‘ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುವಲ್ಲಿ ವಿಫಲವಾಗಿದೆ’ ಎಂದು ಡಿಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಧರಣಿ ನಡೆಸಿತ್ತು. ಆಗ ಸರ್ಕಾರ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿತು. ಬಳಿಕ ಅಕ್ಟೋಬರ್ 29ರಂದು ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಇನ್ನು ಮುಂದೆ ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಓದಿ ನೀಟ್ ಪಾಸಾದ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ.
ಬಡವರು ವೈದ್ಯಕೀಯ ಪದವಿ ಪಡೆಯುವುದು ಗಗನಕುಸುಮವಾಗಿರುವ ಇಂದಿನ ಸನ್ನಿವೇಶದಲ್ಲಿ ತಮಿಳುನಾಡು ಸರ್ಕಾರದ ಈ ನಡೆ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪಕ್ಷಬೇಧ, ಜಾತಿಬೇಧ ಬದಿಗಿಟ್ಟು ತಮಿಳುನಾಡು ವಿಧಾನಸಭೆಯ ಎಲ್ಲ ಶಾಸಕರು ಒಟ್ಟಾಗಿ ಮಸೂದೆ ಬೆಂಬಲಿಸಿರುವುದು ವಿಶೇಷವಾಗಿದೆ.
| ಪಂಪಾಪತಿ ಹಿರೇಮಠ್, ನಿವೃತ್ತ ಬ್ಯಾಂಕ್ ಅಧಿಕಾರಿ ಧಾರವಾಡ