ ಕಾಲ ಬದಲಾಗಿದೆ. ಅದು ಭಯ!

ಚೀನಾ ಅಮೆರಿಕದ ಡಾಲರುಗಳನ್ನು ವಾಣಿಜ್ಯ ವಿನಿಮಯದಲ್ಲಿ ಬಾಚಿ, ರಾಶಿ ಹಾಕಿ, ಗುಡಿಸಿ, ಶೇಖರಿಸಿಕೊಂಡಿದೆ! ಭಾರತದೊಡನೆ ಕೂಡ ಸಮತೋಲನವಿಲ್ಲದ ವಿನಿಮಯ. ಚೀನಾ ಎಲ್ಲ ರಫ್ತು ಮಾಡುತ್ತದೆ, ಆಮದು ಕಡಿಮೆಯ ಸ್ವಾರ್ಥಿ! ಈಚೆಗೆ ಅಮೆರಿಕ ಚೀನಾದ ಆಮದು ವಸ್ತುಗಳ ಮೇಲೆ ಸುಂಕವನ್ನು ದ್ವಿಗುಣಗೊಳಿಸಿದೆ. ಭಾರತವು ಸಹ! ಚೀನಾದ ಆರ್ಥಿಕ ಸ್ಥಿತಿ ಇಳಿಯುತ್ತ, ಆಳುಗರಿಗೆ ಒಳಗಿಂದಲೇ ಆಪತ್ತು! ಜಿನ್​ಪಿಂಗ್​ರಿಗೆ ಅಧಿಕಾರಚ್ಯುತಿಯ ಭಯ! ಅದು ಕಮ್ಯುನಿಸ್ಟ್ ಸರ್ವಾಧಿಕಾರಿ ರಾಷ್ಟ್ರವಾಗಿದ್ದು, ಆಪತ್ತಿನಿಂದ ಪಾರಾಗಲು ನಾನಾ ಯೋಜನೆಗಳನ್ನು ಹೂಡಿತ್ತು. ಅದರಲ್ಲೊಂದು ‘ಒನ್ ರೋಡ್ ಒನ್ ಬೆಲ್ಟ್’-ಒರ್​ಒಒಬಿ-ಎಂಬುದನ್ನು ನಂಬಿ ಪಾಕ್, ಶ್ರೀಲಂಕಾ, ನೇಪಾಳ, ಇನ್ನಿತರ ದೇಶಗಳು ಅಪಾರ ಸಾಲಕ್ಕೆ ಒಳಗಾಗಿ ಕುಸಿದವು! ಅಡ್ಡಲಾದುದು ಮೋದಿ ಮತ್ತು ಭಾರತ. ಎಚ್ಚರವಾಗುವಷ್ಟರಲ್ಲಿ, ಚೀನೀ ಸೇನೆ, ಕೂಲಿಕಾರರ ವೇಷದಲ್ಲಿ ಪಾಕಿಸ್ತಾನ, ಲಂಕಾದಿಗಳನ್ನು ಹಿಡಿದಾಗಿತ್ತು. ಕರಾಚಿಯ ಗ್ವಾದರ್ ಬಂದರನ್ನು ಚೀನಾ ಹಿಡಿದಾಗಿತ್ತು. ಇರಾನಿನ ಅಂಥದೊಂದನ್ನು ಭಾರತ ಹಿಡಿದುದು ಚೀನಾಕ್ಕೆ ಭಯವೂ ಆಗಿ, ತನ್ನ ಯತ್ನ ಬಯಲೂ, ವಿಫಲವೂ ಆದುದಕ್ಕೆ ಕೋಪ! ಚೀನಾದ ಮಾರುಕಟ್ಟೆಗೆ ಆಫ್ರಿಕಾದ ದೇಶಗಳೂ ಬಲಿ! ಭಾರತೀಯ ದಡ್ಡ ವರ್ತಕರು, ಸುಲಭ ಬೆಲೆಯ ಮೋಸಕ್ಕೆ ಬಲಿಯಾಗಿ ಟಾರ್ಚು, ಬಲ್ಬು, ಕೊನೆಗೆ ಪಟಾಕಿ ಇನ್ನಿತರ ಉಪಕರಣ, ಮೋಜುಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಇನ್ನು ಕಣ್ಣೆದುರೇ ಇದೆಯಲ್ಲಾ? ಚೀನಾವನ್ನು ಮಟ್ಟಹಾಕಲು ವಾಣಿಜ್ಯ ನಾಶವೊಂದೇ ದಾರಿ ಎಂದು ಮೋದಿ ತಿಳಿದಿದ್ದಾರೆ! ಗುಟ್ಟು ಬಯಲು! ಅಮೆರಿಕದ ಸೇನಾಬಲದೆದುರು ಚೀನಾ ನಿಲ್ಲಲಾಗದು. ಅದಕ್ಕೆ ಗೊತ್ತು. ತನಗೆ ಭಾರತ ಎದುರಾದರೆ, ಅದಕ್ಕೆ ಭುಜಬಲ ಸಿಗುವುದು ಅಮೆರಿಕದಿಂದ. ಅದರ ಬಲ ಮುರಿಯಲು ಈಗ ಕರೊನಾ ಪ್ರಯೋಗ ಯಶಸ್ವಿ! ಇರಾನಿನ ತೈಲ ಭಾರತಕ್ಕೆ ಸಿಗಲಾರದಂತೆ, ಅದರ ಬೆನ್ನನ್ನೂ ಮುರಿದುದು ಇದಕ್ಕಾಗಿಯೇ! ಮತ್ತೊಂದೆಡೆ ಪಾಕಿಸ್ತಾನದ ನೆಲ, ಅದರ ಕಮ್ಯುನಲ್ ಸೇನೆ, ಅದರ ಮೂಲಭೂತವಾದಿಗಳ, ಜಿಹಾದಿಗಳ ಬೆಂಬಲ ಚೀನಾಕ್ಕೆ ಅತ್ಯಗತ್ಯ. ಇದರಲ್ಲಿ ಎರಡು ಲಾಭ. ಕುಸಿಯುತ್ತಿರುವ ಪಾಕ್ ವಿಶ್ವಾಸ ಕುದುರಿಸುವುದು, ಭಾರತ ಶತ್ರುವಿನ ಬಲವರ್ಧನೆ. ಅದಕ್ಕಾಗಿ ಕರೊನಾ ಕಾಟ ಅಲ್ಲಿ ಅಷ್ಟಿಲ್ಲ. ಇದ್ದವರನ್ನೂ ಪಾಕ್ ಈಗ ಆಕ್ರಮಿತ ಕಾಶ್ಮೀರಕ್ಕೆ ರವಾನಿಸಿ, ಕಂಸನ ಪೂತನಾ ಸೇನೆಯಂತೆ ಛೂ ಬಿಡುತ್ತಿದೆ. ಇನ್ನಾರು? ಭಾರತದ ಒಳಶತ್ರುಗಳು- ಇಸ್ಲಾಮಿಯ ಜಿಹಾದಿಗಳು. ಅವರನ್ನು ಸದಾ ಸಜ್ಜಾಗಿ ಇರಿಸಲು ಬೋಧೆ! ಎಲ್ಲ ಚಿತ್ರ ಒಗ್ಗೂಡಿತೆ? ಸರಿಯಾಗಿ ನೋಡಿಕೊಳ್ಳಿ. ಈ ಮುನ್ನ ಸಿಎಎ, ಎನ್​ಆರ್​ಸಿಗಳ ಪ್ರತಿಭಟನೆಯ ನೆಪದಲ್ಲಿ ಶಾಹೀನಬಾಗ್​ನಲ್ಲಿ, ಮಾವೋ, ನಕ್ಸಲ್, ಕಾಂಗ್ರೆಸ್, ಕಾಮ್ರೇಡರ ಕುಮಕ್ಕಿನಲ್ಲಿ ಸೇರಿದ ದೊಂಬಿ ನಾಶವಾಯಿತು.

ತನ್ನದೇ ದೇಶದ ಮುಸ್ಲಿಮರನ್ನು ನಿರ್ದಯವಾಗಿ ಸಾಯಿಸುತ್ತಿರುವ ಚೀನಾಕ್ಕೆ ಪಾಕ್ ಮೇಲೆ ಇಷ್ಟು ಪ್ರೀತಿ ಏಕೆ? ಕಂಸನಿಗೆ ಪೂತನಿಯ ಮೇಲೆ ಪ್ರೀತಿ ಇತ್ತೇ? ದುರ್ಯೋಧನನು ಕರ್ಣ, ದೊ್ರೕಣ, ಭೀಷ್ಮಾದಿಗಳನ್ನು ಹರಿತ ಮಾಡಿಟ್ಟ ಆಯುಧಗಳಂತೆ ಉಪಯೋಗಿಸಿದ್ದಲ್ಲದೆ, ಅಲ್ಲಿ ಪ್ರೀತಿ ಇತ್ತೆ? ಕೆಲವರಿಗೆ ಯಾರನ್ನೂ ಪ್ರೀತಿಸುವ ಸ್ವಭಾವ, ಆತ್ಮಗುಣ, ಆತ್ಮಬಲ ಇರುವುದಿಲ್ಲ. ದೇಶಗಳಿಗೂ ಅಷ್ಟೇ. ಅಲ್ಲೆ ಬಿರುದು, ಬಾವುಟ. ‘ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ’ ಎಂಬ ಈ ರಾಜಕಾರಣದಲ್ಲಿ ನೀವು ಕಾಣುವುದು ಸ್ವಾರ್ಥ, ಸಮಯಸಾಧಕತೆ, ಕ್ರೌರ್ಯ, ಅಮಾನವೀಯತೆ- ಎಲ್ಲವನ್ನೂ ಚೀನಾ ನಡೆಯಲ್ಲಿ ಈಗ ಕಾಣುತ್ತಿದ್ದೀರಲ್ಲಾ?

ಮುಸ್ಲಿಂ ಸಮಾಜದ ಶೋಚನೀಯ ಸ್ಥಿತಿ ಕಾಣಿರಿ. ಪ್ರಾರ್ಥನೆ ನೆಪದಲ್ಲಿ ಕೂಡಿಸಿ, ‘ಹೇಳಿದಷ್ಟು ಮಾಡು, ಸ್ವತಂತ್ರ ಚಿಂತನೆ ಬೇಡ’ ಎಂಬ ರೀತಿಯಲ್ಲಿ ಹೆಣೆದ ಸಮಾಜ ಅದು. ಇಂದು ನೆನ್ನೆಯದಲ್ಲ! ‘ಸ್ವತಂತ್ರ ಚಿಂತನೆಯೇ ಅಪರಾಧ’ ಎಂಬುದು ‘ಆದಂ ಈವ್’ರ ಎಛ್ಞಿಛಿಠಜಿಟ ಎಂಬ ಬೈಬಲ್ ಕಥೆಯ ಸೇಬಿನ Forbidden fruitನ ಸಂಕೇತ! ಅದು ಸೆಮಿಟಿಕ್ ಬುಡಕಟ್ಟಿನ ಯಹೂದಿ, ಇಸಾಯಿ, ಇಸ್ಲಾಮಿ ತ್ರಿವಳಿ ವಿಭಾಗಗಳಿಗೂ ಅಂಟಿದ ಜಾಯಮಾನ. ಭಾರತಕ್ಕೆ ಬೇಕು ಸ್ವತಂತ್ರ ಚಿಂತನೆ. ಅದು ಹಿಂದೂ ದಾರಿ! ಅಡ್ಡಲಾಗಿರುವುದು ದೊಂಬಿಯ ಮುಖಂಡರ ಆದೇಶದ ಮೋಟು ಬ್ಯಾಂಕು!

ಪಾಕ್​ನಲ್ಲಿ ಡೆಮಾಕ್ರಸಿ ಬರೀ ನಾಟಕ, ಡಂಭದ ಬಯಲಾಟ. ಒಬ್ಬ ನಾಯಕನನ್ನು ಹಿಡಿದರೆ ಆಯ್ತು, ರಾಷ್ಟ್ರವೇ ಮಣಿಯುತ್ತದೆ. ಅಂತಲೇ ಈವರೆಗೆ ಅಮೆರಿಕ, ಬ್ರಿಟನ್​ಗಳು ಅಲ್ಲಿ ಗೊಂಬೆ-ಪಪೆಟ್ ಆಡಳಿತಗಾರರನ್ನು ಕೂಡಿಸಿ, ಸೇನೆ ಬೆಳೆದು ಕೊಬ್ಬುವಂತೆ ಮಾಡಿದ್ದವು! ಈಗ ಅದನ್ನೇ ಚೀನಾ ಮಾಡುತ್ತಿದೆ! ಇಷ್ಟೆ. ಪರಿಹಾರವೇನು? ಅರ್ಥಶಾಸ್ತ್ರ ಬಲ್ಲ ನನ್ನ ಸ್ನೇಹಿತರೊಬ್ಬರು ಹೇಳಿದರು, ‘ಅಮೆರಿಕದ ಹಣವೆಲ್ಲ ಈ ತಲೆಕೆಳಗು ವಾಣಿಜ್ಯ ವಿನಿಮಯದಲ್ಲಿ ಚೀನಾದಲ್ಲಿದ್ದು ಕೊಬ್ಬಿದೆಯಲ್ಲ? ಆ ಹಣ ಈಗ ಬಾಂಡ್​ಗಳ ರೂಪದಲ್ಲಿದೆ. ಅಮೆರಿಕ ಈಗ ಬಾಂಡುಗಳಿಗೆ ಹಣ ಕೊಡುವುದಿಲ್ಲ ಅಂತ ಪ್ರಕಟಿಸಿದರೆ ಚೀನಾದ ಬಲ ಕುಗ್ಗುತ್ತದೆ. ಯುರೋಪಿಯನ್ ಯೂನಿಯನ್ (ಇಯು) ರಾಷ್ಟ್ರಗಳು ಹಾಗೇ ಮಾಡಿದರೆ ಚೀನಾ ಹಲ್ಲುಕಿತ್ತ ಹಾವಿನಂತೆ ಆಗುತ್ತದೆ. ಆದರೆ ಪರಸ್ಪರ ಸಂಬಂಧಗಳಲ್ಲಿ ನಾನಾ ರೀತಿಯ ತೊಡಕುಗಳು ಏರ್ಪಡಬಹುದು. ಎದುರಿಸಬೇಕು. ಇದು ಮೊದಲ ಹೆಜ್ಜೆ. ಎರಡನೆಯದು ವಿಶ್ವಸಂಸ್ಥೆಯಲ್ಲಿ ಶಾಶ್ವತ ಪ್ರತಿನಿಧಿ ಭಾಗವಾಹಿತ್ವವನ್ನು ಚೀನಾದಿಂದ ಕಸಿಯಬೇಕು. ಈಗ ಜಗತ್ತು ಚೀನಾ ವಿರುದ್ಧ ಒಗ್ಗೂಡುವ ಕಾಲ. ಹಿಂದೆ ಅದೇ ಪರಿಸ್ಥಿತಿ ಇದ್ದಾಗ ನೆಹರೂ ಒತ್ತಾಯದಿಂದ ಬಂದ ಆಪತ್ತು ಇದು, ಕಾಂಗ್ರೆಸ್​ನ ಕೊಡುಗೆ. ಮೂರನೆಯದಾಗಿ ಜಗತ್ತಿನ ಇತರ ರಾಷ್ಟ್ರಗಳು ನಿರ್ಬಂಧ ಹೇರಬೇಕು. ಅಂದರೆ ಚೀನಾವನ್ನು ಅಸ್ಪೃ್ಯ ರಾಷ್ಟ್ರವನ್ನಾಗಿ, ಐಸೋಲೇಶನ್ ಮಾಡಬೇಕು. ನಾಲ್ಕನೆಯದೂ ಒಂದು ಇದೆ. ಟಿಬೆಟ್ ಅನ್ನು ‘ಸ್ವತಂತ್ರ ರಾಷ್ಟ್ರ’ ಎಂದು ವಿಶ್ವಸಂಸ್ಥೆ ಘೋಷಿಸಿ, ದಲೈಲಾಮಾರನ್ನು ಅಧಿಕೃತ ಆಡಳಿತಗಾರರನ್ನಾಗಿ ಗುರುತಿಸಬೇಕು. ಆಗ ಚೀನಾಕ್ಕೆ ಯುದ್ಧಬಲ ಇರುವುದಿಲ್ಲ. ರಷ್ಯಾ ಅದರ ಸಹಾಯಕ್ಕೆ ಬಾರದಂತೆ ನಿಗಾವಹಿಸಬೇಕು.

ಭಾರತ ರಕ್ಷೆಗೆ ಜಪಾನ್, ಇಸ್ರೇಲ್ ಸಿದ್ಧ ಇವೆ. ಅಡಚಣೆ ಇರುವುದು ದೇಶೀಯ ಮೊಂಡರಿಂದ. ಜಿಹಾದಿಗಳು, ರಾಷ್ಟ್ರೀಯತೆಯನ್ನು ಒಪ್ಪದ ಕಾಮೆ್ರೕಡರು,

ಕಾಂಗ್ರೆಸ್​ನ ಕುಮ್ಮಕ್ಕುದಾರರು, ಅದರ ವಿದೇಶಿ ನಾಯಕರು, ಇಂಥವರನ್ನು ಕೆಲಕಾಲ ಅಬ್ದುಲ್ಲಾ, ಮುಫ್ತಿ ಕುಟುಂಬಕ್ಕೆ ಮಾಡಿದಂತೆ ಗೃಹಬಂಧನದಲ್ಲಿ ಅಥವಾ ನಾನಾ ಸಿನಿಮೀಯ ರೀತಿಯ ದಾರಿಗಳಲ್ಲಿ ಹದ್ದುಬಸ್ತಿನಲ್ಲಿಡದ ಹೊರತು ಚೀನಾ ಕಾಟ ತಪ್ಪದು, ಎಚ್ಚರಿಕೆ!