ಬೆಂಗಳೂರು: ಜೆಡಿಎಸ್ ಪಾಳಯದಲ್ಲಿ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಾಸನ ಟಿಕೆಟ್ ದಂಗಲ್ಗೆ ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು ಪ್ರಸಾದ್ ಗೌಡ ಎಂಬುವವರು ತಮ್ಮಗೂ ಒಂದು ಅವಕಾಶ ಕೊಡಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಜೆಪಿ ಭವನದಲ್ಲಿ ಈ ಕುರಿತು ಮಾತನಾಡಿರುವ ಪ್ರಸಾದ್ ಗೌಡ ನಾನು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜನತೆಯ ಜೊತೆ ಇದ್ದೇನೆ ನಾನು ಕೂಡ ಹಾಸನ ವಿಧಾನಸಭಾ ಕ್ಷೇಥ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ.
ಭವಾನಿ ರೇವಣ್ಣ ಹಾಗೂ ಸ್ವರೂಪ್ ಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮೂಲತಃ ನಾನು ಮುಳ್ಳು ಒಕ್ಕಲಿಗ ನನ್ನ ಪತ್ನಿ ದಾಸ ಒಕ್ಕಲಿಗ ನಮ್ಮ ಕುಟುಂಬದಲ್ಲಿ ಎರಡು ಪಂಗಡಗಳಿವೆ ಸಮುದಾಯದ ಬೆಂಬಲ ನನಗಿದೆ ಎಂದು ತಿಳಿಸಿದ್ದಾರೆ
ಸ್ವರೂಪ್ ವಿರುದ್ದ ಹಾಸನದಲ್ಲಿ ಮೊದಲು ಧ್ವನಿ ಎತ್ತಿದವನು ನಾನು. ಟಿಕೆಟ್ ವಿಚಾರವಾಗಿ ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರೇವಣ್ಣ ಅವರ ಜೊತೆಗೆ ಚರ್ಚಿಸಿದ್ದೇನೆ ವರಿಷ್ಠರು ಭರವಸೆ ನೀಡಿದ್ದಾರೆ ಪಕ್ಷ ಅವಕಾಶ ಕೊಟ್ಟರೆ ಪ್ರೀತಂ ಗೌಡರನ್ನ ಮಣಿಸೋದು ಶತಃಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.