ಅಂಕಣ

ನಾನ್​ವೆಜ್ ರೆಸ್ಟೋರೆಂಟ್, ನಿಮ್ಮದೇ ಬ್ರ್ಯಾಂಡ್​..

ನೂರು ರೂಪಾಯಿ ವ್ಯಾಪಾರವಾದರೆ 18 ರೂ. ನಿವ್ವಳ ಲಾಭ ಬರುವ ಉದ್ಯಮ ಏನಾದರು ಇದೆ ಅಂದ್ರೆ ಅದು ನಾನ್​ವೆಜ್ ರೆಸ್ಟೋರೆಂಟ್ ಉದ್ಯಮ ಮಾತ್ರ. ಹೂಡಿದ 100 ರೂಪಾಯಿಯಲ್ಲಿ ಕಾರ್ವಿುಕರ ವೆಚ್ಚ, ಪದಾರ್ಥಗಳ ವೆಚ್ಚ, ನಿರ್ವಹಣೆ ವೆಚ್ಚ ಎಲ್ಲ ಸೇರಿ 82 ರೂ. ಖರ್ಚು ಕಳೆದರೆ ಉಳಿದ 18 ರೂ. ಸಂಪೂರ್ಣ ಲಾಭ. ಅಂದ್ರೆ ಒಂದು ಲಕ್ಷಕ್ಕೆ 18 ಸಾವಿರ ರೂ. ಲಾಭ ಬಂದ್ರೆ, 1 ಕೋಟಿ ರೂ. ವ್ಯಾಪಾರಕ್ಕೆ 18 ಲಕ್ಷ ರೂ. ಲಾಭ ಬಂದೇ ಬರುತ್ತದೆ. ಜತೆಗೆ 3 ವರ್ಷದಲ್ಲಿಯೇ ಹೂಡಿದ ಬಂಡವಾಳ ಹಿಂಪಡೆಯಬಹುದಾದಷ್ಟು ಬಿಸಿನೆಸ್ ನಾನ್​ವೆಜ್ ರೆಸ್ಟೋರೆಂಟ್ ಉದ್ಯಮದಲ್ಲಿದೆ. ಅಂದಹಾಗೆ 2018ರ ಒಂದು ಸರ್ವೆ ಪ್ರಕಾರ ಜಾಗತಿಕ ಮಟ್ಟದಲ್ಲಿ ಶೇ.91 ಜನ ಮಾಂಸಾಹಾರ ಸೇವನೆ ಮಾಡ್ತಿದ್ದಾರಂತೆ! ಹಾಗೆಯೇ, 2015-16ರ ಸಾಲಿನಲ್ಲಿ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ನಡೆಸಿದ ಅಧ್ಯಯನದ ಪ್ರಕಾರ ಶೇ.43 ಭಾರತೀಯ ಮಹಿಳೆಯರು ಮತ್ತು ಶೇ. 46 ಭಾರತೀಯ ಪುರುಷರು ಪ್ರತಿವಾರ ಚಿಕನ್, ಮೀನು, ಮಟನ್ ಸೇವನೆ ಮಾಡ್ತಿದ್ದಾರಂತೆ! ಅಂದ್ರೆ, 10ರಲ್ಲಿ ಮೂರು ಜನ ನಾನ್​ವೆಜ್ ಸೇವಿಸುತ್ತಿಲ್ಲ, ಮಿಕ್ಕ 7 ಜನ ನಾನ್​ವೆಜ್ ಪ್ರಿಯರಾಗಿದ್ದಾರೆ. ಹೀಗಿದ್ದ ಮೇಲೆ ಅದ್ಭುತ ಟೇಸ್ಟರ್ ಸೃಷ್ಟಿಸೋ ರೆಸ್ಟೋರೆಂಟ್​ಗಳಿಗೆ ಬಿಸಿನೆಸ್ ಬರದೆ ಇರಲು ಸಾಧ್ಯವೇ? ಇಂದಿನ ಕಾಲಘಟ್ಟದಲ್ಲಿ ಕೆಲಸಕ್ಕೆ ಹೋಗುವ ಪೇರೆಂಟ್ಸ್​ಗಳೇ ಹೆಚ್ಚಿರುವುದರಿಂದ ಬಿಡುವಿನ ಅಭಾವದ ಕಾರಣ ರೆಸ್ಟೋರೆಂಟ್ ಅವಲಂಭನೆ ಹೆಚ್ಚಾಗಿರೋದು ಈ ಬಿಸಿನೆಸ್ ಗೆಲುವಿಗೆ ಕಾರಣ. ಜನ, ಹಸಿವು ಮತ್ತು ಅನಿವಾರ್ಯಕ್ಕಾಗಷ್ಟೇ ಅಲ್ಲದೆ ಸಮಯಾವಕಾಶ ಮಾಡಿಕೊಂಡು ಸಕುಟುಂಬ, ಸ್ನೇಹ-ಬಳಗದೊಂದಿಗೆ ಇಲ್ಲಿಗೆ ಬಂದು ಕಾಲ ಕಳೆದು ಖಾದ್ಯ ಸವಿಯುತ್ತಾರೆ. ಹೀಗಾಗಿಯೇ, ಎಷ್ಟೋ ನಾನ್​ವೆಜ್ ರೆಸ್ಟೋರೆಂಟ್​ಗಳು ಗೆಲುವಿನ ಕುದುರೆ ಹತ್ತಿ ನಾಗಾಲೋಟದಲ್ಲಿವೆ. ಗಲ್ಲಿಗೊಂದು ಹೊಟೇಲ್ ಇದ್ದರೂ ಬೇಯಿಸಿದ ಬಿರಿಯಾನಿ ಖಾಲಿಯಾಗುತ್ತೆ ಅಂದಮೇಲೆ ಅಚ್ಚುಕಟ್ಟಾದ ಥೀಮ್ ಗ್ರಾಹಕಾಕರ್ಷಕ ವಿನ್ಯಾಸ ಇರುವ ರೆಸ್ಟೋರೆಂಟ್​ಗಳು ಯಾವ ಯಶಸ್ಸಿನ ಹಂತದಲ್ಲಿರಬೇಡ ಊಹಿಸಿ ನೋಡಿ.

ಪ್ರತಿಯೊಬ್ಬರು ಹೋಟೆಲ್ ಉದ್ಯಮಿ ಆಗಲು ಸಾಧ್ಯವೇ?: 20 ಲಕ್ಷ ರೂ.ನಿಂದ 50 ಕೋಟಿ ರೂ. ವರೆಗೆ ಅವರವರ ಅನುಕೂಲಕ್ಕೆ ತಕ್ಕ ಹಾಗೆ ರೆಸ್ಟೋರೆಂಟ್ ಮಾಡಿದವರಿದ್ದಾರೆ. ಹೂಡಿಕೆ ಮಾಡಲು ಶಕ್ತರಿರುವವರು ಬಂಡವಾಳ ಹೂಡಬಹುದೇ ಹೊರತು ಯಶಸ್ವಿ ಹೋಟೆಲ್ ಉದ್ಯಮಿಯಾಗುತ್ತಾರೆ ಅನ್ನೋದು ತಪ್ಪು ಕಲ್ಪನೆ. ಬೇರೆ ಉದ್ಯಮದಂತೆ ಈ ಉದ್ಯಮ ನಡೆಸಲು ಸಾಧ್ಯವಿಲ್ಲ. ಇಲ್ಲಿ ನಿಮ್ಮನ್ನ ನೀವು ಪೂ›ವ್ ಮಾಡಿಕೊಳ್ಳಲೇಬೇಕಾಗುತ್ತದೆ. ಗ್ರಾಹಕ ಯಾಕೆ ನಿಮ್ಮ ಹೋಟೆಲ್​ಗೆ ಬರಬೇಕು ಅನ್ನೋ ಪ್ರಶ್ನೆ ಬಂದರೆ ಅದಕ್ಕೆ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಮರ್ಪಕ ಉತ್ತರ ನಿಮ್ಮಲ್ಲಿರಬೇಕು. ಆ ಚಾಕಚಕ್ಯತೆ, ನಿಖರತೆ ಉದ್ಯಮ ಕಟ್ಟುವವರಿಗೆ ಇದ್ದರೆ ಗೆಲ್ಲಲು ಸಾಧ್ಯವಿದೆ. ಕೋಟ್ಯಂತರ ರೂ. ಸುರಿದರೂ ಹೋಟೆಲ್ ಮುಚ್ಚಿದ ಎಷ್ಟೋ ಉದ್ಯಮಿಗಳು ನಮ್ಮಲ್ಲಿದ್ದಾರೆ. ಸಾಲ-ಸೋಲ ಮಾಡಿ ಕಷ್ಟಪಟ್ಟು ಕಟ್ಟಿದ ಉದ್ಯಮಿ ಹತ್ತಾರು ಬ್ರಾ್ಯಂಚ್​ಗಳನ್ನು ತೆರೆದ ಸಾಕಷ್ಟು ನಿದರ್ಶನಗಳಿವೆ. ಇದಕ್ಕೆ ಕಾರಣ ಅನುಭವದ ಕೊರತೆಯೇ ಹೊರತು ಮತ್ತ್ಯಾವುದೂ ಅಲ್ಲ. ಯಾವ ಮಾಲೀಕ ಸ್ವಲ್ಪ ಕಾಲ ಬೇರೊಂದು ರೆಸ್ಟೋರೆಂಟ್​ನಲ್ಲಿ ಸಾಮಾನ್ಯ ಕೆಲಸಗಾರನಾಗಿರಲು ಒಪ್ಪುತ್ತಾನೋ ಅಂತಹ ವ್ಯಕ್ತಿ ದೊಡ್ಡ ಉದ್ಯಮಿಯಾಗಿ ಹೊರಹೊಮ್ಮುವಲ್ಲಿ ಎರಡು ಮಾತಿಲ್ಲ. ಯಾರಿಗೆ ಕಮರಿದ ಕನಸನ್ನು ನನಸು ಮಾಡುವ ಶಕ್ತಿ ಇರುತ್ತೋ ಅಂತಹವರು ಈ ಉದ್ಯಮ ಕಟ್ಟಲು ಸೂಕ್ತರು. ಉದಾಹರಣೆಗೆ ಸುದ್ದಿ ನಿರೂಪಕರಾಗಿದ್ದ ರಾಘವೇಂದ್ರ ಕಾಂಚನ್​ಗೆ ಹೋಟೆಲಿಯರ್ ಆಗುವ ಕನಸಿತ್ತು. ಅಲ್ಲದೆ ಪ್ರೀತಿ ಇತ್ತು. ಅದಕ್ಕೆ ತಕ್ಕಂತೆ ಒಡನಾಟ ಕೂಡ ಹೋಟೆಲ್ ಉದ್ಯಮಿಗಳ ಜತೆಗಿದ್ದುದರಿಂದ ಅನುಭವವೂ ಇತ್ತು. ಹೀಗಾಗಿ ಅವರು ಸಿಂಧೂರ ಗಾರ್ಡೆನಿಯ ಅನ್ನೋ ರೆಸ್ಟೋರೆಂಟ್ ಅನ್ನು ಯಶಸ್ವಿಯಾಗಿ ಕಟ್ಟಲು ಸಾಧ್ಯವಾಗಿದೆ.

ಬ್ರ್ಯಾಂಡ್​ ಬಿಲ್ಡ್ ಮಾಡೋದು ಹೇಗೆ?: ನೀವು ಒಬೆರಾಯ್ ಹೆಸರು ಕೇಳಿರುತ್ತೀರಿ. ಹಳ್ಳಿ ಹಳ್ಳಿಯಲ್ಲೂ ಒಬೆರಾಯನ ಕಾಲದ ಕಥೆ ಅನ್ನೋ ಮಾತು ಈಗಲು ಅಡಿಗಡಿಗೆ ಕೇಳಿಬರ್ತಿದೆ. ಅಂದರೆ, ಶತಮಾನದ ಅಂಚಲ್ಲಿದ್ದರೂ ಹೆಸರು ಮಾತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಲ್ಲಿಗೆ, ಒಂದು ಬ್ರಾ್ಯಂಡ್​ನ ಮಹತ್ವ ಊಹಿಸಿ ನೋಡಿ. ನಾನ್​ವೆಜ್ ರೆಸ್ಟೋರೆಂಟ್​ಗಳು ಸಾಕಷ್ಟಿದ್ದರೂ ನೀವು ಕಟ್ಟೋ ಉದ್ಯಮ ಬ್ರಾ್ಯಂಡ್ ಆಗಿ ಬದಲಾದಲ್ಲಿ ಮಾತ್ರ ಗೆಲ್ಲುತ್ತೀರಿ ಮತ್ತು ನಿಮ್ಮತನ ಉಳಿಯುತ್ತೆ, ಉದ್ಯಮ ಬೆಳೆಯುತ್ತೆ. ಇವತ್ತು ದೊಡ್ಡ ದೊಡ್ಡ ಬ್ರಾ್ಯಂಡ್​ನ ಸಾಕಷ್ಟು ರೆಸ್ಟೋರೆಂಟ್​ಗಳಿವೆ. ಹಾಗಂತ ಅವುಗಳೆಲ್ಲ ಒಂದೇ ದಿನದಲ್ಲಿ ದೊಡ್ಡ ಬ್ರಾ್ಯಂಡ್​ಗಳಾಗಿ ಬದಲಾಗಿರೋದಲ್ಲ. ಬದಲಿಗೆ ಎಷ್ಟೋ ವರ್ಷಗಳ ಕಠಿಣ ಪರಿಶ್ರಮವಿದೆ. ಎಷ್ಟೋ ಕಷ್ಟದ ಕಥೆಗಳಿವೆ. ಆದರೆ ಇವತ್ತು ಯಾವ ಮೂಲೆಯಲ್ಲಿ ಆ ರೆಸ್ಟೋರೆಂಟ್ ಇದ್ದರೂ ಜನ ಅಲ್ಲಿಗೇ ಹುಡುಕಿಕೊಂಡು ಹೋಗುತ್ತಾರೆ. ಬ್ರಾ್ಯಂಡ್ ನೇಮ್ ಶಕ್ತಿನೇ ಅಂತಹದ್ದು. ಕರ್ನಾಟಕದ ಕಾಮತ್, ಕೇರಳದ ಎಂಪೈರ್, ತಮಿಳುನಾಡಿನ ಶರವಣ ಹೋಟೆಲ್ ಇದಕ್ಕೆ ಅತ್ಯುತ್ತಮ ಉದಾಹರಣೆ. ಇವುಗಳೆಲ್ಲ ಸಾಮಾನ್ಯವಾಗಿ ಶುರುವಾಗಿ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿವೆ.

ಫೈನಾನ್ಸಿಯಲ್ ಫ್ರೀಡಂ ಆ್ಯಪ್​​ನಲ್ಲಿ ನಾನ್​ವೆಜ್ ರೆಸ್ಟೋರೆಂಟ್ ಕೋರ್ಸ್: ನಾನ್​ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡಬೇಕು ಅನ್ನುವವರಿಗಾಗಿ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ ನಾನ್​ವೆಜ್ ರೆಸ್ಟೋರೆಂಟ್ ಕೋರ್ಸ್ ಅನಾವರಣ ಮಾಡಿದೆ. ಕುಂದಾಪುರದವರಾದರೂ ಬೆಂಗಳೂರಿನಲ್ಲಿ ತನ್ನದೇ ಬ್ರ್ಯಾಂಡ್ ಮತ್ತು ಟ್ರೆಂಡ್ ಕ್ರಿಯೇಟ್ ಮಾಡಿದ ಸಿಂಧೂರ ಗಾರ್ಡೆನಿಯ ರೆಸ್ಟೋರೆಂಟ್ ಮಾಲೀಕ ರಾಘವೇಂದ್ರ ಕಾಂಚನ್ ಈ ಕೋರ್ಸ್ ಮಾರ್ಗದರ್ಶಕರು.

ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ- 79754 65873 ಅಥವಾ 080-35322244

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ನಾನ್​ವೆಜ್ ರೆಸ್ಟೋರೆಂಟ್ ಬಿಸಿನೆಸ್?
  • ಬಂಡವಾಳ, ಪರವಾನಗಿ, ಮಾಲೀಕತ್ವ, ಸರ್ಕಾರದ ಸೌಲಭ್ಯ
  • ಥೀಮ್ ಮತ್ತು ಒಳಾಂಗಣ, ಹೊರಾಂಗಣ ವಿನ್ಯಾಸ
  • ಶೆಫ್, ನುರಿತ ಸಿಬ್ಬಂದಿ, ಸಲಕರಣೆ ಮತ್ತು ತಂತ್ರಜ್ಞಾನ
  • ಮೆನು, ದರ ನಿಗದಿ ಮತ್ತು ವೇಸ್ಟ್ ನಿರ್ವಹಣೆ
  • ಗ್ರಾಹಕಾಕರ್ಷಣೆ, ಆನ್​ಲೈನ್ ಮತ್ತು ಹೋಮ್ ಡೆಲಿವರಿ
  • ಅಕೌಂಟಿಂಗ್, ಖರ್ಚು ಮತ್ತು ಲಾಭ
  • ಸವಾಲು ಮತ್ತು ಸಾರಾಂಶ