ಅಂಕಣ

ಉದ್ಯೋಗಸೃಷ್ಟಿ ಕಡೆಗೆ ಗಮನವಿರಲಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕರೊನಾ ಸೋಂಕಿನ ಹಾವಳಿ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಅದರಲ್ಲೂ, ಎರಡನೆಯ ಅಲೆ ವಿಕೋಪಕ್ಕೆ ಹೋದ ಪರಿಣಾಮ ಮತ್ತೆ ಅನಿವಾರ್ಯವಾಗಿ ಲಾಕ್​ಡೌನ್​ ಹೇರಬೇಕಾಯಿತು. ಈಗ ಸೋಂಕು ಪ್ರಕರಣಗಳು ಕೊಂಚ ನಿಯಂತ್ರಣಕ್ಕೆ ಬಂದಿದ್ದು, ಅನ್​ಲಾಕ್​ ಪ್ರಕ್ರಿಯೆ ಹಂತಹಂತವಾಗಿ ಆರಂಭವಾಗಿದೆ. ಆದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರ ಬದುಕು ಶೋಚನೀಯವಾಗಿದೆ.

ಯುವಕರು ಮತ್ತು ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದು, ನಾಳೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಕೆಲವರು ಖಿನ್ನತೆಗೂ ಜಾರಿದ್ದಾರೆ. ಮೊದಲ ಆದ್ಯತೆಯಾಗಿ ಸರ್ಕಾರ ಆರೋಗ್ಯ ವ್ಯವಸ್ಥೆ ಬಲಪಡಿಸುವ ಮೂಲಕ ಕರೊನಾ ವಿರುದ್ಧ ಹೋರಾಟ ಮಾಡುತ್ತಿದೆ. ಇದು ಅಗತ್ಯ, ಅನಿವಾರ್ಯ ಕೂಡ. ಆದರೆ, ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಸಲು ಪ್ರಾಮುಖ್ಯ ನೀಡಬೇಕು. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಜತೆಗೆ, ಖಾಸಗಿ ರಂಗದಲ್ಲೂ ಉದ್ಯೋಗಗಳನ್ನು ಸೃಷ್ಟಿಸುವ, ನೇಮಕಾತಿ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಕರೊನಾದಿಂದ ಜೀವ ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ, ನಾಳೆಯ ಬದುಕಿಗಾಗಿ ದಾರಿ ಕಂಡುಕೊಳ್ಳುವುದು ಕೂಡ ಅಷ್ಟೇ ಮುಖ್ಯ ವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ.

|  ಸ್ವರೂಪ್​ ಬಿ, ಬ್ರಹ್ಮಾವರ