ಅಂಕಣ

ನುಗ್ಗೆ ಸೊಪ್ಪಿಂದ ಎಕರೆಗೆ 15 ಲಕ್ಷ ರೂಪಾಯಿ ಗಳಿಕೆ!

Webdesk - Ravikanth

ನುಗ್ಗೆ ಕಾಯಿ ಮತ್ತು ಸೊಪ್ಪಿನಲ್ಲಿ ಸಂಬಾರ್ ಮಾಡಬಹುದು, ಅದಕ್ಕಿಂತ ಹೆಚ್ಚಿಗೆ ಏನು ಸಾಧ್ಯ ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ, ಕೊಪ್ಪಳದ ರೈತರೊಬ್ಬರು ನುಗ್ಗೆ ಸೊಪ್ಪು ಬೆಳೆದು ಎಕರೆಗೆ ಸುಮಾರು 15 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಆಶ್ಚರ್ಯ ಅನಿಸಿದ್ರೂ ಇದು ಸತ್ಯ! ನುಗ್ಗೆ ಸೊಪ್ಪು ಪೌಷ್ಟಿಕತೆಯ ಕಣಜವಾಗಿದ್ದು, ಅಪೌಷ್ಟಿಕತೆಗೆ ರಾಮಬಾಣವಾಗಿದೆ. ಮುಂದುವರಿದ ದೇಶಗಳಲ್ಲಿ ನುಗ್ಗೆ ಸೊಪ್ಪಿನ ಪುಡಿಗೆ ಭಾರಿ ಬೇಡಿಕೆ ಬಂದಿದೆ. ನಮ್ಮಲ್ಲಿ ಹೇಗೆ ಅರಿಶಿನಪುಡಿ, ಖಾರದಪುಡಿ ಬಳಸುತ್ತೇವೋ ಹಾಗೆಯೇ ಅಲ್ಲಿ ನುಗ್ಗೆ ಪುಡಿ ಬಳಕೆಯಾಗುತ್ತಿದೆ. ಇದನ್ನು ಮನಗಂಡು ಕೊಪ್ಪಳದ ರೈತ ಬಸಯ್ಯ ಹಿರೇಮಠ ನುಗ್ಗೆ ಸೊಪ್ಪು ಬೆಳೆದು ಅದರಿಂದ ಉತ್ಪನ್ನಗಳನ್ನು ತಯಾರಿಸಿ ದೇಶ-ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ನುಗ್ಗೆ ಸೊಪ್ಪಿನ ಪೌಡರ್ ಜತೆಗೆ ನುಗ್ಗೆ ಟೀ ಬ್ಯಾಗ್, ಎಣ್ಣೆ, ಕ್ಯಾಪ್ಸೂಲ್, ಟ್ಯಾಬ್ಲೆಟ್​ಗಳನ್ನು ತಯಾರಿಸಿ ಮಾರುಕಟ್ಟೆ ಕಂಡುಕೊಂಡಿದ್ದಾರೆ.

85 ಎಕರೆಯಲ್ಲಿ ನುಗ್ಗೆ ಸೊಪ್ಪು ಬೆಳೆ: ಕೃಷಿ ಮಾಡಿ ನಮಗಿಷ್ಟದ ಬೆಳೆ ಬೆಳೆದು ಮಾರುಕಟ್ಟೆ ಹುಡುಕುವುದಕ್ಕಿಂತ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಬೇಡಿಕೆ ಇದೆ ಎನ್ನುವುದರ ಹುಡುಕಾಟವನ್ನು ಬಸಯ್ಯ ಹಿರೇಮಠ ನಡೆಸುತ್ತಾರೆ. ಆಗ ಅವರಿಗೆ ಸಿಕ್ಕಿದ್ದೇ ನುಗ್ಗೆ ಸೊಪ್ಪಿನ ಬೆಳೆ. ಬಿಸಿಲು ಜಾಸ್ತಿ ಇರುವ, ಹೆಚ್ಚು ನೀರಿನ ವ್ಯವಸ್ಥೆಯಿಲ್ಲದ ಕೊಪ್ಪಳದ ಭೂಮಿಯಲ್ಲಿ ಉತ್ತಮ ರೀತಿಯಲ್ಲಿ ನುಗ್ಗೆ ಸೊಪ್ಪು ಬೆಳೆಯಬಹುದು ಎಂದು ಅವರು ತೀರ್ವನಿಸಿ, 85 ಎಕರೆಯಲ್ಲಿ ಕೃಷಿ ಆರಂಭಿಸುತ್ತಾರೆ. ಕಡಿಮೆ ರೋಗ ಮತ್ತು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ನುಗ್ಗೆ ಸೊಪ್ಪು ಈಗ ಬಸಯ್ಯ ಅವರ ಬದುಕನ್ನು ಹಸನಾಗಿಸಿದೆ.

ಕಡಿಮೆ ಖರ್ಚಲ್ಲಿ ಬೆಳೆಯುವ ಪದ್ಧತಿ: 1 ಎಕರೆಯಲ್ಲಿ ನುಗ್ಗೆ ಸೊಪ್ಪು ಕೃಷಿ ಮಾಡಬೇಕು ಅಂದರೆ ಸಸಿಗೆ 50 ರಿಂದ 60 ಸಾವಿರ ರೂ. ಖರ್ಚು ಬರುತ್ತೆ. ಇದನ್ನು ತಪ್ಪಿಸಲು ಬಸಯ್ಯ, ನುಗ್ಗೆ ಬೀಜಗಳನ್ನು ನಾಟಿ ಮಾಡಿ ಗಿಡ ಮಾಡುವ ಪದ್ಧತಿ ಕಂಡುಕೊಂಡರು. ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇರುವ ಪಿಕೆಎಂ 1 ತಳಿಯ ಬೀಜಗಳನ್ನು ಆಯ್ಕೆ ಮಾಡಿಕೊಂಡು ನಾಟಿ ಮಾಡಿದರು. ಇದರಿಂದ ಎಕರೆಗೆ ಬರೀ 2 ಸಾವಿರ ರೂ. ಖರ್ಚು ಬಂತು. ನುಗ್ಗೆ ಬೀಜ ನಾಟಿ ಮಾಡಿದ ಒಂದು ವಾರದಲ್ಲಿ ಮೊಳಕೆಯೊಡೆದು 90 ದಿನಗಳಲ್ಲಿ ದೊಡ್ಡ ಗಿಡವಾಗುತ್ತದೆ. ಪ್ರತಿ 60 ದಿನಗಳಿಗೊಮ್ಮೆ ಪ್ರತಿ ಗಿಡಕ್ಕೆ 5 ಕೆಜಿ ಸೊಪ್ಪು ಸಿಗುತ್ತದೆ ಎನ್ನುತ್ತಾರೆ ಬಸಯ್ಯ ಹಿರೇಮಠ್.

ನುಗ್ಗೆ ಪುಡಿ, ಟ್ಯಾಬ್ಲೆಟ್, ಕ್ಯಾಪ್ಸೂಲ್, ಟೀ ಬ್ಯಾಗ್: ಕೊಯ್ದ ನುಗ್ಗೆ ಸೊಪ್ಪನ್ನು ಶುದ್ಧ ನೀರಿನಲ್ಲಿ ತೊಳೆದು ನಂತರ ಅದನ್ನು ಸೋಲಾರ್ ಡ್ರೖೆಯರ್​ನಲ್ಲಿ ಒಣಗಿಸಬೇಕು. ಒಣಗಿಸಿದ ನಂತರ ಆಂಟಿ ಬ್ಯಾಕ್ಟೀರಿಯಲ್ ಶೆಡ್​ನ ಒಳಗೆ ಯಂತ್ರಗಳನ್ನು ಬಳಸಿ ಪುಡಿ ಮಾಡಬಹುದು. ಯಾವುದೇ ಕಾರಣಕ್ಕೂ ಸೂರ್ಯನ ಬಿಸಿಲಿನಲ್ಲಿ ಒಣಗಿಸಬಾರದು, ಸೂರ್ಯನ ಬಿಸಿಲಿನಲ್ಲಿ ಒಣಗಿಸಿದರೆ ಪೌಷ್ಟಿಕಾಂಶಗಳು ನಾಶವಾಗುವ ಸಾಧ್ಯತೆ ಇರುತ್ತದೆ. ನುಗ್ಗೆ ಪುಡಿಯಿಂದ ನುಗ್ಗೆ ಸೊಪ್ಪಿನ ಪೌಡರ್, ನುಗ್ಗೆ ಟೀ ಬ್ಯಾಗ್, ಎಣ್ಣೆ, ಕ್ಯಾಪ್ಸೂಲ್ , ಟ್ಯಾಬ್ಲೆಟ್​ಗಳನ್ನು ತಯಾರಿಸಬಹುದು ಎನ್ನುತ್ತಾರೆ ಬಸಯ್ಯ ಹಿರೇಮಠ.

ಪ್ರತಿ 100 ಗ್ರಾಂ ನುಗ್ಗೆ ಪೌಡರ್​ಗೆ 475 ರೂ.: ಮೊರಿಂಗಾ ಸೂಪರ್ ಫುಡ್ಸ್ ಎನ್ನುವ ಬ್ರಾ್ಯಂಡ್ ಹುಟ್ಟು ಹಾಕಿರುವ ಕೊಪ್ಪಳದ ರೈತ ಬಸಯ್ಯ ಹಿರೇಮಠ, ಪ್ರತಿ 100 ಗ್ರಾಂ ನುಗ್ಗೆಪುಡಿಯನ್ನು 475 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ದೇಶ-ವಿದೇಶದ ವಿವಿಧ ಆರ್ಗ್ಯಾನಿಕ್ ಅಂಗಡಿಗಳಿಗೆ ಇವರ ನುಗ್ಗೆ ಕ್ಯಾಪ್ಸೂಲ್, ಆಯಿಲ್, ಪೌಡರ್, ಟ್ಯಾಬ್ಲೆಟ್, ಟೀ ಬ್ಯಾಗ್ ರಫ್ತಾಗುತ್ತಿವೆ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ನುಗ್ಗೆ ಸೊಪ್ಪಿನ ಕೃಷಿ, ಉತ್ಪನ್ನಗಳ ಬಗ್ಗೆ

ಬಸಯ್ಯ ಹಿರೇಮಠ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ನುಗ್ಗೆ ಸೊಪ್ಪಿನ ಕೃಷಿ ಮತ್ತು ಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿ ಇರುವ ಕೋರ್ಸ್ ರೂಪಿಸಿಕೊಟ್ಟಿದ್ದಾರೆ. ಒಂದು ಇಡೀ ದಿನ ಇಂಡಿಯನ್ ಮನಿ ಡಾಟ್ ಕಾಂನ ಸಿಇಒ ಸಿ. ಎಸ್.ಸುಧೀರ್ ಅವರು ಬಸಯ್ಯ ಹಿರೇಮಠ್ ಸಂದರ್ಶನ ಮಾಡಿ ನುಗ್ಗೆ ಸೊಪ್ಪಿನ ಕೃಷಿ ಮತ್ತು ಮೌಲ್ಯವರ್ಧನೆ ಬಗ್ಗೆ ನಿಮಗಿರಬಹುದಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ನುಗ್ಗೆ ಸೊಪ್ಪು ಬೆಳೆಸೋದು ಹೇಗೆ, ಅದಕ್ಕೆ ಯಾವ ರೀತಿ ಗೊಬ್ಬರ ಮತ್ತು ನೀರಿನ ಆರೈಕೆ ಮಾಡಬೇಕು, ಬಿತ್ತನೆ ಬೀಜ ಎಲ್ಲಿಂದ ತರಬೇಕು, ಸಾಮಾನ್ಯವಾಗಿ ಬರುವ ರೋಗಗಳನ್ನು ನಿಯಂತ್ರಿಸೋದು ಹೇಗೆ, ಹೇಗೆ ಸೊಪ್ಪು ಕಟಾವು ಮಾಡಬೇಕು, ಕಟಾವು ಮಾಡಿದ ನಂತರ ಹೇಗೆ ಒಣಗಿಸಬೇಕು, ಡ್ರೖೆಯರ್ ಯಂತ್ರ ಎಲ್ಲಿಂದ ತರಬೇಕು, ಪೌಡರ್ ಮಾಡುವ ಘಟಕ ನಿರ್ಮಾಣ ಹೇಗೆ... ಹೀಗೆ ಎಲ್ಲ ರೀತಿಯ ಮಾಹಿತಿ ಕೋರ್ಸ್​ನನಲ್ಲಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ಕೃಷಿ ಆವಿಷ್ಕಾರಗಳ ಬಗ್ಗೆ ಕಲಿತು ನಿಮ್ಮ ಆದಾಯ ಹೆಚ್ಚಿಸಿಕೊಳ್ಳಿ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ನುಗ್ಗೆಸೊಪ್ಪಿನ ಮಹತ್ವ, ಬೇಡಿಕೆ, ಮಾರುಕಟ್ಟೆ
  • ನುಗ್ಗೆ ಕೃಷಿ - ಪೂರ್ಣ ಮಾಹಿತಿ
  • ಜೀವಾಮೃತ ಮತ್ತು ಗೋಕೃಪಾಮೃತದ ಮಹತ್ವ
  • ನುಗ್ಗೆ ಕೃಷಿ-ಅಂತರ್ ಬೆಳೆ, ನೀರಾವರಿ ಯೋಜನೆ ಮತ್ತು ನೈಸರ್ಗಿಕ ಬೇಲಿ ನಿರ್ಮಾಣ
  • ನುಗ್ಗೆ ಸೊಪ್ಪು ಕಟಾವು ಮಾಡುವ ವಿಧಾನ
  • ಕಟಾವಿನ ನಂತರದ ವಿಧಾನ
  • ನುಗ್ಗೆ ಸೊಪ್ಪು ಒಣಗಿಸುವ ವಿಧಾನ
  • ಸಂಸ್ಕರಣೆ ಮತ್ತು ಮೌಲ್ಯವರ್ಧನೆ (Value addition)
  • ಇತರ ಉತ್ಪನ್ನಗಳು, ಪ್ಯಾಕಿಂಗ್
  • ಮಾರ್ಕೆಟಿಂಗ್ ಮತ್ತು ವಿತರಣೆ
  • ಕೋರ್ಸ್​ನ ತಿರುಳು