ಲಂಡನ್ನಲ್ಲೀಗ ಬೆಳಕಿನ ಹಬ್ಬದ (ಲೈಟ್ ಫೆಸ್ಟಿವಲ್) ಸಂಭ್ರಮ. ಭಾರತದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲೆಡೆ ದೀಪಗಳು ಝುಗಮಗಿಸುವಂತೆ ಲಂಡನ್ನ ಬಹುತೇಕ ಬೀದಿಗಳಲ್ಲಿ ದೀಪಗಳ ಶೃಂಗಾರ ನಡೆಯುತ್ತದೆ.
ಆದರೆ ಅಲ್ಲಿಯ ವಿಶೇಷತೆ ಎಂದರೆ ಅವು ಬರಿಯ ದೀಪಗಳಲ್ಲ, ಬದಲಿಗೆ ಬೆಳಕಿನ ಮೂಲಕ ಅಚ್ಚರಿ ಎನಿಸುವ ವಿನ್ಯಾಸಗಳನ್ನು ಕಲಾವಿದರು ರೂಪಿಸುತ್ತಾರೆ. ಇದಕ್ಕಾಗಿ ವಿವಿಧ ದೇಶಗಳಲ್ಲಿ ಬೆಳಕಿನ ತಜ್ಞರನ್ನೂ ಕರೆಸಲಾಗುತ್ತದೆ. ಜಗತ್ತಿನ ವಿವಿಧೆಡೆಗಳಲ್ಲಿರುವ ಪ್ರಸಿದ್ಧ ಕಟ್ಟಡಗಳು, ಪ್ರಾಣಿ, ಪಕ್ಷಿಗಳು, ವಿಶೇಷ ವಸ್ತುಗಳು... ಹೀಗೆ ಕೇವಲ ಬೆಳಕನ್ನು ಉಪಯೋಗಿಸಿ ವಿವಿಧ ಆಕೃತಿಗಳನ್ನು ರೂಪಿಸುವುದು ಇಲ್ಲಿನ ವಿಶೇಷತೆ. ಅಷ್ಟೇ ಅಲ್ಲದೇ, ಜಗತ್ತು ಅನುಭವಿಸುತ್ತಿರುವ ತೊಂದರೆಗಳ ವಿಷಯಗಳನ್ನು ಕೂಡ ಬೆಳಕಿನ ಮೂಲಕವೇ ಚಿತ್ರಿಸಿ, ಅದರ ಬಗ್ಗೆ ಜನರ ಗಮನವನ್ನೂ ಸೆಳೆಯಲಾಗುತ್ತದೆ.