ಅಂಬಿಕಾ ಬಿಟಿ ತುಮಕೂರು 
ಅಂಕಣ

ನನ್ನ ಅಪ್ಪ ನಿಜವಾದ ಸೂಪರ್ ಹೀರೋ!

ರಮೇಶ್​ ಕುಮಾರ್​​ ಬಿ ಎಡಮೋಳೆ
ಇಂದು ಅಪ್ಪಂದಿರ ದಿನದ ವಿಶೇಷ. ಈ ಹಿನ್ನೆಲೆಯಲ್ಲಿ ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.

ಜೀವ ಕೊಟ್ಟು ಜೀವನ ರೂಪಿಸಿದ ಸಹನಾಮೂರ್ತಿ, ಮಮತೆಯ ಗಣಿ ಅಪ್ಪ. ನನ್ನ ಹೃದಯದಲ್ಲಿ ನಿನಗೊಂದು ವಿಶಿಷ್ಟ ಸ್ಥಾನವಿದೆ. ಬದುಕಿನ ಕಷ್ಟದ ನಡುವೆಯೂ ಎಲ್ಲವನ್ನು ಸಹಿಸಿಕೊಂಡು ಎಲ್ಲ ಸಮಸ್ಯೆಯನ್ನು ಮೆಟ್ಟಿನಿಂತು ಕುಟುಂಬವನ್ನು ಕಾಪಾಡುವ ಶಕ್ತಿ ನೀನು. ಮನೆಯಲ್ಲಿ ಎಲ್ಲ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುವ ಗುರಾಣಿಯಾಗಿದ್ದಿ. ನಿಮ್ಮ ತ್ಯಾಗ ಪ್ರೀತಿಯನ್ನು ವರ್ಣಿಸಲು ಪದಗಳೇ ಸಾಲದು. ನನಗೆ ಸಂತೋಷದಾಯಕ ತೃಪ್ತಿ ಜೀವನವನ್ನು ನೀಡಿದ್ದೀಯ. ಸದಾ ನನ್ನ ಬೆಂಬಲವಾಗಿ ನಿಲ್ಲುತ್ತಾ ನನ್ನ ಗುರಿಯನ್ನು ತಲುಪಲು ಬೆಳಕಾಗಿದ್ದೀಯ. ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಜತೆಯಾಗಿ ಪ್ರೋತ್ಸಾಹ ನೀಡುವ ನಿನಗೆ ನಾನು ಸದಾ ಚಿರಋಣಿ.

| ಅಂಬಿಕಾ ಬಿಟಿ ತುಮಕೂರು