ಪುರಾಣಗಳ ಪ್ರಕಾರ ಚಿತ್ರಗುಪ್ತ ಸೂರ್ಯವಂಶದ ಅರಸು. ದೀರ್ಘಕಾಲದವರೆಗೆ ಸೂರ್ಯನನ್ನು ಆರಾಧಿಸಿ ಆತನ ಅನುಗ್ರಹದಿಂದ ಸರ್ವಜ್ಞಾನಿಯಾಗಿದ್ದವನು. ಇದನ್ನು ತಿಳಿದಿದ್ದ ಸೂರ್ಯಪುತ್ರ ಯಮ, ಇಂಥವನು ತನ್ನಲ್ಲಿ ಇದ್ದುದಾದರೆ ತನ್ನ ಕಾರ್ಯಭಾರ ಸುಲಭವಾಗಿ ನಡೆಯುವುದು ಎಂದುಕೊಂಡು, ಈತನನ್ನು ಸಶರೀರನಾಗಿಯೇ ಯಮಲೋಕಕ್ಕೆ ಕರೆಸಿ ಭೂಲೋಕದ ಜೀವಿಗಳ ಶುಭಾಶುಭ ಕರ್ಮಗಳ ಲೆಕ್ಕ ಬರೆದಿಡಲಿಕ್ಕೆ ನೇಮಿಸಿದನು. ಮರಣಾನಂತರ ಜೀವಿಗಳು ಯಮಲೋಕಕ್ಕೆ ಹೋದಾಗ ಚಿತ್ರಗುಪ್ತನ ವರದಿಯನ್ನಾಧರಿಸಿ ಸ್ವರ್ಗ ಅಥವಾ ನರಕಗಳು ಪ್ರಾಪ್ತವಾಗುತ್ತವೆಂದು ನಂಬಿಕೆ. ಅದರಲ್ಲೂ ಮನುಷ್ಯರು ಭೂಲೋಕದಲ್ಲಿ ಬಹುತೇಕ ಪಾಪಕಾರ್ಯಗಳನ್ನೇ ಮಾಡುವವರಾದ್ದರಿಂದ ಕನಿಷ್ಠ ಪುಣ್ಯಕರ್ಮಗಳ Checklist ಒಂದನ್ನಷ್ಟೇ ಚಿತ್ರಗುಪ್ತ ಇಟ್ಟುಕೊಂಡಿರುತ್ತಾನೆ, ಅದರಲ್ಲಿರುವ ಅಂಶಗಳ ಪೈಕಿ ಎಷ್ಟನ್ನು ಈ ವ್ಯಕ್ತಿ ಮಾಡಿದ್ದಾನೆ ಅಥವಾ ಮಾಡಿದ್ದಾಳೆ ಎಂದು ತಾಳೆ ನೋಡಿ ನಿರ್ಧರಿಸುತ್ತಾನೆ- ಅಂತಲೂ ಹಾಸ್ಯಕ್ಕಾಗಿ ವ್ಯಾಖ್ಯಾನಿಸುವುದಿದೆ. ಅದೇನೇ ಇರಲಿ, ಚೆಕ್ಲಿಸ್ಟ್ ಕಲ್ಪನೆಗೆ ಇದೊಂದು ಒಳ್ಳೆಯ ಉದಾಹರಣೆ ಆಗುವುದಂತೂ ಹೌದು.
ಇಂಗ್ಲಿಷ್ನಲ್ಲಿ Checklist ಅರ್ಥ "systematic list intended for reference, verification, etc' ಎಂದು. ಇದು ನೂರಿನ್ನೂರು ವರ್ಷಗಳಿಂದೀಚೆಗಷ್ಟೇ ಬಳಕೆಯಲ್ಲಿರುವ ಪದ. ಇದರಲ್ಲಿನ Indicator ಎಂದರೆ ಪಟ್ಟಿ "to point out, show' ಎಂದರೆ ಒಮ್ಮೆ ತಡೆಹಿಡಿದು ಪರಿಶೀಲಿಸುವುದು ಎಂಬ ಅರ್ಥ. ಯಾವುದೇ ಕೆಲಸವನ್ನು ಕ್ರಮಬದ್ಧವಾಗಿ ಮಾಡಬೇಕಿದ್ದರೆ, ಯಾವುದನ್ನೂ ಮರೆಯದಂತೆ ನೋಡಿಕೊಳ್ಳಲಿಕ್ಕೆ ಮತ್ತು ಹಂತಗಳನ್ನು ಪರಿಶೀಲಿಸಲಿಕ್ಕೆ ಒಂದು ಪೂರ್ವಭಾವಿ ಪಟ್ಟಿ ಮಾಡಿಡಬೇಕಾಗುತ್ತದೆ. ಅದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಜೊತೆಗಿರಿಸಬೇಕಾದ ದಾಖಲೆಗಳದಿರಬಹುದು, ನೇಮಕಾತಿಯ ಬಳಿಕ ಹೊಸ ಉದ್ಯೋಗಿಗೆ ಸಂಸ್ಥೆಯು ಒದಗಿಸಬೇಕಾದ ಮೂಲಭೂತ ಸೌಕರ್ಯಗಳದಿರಬಹುದು, ನಿರ್ದಿಷ್ಟ ಕಾಲಾವಧಿಯಲ್ಲಿ ಮಾಡಿ ಮುಗಿಸಬೇಕು ಎಂದುಕೊಂಡಿರುವ ವ್ಯಕ್ತಿಗತ ಕೆಲಸಗಳದಿರಬಹುದು, ಸಿದ್ಧವಾಗಿಟ್ಟಿರುವ ಪಟ್ಟಿಯ ಒಂದೊಂದೇ ಅಂಶಗಳನ್ನು ತಾಳೆ ನೋಡುತ್ತ ಹೋಗುತ್ತೇವಾದ್ದರಿಂದ ‘ತಾಳೆಪಟ್ಟಿ’ ಎನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ.
ಸೂಚಿಸಿದವರು: ನಂದಿನಿ ಹಾಸನ, ನೀಲಕಂಠ ಇನಾಮದಾರ, ಮುರಳಿ ಹತ್ವಾರ್, ಲಿಂಗರಾಜು ಬೊಮ್ಮೇನಹಳ್ಳಿ, ಜಿ.ಎಚ್. ಸಂಕಪ್ಪ, ಸುಬ್ರಹ್ಮಣ್ಯ ಎಸ್, ರಾಮಚಂದ್ರ ಐ.ಎಂ, ಹೊನ್ನಿ ಭಟ್ಟ, ಎನ್.ವಿ ಶಂಕರ್, ವಿಲಾಸ ಹುದ್ದಾರ, ಉಮಾ ಪ್ರಭು, ಗಂಗಾ ಹೆಗಡೆ, ರೂಪಕಲಾ ಸದಾನಂದ, ಎಂ.ಕೆ ಬದರಿನಾಥ್, ಸಿದ್ದನಗೌಡ ಮುದಿಗೌಡ್ರ, ರವಿಶಂಕರ್ ಮೈಸೂರು, ಗಿರೀಶ ಕೆ.ಎಸ್, ವಿಜಯಕಲ ವಿಟ್ಲ, ಡಾ.ಎನ್.ಎಮ್ ತುಳಪುಳೆ ಮುಂತಾದವರು. ‘ಚುನಾವಣಾ ಅಧಿಕಾರಿಯಾಗಿ ಮತಗಟ್ಟೆಗೆ ಹೋಗುವಾಗ ಮತ್ತು ಕರ್ತವ್ಯ ಮುಗಿಸಿ ಮತಯಂತ್ರ ಹಿಂದಿರುಗಿಸುವಾಗ ತಪಸೀಲು ಪಟ್ಟಿಯಂತೆ ವಸ್ತುಗಳನ್ನು ಜೋಡಿಸಿಕೊಳ್ಳುತ್ತಿದ್ದೆವು’ ಎಂದು ಅಂಜಲಿ ಬರ್ವೆ ಮತ್ತೊಂದಿಬ್ಬರು ಓದುಗರು ನೆನಪಿಸಿಕೊಂಡಿರುವುದನ್ನು ಗಮನಿಸಿದರೆ ಚೆಕ್ಲಿಸ್ಟ್ಗೆ ಸಂವಾದಿಯಾಗಿ ‘ತಪಸೀಲು ಪಟ್ಟಿ’ ಈಗಾಗಲೇ ಸರ್ಕಾರಿ ಸಂವಹನಗಳಲ್ಲಿ ಬಳಕೆಯಲ್ಲಿದೆಯೆಂದು ಗೊತ್ತಾಗುತ್ತದೆ.
ಲೋಕೇಶಪ್ಪ ಹಿತ್ಲಮನೆ, ಸಾವಿತ್ರಿ ಬೇಡಕಿಹಾಳ, ಮಂಜುಳ ಸುಲಾಖೆ, ರೇಖಾ ರಾಮಕೃಷ್ಣ, ಡಾ.ದಯಾನಂದ ಭಟ್ಟ, ವಿಶ್ವರಾಜ್ ಕುಂದಾಪುರ ಮುಂತಾದವರ ಆಯ್ಕೆಯೂ ಇದೇ ಆಗಿದೆ. ಅರೇಬಿಕ್ ಮೂಲದ ‘ತಫಸೀಲ್’ ಪದ ಹಿಂದೀ ಮತ್ತು ಮರಾಠಿ ಭಾಷೆಗಳ ಮೂಲಕ ಕನ್ನಡಕ್ಕೂ ಬಂದಿದೆ. ವಿವರಣೆಗಳಿಂದ ಕೂಡಿದ ಹೇಳಿಕೆ, ನಿರೂಪಣೆ, ಯಾದಿ, ಪಟ್ಟಿ ಮುಂತಾದ ಅರ್ಥಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ‘ತಡೆ ಪಟ್ಟಿ’ ಸಹ ಬಳಕೆಯಲ್ಲಿದೆ ಎಂದಿದ್ದಾರೆ ಎಸ್.ಆರ್.ಅನಂತಾಚಾರ್. ‘ಪರಿಶೀಲನಾ ಪಟ್ಟಿ’ ಆಗಬಹುದೆಂದು ಬಹಳಷ್ಟು ಓದುಗರು ಸೂಚಿಸಿದ್ದಾರೆ.
ರಘುಪತಿ ನಕ್ಷತ್ರಿ, ನಾರಾಯಣ ಯಾಜಿ, ಶೋಭಾ ಎಚ್.ಜಿ, ರಾಧಾಮಣಿ ಶಿವಮೊಗ್ಗ, ರಂಗನಾಥ ಟಿ.ಕೆ, ಗಿರೀಶ ಫಡ್ಕೆ, ಅಜಯಕುಮಾರ್ ಪೇಟೆ, ಡಾ.ಸಿದ್ಧೇಶ್ವರ ಕಟಕೋಳ, ಪ್ರವೀಣ ದೇಸಾಯಿ, ಎಚ್.ಎಸ್. ಮಂಜುನಾಥ, ಶೈಲಾ ಬಾಲಕೃಷ್ಣ, ವಿನಯಾ ಹೊಸೂರ, ಮಂಜುಳಾ ಎಸ್.ಕೆ, ಉಮೇಶ ಪ್ರಭು, ತುಲಸೀ ನರಸಿಂಹ, ಸುಜಾತಾ ಸುಪ್ರಸನ್ನ, ನಳಿನಿ ಜಿ.ಭಟ್, ಮಂಜುನಾಥ ಜಾಲವಾದಿ, ಕೆ.ಎ.ಭಟ್, ನೀಹಾರಿಕಾ ನಯನ, ನಿತ್ಯಾನಂದ ಬ್ರಹ್ಮಾವರ, ಶೋಭಾ ಪಿ. ಭಟ್ಟ, ಕುಶಲ್ ಭಾರದ್ವಾಜ್, ನೇತ್ರಾ ಅಣ್ಣಿಗೇರಿ, ಸತೀಶ ಕಬೇಕೋಡಿ ಮುಂತಾದವರು. ಸಂಸ್ಕೃತದ ‘ಕಾರ್ಯಾವಲಿ’ ಕೂಡ ಚೆಕ್ಲಿಸ್ಟ್ಗೆ ಸಮಾನ ಮತ್ತು ಇದು ಭಾರತೀಯ ಭಾಷೆಗಳಿಗೆಲ್ಲ ಹೊಂದುತ್ತದೆ ಎನ್ನುವ ರಮೇಶ್ ಎನ್.ಆರ್ ಅವರ ಯೋಚನಾವಿಧಾನವೂ ಚೆನ್ನಾಗಿದೆ.
ಕಳೆದ ಸಲ ಕೇಳಿದ್ದ ಎರಡನೆಯ ಪದ ಐಛಜ್ಚಿಚಠಿಟ್ಟ. ಇಂಗ್ಲಿಷ್ಗೆ ಲ್ಯಾಟಿನ್ ಭಾಷೆಯಿಂದ, indicare ಎಂಬರ್ಥದ ಜ್ಞಿಛಜ್ಚಿಚ್ಟಛಿ ಕ್ರಿಯಾಧಾತುವಿನಿಂದ ಬಂದದ್ದೆನ್ನಲಾಗಿದೆ. ಮೊದಲೆಲ್ಲ ತೋರುಬೆರಳಿನ ಸ್ನಾಯುವಿಗೆ, 19ನೆಯ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯಾದ ಮೇಲೆ ಯಂತ್ರಗಳಲ್ಲಿ ಉಗಿಯುರುಳೆಯ ಒತ್ತಡ ಮಾಪನಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದು. ಕಳೆದ 100 ವರ್ಷಗಳಿಂದೀಚೆಗಷ್ಟೇ ವಾಹನಗಳಲ್ಲಿ ಚಲನೆಯ ದಿಕ್ಕು ಬದಲಾವಣೆ ಸೂಚಿಸಲು ಅಳವಡಿಸಿರುವ ದೀಪ ಎಂಬರ್ಥದಲ್ಲಿ, ಬಹುಮಟ್ಟಿಗೆ ಅದೊಂದಕ್ಕೇ, ಬಳಕೆಯಾಗುತ್ತಿದೆ. ಒಂದು ನಗೆಹನಿ ಇಲ್ಲಿ ಸಂದಭೋಚಿತವಾಗಿ ನೆನಪಾಗುತ್ತದೆ: ‘ಕಾಡಿನ ದಾರಿಯಲ್ಲಿ ದ್ವಿಚಕ್ರವಾಹನದ ಮೇಲೆ ಹೋಗುತ್ತಿರುವಾಗ ಹಿಂದಿನಿಂದ ಹುಲಿ ಅಟ್ಟಿಸಿಕೊಂಡು ಬಂದರೆ ಏನು ಮಾಡಬೇಕು? ಏನಿಲ್ಲ, ಲೆಫ್ಟ್ ಇಂಡಿಕೇಟರ್ ಹಾಕಿ ರೈಟ್ ಟರ್ನ್ ತಗೋಬೇಕು. ಹುಲಿಗೆ ಮೋಸ ಮಾಡಿದಂತಾಗುತ್ತದೆ!’ ತಮಾಷೆ ಒತ್ತಟ್ಟಿಗಿಟ್ಟರೂ ನಮ್ಮ ಆಡುಮಾತಿನಲ್ಲಿ ಇಂಡಿಕೇಟರ್ ಎಷ್ಟೊಂದು ಆಳವಾಗಿ ಸೇರಿಕೊಂಡಿದೆಯೆಂದು ನೋಡಿದರೆ ಅಚ್ಚರಿಯಾಗುತ್ತದೆ.
ಇಂಡಿಕೇಟರ್ಗೆ ಪರ್ಯಾಯವಾಗಿ ‘ಸೂಚಕ’ ಎಂಬ ಪದವೇನೋ ಬಂದಿದೆ ನೂರಕ್ಕೂ ಹೆಚ್ಚು ಪ್ರವೇಶಿಕೆಗಳಲ್ಲಿ: ವಿಶ್ವಜ್ಯೋತಿ ಶಿವಮೊಗ್ಗ, ಹೇಮಂತ ಸಂಪಗಾಂವಕರ, ರಾಮಚಂದ್ರ ಬಡಗಾಬೆಟ್ಟು, ಜಯರಾಮ್ ಪಾರೆ, ಸಂಧ್ಯಾ ಅಡಿಗ, ಆನಂದ ಗೋಡಸೆ, ಮುನಿಸ್ವಾಮಿ ವೆಂಕಟೇಶ, ಆರ್.ಎಸ್.ಕಮಲಾಕರ, ಸಂಜೀವ ಮತ್ತಿಕೊಪ್ಪ, ರೇಖಾ ರಘು, ವಿ.ಮುರಳೀಧರ, ಶೈಲಶ್ರೀ ರಾವ್, ಶ್ರೀಧರ ಟಿ. ನರಸೀಪುರ, ಮಧುಕೇಶ್ವರ ಹೆಗಡೆ, ಯು.ಪರಮೇಶ್ವರ ಭಟ್, ಮಮತಾ ನಾಗರಾಜ್, ಶಂಭು ಇರಾಣಿ, ದೀಪ್ತಿ ಖಟಾವಕರ, ಸುನೀತಾ ನಿರಂಜನ, ಶೋಭಾ ತಿಪಟೂರು, ಮಮತಾ ಕುಂದಾಪುರ, ಭೀಮರಾವ್ ಸುಬೇದಾರ್, ಸಂಜೀವ ಜೋಶಿ, ರಶ್ಮಿ ರಾಜೇಂದ್ರ, ಮಿಸ್ಕಿನ್ ಕುಟುಂಬಸದಸ್ಯರು ಮುಂತಾದವರಿಂದ. ಆದರೆ ಒಮ್ಮೆ ಊಹಿಸಿ. ‘ಇಲ್ಲಿ ಎಡಕ್ಕೆ ತಿರುಗಿ, ಮುಂದಿನ ಅಡ್ಡರಸ್ತೆಯಲ್ಲಿ ಬಲಕ್ಕೆ ತಿರುಗಿ’ ಎಂದು ಹೇಳಿದರೆ ಅರ್ಥವೇ ಆಗದೆ ಕಣ್ಕಣ್ ಬಿಡುವ, ‘ಇಲ್ಲಿ ಲೆಫ್ಟ್ ತಗೊಳ್ಳಿ, ನೆಕ್ಸ್ಟ್ ಕ್ರಾಸಲ್ಲಿ ರೈಟ್ ತಗೊಳ್ಳಿ’ ಎಂದರೇನೇ ಸರಿಯಾಗಿ ಅರ್ಥ ಮಾಡಿಕೊಳ್ಳುವ, ಬೆಂಗಳೂರಿನ ಚಾಲಕ ಸಮುದಾಯಕ್ಕೆ ‘ಯಾಕ್ರೀ ಸೂಚಕ ಹಾಕಿಲ್ಲ?’ ಎಂದು ಕೇಳಿದರೆ ಅರ್ಥವಾದೀತೇ? ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ ನೋಡಿಯಾರು!
ಹಾಗಿದ್ದರೆ ಏನು ಉಪಾಯ? ಬೇರಾವುದಾದರೂ ಕನ್ನಡ ಪದ ಹುಡುಕಬಹುದೇ? ಇಂಡಿಕೇಟರ್ ಅಂದರೆ ಯಂತ್ರದ ಸ್ಥಿತಿಯನ್ನೋ ಚಲನೆಯ ದಿಕ್ಕನ್ನೋ ನೀರಿನ ಮಟ್ಟವನ್ನೋ ಅಂತೂ ತೋರುವುದನ್ನು ಮಾಡುವುದಾದ್ದರಿಂದ ಅಚ್ಚಕನ್ನಡದಲ್ಲಿ ‘ತೋರುಗ’ ಸೂಕ್ತವೆನಿಸುತ್ತದೆ ಎನ್ನುತ್ತಾರೆ ಬೊ.ನಾ ಕೃಷ್ಣಮೂರ್ತಿ, ಹಿ.ಶಾ ಸುಬ್ರಹ್ಮಣ್ಯ, ವಸಂತಕುಮಾರ್ ಕಲ್ಯಾಣಿ, ರಂಗನಾಥ ಟಿ.ಕೆ ಮತ್ತು ಪ್ರಭುಪ್ರಸಾದ ನಡುತೋಟ. ‘ಸೂಚಕ’ವಾಗಲಿ, ‘ತೋರುಗ’ವಾಗಲಿ ಗ್ರಾಂಥಿಕವಾಗಿ ಅಂದರೆ ಬರೆವಣಿಗೆಯಲ್ಲಿ ಬಳಕೆಗೆ ಯೋಗ್ಯವಾಗಿಯೇ ಇವೆ. ಆಡುಮಾತಿನಲ್ಲಿ ತುಸು ಕೃತಕ ಎನಿಸೀತು ಅಷ್ಟೇ. ಕೊನೆಯದಾಗಿ Texture. ಇದರ ಇಂಗ್ಲಿಷ್ ವ್ಯುತ್ಪತ್ತಿಯೇ ಬಹಳ ಕುತೂಹಲಕಾರಿಯಾಗಿದೆ. ಲ್ಯಾಟಿನ್ನ textura ಪದದಿಂದ ಬಂದದ್ದು, ಮುಖ್ಯವಾಗಿ ಶರೀರಶಾಸ್ತ್ರದಲ್ಲಿ ಅಂಗಾಂಶಗಳ ಜಾಲ ಅಥವಾ ಸಂರಚನೆಯನ್ನು ತಿಳಿಸುವುದಕ್ಕೆ ಬಳಕೆಯಾಗುತ್ತಿದ್ದದ್ದು. ಅದಕ್ಕೂ ಮೂಲದ ಠಿಛ್ಡಿಛ್ಟಿಛಿ ಎಂಬ ಕ್ರಿಯಾಧಾತುವಿಗೆ ಮತ್ತು indicare ಎಂಬ ಅದರ ಬೇರು ಪದಕ್ಕೆ, ನೇಯುವುದು, ಕೆತ್ತುವುದು, ಅಥವಾ ಹೊರಮೈಯನ್ನು ರಚಿಸುವುದು ಎಂಬ ಅರ್ಥವಿರುವುದು.
ಪ್ರೋಟೋ ಇಂಡೋ ಯುರೋಪಿಯನ್ ಭಾಷೆಗಳಲ್ಲೆಲ್ಲ ಈ Texture ಬೇರಿನಿಂದ ಬಂದ ಬೇರೆಬೇರೆ ಪದಗಳಿವೆ. ಉದಾಹರಣೆಗೆ ಸಂಸ್ಕೃತದಲ್ಲಿ ತಕ್ಷ ಅಥವಾ ತಕ್ಷಣ ಅಂದರೆ ತೆಳುವಾಗಿ ಮಾಡುವುದು, ಕೆತ್ತುವುದು ಎಂದರ್ಥ. ತಕ್ಷನ್ ಅಂದರೆ ಬಡಗಿ. ಮತ್ತೆ textura ವಿಚಾರಕ್ಕೆ ಬರುವುದಾದರೆ 17ನೆಯ ಶತಮಾನದಿಂದ ಈಚೆಗಷ್ಟೇ ಅದನ್ನು ನಿರ್ಜೀವ ವಸ್ತುಗಳ ಗುಣಲಕ್ಷಣ ಸ್ವಭಾವಗಳಿಗೆ, ಅದರಲ್ಲೂ ಭೌತಿಕವಾಗಿ ಮೇಲ್ಮೈ ರಚನೆಗೆ ಸಂಬಂಧಿಸಿದಂತೆ ಬಳಸುತ್ತಿರುವುದು. ಬಟ್ಟೆ, ಚಿತ್ರಕಲೆ, ಆಹಾರಪದಾರ್ಥ ಮುಂತಾದುವುಗಳ ಗುಣಲಕ್ಷಣಗಳಲ್ಲಿ texture ಸಹ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸಾಮಾನ್ಯವಾಗಿ ನಾವು ‘ನುಣುಪಾಗಿದೆ’, ‘ದೊರಗಾಗಿದೆ’, ‘ಒರಟಾಗಿದೆ’, ‘ಮುಳ್ಳುಮುಳ್ಳಾಗಿದೆ’ ಎಂದು ಲಕ್ಷಣ ಹೇಳಿ ನಿಭಾಯಿಸುತ್ತೇವೆಯೇ ಹೊರತು ಆ ಗುಣಸ್ವಭಾವಕ್ಕೆಂದೇ ವಿಶೇಷ ಪದ ಬಳಸುವುದಿಲ್ಲ.
‘ಮೈವಳಿಕೆ’ ಎಂಬ ಪದವೊಂದನ್ನು ಸೂಚಿಸಿದ್ದಾರೆ ಕೆ.ಎಂ ಮಧ್ವರಾಯ, ಷಡಕ್ಷರಿಮುನಿ ಸ್ವಾಮೀಜಿ, ಇಂದಿರಾ ಎಸ್.ಕೆ ಮತ್ತು ನಾಗಮಣಿ ಎನ್.ಶಾಂಪುರ್. ಇದನ್ನು ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳಲ್ಲಿಯೂ ಬಳಸಿದೆಯೆಂದು ಕಾಣುತ್ತದೆ. ಬಹಳ ಸೂಕ್ತವಾಗಿಯೇ ಇದೆ. ‘ಮೈಯೋರಣ’ (ಬಿ.ಡಿ ರವೀಂದ್ರ) ಸಹ ಅರ್ಥವತ್ತಾಗಿದೆ. ಉಳಿದಂತೆ ನೇಯ್ಗೆ, ಹೆಣಿಗೆ, ವಿನ್ಯಾಸ, ಬಂಧ, ರಚನೆ, ಸ್ಪರ್ಶಗುಣ, ಸ್ಪರ್ಶಾನುಭವ ಮುಂತಾದ ಪ್ರವೇಶಿಕೆಗಳು ಹಲವಾರು ಬಂದಿವೆ. ಇವು ಸೂಕ್ತವಲ್ಲ ಎಂದೇನಿಲ್ಲ, ಸೀಮಿತ ಸಂದರ್ಭಗಳಲ್ಲಿ ಹೊಂದಿಕೊಳ್ಳಲೂಬಹುದು. ಆದರೆ ಈಗಾಗಲೇ texture ಅಲ್ಲದ ಬೇರೆ ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಬಳಕೆಯಲ್ಲಿವೆ.
1. Crosscheck: ಯಾವುದನ್ನೇ ಆದರೂ ಸರಿ ಎಂದು ಖಚಿತ ಪಡಿಸಿ ಕೊಳ್ಳುವುದಕ್ಕಾಗಿ ಅಡ್ಡ ತನಿಖೆ ಮಾಡುವುದು, ಹೋಲಿಸಿ ನೋಡುವುದು ಇತ್ಯಾದಿ.
2. Gaudy: ಸಾಮಾನ್ಯವಾಗಿ ಸೀರೆಯ ಅಥವಾ ಇನ್ನಿತರ ಉಡುಪುಗಳ ಬಣ್ಣದ ವಿಷಯದಲ್ಲಿ ಬಳಕೆಯಾಗುತ್ತದೆ, ಕಣ್ಣಿಗೆ ರಾಚುವ ಆಡಂಬರದ ವರ್ಣಸಂಯೋಜನೆ ಇದ್ದಾಗ.
3. Worth it: ದುಬಾರಿ ವಸ್ತು ಕೊಳ್ಳುವಾಗ ಸಾವಿರಗಟ್ಟಲೆ ಖರ್ಚು ಮಾಡಿ ಮೆಚ್ಚುಗೆಗೋ ಸಮಾಧಾನಕ್ಕೋ ಹೇಳುವ ಮಾತು. ಪೈಸಾ ವಸೂಲ್ ಎಂದಲ್ಲದೆ ಕನ್ನಡ ಪದ ಬೇಕು.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945