ಅಂಕಣ

ಹತ್ತಾರು ಕೌಶಲಗಳ ಅಪರೂಪದ ಪ್ರತಿಭೆ ಎಬಿಡಿ

ಕ್ರಿಕೆಟ್​ನಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಒಬ್ಬರಾದ ನಂತರ ಒಬ್ಬರು ಆಟಗಾರರು ಬರುತ್ತಾರೆ, ಹೆಸರು ಮಾಡುತ್ತಾರೆ, ನಿವತ್ತರಾಗುತ್ತಾರೆ. ಆದರೆ ಕೆಲವು ಆಟಗಾರರು ತಮ್ಮದೇ ವಿಶಿಷ್ಟ ಛಾಪು ಮೂಡಿಸುತ್ತಾರೆ. ಅವರನ್ನು ಮರೆಯುವುದು ಒತ್ತಟ್ಟಿಗಿರಲಿ, ಅವರ ಜಾಗವನ್ನು ಬೇರೆಯವರು ತುಂಬುವುದು ಕೂಡ ಕ್ರಿಕೆಟ್​ ಪ್ರೇಮಿಗಳಿಗೆ ಊಹಿಸಲಾಗದು. ಅಂತಹ ಅಪರೂಪದ ಆಟಗಾರರಲ್ಲಿ ಒಬ್ಬರು, ಭಾರತೀಯರ ಅದರಲ್ಲೂ ಕನ್ನಡಿಗರ ಮನೆಮಗನೇ ಆಗಿರುವ ಎಬಿಡಿ ಎಂದೇ ಖ್ಯಾತರಾದ ಅಬ್ರಹಾಮ್​ ಬೆಂಜಮಿನ್​ ಡಿವಿಲಿಯರ್ಸ್​.

ದಕ್ಷಿಣ ಆಫ್ರಿಕಾದ ಈ ಆಟಗಾರ ಜಗತ್ತಿನ ಅತ್ಯುತ್ತಮ ದಾಂಡಿಗರಲ್ಲೊಬ್ಬರು. ತಮ್ಮ ಅಸಾಂಪ್ರದಾಯಿಕ ಶಾಟ್​ಗಳಿಗೆ ಹೆಸರಾಗಿರುವ ಎಬಿಡಿ ಕ್ರಿಕೆಟ್​ ಪ್ರೇಮಿಗಳ ಆಟದ ಮೇಲಿನ ಪ್ರೀತಿಯನ್ನು ಹುಚ್ಚಾಗಿ ಬದಲಿಸಬಲ್ಲ ತಾಕತ್ತು ಹೊಂದಿದವರು. ಮೆದಾನದ ಪ್ರತಿ ಮೂಲೆಗೂ ಚೆಂಡನ್ನು ಅಟ್ಟುವ ವಿಶಿಷ್ಟ ಪ್ರತಿಭೆಯಿಂದಾಗಿ ಎಬಿಡಿ ಮಿಸ್ಟರ್​ 360 ಎಂದೇ ಖ್ಯಾತರು.

1984 ೆಬ್ರವರಿ 17ರಂದು ದಣ ಆಫ್ರಿಕಾದಲ್ಲಿ ಜನನ. ವೆದ್ಯರಾದ ತಂದೆ ರಗ್ಬಿ ಆಟಗಾರರೂ ಆಗಿದ್ದರು. ಹಾಗಾಗಿ ಮಗನಿಗೆ ಆಟವಾಡಲು ಪ್ರೋತ್ಸಾಹಿಸುತ್ತಿದ್ದರು. ಬೇರೆ ಬೇರೆ ಆಟಗಳಲ್ಲಿ ದಾಖಲೆ ನಿರ್ಮಿಸಿದ ವಂಡರ್​ ಕಿಡ್​ ಆತ. ಈಜಿನಲ್ಲೂ ದಾಖಲೆ ನಿರ್ಮಿಸಿದ್ದ. ಜ್ಯೂನಿಯರ್​ ಹಾಕಿ ಮತ್ತು ುಟ್​ಬಾಲ್​ನ ರಾಷ್ಟ್ರೀಯ ತಂಡದಲ್ಲೂ ಆಯ್ಕೆಯಾಗಿದ್ದ. ಕ್ರಿಕೆಟ್​ನಲ್ಲೂ ಆಯ್ಕೆಯಾಗಿದ್ದ. ಹತ್ತೊಂಬತ್ತರ ವರ್ಷದೊಳಗಿನ ಬ್ಯಾಡ್ಮಿಂಟನ್​ ಚಾಂಪಿಯನ್​ ಕೂಡ ಹೌದು. ದಣ ಆಫ್ರಿಕಾದ ಜ್ಯೂನಿಯರ್​ ರಗ್ಬಿ ತಂಡದ ನಾಯಕರಾಗಿದ್ದ ಎಬಿಡಿ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದರು. ಇಷ್ಟೆಲ್ಲ ಆಟಗಳಲ್ಲಿ ಚಾಂಪಿಯನ್​ ಆದರೂ ಓದಿನಲ್ಲೂ ಬಲು ಬುದ್ಧಿವಂತ. ಶಾಲೆಯಲ್ಲಿರುವಾಗ ಒಂದು ವಿಜ್ಞಾನದ ಪ್ರಾಜೆಕ್ಟ್​ ಗಾಗಿ ಬಾಲಕ ಅಬ್ರಹಾಮ್​ ಅಂದಿನ ರಾಷ್ಟ್ರಪತಿ ನೆಲ್ಸನ್​ ಮಂಡೇಲಾರಿಂದ ಸನ್ಮಾನಿತರಾಗಿದ್ದರು. ಎಲ್ಲ ಆಟದಲ್ಲೂ ಪರಿಣಿತನಾಗಿದ್ದರಿಂದ ಯಾವ ಆಟವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಯುತ್ತಿರಲಿಲ್ಲ. ಕೊನೆಗೆ ಕ್ರಿಕೆಟ್​ನಲ್ಲಿಯೇ ಮುಂದುವರಿಯುವ ನಿರ್ಧಾರ ಮಾಡಿದ ಕಾರಣಕ್ಕೆ ಕ್ರಿಕೆಟ್​ ಜಗತ್ತು "ಮಿಸ್ಟರ್​ 360'ಯನ್ನು ಕಾಣುವಂತಾಯಿತು.

2003ರಲ್ಲಿ ಟೆಟನ್ಸ್​ ತಂಡಕ್ಕಾಗಿ ಆಡಲಾರಂಭಿಸಿದರು. ನಂತರ ಐರ್ಲೆಂಡ್​ನ ಕ್ರಿಕೆಟ್​ ಕ್ಲಬ್​ ಒಂದರಲ್ಲಿಯೂ ಆಡಿದರು. ಒಂದೇ ವರ್ಷದಲ್ಲಿ ದಣ ಆಫ್ರಿಕಾದ ರಾಷ್ಟ್ರೀಯ ತಂಡದಲ್ಲಿ ಜಾಗ ಪಡೆದು 2004ರಲ್ಲಿ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ನಲ್ಲಿ ಪದಾರ್ಪಣೆ ಮಾಡಿದರು. ಆಗ ಎಬಿಡಿಗೆ 20 ವರ್ಷ. ಬ್ಯಾಟಿಂಗ್​ ಜತೆಗೆ ಅತ್ಯುತ್ತಮ ಫೀಲ್ಡಿಂಗ್​ನಿಂದಲೂ ಹೆಸರಾದರು. ಆದರೆ 2007ರ ವಿಶ್ವಕಪ್​ನಲ್ಲಿ ಎಬಿಡಿ ನಿರೀೆಯ ಮಟ್ಟ ತಲುಪಲಿಲ್ಲ. ಆ ಸಂದರ್ಭದಲ್ಲಿಯೇ ತಾವು ಸಾಧಾರಣ ಬ್ಯಾಟ್ಸ್​ಮನ್​ ಮಾತ್ರ ಆಗಿದ್ದರೆ ಸಾಲದು ಎಂದವರಿಗೆ ಅನ್ನಿಸತೊಡಗಿತು. ಹಾಗಾಗಿ ಬ್ಯಾಟಿಂಗ್​ನ ತಂತ್ರಗಳನ್ನು ಉತ್ತಮಪಡಿಸಿಕೊಳ್ಳುವತ್ತ ಗಮನ ಹರಿಸಿದರು. ಅಷ್ಟೇ ಅಲ್ಲ ಒಂದು ಸಮತೋಲಿತ, ಶಿಸ್ತಿನ ಜೀವನ ರೂಢಿಸಿಕೊಳ್ಳುವ ನಿರ್ಧಾರ ಮಾಡಿದರು. ವ್ಯಾಯಾಮ, ನಿದ್ದೆ, ಆಹಾರ, ಮಾನಸಿಕ, ಆರೋಗ್ಯ ಈ ಎಲ್ಲದರ ಪರಿಣಾಮ ಆಟದ ಮೇಲೆ ಆಗುವುದರಿಂದ ತಮ್ಮ ಸರ್ವಾಂಗೀಣ ಅಭಿವದ್ಧಿಗೆ ತಾವೇ ಪಣ ತೊಟ್ಟರು. ಆಟದ ಕೆಲವು ಗಂಟೆಗಳ ಕಾಲ ಮೆದಾನದಲ್ಲಿ ಜನರಿಗೆ ಕಾಣುವುದು ಈ ಸರ್ವಾಂಗೀಣತೆಯ ಪುಟ್ಟ ಭಾಗ ಮಾತ್ರ. ನಿಜವಾದ ಉತ್ಕ ೃಷ್ಟತೆ ಎನ್ನುವುದು ಕ್ರೀಡಾಪಟುಗಳ ಪರಿಶ್ರಮದಲ್ಲಿ ಅವಿತುಕೊಂಡಿರುತ್ತದೆ. ಈ ಸತ್ಯವನ್ನು ಅರ್ಥಮಾಡಿಕೊಂಡವರೆಲ್ಲ ದೊಡ್ಡ ಕ್ರೀಡಾಪಟುಗಳಾಗಿದ್ದಾರೆ. ಅಷ್ಟೇ ಅಲ್ಲ ಇದು ಎಲ್ಲ ೇತ್ರಗಳ ಸಾಧಕರಿಗೂ ಅನ್ವಯಿಸುತ್ತದೆ.

ಎಬಿಡಿ ಪ್ರಯತ್ನ ಲ ನೀಡಿತು. 2008ರಲ್ಲಿ ಭಾರತ ವಿರುದ್ಧದ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿ ಾಮ್​ರ್ಗೆ ಮರಳಿದರು. ಈ ದ್ವಿಶತಕ ಅವರ ಜೀವನದಲ್ಲಿ ಮಹತ್ವದ ತಿರುವು ತಂದುಕೊಟ್ಟಿತು. ಆ ನಂತರ ಹೊಸ ರೂಪದಲ್ಲಿ ಎಬಿಡಿ ಮೆದಾನದಲ್ಲಿ ಗರ್ಜಿಸತೊಡಗಿದರು. 2009ರಲ್ಲಿ ಐಸಿಸಿಯ ವರ್ಷದ ಆಟಗಾರರಾದರು. 2011ರ ವಿಶ್ವಕಪ್​ನಲ್ಲಿ ಅತ್ಯುತ್ತಮ ಆಟವಾಡಿದರು. 2012ರಲ್ಲಿ ದಣ ಆಫ್ರಿಕಾ ತಂಡದ ನಾಯಕರಾಗಿ ಆಯ್ಕೆಯಾದರು. 2014 ಮತ್ತು 2015ರಲ್ಲೂ ಐಸಿಸಿಯ ವರ್ಷದ ಆಟಗಾರರಾಗಿ ಮತ್ತೆ ಆಯ್ಕೆಯಾದರು. ಅತೀ ವೇಗದ ಅರ್ಧ ಶತಕ(16 ಬಾಲ್​), ಶತಕ(31) ಮತ್ತು 150(64) ರನ್​ ಗಳಿಸಿದ ಶ್ರೇಯ ಎಬಿಡಿ ಹೆಸರಲ್ಲೇ ಇದೆ. ಭಾರತದ ಐಪಿಎಲ್​ (ಇಂಡಿಯನ್​ ಪ್ರೀಮಿಯರ್​ ಲೀಗ್​)ನಲ್ಲಿ ಬೆಂಗಳೂರಿನ ರಾಯಲ್​ ಚಾಲೆಂರ್ಜಸ್​ ಪರ ಆಡುವ ಡಿವಿಲಿಯರ್ಸ್​ ಕನ್ನಡಿಗರ ಕಣ್ಮಣಿ. ಬ್ಯಾಟ್ಸ್​ಮನ್​ ಆಗಿ ಮಾತ್ರವಲ್ಲ, ಫೀಲ್ಡರ್​ ಆಗಿಯೂ ಅವರದ್ದು ಪಂದ್ಯಗಳನ್ನು ಗೆದ್ದು ಕೊಡುವಂತಹ ಪ್ರದರ್ಶನ. 2018ರಲ್ಲಿ ಹೆದರಾಬಾದ್​ನ ಸನ್​ರೆಸರ್ಸ್​ನ ಹೇಲ್ಸ್​ ಹೊಡೆದ ಬಾಲು ಸಿಕ್ಸರ್​ ಆಯಿತು ಎಂದುಕೊಳ್ಳುತ್ತಿರುವಾಗ ಅದನ್ನು ಒಂದೇ ಕೆಯಿಂದ ಹಿಡಿದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದವರು ಎಬಿಡಿ. ಅದನ್ನು ಸೂಪರ್​ ಮ್ಯಾನ್​ ಕ್ಯಾಚ್​ ಎಂದು ಕರೆಯುತ್ತಾರೆ. ಪಾಕಿಸ್ತಾನ ವಿರುದ್ಧದ 2012ರ ಜೋಹಾನ್ಸ್​ರ್ಬಗ್​ ಟೆಸ್ಟ್​ ಪಂದ್ಯದಲ್ಲಿ 11 ಕ್ಯಾಚ್​ ಹಿಡಿದು ದಾಖಲೆ ನಿರ್ಮಿಸಿದ್ದರು. ಟೆಸ್ಟ್​, ಒನ್​ಡೇ, ಟ್ವೆಂಟಿ &ಟ್ವೆಂಟಿ ಈ ಮೂರು ವಿಭಾಗಗಳಲ್ಲೂ ಎಬಿಡಿ ಅತ್ಯುತ್ತಮ ಪ್ರದರ್ಶನ ನೀಡಲು ಕಾರಣ ಕ್ರಿಕೆಟ್​ನ ಪ್ರಾಥಮಿಕ ಸಂಗತಿಗಳ ಬಗ್ಗೆ ಅಧಿಕ ಗಮನ ಕೊಡುವುದು. ಇದರಿಂದ ತಲೆಯಲ್ಲಿ ಗೊಂದಲವಿರುವುದಿಲ್ಲ ಮತ್ತು ಗೊಂದಲವಿಲ್ಲದ ತಲೆ ಏಕಾಗ್ರತೆಗೆ ಹೇಳಿ ಮಾಡಿಸಿದ್ದು! ಅರ್ಥವಾಯಿತಲ್ಲ, ಎಬಿಡಿ ಎಂಥ ಚೆಂಡು ಬಂದರೂ ಯಾವ ಕಡೆಯಿಂದಾದರೂ ಬೌಂಡರಿಗೆ ಕಳಿಸುವ ಗುಟ್ಟು! ಜನರ ನಿರೀೆಯ ಭಾರ ತಮ್ಮ ತಲೆಕೆಡಿಸಲು ಅವರು ಬಿಡುವುದೇ ಇಲ್ಲ! ದಿನವೂ ಅವರು ಆಟದ ಬೇಸಿಕ್ಸ್​ ಬಗ್ಗೆಯೇ ಯೋಚಿಸುತ್ತಾರೆ, ಅದನ್ನೇ ಪ್ರಾಕ್ಟೀಸ್​ ಮಾಡುತ್ತಾರೆ. ಬೌಲರ್​ ಕೆಯಿಂದ ಹೊರಟ ಚೆಂಡಿನ ಗತಿಯನ್ನು ಕೊನೆಯವರೆಗೂ ಗಮನಿಸುವುದರಿಂದ ಹಿಡಿದು ಹೇಗೆ ಆರಾಮಾಗಿ ಯಾವುದೇ ಗೊಂದಲ ಇಲ್ಲದೇ ಬ್ಯಾಕ್​ುಟ್​ನಿಂದ ್ರಂಟ್​ ುಟ್​ಗೆ ದೇಹದ ಸಮತೋಲನವನ್ನು ಹಾಕುವುದು& ಹೀಗೆ ಆಟದ ಪ್ರತಿ ಪ್ರಾಥಮಿಕ ಸಂಗತಿ ತರಬೇತಿಯಲ್ಲಿ ಬರುತ್ತದೆ.

ಮಿಸ್ಟರ್​ 360 ಎಂದರೆ ಸುಮ್ಮನೇ ಅಲ್ಲ. ನೂರು ಶೇಕಡ ಸಮರ್ಪಣಾ ಮನೋಭಾವ ಆಟದೆಡೆಗೆ. ಸಣ್ಣ ಸಣ್ಣ ಸಂಗತಿಗಳೆಲ್ಲವೂ ಸೇರಿಕೊಂಡು ದೊಡ್ಡ ಯಶಸ್ಸು ಸಿಗುವುದು. ಈ ಸಣ್ಣ ಎನಿಸಿಕೊಳ್ಳುವ ಸಂಗತಿಗಳ ಬಗ್ಗೆ ಪೂರ್ತಿ ಗಮನ ಕೊಡುವುದು ಹೇಗೆಂದು ಡಿವಿಲಿಯರ್ಸ್​ ಚೆನ್ನಾಗಿ ಬಲ್ಲರು. ಬೌಲರ್​ಗಳ ಮೇಲೆ ಒತ್ತಡ ತರಲೆಂದೇ ತಾನು ಹೊಸಹೊಸ ಶಾಟ್​ಗಳನ್ನು ಬಾರಿಸುವುದಾಗಿ ಎಬಿಡಿ ಹೇಳಿದ್ದರು. ಎಬಿಡಿಯ ಆಟವೆಂದರೆ ಸಿಕ್ಸರುಗಳ ಸುರಿಮಳೆ ಮಾತ್ರವಲ್ಲ. ಸಂದರ್ಭಕ್ಕೆ ಹೊಂದಿಕೊಳ್ಳುವ ಆಟವಾಡುವುದೂ ಅವರಿಗೆ ಗೊತ್ತು. 2012&13ರಲ್ಲಿ ಆಸ್ಟ್ರೆಲಿಯಾ ವಿರುದ್ಧದ ಅಡಿಲೇಡ್​ ಟೆಸ್ಟ್​ ನಲ್ಲಿ ಡ್ರಾ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದಾಗ 220 ಬಾಲ್​ಗಳಲ್ಲಿ 33 ರನ್​ ಗಳಿಸಿದ್ದು ಒಂದು ಉದಾಹರಣೆ ಮಾತ್ರ. ಆದರೆ ಅದರ ಮುಂದಿನ ಟೆಸ್ಟ್​ನಲ್ಲಿ ಹಿಂದಿನ ಪಂದ್ಯದ ಸೇಡು ತೀರಿಸಿಕೊಳ್ಳಲೇನೋ ಎಂಬಂತೆ 184 ಬಾಲ್​ಗಳಲ್ಲಿ 169 ರನ್​ ಚಚ್ಚಿ ಹಾಕಿದ್ದರು! ನೆನಪಿರಲಿ, ಈ ವೇಗದ ಆಟ ಬಂದಿದ್ದು ಟೆಸ್ಟ್​ ಪಂದ್ಯದಲ್ಲಿ!

2013ರಲ್ಲಿ ಡೇನಿಯಲ್​ ಜತೆ ವಿವಾಹವಾದ ಎಬಿಡಿ ಇಬ್ಬರು ಗಂಡುಮಕ್ಕಳ ತಂದೆ ಕೂಡ. ಭಾರತದ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ಎಬಿ, ಡೇನಿಯಲ್​ರಿಗೆ ಪ್ರಪೋಸ್​ ಮಾಡಲು ಆಯ್ದುಕೊಂಡಿದ್ದು ತಾಜ್​ ಮಹಲ್​ ಅನ್ನು! ಅಂದಹಾಗೆ 2013ರಲ್ಲಿ ಎಬಿಡಿ ಟೆಸ್ಟ್​ ಮತ್ತು ಒನ್​ಡೇ ಎರಡೂ ರ್ಯಾಂಕಿಂಗ್​ನಲ್ಲೂ ನಂ.1 ಆಗಿದ್ದರು! ಒಳ್ಳೆಯ ಹಾಡುಗಾರ ರಾಗಿರುವ ಎಬಿಡಿ ಸಂಗೀತದ ಬ್ಯಾಂಡ್​ ಒಂದನ್ನು ಹೊಂದಿದ್ದಾರೆ. "ಗ್ಲಾ ್ಯಡಿಯೇಟರ್​' ಅವರ ಪ್ರೀತಿಯ ಸಿನಿಮಾ, ೆಡರರ್​ ನೆಚ್ಚಿನ ಆಟಗಾರ. ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಎಬಿಡಿ ನಡುವಿನ ಸ್ನೇಹ ಎಲ್ಲರಿಗೂ ಗೊತ್ತಿರುವುದೇ. "ವಿರಾಟ್​ ಹತ್ತಿರ ನಿಮ್ಮ ಶೂ, ೋನ್​ ಏನಾದರೂ ಚೆನ್ನಾಗಿದೆ ಎಂದರೆ ಸ್ವಲ್ಪ ಹೊತ್ತಿನಲ್ಲೇ ಅದೇ ರೀತಿಯ ಹೊಸದನ್ನು ನನಗೆ ತರಿಸಿಕೊಡುತ್ತಾರೆ, ಹಾಗಾಗಿ ವಿರಾಟ್​ ಹತ್ತಿರ ಏನನ್ನಾದರೂ ಹೇಳಲು ಸಂಕೋಚವಾಗುತ್ತದೆ' ಎನ್ನುತ್ತಾರೆ ಎಬಿಡಿ!

"ಬೌಲರ್​ ಯಾರೇ ಆಗಿರಲಿ, ಆತ ವೇಗದ ಬೌಲರ್​ ಆಗಲಿ, ಸ್ವಿಂಗ್​ ಬೌಲರ್​ ಆಗಲಿ, ಆ್​ ಸ್ಪಿನ್ನರ್​, ಲೆಗ್​ ಸ್ಪಿನ್ನರ್​ ಯಾರೇ ಆಗಲಿ, ಯಾವ ರೀತಿಯ ಫೀಲ್ಡಿಂಗ್​ ಬೇಕಾದರೂ ರಚಿಸಿರಲಿ, ಹೇಗೆ ಬೇಕಾದರೂ ಆಡಿ ಸಿಕ್ಸ್​, ೋರ್​ ಬಾರಿಸುವ ಸಾಮರ್ಥ್ಯವಿರುವ ಪರಿಪೂರ್ಣ ಕ್ರಿಕೆಟಿಗ ಡಿವಿಲಿಯರ್ಸ್​' ಎನ್ನುತ್ತಾರೆ ಸಚಿನ್​ ತೆಂಡುಲ್ಕರ್​. ನಿಜ, ಒಬ್ಬ ಆಟಗಾರ ಇಂಥ ಕಡೆಗೆ ಆಡುತ್ತಾನೆಂದರೆ ಆತನಿಗೆ ಫೀಲ್ಡ್​ ಸೆಟ್​ ಮಾಡಬಹುದು, ಮೆದಾನದ ತುಂಬೆಲ್ಲ ಚೆಂಡು ಓಡಾಡಿಸುವ ಎಬಿಡಿಗೆ ಏನು ಮಾಡುವುದು! ಬೌಲರುಗಳ ಪಾಲಿಗೆ ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್​.

ಭಾರತದಲ್ಲಿ ಆತ ಬಹು ಜನಪ್ರಿಯ. 2015ರ ಅಕ್ಟೋಬರ್​ 25ರ ಮುಂಬೆ ಟೆಸ್ಟ್​ನಲ್ಲಿ ದಣ ಆಫ್ರಿಕಾ ತಂಡ ಭಾರತದ ವಿರುದ್ಧ ರನ್​ ಹೊಳೆ ಹರಿಸುತ್ತಿತ್ತು. ಡಿವಿಲಿಯರ್ಸ್​ ಬ್ಯಾಂಟಿಂಗ್​ಗೆ ಇಳಿಯುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಜನರು "ಎಬಿಡಿ ಎಬಿಡಿ' ಎಂದು ಹೇಗೆ ಕಿರುಚುತ್ತಿದ್ದರೆಂದರೆ ಕೇಳಿದವರು ಆಡಲು ಇಳಿದಾತ ಭಾರತದ ಕ್ಯಾಪ್ಟನ್​ ಎಂದುಕೊಳ್ಳಬೇಕು! ಡಿವಿಲಿಯರ್ಸ್​ ಹನ್ನೊಂದು ಸಿಕ್ಸ್​ ಚಚ್ಚಿದರು. ಜನ ಚಪ್ಪಾಳೆ ತಟ್ಟುವುದನ್ನು ಮಾತ್ರ ಬಿಡಲಿಲ್ಲ. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವತ್ತಿ ೂಷಿಸಿದರೂ ಟ್ವೆಂಟಿ ಟ್ವೆಂಟಿಯಲ್ಲಿ ಸಕ್ರಿಯರಾಗಿದ್ದಾರೆ. ಕ್ರಿಕೆಟ್​ ಮೆದಾನದಲ್ಲಿ ಸಾಧಿಸಬಹುದಾದ ಹತ್ತಾರು ಸಾಧ್ಯತೆಗಳನ್ನು ಅನಾವರಣ ಮಾಡಿದ ಖ್ಯಾತಿ ಎಬಿಡಿಯದ್ದು ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)