ಅಂಕಣ

ಸೂಕ್ತ ರೀತಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡಿ

ಕರೊನಾ ಸೋಂಕಿನ ಎರಡನೇ ಅಲೆಯ ಅತಿವೃಷ್ಟಿ ಅನೇಕ ಅವಾಂತರಗಳನ್ನು ಉಂಟುಮಾಡುತ್ತಿದೆ. ಲಸಿಕೆ ಚಿಕಿತ್ಸಾಕ್ರಮ, ವೈದ್ಯಕೀಯ ಸೌಲಭ್ಯ ಇದ್ದರೂ ಅಪಾರ ಸಾವುನೋವು ತಂದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಕೋವಿಡ್​ನಿಂದ ಮೃತ ಹೊಂದಿದವರ ಶವಸಂಸ್ಕಾರ ಮಾಡಲು ದಿನಪೂರ್ತಿ ಸಾಲುಗಟ್ಟಿ ನಿಲ್ಲಬೇಕಾಗಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಚಿತಾಗಾರಕ್ಕೆ ಕೊಂಡೊಯ್ಯಲು ಸಾಲುಸಾಲು ಆಂಬುಲೆನ್ಸ್ ನಿಂತಿವೆ. ಮೃತದೇಹವನ್ನು ಸೂಕ್ತರೀತಿಯಲ್ಲಿ ಶವಸಂಸ್ಕಾರ ಮಾಡಲು ಶವಾಗಾರಗಳನ್ನು ಮತ್ತು ನಿರ್ಜನ ಪ್ರದೇಶದಲ್ಲಿ ರುದ್ರಭೂಮಿಯನ್ನು ನೀಡಬೇಕು. ಈ ಮೂಲಕ ಸೂಕ್ತ ರೀತಿಯಲ್ಲಿ ಅಂತ್ಯಸಂಸ್ಕಾರ ನೇರವೇರಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು.

| ವಿದ್ಯಾಶ್ರೀ ಬಿ ಬಳ್ಳಾರಿ