ಅಂಕಣ

ಜನಮತ: ನೇಮಕಾತಿಗಳು ಪಾರದರ್ಶಕವಾಗಿ ನಡೆಯಲಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣದ ಒಳಸುಳಿಯ ಅನಾವರಣದೊಂದಿಗೆ, ಸರಣಿಯಾಗಿ ಒಂದೊಂದೇ ನೇಮಕಾತಿಗಳ ಹಗರಣಗಳು ಸಹ ಮುನ್ನೆಲೆಗೆ ಬರುತ್ತಿವೆ. ಸರ್ಕಾರಕ್ಕೆ ನಿಜವಾಗಿಯೂ ಈ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸಬೇಕೆಂಬ ಕಾಳಜಿ ಇದ್ದಲ್ಲಿ, ತಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

# ಈ ನೇಮಕಾತಿ ಹಗರಣದಲ್ಲಿ ಪಾಲುದಾರರಾಗಿರುವ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ನ್ಯಾಯಾಲಯದ ಅನುಮತಿ ಪಡೆದು, ಸುಳ್ಳು ಪತ್ತೆ ಪರೀೆ (ಪಾಲಿಗ್ರ್​ಾ) ಅಥವಾ ಮಂಪರು ಪರೀೆಗೆ ಒಳಪಡಿಸಬೇಕು. ಇದರಿಂದ, ಈ ಹಿಂದಿನ ಎಲ್ಲ ಪರೀೆಗಳಲ್ಲಿ ನಡೆದಿರುವ ಅಕ್ರಮಗಳು ಸಹ ಮುನ್ನೆಲೆಗೆ ಬರಬಹುದು.

# ಅಕ್ರಮ ಕಂಡುಬಂದಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ತಣವೇ ರದ್ದುಪಡಿಸಿ, ಯುಪಿಎಸ್​ಸಿ (ಕಠಿಣ ವ್ಯವಸ್ಥೆಯ ಆಲೈನ್​ ಅಥವಾ ಆನ್​ಲೈನ್​) ಮಾದರಿಯ ಪರೀಾ ಪದ್ಧತಿಯಲ್ಲಿ ಮರುಪರೀೆ ನಡೆಸಿದರೆ ಮಾತ್ರ ಭ್ರಷ್ಟವ್ಯವಸ್ಥೆಯಿಂದ ನೊಂದಿರುವ ಸರ್ಕಾರಿ ಕೆಲಸದ ಆಕಾಂಗಳಿಗೆ ಈ ವ್ಯವಸ್ಥೆ ಮೇಲೆ ಪುನ@ ನಂಬಿಕೆ ಟಿಸಿಲೊಡೆದೀತು. ಇಲ್ಲದಿದ್ದರೆ, 2011ರ 362 ಗೆಜೆಟೆಡ್​ ಪೊಬೆಷನರಿ ಅಧಿಕಾರಿಗಳ ನೇಮಕದಂತೆ, ಇಲ್ಲಿಯೂ ಅಕ್ರಮ&ಸಕ್ರಮ ಯೋಜನೆ ಜಾರಿಗೆ ಬಂದರೆ, ಸರ್ಕಾರಿ ನೇಮಕಾತಿಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಪದಗಳೇ ನಗೆಪಾಟಲಿಗೀಡಾದೀತು. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಸರ್ಕಾರಿ ನೇಮಕಾತಿಗಳು ಕೊಳ್ಳುವವರು ಮತ್ತು ಮಾರುವವರ ನಡುವಿನ ವ್ಯವಹಾರ ಅಲ್ಲ ಎಂದು ನಿರೂಪಿಸಬೇಕಾದ ಜವಾಬ್ದಾರಿ ಪ್ರಸ್ತುತ ಸರ್ಕಾರದ ಮೇಲಿದೆ. ಪರಿಶ್ರಮ ಪಟ್ಟು ಓದುತ್ತಿರುವವರ ನೋವನ್ನು ಆಳುವವರ್ಗ ಅವಮಾನಿಸಕೂಡದು. ಅಂತಿಮವಾಗಿ, ಒಂದನ್ನು ಅರ್ಥ ಮಾಡಿಕೊಳ್ಳಬೇಕು, ವಿಷ್ಣುವಿನ ತಾಳ್ಮೆ ಏನೋ ಇದೆ. ಆದರೆ, ನರಸಿಂಹನ ಕೋಪವನ್ನು ಮತಯಂತ್ರದಲ್ಲಿ ತೋರಿಸುವುದಕ್ಕೆ ಯುವಶಕ್ತಿಗೆ ಯಾರ ಪ್ರೇರಣೆಯೂ ಬೇಕಾಗಿಲ್ಲ.

| ಯತೀಶ್​ ಬಳ್ಕೂರ್​