ಅಂಕಣ

ರೈತೋದ್ಯಮಿಯಾಗಿ ತಿಂಗಳಿಗೆ 15 ಲಕ್ಷ ರೂಪಾಯಿ ಗಳಿಕೆ!

ಕೃಷಿಯನ್ನು ನಂಬಿ ಬದುಕಲು ಸಾಧ್ಯವಿಲ್ಲ. ಆದಾಯಕ್ಕಿಂತ ಖರ್ಚೇ ಹೆಚ್ಚು. ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಸಿಗಲ್ಲ. ಹೀಗೆ ರೈತನಾಗುವುದೇ ಶಾಪ ಎಂಬಂತೆ ಅನೇಕರು ಮಾತನಾಡುತ್ತಿರುತ್ತಾರೆ. ಆದರೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನೆಲಮನೆ ಗ್ರಾಮದ ರೈತರೊಬ್ಬರು ಕೃಷಿ ಜತೆಗೆ ಉಪ ಉದ್ಯಮಗಳನ್ನೂ ಕಟ್ಟಿಕೊಂಡು ತಿಂಗಳಿಗೆ 15 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಈ ರೈತೋದ್ಯಮಿ 7 ಎಕರೆ ಭೂಮಿಯಲ್ಲಿ ವಿವಿಧ ಕೃಷಿ ಮಾಡುತ್ತಿರುವುದಲ್ಲದೆ, ಹೈನುಗಾರಿಕೆ, ಸಾವಯವ ಬೆಲ್ಲ ಉತ್ಪಾದನೆ ಮತ್ತು ಗಾಣದ ಎಣ್ಣೆ ತಯಾರಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ. ವಿಶೇಷ ಅಂದ್ರೆ, ಈ ರೈತ ತಾನು ಬೆಳೆದ ಬೆಳೆಗೆ ಮತ್ತು ತಯಾರಿಸಿದ ಉತ್ಪನ್ನಗಳಿಗೆ ತಾನೇ ಬೆಲೆ ನಿಗದಿ ಮಾಡಿ ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಬನ್ನಿ, ಈ ರೈತೋದ್ಯಮಿಯ ಯಶೋಗಾಥೆ ಬಗ್ಗೆ ಮತ್ತಷ್ಟು ತಿಳಿಯೋಣ.

ಗಾಣದ ಎಣ್ಣೆಯಿಂದ 8-9 ಲಕ್ಷ ರೂ.: ತೋಟದಲ್ಲೇ 5 ಗಾಣದ ಎಣ್ಣೆ ಘಟಕಗಳನ್ನು ನಿರ್ಮಾಣ ಮಾಡಿರುವ ರೈತ ತಿಂಗಳಿಗೆ ಸುಮಾರು 3,500 ಲೀಟರ್ ಗಾಣದ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಕುಸಿಬೆ ಎಣ್ಣೆ, ಹರಳೆಣೆ, ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಉತ್ಪಾದನೆ ಮಾಡುತ್ತಿರುವ ಇವರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಸ್ ರೂಟ್ಸ್ ಆರ್ಗ್ಯಾನಿಕ್ಸ್ ಎನ್ನುವ ವೆಬ್​ಸೈಟ್ ನಿರ್ಮಾಣ ಮಾಡಿ ಅಲ್ಲಿಂದ ಆನ್​ಲೈನ್ ಖರೀದಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಲೀಟರ್ ಎಣ್ಣೆಯನ್ನು ಸುಮಾರು 450 ರೂ.ಗಳಿಂದ 650 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಗಾಣದ ಎಣ್ಣೆಯಿಂದಲೇ ಸುಮಾರು 8ರಿಂದ 9 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಎತ್ತಿನ ಗಾಣ ಅಳವಡಿಸಿಕೊಂಡಿರುವುದರಿಂದ ಗ್ರಾಹಕರು ಇವರ ಉತ್ಪನ್ನಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಬೆಲ್ಲದಿಂದ 3 ಲಕ್ಷ ರೂ. ಆದಾಯ: ಎಲ್ಲವೂ ಕಲಬೆರಕೆಯಾಗುತ್ತಿರುವ ಈಗಿನ ದಿನಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಉತ್ತಮ ಉತ್ಪನ್ನಗಳನ್ನು ಜನರಿಗೆ ಕೊಟ್ಟರೆ ಮಾರುಕಟ್ಟೆ ಕಂಡುಕೊಳ್ಳುವುದು ಕಷ್ಟವಲ್ಲ ಎನ್ನುವುದನ್ನು ಮನಗಂಡ ರೈತ ಸಾವಯವ ಬೆಲ್ಲ ತಯಾರಿಕೆಗೆ ಮುಂದಾದರು. ಭಾರತೀಯ ವಿಜ್ಞಾನ ಸಂಸ್ಥೆ ( ಐಐಎಸ್​ಸಿ) ವಿನ್ಯಾಸಗೊಳಿಸಿರುವ ಆಸ್ಟ್ರಾ ಒಲೆಯನ್ನು ಬಳಸಿರುವ ಇವರು, ಕಡಿಮೆ ಸೌದೆ ಬಳಸಿ ಹೆಚ್ಚು ಬೆಲ್ಲ ಉತ್ಪಾದಿಸುತ್ತಿದ್ದಾರೆ. ಯಾವುದೇ ರಾಸಾಯನಿಕ ಇಲ್ಲದ ಈ ಬೆಲ್ಲಕ್ಕೆ ಮಂಡ್ಯ ಬೆಲ್ಲ ಎಂದು ಬ್ರಾ್ಯಂಡ್ ಮಾಡಿದ್ದಾರೆ. ತಿಂಗಳಿಗೆ ಸುಮಾರು 3 ಟನ್ ಬೆಲ್ಲ ಉತ್ಪಾದಿಸಿ ಅವರದೇ ಗ್ರಾಸ್ ರೂಟ್ಸ್ ವೆಬ್​ಸೈಟ್ ಮೂಲಕ ಮಾರಾಟ ಮಾಡುತ್ತಾ 3 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ ಕಬ್ಬನ್ನೇ ಬೆಲ್ಲ ತಯಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ.

ಹೈನೋದ್ಯಮದಿಂದ 2.5 ಲಕ್ಷ ರೂ. ಗಳಿಕೆ!: ಗಾಣದ ಎಣ್ಣೆ ಘಟಕ ಇರುವ ಕಾರಣ ಹಸುಗಳಿಗೆ ಉತ್ತಮ ಹಿಂಡಿ ದೊರೆಯುತ್ತಿತ್ತು. ಇದನ್ನು ಮನಗಂಡು 15 ಹಸುಗಳನ್ನು ಸಾಕಿರುವ ರೈತ ಪ್ರತಿ ದಿನ 125 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ವಿಶೇಷ ಅಂದ್ರೆ, ಇವರು ಹಾಲನ್ನು ಮೈಸೂರು ಮತ್ತು ಮಂಡ್ಯ ಗ್ರಾಹಕರಿಗೆ ನೇರವಾಗಿ ತಲುಪಿಸುತ್ತಿದ್ದಾರೆ. ಸಾವಯವ ಹಾಲಿಗೆ ಬೇಡಿಕೆ ಇರುವ ಕಾರಣ ಪ್ರತಿ ಲೀಟರ್​ಗೆ 70 ರೂ. ಸಿಗುತ್ತಿದೆ. ಇದರಿಂದಲೇ ಇವರಿಗೆ ತಿಂಗಳಿಗೆ 2.5 ಲಕ್ಷ ರೂ. ಆದಾಯವಿದೆ. ಮುಂದಿನ ದಿನಗಳಲ್ಲಿ ಹೈನೋದ್ಯಮವನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಿದ್ದಾರೆ.

ಹಲವು ಪ್ರಾಡಕ್ಟ್ಗಳ ಮಾರಾಟದಿಂದ 2 ಲಕ್ಷ ರೂ. ಆದಾಯ: ಏಳು ಎಕರೆ ಜಮೀನಿನಲ್ಲಿ ಈ ರೈತ ಭತ್ತ, ಕಬ್ಬು ಮತ್ತು ಎಣ್ಣೆ ಕಾಳುಗಳನ್ನು ಬೆಳೆಯುತ್ತಾರೆ. ಕಬ್ಬನ್ನು ಬೆಲ್ಲ ತಯಾರಿಕೆಗೆ ಬಳಸಿದರೆ, ಇತರ ಎಣ್ಣೆ ಕಾಳುಗಳನ್ನು ಎಣ್ಣೆ ಉತ್ಪಾದನೆಗೆ ಬಳಸುತ್ತಿದ್ದಾರೆ. ಇನ್ನು ಭತ್ತವನ್ನು ಮಿಲ್ ಮಾಡಿಸಿ ಅಕ್ಕಿ ಮಾರಾಟ ಮಾಡುತ್ತಾರೆ. ಹೀಗೆ ಹಲವು ಉತ್ಪನ್ನಗಳ ತಯಾರಿ ಮತ್ತು ಮಾರಾಟ ಮಾಡುವುದರಿಂದ ಇವರಿಗೆ ಇದರಿಂದಲೂ ತಿಂಗಳಿಗೆ ಸುಮಾರು 2 ಲಕ್ಷ ರೂ. ಆದಾಯವಿದೆ. ಮುಂದಿನ ದಿನಗಳಲ್ಲಿ ಸುಮಾರು 50 ಪ್ರಾಡಕ್ಟ್ಗಳನ್ನು ರೂಪಿಸುವ ಉದ್ದೇಶ ಹೊಂದಿರುವ ಈ ಯುವ ರೈತ, ಸಾವಯವ ಉತ್ಪನ್ನಗಳ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಈ ಸಾಧಕ ರೈತನಿಂದ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನೆಲೆಮನೆ ಗ್ರಾಮದ ಸಾಧಕ ರೈತರ ಯಶೋಗಾಥೆಯನ್ನು ಕೋರ್ಸ್ ಆಗಿ ರೂಪಿಸಲಾಗಿದೆ. ಇವರು ಹೇಗೆ ಬೆಲ್ಲ, ಗಾಣದ ಎಣ್ಣೆ ತಯಾರಿಕೆ, ಹೈನೋದ್ಯಮ ಮತ್ತು ಕೃಷಿಯಲ್ಲಿ ಯಶಸ್ಸು ಕಂಡರು ಎನ್ನುವ ಬಗ್ಗೆ ಕೋರ್ಸ್​ನಲ್ಲಿ ಸಂಪೂರ್ಣ ಮಾಹಿತಿ ಇದೆ. ಇಷ್ಟೇ ಅಲ್ಲ, ನೀವು ಕೂಡ ಇವರಂತೆ ಸಾಧಕ ರೈತರಾಗಬೇಕಾದರೆ ಹೇಗೆ ಯೋಜನೆ ರೂಪಿಸಿಕೊಳ್ಳಬೇಕು? ಎನ್ನುವ ಬಗ್ಗೆಯೂ ಮಾರ್ಗದರ್ಶನವಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ನೀವು ಯಶಸ್ವಿ ಕೃಷಿಕರಾಗಲು ಕಲಿಕೆ ಶುರು ಮಾಡಿ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಗಾಣದ ಎಣ್ಣೆ ಘಟಕದ ಸಂಪೂರ್ಣ ಮಾಹಿತಿ
  • ಬೆಲ್ಲದ ಉತ್ಪಾದನೆ ಬಗ್ಗೆ ಸಾಧಕರ ವಿವರಣೆ
  • ಹೈನೋದ್ಯಮದ ಬಗ್ಗೆ ವಿಸõತ ಮಾಹಿತಿ
  • ಬೇಡಿಕೆ ಇರುವ ವಿವಿಧ ತಳಿಯ ಅಕ್ಕಿ
  • ಖರ್ಚು ವೆಚ್ಚ ಮತ್ತು ಲಾಭದ ಲೆಕ್ಕಾಚಾರ
  • ಮಾರ್ಕೆಟಿಂಗ್ ಮತ್ತು ಮಾರಾಟ
  • ಸವಾಲುಗಳು
  • ಸಾಧಕರಿಂದ ಸಕ್ಸಸ್ ಟಿಪ್ಸ್