‘ಶ್ರಮೇವ ಜಯತೆ’ ಇದು ಪ್ರಧಾನಿ ನರೇಂದ್ರ ಮೋದಿ ಅವರ ಧ್ಯೇಯವಾಕ್ಯ. ವಿಶ್ವದಾದ್ಯಂತ ಶ್ರಮಿಕರ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾಗರಿಕ ಸಮಾಜದ ಪ್ರಗತಿಯಲ್ಲಿ ಶ್ರಮಿಕರ ಪಾತ್ರ ಮತ್ತು ಶ್ರಮಿಕರ ಅಭ್ಯುದಯಕ್ಕೆ ನಾವು ಕೈಗೊಂಡಿರುವ ಕ್ರಮಗಳ ಬಗೆಗಿನ ಆತ್ಮವಿಮರ್ಶೆ ಅಗತ್ಯ. ಶ್ರಮಿಕರ ದಿನದ ಆಚರಣೆ ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ 1923ರಲ್ಲಿ ಆರಂಭವಾಯಿತು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪ್ರಗತಿಗೆ ಶ್ರಮಿಕ ವರ್ಗದ ಸೇವೆೆಯ ಜರೂರಿಯನ್ನು ಸುಸ್ಪಷ್ಟವಾಗಿ ಅರ್ಥೈಸಲಾಯಿತು ಮತ್ತು ಶ್ರಮಿಕರ ಏಳ್ಗೆಗೆ ಹಲವು ದಿಟ್ಟ ನಿಲುವನ್ನು ತಳೆಯಲಾಯಿತು.
ಕಾರ್ವಿುಕರ ಜೀವನಮಟ್ಟ ಸುಧಾರಣೆ ಮತ್ತು ಕಾರ್ಯ ಪ್ರದೇಶದಲ್ಲಿ ಉತ್ತಮ ವಾತಾವರಣ ನಿರ್ವಿುಸುವ ಜತೆಗೆ ಬಾಲಕಾರ್ವಿುಕ ಮುಕ್ತ ಭಾರತ ನಿರ್ವಣಕ್ಕೆ ಶ್ರಮಿಸಲಾಗುತ್ತಿದೆ. ಉದ್ಯಮದ ಸುಗಮ ನಿರ್ವಹಣೆಗೆ ಕಾರ್ವಿುಕ-ಮಾಲೀಕ ನಡುವಿನ ಸಂಬಂಧ ಸುಧಾರಣೆ, ಶ್ರಮಿಕ ವರ್ಗದ ಹಕ್ಕುಗಳ ರಕ್ಷಣೆ, ನೀತಿಗಳ ನಿರೂಪಣೆ, ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ಜತೆಗೆ ಕಾರ್ವಿುಕ ಕಾನೂನುಗಳ ಸಮರ್ಥ ಜಾರಿಯ ಧ್ಯೇಯೋದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಕಾರ್ವಿುಕ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ್ ಯೋಜನೆಯಡಿ ಅಸಂಘಟಿತ ಕಾರ್ವಿುಕರ ಸುಗಮ ವೃದ್ಧಾಪ್ಯ ನಿರ್ವಹಣೆಗಾಗಿ ಪಿಂಚಣಿ ಯೋಜನೆ ಆರಂಭಿಸಲಾಗಿದೆ. ಇದೇ ವಲಯದ ಕಾರ್ವಿುಕರ ಯೋಜನೆಗಳ ಜಾರಿಗೆ ಅನುವಾಗುವಂತೆ ನೋಂದಣಿಗಾಗಿ ಇ-ಶ್ರಮ್ ಪೋರ್ಟಲ್ ಆರಂಭಿಸಲಾಗಿದೆ. ಶ್ರಮಸುವಿಧಾ ಸೇರಿ ಹಲವು ಯೋಜನೆ ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರವು 29 ಕಾರ್ವಿುಕ ಕಾಯ್ದೆಗಳನ್ನು ಒಟ್ಟುಗೂಡಿಸಿ 4 ಕಾರ್ವಿುಕ ಸಂಹಿತೆಗಳಾಗಿ ರೂಪಿಸಿದೆ. ರಾಜ್ಯ ಸರ್ಕಾರಗಳು ಇವುಗಳಿಗೆ ನಿಯಮಾವಳಿ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಆ ಪೈಕಿ ವೇತನ ಸಂಹಿತೆ, ಕೈಗಾರಿಕಾ ಬಾಂಧವ್ಯ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಸೇವಾ ಷರತ್ತುಗಳ ಸಂಹಿತೆಗಳ ಜಾರಿಗೆ ಕಾಲ ಕೂಡಿ ಬಂದಿದ್ದು, ಈ ನಾಲ್ಕೂ ಸಂಹಿತೆಗಳಿಂದ ಕಾರ್ವಿುಕರಿಗೆ ಹಾಗೂ ಉದ್ಯೋಗ ದಾತರಿಗೆ ಸಾಕಷ್ಟು ಅನುಕೂಲ ವಾಗಲಿದೆ.
ಕರೊನಾ ಆಪತ್ತಿನ ಹೊತ್ತಲ್ಲಿ ಸಹಾಯಹಸ್ತ: ಕರೊನಾ ಮೊದಲನೇ ಅಲೆಯ ವೇಳೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯು 16.48 ಲಕ್ಷ ಫಲಾನುಭವಿಗಳಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 825 ಕೋಟಿ ರೂ. ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ವಿತರಿಸಿತು. ಆಹಾರ ಸಾಮಗ್ರಿಗಳ 7.15 ಲಕ್ಷ ಕಿಟ್ಗಳನ್ನು ಕಟ್ಟಡ ಮತ್ತು ವಲಸೆ ಕಾರ್ವಿುಕರಿಗೆ ವಿತರಿಸಲಾಯಿತು. ಎರಡನೇ ಅಲೆಯ ವೇಳೆ ಸಹ ಸರ್ಕಾರ ಕಾರ್ವಿುಕರ ಜತೆಗಿತ್ತು. ಹೀಗಾಗಿಯೇ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿ ವತಿಯಿಂದ 18.21 ಲಕ್ಷ ಫಲಾನುಭವಿಗಳಿಗೆ ತಲಾ 3 ಸಾವಿರದಂತೆ ಒಟ್ಟು 547 ಕೋಟಿ ರೂ. ಸಹಾಯಧನವನ್ನು ಡಿ.ಬಿ.ಟಿ. ಮೂಲಕ ವಿತರಿಸಲಾಯಿತು. 25 ಲಕ್ಷ ಕಟ್ಟಡ ಹಾಗೂ ವಲಸೆ ಕಾರ್ವಿುಕರಿಗೆ ಆಹಾರ ಧಾನ್ಯಗಳ ಕಿಟ್ಗಳನ್ನು, 21 ಲಕ್ಷ ಕಟ್ಟಡ ಕಾರ್ವಿುಕರಿಗೆ ಸುರಕ್ಷತಾ ಮತ್ತು ನೈರ್ಮಲ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.ಗೃಹನಿರ್ವಣ ಕಾರ್ವಿುಕರು, ಟೈಲರ್, ಮೆಕ್ಯಾನಿಕ್, ಕಸ ಹೆಕ್ಕುವವರು, ಹಮಾಲರು, ಅಗಸರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ವಿುಕರು, ಅಗಸರು ಹಾಗೂ ಕ್ಷೌರಿಕರು ಈ 11 ವರ್ಗಗಳ ವೃತ್ತಿಯಲ್ಲಿ ತೊಡಗಿರುವ ಕಾರ್ವಿುಕರಿಗೆ ತಲಾ 2 ಸಾವಿರ ರೂ.ದಂತೆ ಒಟ್ಟು 12.05 ಲಕ್ಷ ಕಾರ್ವಿುಕರಿಗೆ 241 ಕೋಟಿ ರೂ.ಗಳನ್ನು ಡಿ.ಬಿ.ಟಿ. ಆಧಾರದ ಮೂಲಕ ವಿತರಿಸಲಾಯಿತು. ರಾಜ್ಯ ಸರ್ಕಾರವು 2007ರಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯನ್ನು ಪ್ರಾರಂಭಿಸಿದೆ. ಮಂಡಳಿಯಲ್ಲಿ 28.95 ಲಕ್ಷ ಫಲಾನುಭವಿಗಳನ್ನು ನೋಂದಾಯಿಸಲಾಗಿದೆ. ಸುಂಕ ಸಂಗ್ರಹಣೆಗೆ ವಿಶೇಷ ಅಭಿಯಾನ ನಡೆಸಿ 1168 ಕೋಟಿ ರೂ. ಸುಂಕ ಸಂಗ್ರಹಣೆ ಮಾಡಲಾಗಿದೆ. ರಾಜ್ಯಾದ್ಯಂತ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಅಗತ್ಯ ಇರುವೆಡೆ ಇನ್ನೂ 100 ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ. ಕಟ್ಟಡ ಕಾರ್ವಿುಕರ ಮಕ್ಕಳಿಗೆ 150 ಕೋಟಿ ರೂ. ವಿದ್ಯಾರ್ಥಿವೇತನವನ್ನು ಡಿ.ಬಿ.ಟಿ. ಮೂಲಕ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ವಿುಕರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪದವೀಧರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ನಡೆಸಿ ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪ್ರಾರಂಭಿಸಲಾಗಿದ್ದು, ಈ ವರ್ಷ 750 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.
ಅಸಂಘಟಿತ ಕಾರ್ವಿುಕರಿಗಾಗಿ ಪ್ರತ್ಯೇಕ ಮಂಡಳಿ: ಅಸಂಘಟಿತ ಕಾರ್ವಿುಕರ ಕಲ್ಯಾಣ ಮಂಡಳಿ ಸ್ಥಾಪಿಸಿ, ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಸದುದ್ದೇಶದಿಂದ ಉದ್ಯೋಗದಾತರನ್ನು ಪ್ರೇರೇಪಿಸುವ ಸಲುವಾಗಿ ಆಶಾದೀಪ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾರ್ಖಾನೆಗಳ ಕಾಯ್ದೆ 1948ರ ಅಡಿಯಲ್ಲಿ ಈವರೆಗೆ 17,284 ಕಾರ್ಖಾನೆಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ 1687541 ಕಾರ್ವಿುಕರು ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 5,684 ನೋಂದಾಯಿತ ಬಾಯ್ಲರ್ಗಳಿವೆ. ಪ್ರಸಕ್ತ ಸಾಲಿನಲ್ಲಿ 9,160 ಪರೀವೀಕ್ಷಣೆ ನಡೆಸಿ, 135 ಮೊಕದ್ದಮೆ ಹೂಡಲಾಗಿದೆ. ಕಾರ್ಖಾನೆಗಳ ಲೈಸೆನ್ಸ್ ನವೀಕರಣಕ್ಕೆ ಆಟೋ ರಿನೀವಲ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಗಡ ಪತ್ರದಲ್ಲಿ ಕಾರ್ವಿುಕ ವಲಯಕ್ಕೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ರಾಜ್ಯದ ವಿವಿಧೆಡೆ 19 ಕಡೆಗಳಲ್ಲಿ ಹೊಸ ಚಿಕಿತ್ಸಾಲಯಗಳ ಆರಂಭ, ಹುಬ್ಬಳ್ಳಿ ಮತ್ತು ದಾವಣಗೆರೆಯ ಇಎಸ್ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ, ಕಾರ್ವಿುಕರಿಗೆ ನೀಡುತ್ತಿರುವ ಉಚಿತ ಬಸ್ ಪಾಸ್ ಸೇವೆ ರಾಜ್ಯದಾದ್ಯಂತ ವಿಸ್ತರಣೆ, 100 ಹೈಟೆಕ್ ಸಂಚಾರಿ ಕ್ಲಿನಿಕ್ಗಳನ್ನು ಪ್ರಕಟಿಸಿದ್ದು, ಬಜೆಟ್ ತ್ವರಿತ ಅನುಷ್ಠಾನದ ಕ್ರಮವಾಗಿ ಈ ಯೋಜನೆಗಳ ಜಾರಿಗೆ ಈಗಾಗಲೇ ಅನುಮೋದನೆ ದೊರಕಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಾಧುನಿಕ ಇಎಸ್ಐ ಆಸ್ಪತ್ರೆಗಳ ಆರಂಭಕ್ಕೆ ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಸಹಕಾರ ಆಶಿಸಿದ್ದು, ಮುಂದಿನ ದಿನಗಳಲ್ಲಿ ಈ ಕನಸನ್ನೂ ನನಸಾಗಿಸುವತ್ತ ಮುಂದಡಿ ಇರಿಸಲಿದ್ದೇವೆ. ಒಟ್ಟಾರೆ ಕೃಷಿ, ಕೈಗಾರಿಕೆ ಮತ್ತು ಉತ್ಪಾದನಾ ವಲಯದಲ್ಲಿ ಮುಂಚೂಣಿಯಲ್ಲಿ ಇರುವ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಶ್ರಮಿಕ ವರ್ಗದ ಏಳಿಗೆಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡು ನೈಜವರ್ಗಕ್ಕೆ ತಲುಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮೇವ ಜಯತೆ ಎಂಬ ಧ್ಯೇಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಕಾರ್ವಿುಕ ಇಲಾಖೆ ಕಾಯಾ ವಾಚಾ ಮನಸಾ ಜಾರಿ ಮಾಡುತ್ತಿದೆ.
ಇಂದು ಕಾರ್ವಿುಕರ ದಿನ. ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಶ್ರಮ ಅವಿಸ್ಮರಣೀಯ. ಅಂತೆಯೇ 12ನೇ ಶತಮಾನದ ಕ್ರಾಂತಿಕಾರಿ ಸುಧಾರಕ ಕರ್ನಾಟಕದ ಶ್ರೀ ಬಸವೇಶ್ವರರು ಶ್ರಮ ಮತ್ತು ಶ್ರಮಿಕರ ಬಗ್ಗೆ ಅದ್ಭುತ ವಿಚಾರ ಮಂಡಿಸಿದ್ದಾರೆ. ಬಸವೇಶ್ವರರ ‘ಕಾಯಕವೇ ಕೈಲಾಸ’ ಎಂಬ ಮಾತು ವಿವರಿಸುವಂತೆ ‘ನೀವು ನಿಮ್ಮ ಕಾಯಕದ ಮೂಲಕವೇ ಭಗವಂತನನ್ನು ಪಡೆದುಕೊಳ್ಳುತ್ತೀರಿ’. ಅಂದರೆ ಕರ್ಮದಿಂದಲೇ ಸ್ವರ್ಗಪ್ರಾಪ್ತಿ ಸಾಧ್ಯ. ‘ಶ್ರಮ್ ಹೀ ಶಿವ್ ಹೇ’. ಹೀಗಾಗಿ ನಾವು ಶ್ರಮೇವ ಜಯತೆಯಲ್ಲಿ ನಂಬಿಕೆ ಇರಿಸಿದ್ದೇವೆ. | ನರೇಂದ್ರ ಮೋದಿ ಪ್ರಧಾನಿ
ಕಾರ್ವಿುಕ ಕಲ್ಯಾಣ ಮಂಡಳಿ: ಕಾರ್ವಿುಕ ಕಲ್ಯಾಣ ಮಂಡಳಿ 1969ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಕಾರ್ಖಾನೆಗಳು, ಪ್ಲಾಂಟೇಷನ್, ಸಂಸ್ಥೆಗಳು/ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 21 ಸಾವಿರಕ್ಕೂ ಕಡಿಮೆ ವೇತನ ಪಡೆಯುತ್ತಿರುವ ಸಂಘಟಿತ ಕಾರ್ವಿುಕರ ಕಲ್ಯಾಣಕ್ಕೆ ಈ ಮಂಡಳಿ ರಚಿಸಲಾಗಿದೆ. ಈ ಮಂಡಳಿಯಲ್ಲಿ ವೈದ್ಯಕೀಯ ನೆರವು, ಅಪಘಾತ ಧನಸಹಾಯ, ಶೈಕ್ಷಣಿಕ ಪೋ›ತ್ಸಾಹಧನ, ಸಾರಿಗೆಭತ್ಯೆ, ಅಂತ್ಯಸಂಸ್ಕಾರ, ವಾರ್ಷಿಕ ಕ್ರೀಡಾಕೂಟ, ವೈದ್ಯಕೀಯ ಶಿಬಿರ ನಡೆಸಲು ಧನಸಹಾಯ ಮುಂತಾದ ಯೋಜನೆಗಳಿವೆ. ಇ-ಶ್ರಮ ಪೋರ್ಟಲ್: ಅಸಂಘಟಿತ ಕಾರ್ವಿುಕರ ಸಮಗ್ರ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಶ್ರಮ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಿದೆ. ರಾಜ್ಯಕ್ಕೆ 1.89 ಕೋಟಿ ಗುರಿ ನಿಗದಿಪಡಿಸಲಾಗಿದೆ. 60 ಲಕ್ಷ ಕಾರ್ವಿುಕರನ್ನು ಈಗಾಗಲೇ ನೋಂದಾಯಿಸಲಾಗಿದೆ. ನೋಂದಾಯಿತ ಕಾರ್ವಿುಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ, 2 ಲಕ್ಷ ರೂ.ಗಳ ವಿಮಾಸೌಲಭ್ಯ ದೊರಕಲಿದೆ.
(ಲೇಖಕರು ಕಾರ್ವಿುಕ ಸಚಿವರು)