ಅಂಕಣ

ಗೆಲ್ಲಲು ಬೇಕು ತಂತ್ರಗಾರಿಕೆ, ಕಠಿಣ ಪರಿಶ್ರಮ

ರಮೇಶ್​ ಕುಮಾರ್​​ ಬಿ ಎಡಮೋಳೆ

ದೆಹಲಿಯ ಪ್ರಗತಿ ಮೆದಾನದಲ್ಲಿ ವಸ್ತು ಪ್ರದರ್ಶನಕ್ಕೆ ಬಂದ ಜನ ನಾವು ಮಾಡುತ್ತಿದ್ದ ಜಾದೂಗಳನ್ನು ನೋಡಿ ಬೆರಗಾಗುತ್ತಿದ್ದರು. ಆದರೆ ನಮ್ಮ ಮ್ಯಾಜಿಕ್​ ಕಿಟ್​ಗಳನ್ನು ಖರೀದಿಸುತ್ತಿರಲಿಲ್ಲ. ಹಟ ಮಾಡಿದ ಮಕ್ಕಳಿಗೆ, "ಅವರೆಲ್ಲ ಜಾದೂಗಾರರು, ಈ ವಸ್ತುಗಳು ಅವರು ಹೇಳಿದಂತೆ ಕೇಳು ತ್ತವೆ. ಆದರೆ ನಮ್ಮ ಕೆಯಲ್ಲಿ ಅವು ಕೆಲಸ ಮಾಡುವುದಿಲ್ಲ, ಕೊಟ್ಟ ಹಣ ವ್ಯರ್ಥ' ಎಂದು ಹೇಳಿ ಮಕ್ಕಳನ್ನು ಎಳೆದುಕೊಂಡು ಹೋಗುತ್ತಿದ್ದರು. ಮ್ಯಾಜಿಕ್​ ಮಾಡುವುದು ತುಂಬ ಸುಲಭ ಎಂದು ಮೊದಲೇ ರಹಸ್ಯ ತೋರಿಸಿಕೊಟ್ಟರೆ "ಅಯ್ಯೋ ಇಷ್ಟೇನಾ' ಅಂತ ಹೇಳುತ್ತ ಅದಕ್ಕೂ ಜಾಗ ಖಾಲಿ ಮಾಡುತ್ತಿದ್ದರು. ನಮ್ಮವರೆಲ್ಲರೂ ತಲೆ ಮೇಲೆ ಕೆ ಇಟ್ಟು ಕೂತರು. ಲಾಂತರ ರೂಪಾಯಿಯ ಸಾವಿರಾರು ಕಿಟ್​ಗಳನ್ನು ಏನು ಮಾಡುವುದು? ಎಂದೂ ಸೋಲನ್ನು ಒಪ್ಪಿಕೊಳ್ಳದ ನನ್ನ ಮನಸ್ಸು ರಾತ್ರಿಯೆಲ್ಲ ಯೋಚಿಸುತ್ತ ಕಳೆದಾಗ ಒಂದು ಐಡಿಯಾ ಹೊಳೆಯಿತು.

ರಾತ್ರಿಯೇ ಒಂದು ಮುದ್ರಣಾಲಯ ಹುಡುಕಿದೆ. "ಕಂಪೋಸ್​ ಮಾಡುವವರಿಲ್ಲ' ಎಂದ ಯಜಮಾನ ನಿದ್ದೆಗಣ್ಣಿನಲ್ಲೇ. ನಾನೇ ಸ್ವತ@ ಪ್ರಿಂಟ್​ ಮಾಡುತ್ತೇನೆ ಎಂದಾಗ ಒಪ್ಪಿಕೊಂಡ (ನಾನು

ಮಂಡ್ಯದಲ್ಲಿ ಮ್ಯಾಜಿಕ್​ ಕ್ಯಾಂಪ್​ ಮಾಡಿದ್ದಾಗ ಬಿಡುವಿನ ಸಮಯದಲ್ಲಿ ಜಯಲ ಪ್ರೆಸ್​ನಲ್ಲಿ ಅಚ್ಚು ಮೊಳೆ ಜೋಡಿಸಿ ಟ್ರೆಡ್ಲ್​ ಮಷಿನಿನಲ್ಲಿ ಪ್ರಿಂಟ್​ ಮಾಡಲು ಕಲಿತಿದ್ದೆ). ರಾತ್ರೋರಾತ್ರಿ ಪ್ರಿಂಟ್​ ಮಾಡಿಕೊಂಡೆ. ಅದಕ್ಕೇ ನಾನು ಎಲ್ಲರಿಗೂ ಹೇಳುವುದು, ಸಾಧ್ಯವಾದಷ್ಟು ಬೇರೆ&ಬೇರೆ ಕೆಲಸ ಕಲಿತುಕೊಳ್ಳಿ. ಯಾವತ್ತಾದರೂ ಸಹಾಯಕ್ಕೆ ಬರುತ್ತದೆ ಎಂದು.

ಮಾರನೇ ದಿನ ನಮ್ಮ ವ್ಯಾಪಾರದ ವೆಖರಿಯೇ ಬದಲಾಯಿತು. "ನಿಮ್ಮಿಂದ ಮ್ಯಾಜಿಕ್​ ಮಾಡಲಾಗದಿದ್ದರೆ ನಿಮ್ಮ ಹಣ ಪೂರ್ತಿ ವಾಪಸ್​' ಎಂದು ಹೇಳುತ್ತ ನಾನು ಪ್ರಿಂಟ್​ ಮಾಡಿದ್ದ ಮನಿ ಬ್ಯಾಕ್​ ಗ್ಯಾರಂಟಿ ಕಾರ್ಡ್​ನ್ನು ಹಂಚತೊಡಗಿದೆವು. ತಂತ್ರ ಲಿಸಿತ್ತು. ನಂತರದ ದಿನಗಳಲ್ಲಿ ವ್ಯಾಪಾರದ ಭರಾಟೆ ಎಷ್ಟಿತ್ತೆಂದರೆ ಮಧ್ಯಾಹ್ನ ಊಟ ಮಾಡಲೂ ಪುರುಸೊತ್ತು ಸಿಗುತ್ತಿರಲಿಲ್ಲ! ಕಿಟ್​ಗಳೆಲ್ಲ ಭರ್ರೆಂದು 10 ದಿನದಲ್ಲಿ ಖಾಲಿಯಾಗಿ ರ್ಖಚೆಲ್ಲ ಕಳೆದು ಒಬ್ಬೊಬ್ಬರಿಗೆ ಒಂದೊಂದು ಲ ಸಿಕ್ತು. ಎಲ್ಲರಿಗೂ ಖುಷಿಯೋ ಖುಷಿ.

ಈ ಗೆಲುವು ಹೆಚ್ಚಿನ ಸಾಹಸ ಮಾಡೋದಕ್ಕೆ ಪ್ರೇರಣೆ ಆಯಿತು. ವಿದೇಶಗಳಲ್ಲಿ ಕಿಟ್​ ಮಾರಾಟ ಮಾಡಿದರೆ ಹೇಗೆ ಎಂದು ಪಾರ್ಟ್​ ನರ್​ ರವಿಶಂಕರ್​ ಕಿಣಿ ಯೋಚಿಸುತ್ತಿರುವಾಗ ಓಂ ಗಣೇಶ್​ ಸ್ನೇಹಿತರಾದ ಉಪು$್ಪಂದದ ಶಫಿ ಸಾದಿಕ್​, ಮಸ್ಕತ್​ನಲ್ಲಿ ದೊಡ್ಡ ವಸ್ತು ಪ್ರದರ್ಶನಗಳು ನಡೆಯುತ್ತಿರುತ್ತವೆಂದೂ, ಬರುವುದಾದರೆ ಎಲ್ಲ ಸಹಕಾರ ನೀಡುವುದಾಗಿಯೂ ಭರವಸೆ ಇತ್ತರು. ಸರಿ, ಮಳಿಗೆಯನ್ನು ಕಾಯ್ದಿರಿಸಿದೆವು. ಅಜ್ಜಿಮನೆ ವಿಜಯಕ್ಕ ಮತ್ತು ಗಿರಿಯವರು 5 ಸಾವಿರ ಕಿಟ್​ಗಳನ್ನು ನಮ್ಮ ್ಯಾಕ್ಟರಿಯಲ್ಲಿ ಕೂಡಲೇ ತಯಾರಿಸಿ ವಿಮಾನದಲ್ಲಿ ಕಳುಹಿಸಿದರು.

ವಸ್ತು ಪ್ರದರ್ಶನದಲ್ಲಿ ವ್ಯಾಪಾರ ಪ್ರಾರಂಭಿಸಿದೆವು. ಆದರೇನು ಮಾಡೋದು? ಹೊಸ ಜನ, ಹೊಸ ಭಾಷೆ. ಅವರು ಹೇಳಿದ್ದು ನಮಗೆ ಅರ್ಥವಾಗುತ್ತಿರಲಿಲ್ಲ, ನಾವು ಹೇಳಿದ್ದು ಅವರಿಗೆ ಅರ್ಥವಾಗುತ್ತಿರಲಿಲ್ಲ. ವ್ಯಾಪಾರವೇ ಇಲ್ಲದೆ ಆಗಲೇ ಮಳಿಗೆ ಬಾಡಿಗೆ, ವಿಮಾನ ಟಿಕೇಟು, ವಸತಿಗೆ ಸುಮಾರು 5 ಲ ರೂಪಾಯಿ ಕೆ ಬಿಟ್ಟಿತ್ತು. ಅಲ್ಲಿ ನಮಗಿದ್ದ ತೊಂದರೆ ಭಾಷೆಯದು. ಇನ್ಸ್​ಟ್ರನ್​ ಬುಕ್​ಲೆಟ್​ ಹಂಚುತ್ತಿದ್ದೆವು. ಆದರೆ ಹಿಂದಿ, ಇಂಗ್ಲಿಷ್​ ಬಾರದ ಅಲ್ಲಿಯವರಿಗೆ ಓದಲಾಗುತ್ತಿರಲಿಲ್ಲ. ಹೊಸ ಉಪಾಯವಾಗಿ ಕಿಟ್​ ಮಾರಾಟಕ್ಕೆ ಬೇಕಾದ ಡೆಲಾಗ್​ಗಳಾದ "ಮ್ಯಾಜಿಕ್​ ಮಾಡಲಾಗದಿದ್ದಲ್ಲಿ ಪೂರ್ತಿ ಹಣ ವಾಪಾಸ್ಸು. ಮೂರು ವರ್ಷದ ಮೇಲಿನ ಯಾವುದೇ ಮಕ್ಕಳು ಮಾಡಬಹುದು' ಎಂದು ಅರೇಬಿಕ್​ ಭಾಷೆಗೆ ಭಾಷಾಂತರ ಮಾಡಿಸಿ ಎಲ್ಲರೂ ಉರು ಹೊಡೆದೆವು. "ಐವದ್​ ಇಕ್​ದರ್​... ಬನಾತಿ ಪುಲಿಸ ಕುಮ್​' ಎಂದು ಹೇಳುತ್ತ ಗಿರಾಕಿಗಳನ್ನು ಆಕರ್ಷಿಸತೊಡಗಿದೆವು. ಈ ಉಪಾಯ ಲಿಸಿತು. ಹೆಚ್ಚು ಮಕ್ಕಳಿರುವ ಅರಬ್ಬಿಗಳು ಒಂದೊಂದು ಮಗುವಿಗೂ ಒಂದೊಂದು ಕಿಟ್​ ಕೊಡಿಸುತ್ತಿದ್ದರು. ಪ್ರತಿಯೊಬ್ಬರು ಹತ್ತಿಪ್ಪತ್ತು ಕಿಟ್​ಗಳನ್ನಾದರೂ ಕೊಳ್ಳುತ್ತಿದ್ದರು. ನಮ್ಮಲ್ಲಾಗಿದ್ದರೆ ಒಂದು ಕಿಟ್​ ಕೊಡಿಸಿ ಎಲ್ಲ ಮಕ್ಕಳು ಹಂಚಿಕೊಂಡು ಆಡಿ ಅನ್ನುತ್ತಿದ್ದರು.

ಗಿರಾಕಿಯೊಬ್ಬ, "ಶೂ ಅದಾ, ಶೂ ಅದಾ' ಅಂತ ಕೇಳುತ್ತಿದ್ದ. ನಮ್ಮವನೊಬ್ಬ "ಮಾಫಿ, ಮಾಫಿ' (ಅಂದರೆ "ಇಲ್ಲ' ಎಂದು ಅರ್ಥ) ಎಂದು ಹೇಳಿ ಅವನನ್ನು ಸಾಗಹಾಕಿದ. ನಾನು "ಯಾಕೆ ಇಲ್ಲ ಎಂದೆ?' ಎಂದು ಕೇಳಿದ್ದಕ್ಕೆ& "ಅವನಿಗೆ ಕಣ್ಣು ಕಾಣುವುದಿಲ್ಲವೋ, ಶೂ ಇದೆಯಾ, ಅಂತ ಕೇಳುತ್ತಾನೆ, ನಾವೇನು ಚಪ್ಪಲಿ ಅಂಗಡಿ ಇಟ್ಟಿದ್ದೇವೋ? ಅದಕ್ಕೇ "ಇಲ್ಲ, ಇಲ್ಲ' ಎಂದು ಹೇಳಿ ಕಳಿಸಿಬಿಟ್ಟೆ' ಅಂತ ಅಂದ! ಅರಬ್ಬಿಯಲ್ಲಿ "ಶೂ ಅದಾ' ಅಂದರೆ "ತೋರಿಸಿ' ಎಂದರ್ಥ. ಅದರ ಅರ್ಥ ವಿವರಿಸಿದ ನಂತರ ಸರಿಹೋದ.

ಇನ್ನೊಬ್ಬ ಗಿರಾಕಿ ಬಂದ. ನಮ್ಮ ಹುಡುಗ ಯಥಾಪ್ರಕಾರ ಪ್ರವರ ಒಪ್ಪಿಸಿದ. ಇದನ್ನು ಕೇಳಿದ ಗಿರಾಕಿ ಏನೇನೋ ಕೇಳುತ್ತಿದ್ದ. ಈತ "ಐವಾ, ಐವಾ' ಅಂತಿದ್ದ ("ಐವಾ' ಎಂದರೆ ಹೌದು ಎಂದರ್ಥ). ಗಿರಾಕಿ ಉರಿಮುಸುಡು ಮಾಡಿಕೊಂಡು ಹೊರಟೇಹೋದ. ನನಗೆ ನಗಬೇಕೋ, ತಲೆ ಚಚ್ಚಿಕೊಳ್ಳಬೇಕೋ ಗೊತ್ತಾಗಲಿಲ್ಲ. ಗಿರಾಕಿ ಹೇಳಿದ್ದು, "ನೀವು ಕೆಲಸಕ್ಕೆ ಬಾರದ್ದನ್ನು ತಂದು ನಮ್ಮ ಮಕ್ಕಳ ತಲೆಗೆ ಕಟ್ಟಲು ಪ್ರಯತ್ನಿಸ್ತೀರಾ' ಅಂತ. ಬಹುಶ@ ಆತ ಹೊಗಳುತ್ತಿದ್ದಿರಬೇಕೆಂದು ಅಂದುಕೊಂಡ ನಮ್ಮ ಹುಡುಗ ಎಲ್ಲಕ್ಕೂ "ಹೌದು, ಹೌದು' ಅಂತ ಗೋಣು ಆಡಿಸಿದ್ದ!

ಇನ್ನೊಬ್ಬಾಕೆ, ಸುರಸುಂದರಿ. ನಮ್ಮ ಹುಡುಗನ ಹತ್ತಿರ ಏನೋ ಲೊಚಗುಟ್ಟುತ್ತಿದ್ದಳು. ಬಳಿಯಲ್ಲಿದ್ದ ಕೆಲವು ಯುವಕರು ಕುತೂಹಲದಿಂದ ಆ ಕಡೆಗೇ ಕದ್ದು ಕಿವಿಕೊಡುತ್ತಿದ್ದರು. ಆದರೆ ಪ್ರತಿಯೊಂದು ಮಾತಿಗೂ ನಮ್ಮ ಹುಡುಗ "ಮಾಫಿ, ಮಾಫಿ' ಎನ್ನುತ್ತಿದ್ದ. ಕಡೆಗೆ ಹುಡುಗಿ ಹ್ಯಾಪ್​ ಮೋರೆ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಳು. ವಿಷಯ ಗಂಭೀರವಿರಬಹುದೆಂದೆಣಿಸಿದ ನಾನು ಪಕ್ಕದವರನ್ನು ವಿಚಾರಿಸಿದೆ. ಅಲ್ಲಿ ನಡೆದದ್ದಿಷ್ಟೇ. ನಮ್ಮವನ ಸ್ಫುರದ್ರೂಪಕ್ಕೆ ಮಾರುಹೋದ ಆ ಯುವತಿ ಆತ ಉರು ಹೊಡೆದ ಅರಬ್ಬೀ ಭಾಷೆ ಕೇಳಿ ಆ ಹುಡುಗ ಅರಬ್ಬಿನೇ ಇರಬಹುದೆಂದೆಣಿಸಿ ಲೊಚಗುಟ್ಟುತ್ತ ಲೆನ್​ ಹೊಡೆಯುತ್ತಿದ್ದಳು. ಆದರೆ ಭಾಷೆ ಬಾರದಿದ್ದ ನಮ್ಮ ಹುಡುಗ ಈ ಹಿಂದಿನ ಕಹಿಟನೆಯನ್ನೇ ನೆನಪಿಟ್ಟುಕೊಂಡು ಎಲ್ಲದಕ್ಕೂ "ನೋ, ನೋ' ಅಂದಿದ್ದ! (ಈಗಲೂ ಒಮ್ಮೊಮ್ಮೆ ತಮಾಷೆಗಂತ ಇದನ್ನು ನೆನಪಿಸಿದರೆ, "ಭಾಷೆ ಬರುತ್ತಿದ್ದರೆ?' ಅಂತ ತೀರಾ ಬೇಸರ ಪಟ್ಟುಕೊಳ್ಳುತ್ತಾನೆ, ಪಾಪ!)

ಏನೇ ಇರಲಿ, ನಮ್ಮ ಕಿಟ್​ಗಳು ಇನ್ನಿಲ್ಲದಂತೆ ಬಿಕರಿಯಾದವು. ತದನಂತರ ಓಂ ಗಣೇಶ್​ 35 ದೇಶಗಳಲ್ಲಿ ಭರ್ಜರಿ ವ್ಯಾಪಾರ ಮಾಡಿ ಲಾಂತರ ರೂಪಾಯಿ ಸಂಪಾದಿಸಿದ. ಈಗ ನಿವತ್ತನಾಗಿ ಉಪು$್ಪಂದದಲ್ಲಿ ಭಾರೀ ಮನೆ ಕಟ್ಟಿಸಿ ಸುಖ ಸಂಸಾರ ನಡೆಸುತ್ತಿದ್ದಾನೆ. ಪ್ರಾರಂಭದಲ್ಲಿ ನಾನು ಕೊಟ್ಟ ಆಶ್ವಾಸನೆ ನಂಬದೆ, ಕಷ್ಟ ಪಡದೇ ಇದ್ದಿದ್ದರೆ ಇಂದು ಕಥೆಯೇ ಬೇರೆ ಆಗಿರುತ್ತಿತ್ತು. ನನ್ನ ತಂಡದಲ್ಲಿದ್ದವರೆಲ್ಲರೂ ಈಗ ಸ್ವತಂತ್ರರಾಗಿ ನೆಮ್ಮದಿಯಿಂದಿದ್ದಾರೆ. ನನ್ನ ಮಂತ್ರಗಳಾದ "ಡೋಂಟ್​ ಕ್ವಿಟ್​', ಸತತ ಪ್ರಯತ್ನ, ಸೋಲನ್ನು ಒಪ್ಪಿಕೊಳ್ಳದ ಮನೋಭಾವ, ಹಾರ್ಡ್​ ವರ್ಕ್​, ಪ್ರಾಮಾಣಿಕತೆ, ಯಶಸ್ಸಿನತ್ತ ಮುನ್ನಡೆಸುತ್ತದೆ.

ಮುಗಿಸುವ ಮುನ್ನ, ದುಬೆನಲ್ಲಿ ನಡೆದ ಇನ್ನೂ ಕೆಲವು ತಮಾಷೆಯ ಟನೆಗಳನ್ನು ವಿವರಿಸುತ್ತೇನೆ. ನಮ್ಮಿಂದ ತಪು$್ಪಗಳೇನಾದರೂ ಆದಲ್ಲಿ "ಸಾರಿ' ಅನ್ನುತ್ತಿದ್ದೆವು. ಅದಕ್ಕೆ ಅರಬಿಗಳು "ಮಾಫಿ ಮುಷ್ಕಿಲ್​, ಮಾಫಿ ಮುಷ್ಕಿಲ್​' ಅಂತ ಅನ್ನುತ್ತಿದ್ದರು. ಹಿಂದಿಯಲ್ಲಿ ಮುಷ್ಕಿಲ್​ ಅಂದ್ರೆ ಅಸಾಧ್ಯ ಎಂದರ್ಥ ಮಾಡಿಕೊಂಡ ನಾವು ನಮ್ಮ ಕತೆ ಮುಗಿಯಿತು ಅಂದುಕೊಳ್ಳುತ್ತಿದ್ದೆವು. ಅಲ್ಲಿಯ ಕಾನೂನು ಬಹಳ ಬಿಗಿ. ರಸ್ತೆ ಮೇಲೆ ಉಗುಳಿದರೂ ಚಾಟಿ ಏಟು ತಿನ್ನಬೇಕಾಗಿತ್ತು. ಅವರ "ಮಾಫಿ ಮುಷ್ಕಿಲ್​' ಅಂದರೆ "ನೋ ಪ್ರಾಬ್ಲೆಮ್​' ಎನ್ನುವುದು ನಂತರ ತಿಳಿದು ನಿರಾಳರಾದೆವು. ಕನ್ನಡ&ಅರೇಬಿಕ್​ ಭಾಷೆಯ ಸಮ್ಮಿಶ್ರಣದ ಒಂದು ಮಾತನ್ನು ಆಗಾಗ ಹೇಳುತ್ತಿರುತ್ತೇನೆ. ಅದೇನೆಂದರೆ, "ದುಬೆಯಲ್ಲಿ ಲಾಭ ಎಲ್ಲ ಮಾರಿ ಹೋಗಿ ುಲುಸ್​ ಆಯ್ತು.' ಇದರರ್ಥ& ಲಾಭ ಹೋಗಿ ಲಾಸ್​ ಆಯಿತು ಅಂತಲ್ಲ, ಲಾಭ ಅಂದ್ರೆ ಟ್ರಿಕ್ಸ್​, ುಲುಸ್​ ಅಂದ್ರೆ ದುಡ್ಡು. ಮುಂದಿನ ಸಂಚಿಕೆಯಲ್ಲಿ ನಾವು ಲಾಕ್​ಅಪ್​ನಲ್ಲಿ ಕಳೆದ ಟನೆಯನ್ನು ವಿವರಿಸುತ್ತೇನೆ.

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)