ಕರ್ನಾಟಕದಲ್ಲಿ ಅಧಿಕಾರಿಗಳ-ರವಿ, ಗಣಪತಿ, ಇತ್ಯಾದಿಗಳ ಸಾಲಿನಲ್ಲಿ, ಕೊಲೆಯಲ್ಲಿ ಸ್ಥಳೀಯ, ವಿದೇಶಿಗಳ ಕೈವಾಡ ಯಾರು, ಯಾರದು? ಇಂಥ ಇನ್ನೂ ಹಿಂದಿನ ಸರ್ಕಾರದ ಹಲವನ್ನು ಒಗ್ಗೂಡಿಸಿ, ಚುಕ್ಕೆಯಾಟದಲ್ಲಿ ಸೇರಿಸಿ, ಗೆರೆ ಎಳೆದು, ಚಿತ್ರ ಮಾಡಿಕೊಳ್ಳಿ. ಮಾಡುತ್ತೀರಾ? ಬಿಡಿ. ನೀವು ಮಾಡುವುದಿಲ್ಲ! ಏಕೆಂದರೆ, ನೀವು ‘ಹಿಂದೂ’ಗಳು, ಅಲ್ಲವೇ?
ಮಹೇಶ್ ಭಟ್ ಯಾರು? ತೀರಿಕೊಂಡ ಅಮರ್ ಸಿಂಗ್ ಯಾರು? ಶ್ರೀದೇವಿ ಏಕೆ ದುಬೈಯಲ್ಲೇ ಸಾಯಬೇಕು? ಈ ಸುಶಾಂತ್ ಯಾರು? ರ್ಹಿಯಾ, ದಿಶಾ ಯಾರು? ಹಿಂದಿನ ಇಂದ್ರಾಣಿ, ಪೀಟರ್ ಮುಖರ್ಜಿ ಯಾರು? ಓಡಿ ಹೋದ ನೀರವ್ ಮೋದಿ, ಲಲಿತ್ ಮೋದಿ ಯಾರು? ಸಿನಿಮಾ ಖಾನರು ಯಾರು? ಪವಾರ್, ಠಾಕ್ರೆ ಸಂಬಂಧ ಹೇಗೆ? ಇಲ್ಲೆಲ್ಲ ದಾವೂದ್ ಇಬ್ರಾಹಿಂನ ಜಾಲದಲ್ಲಿ ಭಾರತೀಯ ಸಂಜಾತ ‘ಸುಪುತ್ರರು’ ಯಾರು? ಯಾರು? ಕರ್ನಾಟಕದಲ್ಲಿ ಅಧಿಕಾರಿಗಳ-ರವಿ, ಗಣಪತಿ, ಇತ್ಯಾದಿಗಳ ಸಾವಿನಲ್ಲಿ, ಕೊಲೆಯಲ್ಲಿ ಸ್ಥಳೀಯ, ವಿದೇಶಿಗಳ ಕೈವಾಡ ಯಾರು, ಯಾರದು? ಇಂಥ ಇನ್ನೂ ಹಿಂದಿನ ಸರ್ಕಾರದ ಹಲವನ್ನು ಒಗ್ಗೂಡಿಸಿ, ಚುಕ್ಕೆಯಾಟದಲ್ಲಿ ಸೇರಿಸಿ, ಗೆರೆ ಎಳೆದು, ಚಿತ್ರ ಮಾಡಿಕೊಳ್ಳಿ. ಮಾಡುತ್ತೀರಾ? ಬಿಡಿ. ನೀವು ಮಾಡುವುದಿಲ್ಲ! ಏಕೆಂದರೆ, ನೀವು ‘ಹಿಂದೂ’ಗಳು, ಅಲ್ಲವೇ? ‘ನಮ್ಮ ಕರ್ಮ’ ಎನ್ನುತ್ತ ಸ್ಮಶಾನದತ್ತ ನಡೆಯುವವರಿಗೆ ನನ್ನ ಲೇಖನ ರುಚಿ ಬಾರದು. ಜೀವನವನ್ನು ಮುನ್ನಡೆಸುವುದು ವರ್ತಮಾನದ ಯತ್ನ, ಭೂತಕಾಲದ ಕರ್ಮವಲ್ಲ! ಉದಿಸದ ಭವಿಷ್ಯವೂ ಅಲ್ಲ. ಶ್ರೀಕೃಷ್ಣ ಬೋಧೆಯು ಟಿ.ಎಸ್.ಎಲಿಯೆಟ್ ಕವಿಗೆ ಅರ್ಥವಾಗಿದ್ದು ಹೀಗೆ-
The Future is faded Song, for those who are not here to yet regret. Yoyager ! Not farewell, but fare forward - ‘ವರ್ತಮಾನದಲ್ಲಿ ತಿದ್ದಿಕೊಳ್ಳದವರಿಗೆ, ಎಚ್ಚರಗೊಳ್ಳದವರಿಗೆ, ಭವಿಷ್ಯ ಎಂಬುದು ಮುಗಿದು, ಗಾಳಿಯಲ್ಲಿ ತೇಲಿಹೋದ ಹಾಡಿನಂತೆ ಆಗುತ್ತದೆ. ಪ್ರಯಾಣಿಕರೇ! ಒಬ್ಬೊಬ್ಬರಿಗೆ ಗುಡ್ಬೈ ಹೇಳುವುದಿಲ್ಲ. ನುಗ್ಗಿ ಮುನ್ನಡೆಯುವುದು, ಅದು ಬದುಕು, ಬಾಳು’. ಹಿಂದೆ ಗುಲ್ಷನ್ ಕುಮಾರ್ ಅಂತ ಸಂಗೀತ ನಿರ್ವಪಕ ಇದ್ದರಲ್ಲ, ಪಾಕಿಗಳು ಏಕೆ, ಹೇಗೆ ಕೊಂದರು? ಬಿಡಿ. ರಾಜೀವ್ ಗಾಂಧಿ, ಪ್ರಧಾನಿ ಇದ್ದರಲ್ಲ? ಕೊಂದವರಲ್ಲಿ ತಮಿಳರು ಯಾರು? ಯಾವ ಇತರ ಪಕ್ಷಗಳ ನೇತಾರರು? ಗೊತ್ತಿದೆ, ಯಾರೂ ಬಾಯಿ ಬಿಡುವುದಿಲ್ಲ. ಮಾಟದ ಗೊಂಬೆಗಳು ಹೇಳುವುದಿಲ್ಲ.
ನಿಮಗೆ ಗೊತ್ತಿಲ್ಲದ, ತಿಳಿಯಲು ಯತ್ನಿಸದ ಹಲವು ಹಿಂದಿನ ಘಟನೆಗಳ ಬಗ್ಗೆ ಈಗ ತಿಳಿಸಲು ಯತ್ನಿಸುತ್ತೇನೆ. ಕ್ರಾನ್ರಾಡ್ ಎಲೆಸ್ಟ್ ಎಂಬ ಬೆಲ್ಜಿಯಂನ ಭಾರತಾಭಿಮಾನಿ ಲೇಖಕ, ಸಂಶೋಧಕ ಬರೆದ ಅನೇಕ ಗ್ರಂಥಗಳಲ್ಲಿ ಈಗ ಪ್ರಸ್ತುತವಾದುದು, ಒಂದು ಇಲ್ಲಿ ಹೀಗಿದೆ-Ayodhya And After-Issues before Hindu Society ಎಂಬುದು. (Voice Of India 1993ರ ಮರು ಮುದ್ರಣ) ಇಲ್ಲಿ 15ನೇ ಅಧ್ಯಾಯದಿಂದ ಮುಂದೆ ನಮಗೆ ಏನು ಮಾಡಬೇಕೆಂಬ ಹಿತೋಕ್ತಿ, ಬೋಧೆ ಇದೆ. ‘ಭಾರತೀಯರಿಗೆ ಹಿಡಿದಿರುವ ರೋಗ ಅವಿದ್ಯೆ, ಅಜ್ಞಾನ, ಚರಿತ್ರೆಯ ಅರಿವಿಲ್ಲದ ಗೋಳು (ಪುಟ 333). ‘ಹಿಂದೂಗಳಿಗೆ ರಾಷ್ಟ್ರೀಯವೆಂಬ ಸಮಗ್ರ ಕಾರ್ಯಕ್ರಮವೊಂದರ ಅಭಾವ ಇದೆ’ (ಪುಟ 337). ‘ಬರೀ ಹಿಂದೂ ರಾಷ್ಟ್ರ ಅಂತ ಗಂಟಲು ಬಿರಿಯುವಂತೆ ಕೂಗಿದರೆ ಸಾಲದು. ಕಾರ್ಯಕ್ರಮದ ರೂಪರೇಖೆ ಬೇಕು. ಹಿಂದಿನ ಗುರೂಜಿ ಗೋಳ್ವಾಲ್ಕರರ Bunch Of Thoughts ಎಂಬುದಕ್ಕಿಂತ ಮುಂದೆ ಸ್ಪಷ್ಟ ಹಾದಿಯಲ್ಲಿ ನಡೆಯಬೇಕು’ (ಪುಟ 339). ‘ಸೋಷಿಯಲಿಸಂ’ ಅಂತ ಎದೆ ಬಡಿದುಕೊಳ್ಳುವವರಿಗೆ ಇವನು ಹೇಳುತ್ತಾನೆ-‘ಭಾರತೀಯರನ್ನು ನೀವು ಬರೀ ಸಾಮಾಜಿಕ, ಆರ್ಥಿಕ ಅಂಶಗಳಿಗೆ ಬಿಗಿದಿರುತ್ತೀರಿ! ಬೇರೆ ಏನೂ ಹಿಂದೂ ಧರ್ಮದಲ್ಲಿಲ್ಲವೇ?’ (ಪುಟ 345). ‘ದೀನದಯಾಳರ Integral Humanism ಎಂಬುದೂ ಸಾಲದು. ಅಲ್ಲಿ ಧರ್ಮದ ಪೂರ್ಣ ಕಲ್ಪನೆಯಿಲ್ಲ’ ಎಂದು ಬರೆದಿದ್ದಾನೆ. ಪ್ರತಿಯೊಬ್ಬರೂ ‘ಶೂದ್ರರಾಗುವ’ ಕಾರ್ಯಕ್ರಮ ಹಾನಿಕರ. ಇಲ್ಲಿ ಕ್ಷಾತ್ರೋದಯ, ಬ್ರಾಹ್ಮೋದಯ ಆಗಬೇಕು’ (ಪುಟ 346). ‘ಭಾರತವನ್ನು ನಿರಂತರ ಬಡತನ, ಶೋಷಣೆಯತ್ತ ಒಯ್ಯುವ ರಾಜಕೀಯ ಪಕ್ಷಗಳು, ಪುಢಾರಿಗಳು ಬಯಲಾಗಿ ಜನ ಜಾಗೃತರಾಗುವುದು ಯಾವಾಗ?’ ಎಂದು ಪ್ರಶ್ನಿಸುತ್ತಾನೆ. ‘ಸಮೃದ್ಧವಾಗಿದ್ದ ಭಾರತವನ್ನು ವಿದೇಶೀ ಆಕ್ರಮಣಕಾರರು ಶೋಷಿಸಿದರು. ಈಗ ಸ್ವದೇಶಿ ಆಳುಗರಿಂದ ಆಗುವುದೇನು?’ ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳಿ.
‘ಕ್ರೖೆಸ್ತ ಮಿಷನರಿಗಳ ಹಿಂದೂ ಗ್ರಂಥಗಳ ಅಪಾರ್ಥ, ಅವಹೇಳನ, ಧಾರ್ವಿುಕ ಸಂಸ್ಥೆಗಳ ನಾಶ ಎಲ್ಲ ಇಲ್ಲಿ ಬಯಲಾಗುತ್ತದೆ’ (ಪುಟ 355). ‘ಹಿಂದೂ ಸಂಸ್ಕೃತಿ, ಅದರ ಮೂಲಬೇರುಗಳನ್ನು ಹೊರಗಿಟ್ಟು ಮಾಡುವ ಯಾವ ಸುಧಾರಣೆಯೂ, ಕಾರ್ಯಕ್ರಮವೂ ಯಶಸ್ವಿಯಾಗುವುದಿಲ್ಲ. ಅದು ಹಿಂದೂ ಹೃದಯ, ಅದರ ಆಶಯಕ್ಕೆ ವಿರುದ್ಧವಾಗಿರುತ್ತದೆ’ (ಪುಟ 362). ‘ಇಲ್ಲಿ ಲಾಗಾಯ್ತಿನಿಂದ ನಡೆದಿರುವುದು ಎರಡು ಭಿನ್ನ ನಾಗರಿಕತೆಗಳ ಘರ್ಷಣೆ-ಹಿಂದೂ ಮತ್ತು ಮುಖ್ಯವಾಗಿ ಇಸ್ಲಾಂ’. ‘ಇದನ್ನು ಮುಕ್ತಾಯ ಮಾಡದೆ ನಡೆಸುವ ಯಾವ ಕಾರ್ಯಕ್ರಮವೂ ಯಶಸ್ವಿಯಾಗುವುದಿಲ್ಲ’ (ಪುಟ 365). ಇದೇ ವಿಷಯಕ್ಕೆ ಸಂಬಂಧಿಸಿ ಸ್ಯಾಮುಯೆಲ್ ಹಂಟಿಂಗ್ಟನ್ ಅವರ The Clash Of Civilization and The Remaking Of World Order ಪುಸ್ತಕವೇ ಇದೆ. ಕ್ರೖೆಸ್ತ ಸಾಮ್ರಾಜ್ಯ ವಿಸ್ತರಣ ಶಕ್ತಿಗಳಿರಲಿ, ಇಸ್ಲಾಮಿ, ವಿಶ್ವಾಕ್ರಮಣ ಶಕ್ತಿಗಳಾಗಲಿ, ಸ್ವರೂಪದಲ್ಲಿ ಬದಲಾವಣೆ ಗೊಳ್ಳುವವರಲ್ಲ. ‘ಎತ್ತು ಕರು ಹಾಕುತ್ತದೆ’ ಎಂಬ ಕಲ್ಪನಾಭ್ರಾಂತಿಯ ಭಾರತೀಯರಿಗೆ ಭ್ರಮನಿರಸನ ಆಗದು. ಈ ವಿಷಯಕ್ಕೆ ಇನ್ನೊಂದು ಗ್ರಂಥ
ಸಾರಾಂಶವನ್ನು ಇಲ್ಲಿ ನೀಡಬಯಸುತ್ತೇನೆ. 'The Myth of St Thomas And The Mylapore Shiva Temple (Voice Of India)' ಈ ಗ್ರಂಥ ಬರೆದವನು ಕೆನಡಾದ ‘ಈಶ್ವರ್ ಶರಣ್’ ಎಂಬ ಹಿಂದೂ ಹೆಸರಿನ, ಕ್ರೖೆಸ್ತ ಮತ ತೊರೆದು, ಹಿಂದೂ ಆದ ಒಬ್ಬ ವಿಶಾಲ ಹೃದಯಿ. ಮೈಲಾಪೂರ-ಚೆನ್ನೈನ ಒಂದು ಭಾಗ- ಸಮುದ್ರ ದಡದಲ್ಲಿದ್ದ ಕಪಾಲೀಶ್ವರ ದೇವಾಲಯವನ್ನು ನಾಶ ಮಾಡಿ, ಆ ಅವಶೇಷದ ದಿಬ್ಬವನ್ನು ಕ್ರೖೆಸ್ತರು ಸೇಂಟ್ ಥಾಮಸ್ನ ‘ವತಾಂಡ’ ಎಂದು ಕರೆಯುವ ನಾಟಕದ ಹಿನ್ನೆಲೆ ಇಲ್ಲಿ ಅನಾವರಣ ಆಗಿದೆ. ಹಿಂದೂಗಳು ಮತ್ತೆ ಮತ್ತೆ ಶಿವಾಲಯ ಕಟ್ಟಿಯೂ ಮೂರು ಸಲ ಕ್ರೖೆಸ್ತರು ನಾಶ ಮಾಡಿ, ಈಗ ಈ ಕಪಾಲೀಶ್ವರ ದೇವಾಲಯವನ್ನು ಬೇರೆ ಕಡೆ ಕಟ್ಟಲಾಗಿದೆ. ‘ಸೇಂಟ್ ಥಾಮಸ್ ಭಾರತಕ್ಕೆ ಬಂದಿದ್ದ’ ಎಂಬುದು ಭಾರತಕ್ಕೆ ವಲಸೆ ಬಂದ ಸಿರಿಯನ್ ಕ್ರೖೆಸ್ತರ ಕಟ್ಟುಕಥೆ ಎಂಬುದನ್ನು ಈ ಗ್ರಂಥ ಆಮೂಲಾಗ್ರವಾಗಿ ನಿರಾಕರಿಸಿ, ನಡೆದುದನ್ನು ಬಯಲು ಮಾಡಿದೆ. ತಮಿಳರು ಈ ಪುಸ್ತಕ ಓದುವರೇ? 300 ಪುಟಗಳ ಈ ದೀರ್ಘ ಗ್ರಂಥದಲ್ಲಿ ಕ್ರಿ.ಶ.52ರಲ್ಲಿ ಸೇಂಟ್ ಥಾಮಸನು ಇಲ್ಲಿ ಬಂದನೆಂದೂ, 72ರಲ್ಲಿ ಬ್ರಾಹ್ಮಣರು ಅವನನ್ನು ಕೊಂದರೆಂದೂ ಕ್ರೖೆಸ್ತರು ನಂಬುವ, ಪ್ರಚರಿಸುವ ಕಥೆಯ ನಿರಾಧಾರತೆ ಇಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿದೆ.
ಬ್ರಿಟಿಷ್ ಇತಿಹಾಸಕಾರ ಆರ್ನಾಲ್ಡ ಟಾಯ್ನಬಿ ಸಹ ಇದನ್ನು ‘ಕಟ್ಟುಕತೆ ಇದ್ದೀತು’ ಎಂದು ಬರೆದಿರುವುದು ಇಲ್ಲಿ ಉಲ್ಲೇಖವಾಗಿದೆ (ಪುಟ 9). ಅನೇಕ ಪಾದ್ರಿಗಳ ಗ್ರಹಿಕೆ, ಅವಕ್ಕೆ ಭಾರತೀಯ ಮುಖಂಡರ ಉತ್ತರಗಳನ್ನು ಒಳಗೊಂಡ ಈ ಗ್ರಂಥ ಈಗ ತಮಿಳರು ಓದುವುದಕ್ಕೆ ಯೋಗ್ಯವೂ ಇದೆ. ಪಾಂಡಿಚೆರಿಯ ಅಗಸ್ತೀಶ್ವರ ದೇವಾಲಯ ನಾಶದ ಕಥೆಯೂ ಇದೇ. ಫ್ರೆಂಚರಾದರೇನು? ಆಂಗ್ಲರಾದರೇನು? ಕ್ರೖೆಸ್ತ ಮತ ಒಂದೇ ಅಲ್ಲವೇ? ಕ್ರೖೆಸ್ತ ಮುಖಂಡರು-‘ಪುಸ್ತಕ ಬಂದಿದೆ-ಓದುತ್ತೇವೆ’ ಎಂದು ತಡವರಿಸಿ ಬರೆದಿದ್ದೂ, ಹಿಂದೂ ಮುಖಂಡರ ಸ್ವಾಗತ ಮಾತುಗಳೂ ಇಲ್ಲಿವೆ.
ಸ್ವಾಮಿ ಗೀತಾನಂದ, ಪಾಂಡಿಚೇರಿ, ಡಾ.ಮಹಾದೇವನ್, ಪ್ರಬುದ್ಧ ಭಾರತ ಸಂಪಾದಕರು, ಇನ್ನಿತರ ಮಹಿಮಾನ್ವಿತರು ಸ್ವಾಗತಿಸಿರುವ ಗ್ರಂಥ ಇದು. ಅಮೆರಿಕದ ಸಂವಿಧಾನ ರಚಿಸಿದ ಜೇಮ್ಸ್ ಮ್ಯಾಡಿಸನ್ನ ಮಾತುಗಳು ಹೀಗಿವೆ-‘ಕ್ರೖೆಸ್ತ ಮತವು ಜಗತ್ತಿಗೆ ಕೊಟ್ಟ ಹಣ್ಣುಗಳು ಯಾವವು? ಮೂಢನಂಬಿಕೆಗಳು, ದಬ್ಬಾಳಿಕೆ, ಕ್ರೂರ ಆಡಳಿತ, ಇತರರ ಹಿಂಸೆ ಇಂಥವು’ (ಮುಖಪುಟದಲ್ಲೇ). ಈ ಗ್ರಂಥ ಬಂದದ್ದು 1991ರಲ್ಲಿ. ಎಷ್ಟು ಕನ್ನಡಿಗರು ಓದಿದ್ದಾರೆ? ಹಿಂಬದಿಯ ಸೇರ್ಪಡೆಯಲ್ಲಿ, Temple Looting In Kerala-ಎಂಬ ಕಣ್ಣು ತೆರೆಸುವ ಲೇಖನ ಇದೆ. ಲಿಲಾ ತಂಬಿ ಎಂಬ ಮಹಿಳೆ ಬರೆದದ್ದು ಎಷ್ಟು ಪ್ರಸ್ತುತವಾಗಿದೆ! ಪುಸ್ತಕದ ಅಂಶಗಳಿಗೆ ಆಕ್ಷೇಪ, ಉತ್ತರಗಳನ್ನೂ ಇಲ್ಲಿ ಕೊಡಲಾಗಿದೆ. ಕ್ರೖೆಸ್ತರು ಈಗ ದೇವಾಲಯ, ಗೋಪುರಗಳಲ್ಲಿ ಏಸು, ಶಿಲುಬೆ ಇಟ್ಟು ಹಾವಳಿ ಮಾಡುತ್ತಿದ್ದಾರೆ.
ಅಂದು ಬ್ರಿಟಿಷರು, ಫ್ರೆಂಚರು, ಡಚ್ಚರು ಪ್ರೋತ್ಸಾಹಿಸಿದ್ದರು. ಇಂದು ಸೋನಿಯಾ, ಅವರ ಶಿಷ್ಯರು, ‘ಬಂಡೆ’ಗಳಲ್ಲೇ ಏಸು ಪ್ರತಿಮೆ ಇಡಿಸುತ್ತಿದ್ದಾರೆ. ಕೋರ್ಟು, ವಿದ್ಯಾಲಯ, ಅಸೆಂಬ್ಲಿ, ಸಾಮಾಜಿಕ ಕ್ಷೇತ್ರಗಳಲ್ಲೂ, ಸಿನಿಮಾ, ಕ್ರಿಕೆಟ್, ಬ್ಯಾಂಕ್, ಅಂತಾರಾಷ್ಟ್ರೀಯ ವೇದಿಕೆಗಳು ಎಲ್ಲೆಲ್ಲೂ ಈಗ ಕ್ರೖೆಸ್ತ, ಇಸ್ಲಾಮಿಗಳೊಡನೆ ಚೀನೀಯರೂ ಸೇರಿದ್ದಾರೆ. ಒಬ್ಬ ಸುಶಾಂತ್, ದಿಶಾ ಕೊಲೆಯ ಮಾತು ಇದಲ್ಲ. ಭಾರತನಾಶ, ಹಿಂದೂ ಬೇರುಗಳ ಉನ್ಮೂಲನ ಯತ್ನಕ್ಕೆ ನಾವು ಎಚ್ಚರಾಗಿ, ಇವರನ್ನು ಎದುರಿಸಿ ಸಂಘಟಿತರಾಗಬೇಕಾದ್ದು ತುರ್ತು ಅವಶ್ಯಕತೆ. ಕಾಶ್ಮೀರ ಸ್ವಾಧೀನ ಆಯ್ತು. ಶ್ರೀರಾಮ ದೇವಾಲಯ ಶಿಲಾನ್ಯಾಸ ಆಯ್ತು. ಕಾಶೀ, ಮಥುರಾ, ಇನ್ನಿತರವೂ ಸ್ವಾಧೀನವಾಗಿ ವಿದೇಶಿಯರು ಹದ್ದುಬಸ್ತಿನಲ್ಲಿ ಇರಬೇಕು. ಇಲ್ಲವಾದರೆ? ಹೋಗಲಿ ಬಿಡಿ, ಮತ್ತೆ ರಾಮ-ರಾವಣ ಯುದ್ಧ! ರಾವಣ ಕಾಲು ಕೆರೆದರೆ ರಾಮ ಏನು ಮಾಡಬೇಕು? ‘ಶಬ್ದವೇಧಿ!’