ಫ್ರಾನ್ಸ್ನಲ್ಲಿ ಆಂದೋಲನ, ಹಿಂಸಾಚಾರ ಮತ್ತು ಲೂಟಿ ಸತತ ಮೂರನೆಯ ವಾರಾಂತ್ಯಕ್ಕೆ ಕಾಲಿಟ್ಟಿವೆ. ಈ ವಾರಾಂತ್ಯದಲ್ಲಿ ಅದು ಜರ್ಮನಿಗೂ ಹರಡಿ ಬರ್ಲಿನ್, ಹ್ಯಾಂಬರ್ಗ್ ಮತ್ತು ಮುಖ್ಯವಾಗಿ ಫ್ರಾಂಕ್ಫರ್ಟ್ ನಗರದಲ್ಲಿ ತೀವ್ರ ಅಶಾಂತಿ ಸೃಷ್ಟಿಸಿತು. ಈ ಎರಡು ಪ್ರಮುಖ ಯುರೋಪಿಯನ್ ದೇಶಗಳ ಜತೆಗೆ ಬೆಲ್ಜಿಯಂ, ಪೋರ್ತಗಲ್, ಸ್ಪೇನ್, ಇಟಲಿ, ಸ್ವಿಜರ್ಲೆಂಡ್, ಅಲ್ಬೇನಿಯಾ ಮತ್ತು ಸರ್ಬಿಯಾಗಳೂ ವ್ಯಾಪಕ ಅಶಾಂತಿಯನ್ನು ಅನುಭವಿಸುತ್ತಿವೆ. ಇದು ಇಂದಿನ ಕಥೆ. ನಾವೀಗ ಮೂರು ವರ್ಷಗಳ ಹಿಂದಕ್ಕೆ ಹೋಗೋಣ, ಅಟ್ಲಾಂಟಿಕ್ ಸಾಗರವನ್ನೂ ದಾಟೋಣ.
2023ರ ಅಕ್ಟೋಬರ್ 7ರಂದು ತನ್ನ ಜನರ ಮೇಲೆ ಹಮಾಸ್ ಎಸಗಿದ ಬರ್ಬರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಝಾ ಮೇಲೆ ಭೀಕರ ದಾಳಿ ಆರಂಭಿಸಿತಷ್ಟೆ. ಅದನ್ನು ಪ್ರತಿಭಟಿಸಿ ಅಮೆರಿಕಾದ ವಿವಿಧ ನಗರಗಳಲ್ಲಿ, ಕಾಲೇಜ್ ಮತ್ತು ಯೂನಿವರ್ಸಿಟಿ ಕ್ಯಾಂಪಸ್ಗಳಲ್ಲಿ ಇಸ್ರೇಲ್ ಮತ್ತು ಯೆಹೂದಿ ಜನಾಂಗದ ವಿರುದ್ಧವಾಗಿ ಘೊಷಣೆಗಳು ಹೊರಟವು ಹಾಗೂ ಪ್ರದರ್ಶನಗಳು ಆರಂಭವಾದವು. ಒಂದು ಹಂತದಲ್ಲಂತೂ ಇಡೀ ಅಮೆರಿಕಾ ಯೆಹೂದಿ ಜನಾಂಗದ ವಿರುದ್ಧವಾಗಿ ದನಿಯೆತ್ತಿದೆಯೇನೋ ಎಂಬ ಭ್ರಮೆಯುಂಟಾಗುವ ಮಟ್ಟಿಗೆ ಆ ಬೆಳವಣಿಗೆಗಳು ಕಂಡುಬಂದವು. ಅ್ಝ ಉಢಛಿಠ ಟ್ಞ ಎಚ್ಢಚ ಎಂದು ಹಾರ್ವರ್ಡ್ ಯೂನಿವರ್ಸಿಟಿ ಕ್ಯಾಂಪಸ್ನಿಂದ ನಮ್ಮ ಬಾಲಿವುಡ್ನವರೆಗೆ ‘ದೊಡ್ಡದೊಡ್ಡ’ ವ್ಯಕ್ತಿಗಳು ತಂತಮ್ಮ ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡದ್ದನ್ನೂ ನಾವು ನೋಡಿದೆವು. ಭಾರತದ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ಟೈನ್ ಎಂಬ ಹೆಸರು ಹೊತ್ತ ಚೀಲವನ್ನು ಹೆಗಲಿಗೆ ತೂಗುಹಾಕಿಕೊಂಡು ಸಂಸತ್ಗೆ ಹೋದುದನ್ನೂ ನಾವು ಕಂಡಾಯಿತು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ನಡೆಯತೊಡಗಿದಾಗ ಅದರ ವಿರುದ್ಧವಾಗಿ ಅಮೆರಿಕಾ, ಯೂರೋಪ್, ಅಷ್ಟೇಕೆ ನಮ್ಮ ಬಾಲಿವುಡ್ ಸಹಾ ದನಿಯನ್ನೇನೂ ಎತ್ತಲಿಲ್ಲ! ದನಿಯೆತ್ತಿದ ಮೊದಲ ಜಾಗತಿಕ ನಾಯಕ ಡೊನಾಲ್ಡ್ ಟ್ರಂಪ್, ಎರಡು ವರ್ಷಗಳ ಹಿಂದೆ ದೀಪಾವಳಿಯ ಸಂದರ್ಭದಲ್ಲಿ. ಆಮೇಲೆ ಅವರು ಅಮೆರಿಕಾದ ಅಧ್ಯಕ್ಷರಾದರು, ತಮ್ಮ ದೇಶದಲ್ಲಿ ಇಸ್ರೇಲ್ ವಿರುದ್ಧದ, ಪ್ಯಾಲೆಸೆôನ್ ಪರವಾದ ಗಲಾಟೆಗಳಿಗೆ ಕಡಿವಾಣ ಹಾಕಿದರು. ಅಷ್ಟೇ ಅಲ್ಲ, ಆ ಗಲಾಟೆಗಳು ಒಂದು ಸಮನ್ವಯಿತ ಯೋಜನೆಯ ಫಲವೇ, ಅದರ ಹಿಂದೆ ದೊಡ್ಡದಾದ ರಹಸ್ಯ ಕೈ ಇದೆಯೇ ಎಂದು ವ್ಯಾಪಕವಾಗಿ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ಟ್ರಂಪ್ ಮತ್ತವರ ಆಡಳಿತ ಕಿವಿಗೊಟ್ಟಿತು.
ಇದೆಲ್ಲದರ ಪರಿಣಾಮವಾಗಿ ಆರಂಭವಾದ ತನಿಖೆಗಳಲ್ಲಿ ದೊರೆತ ಸುಳಿವೆಂದರೆ ಅಮೆರಿಕಾದಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಹಾಗೂ ತಥಾಕಥಿತ ಪ್ರಗತಿಪರ ಸಂಘಟನೆಗಳು, ಮುಖ್ಯವಾಗಿ ಪೀಪಲ್ಸ್ ಫೋರಂ (ಪಿಎಫ್) ಮತ್ತು ಟ್ರೖೆಕಾಂಟಿನೆಂಟಲ್ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ರೀಸರ್ಚ್ (ಟಿಐಎಸ್ಆರ್) ಸಂಘಟನೆಗಳು ಹಣ ಮತ್ತು ಸಂಘಟನಾ ವ್ಯವಸ್ಥೆಗಳನ್ನು ವ್ಯಾಪಕವಾಗಿ ಒದಗಿಸಿವೆ ಹಾಗೂ ಬ್ರೇಕಿಂಗ್ ನ್ಯೂಸ್ ಪ್ರಚಾರ ನೀಡಿದೆ ಎಂದು. ಈ ಎಡಪಂಥೀಯ ಸಂಸ್ಥೆಗಳಿಗೆ ಹಣ ಮಿಲಿಯನ್ಗಟ್ಟಲೆ ಡಾಲರ್ಗಳಲ್ಲಿ ಬಂದಿರುವುದು ನೆವಿಲ್ ರಾಯ್ ಸಿಂಗಂ ಎಂಬಾತನಿಂದ ಎನ್ನುವುದೂ ಬೆಳಕಿಗೆ ಬಂತು.
ಶ್ರೀಲಂಕಾ ಮೂಲದ ಅಮೆರಿಕನ್ ಪ್ರಜೆಯಾದ ನೆವಿಲ್ ರಾಯ್ ಸಿಂಗಂ ಐಟಿ ಕ್ಷೇತ್ರದಲ್ಲಿ ವ್ಯವಹಾರ ನಡೆಸಿ ಶ್ರೀಮಂತನಾಗಿರುವ ವ್ಯಕ್ತಿ. ಎಡಪಂಥೀಯ ವಿಚಾರಧಾರೆಯ ಈತ 2017ರಲ್ಲಿ ಅಮೆರಿಕಾವನ್ನು ತೊರೆದು ಚೀನಾಗೆ ಓಡಿಹೋಗಿ ಶಾಂಘೖ ನಗರದಲ್ಲಿ ನೆಲೆಸಿದ್ದಾನೆ. ಅಲ್ಲಿ ಆತನ ಜೀವನ ಹಾಗೂ ವ್ಯವಹಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಆತ ಚೀನಿ ಕಮ್ಯೂನಿಸ್ಟ್ ಪಾರ್ಟಿಗೆ ಅತಿ ಹತ್ತಿರದ ಸಂಬಂಧ ಹೊಂದಿದ್ದಾನೆ ಮತ್ತು ಚೀನಿ ಸರ್ಕಾರದ ರಕ್ಷಣೆಯಲ್ಲಿ ಬದುಕುತ್ತಿದ್ದಾನೆ ಎಂದು ಮಾತ್ರ ಜಾಗತಿಕವಾಗಿ ಸುದ್ದಿಯಿದೆ.
ಸಿಂಗಂ ಪತ್ನಿ ಜೋಡಿ ಇವಾನ್ಸ್ ಅಮೆರಿಕಾದ ಲಾಸ್ ಏಂಜಲೀಸ್ನ ಉಪನಗರ ವೆನಿಸ್ನಲ್ಲೇ ಇದ್ದಾಳೆ. ಆದರೆ ಆಕೆ ಸಿಂಗಂನ ಎಡಪಂಥೀಯ ಪ್ರಚಾರ ಹಾಗೂ ಎಡಪಂಥೀಯ ಸಂಘಟನೆಗಳಿಗೆ ಧನಸಹಾಯದ ಚಟುವಟಿಕೆಗಳಲ್ಲಿ ಭಾಗಿಯಾಗಿಯೇ ಇದ್ದಾಳೆ. ಆಕೆ ಜಾಗತಿಕವಾಗಿ ಪ್ರಸಿದ್ಧಿಯಾಗಿರುವುದು ಕಮ್ಯೂನಿಸ್ಟ್ ಚೀನಾದ ಆರ್ಥಿಕ ನೀತಿಗಳು ಪ್ರಗತಿಗೆ ಒಳ್ಳೆಯ ಮಾದರಿ ಎಂದು ಪ್ರಚಾರ ಮಾಡುತ್ತಿರುವುದರಿಂದಾಗಿ.
ಈಗ ನಾವು ಭಾರತಕ್ಕೆ ಬರೋಣ. ಆರು ವರ್ಷಗಳ ಹಿಂದೆ ಚೀನಾದ ವೂಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಹೊರಬಿದ್ದ ಕೊರೋನಾ ವೈರಸ್ ಭಾರತವೂ ಸೇರಿದಂತೆ ಇಡೀ ಜಗತ್ತಿಗೆ ಹರಡಿದ ದಿನಗಳಲ್ಲಿ ಭಾರತದ ಹನ್ನೊಂದು ಡಿಜಿಟಲ್ ಮಾಧ್ಯಮಗಳು ಒಟ್ಟುಗೂಡಿ ‘ಡಿಜಿಪಬ್’ ಎಂಬ ಸಂಘಟನೆಯನ್ನು ಸ್ಥಾಪಿಸಿಕೊಂಡವು. ದ ವಯರ್, ನ್ಯೂಸ್ಲಾಂಡ್ರಿ, ನ್ಯೂಸ್ಕ್ಲಿಕ್, ಆಲ್ಟ್ನ್ಯೂಸ್, ಕ್ವಿಂಟ್, ನ್ಯೂಸ್ವಿುನಟ್ ಮುಂತಾದ ಆ ಹನ್ನೊಂದು ಡಿಜಿಟಲ್ ಮೀಡಿಯಾಗಳ ನಡುವಿನ ಸಮಾನ ಅಂಶವೆಂದರೆ ಅವೆಲ್ಲವೂ ಎಡಪಂಥೀಯ, ತಥಾಕಥಿತ ಪ್ರಗತಿಪರ ವಿಚಾರಧಾರೆಯ ಪರ. ಅದರರ್ಥ ಭಾರತದಲ್ಲಿ ಬಿಜೆಪಿ, ಮೋದಿ ಸರ್ಕಾರ ಸಹ ಅವುಗಳಿಗೆ ಅಪಥ್ಯ. ಡಿಜಿಪಬ್ನ ಅಧ್ಯಕ್ಷೆಯಾದದ್ದು ನ್ಯೂಸ್ವಿುನಟ್ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್, ಉಪಾಧ್ಯಕ್ಷರಾದದ್ದು ನ್ಯೂಸ್ಕ್ಲಿಕ್ನ ಪ್ರಧಾನ ಸಂಪಾದಕರಾದ ಪೊ›ಬೀರ್ ಪುರ್ಕಾಯಸ್ಥ.
ಕೊರೋನಾ ಸೋಂಕಿನ ನಿವಾರಣೆಯಲ್ಲಿ ಭಾರತದ ಪ್ರಯತ್ನಗಳನ್ನು ತೆಗಳುತ್ತಾ, ಚೀನಾದ ಪ್ರಯತ್ನಗಳನ್ನು ಹೊಗಳುತ್ತಾ ಲೇಖನಗಳನ್ನು ಪ್ರಕಟಿಸಿದ ಹಾಗೂ ‘ವರದಿ’ಗಳನ್ನು ನ್ಯೂಸ್ಲಿಂಕ್ ಪ್ರಕಟಿಸಿ ಪ್ರಚಾರದಲ್ಲಿ ತೊಡಗಿದ ಚೋದ್ಯವನ್ನು ಬೆನ್ನುಹತ್ತಿದ ಭಾರತದ ತನಿಖಾ ತಂಡಗಳು ಚೀನಾದಿಂದ ನ್ಯೂಸ್ಕ್ಲಿಕ್ಗೆ 90 ಕೋಟಿ ರೂಪಾಯಿಗಳ ಅಗಾಧ ಮೊತ್ತ ಹರಿದುಬಂದಿದೆ ಎಂದು ಮೂರು ವರ್ಷಗಳ ಹಿಂದೆ ದೂರು ಸಲ್ಲಿಸಿ ಪ್ರೊಬೀರ್ ಪುರ್ಕಾಯಸ್ಥ ಬಂಧನಕ್ಕೊಳಗಾದದ್ದು ನಿಮಗೆ ನೆನಪಿರಬಹುದು. ನಂತರ ಅವರು ನ್ಯಾಯಾಲಯದ ತೀರ್ಪಿಗನುಗುಣವಾಗಿ ಬಂಧಮುಕ್ತರಾದರು. ಆ ಕೇಸ್ ಇನ್ನೂ ನಡೆಯುತ್ತಿದೆ. ನ್ಯೂಸ್ಕ್ಲಿಕ್ ಚಟುವಟಿಕೆಗಳು ಭಾರತದಲ್ಲಿ ಚೀನಿ ಕೈ ಸಕ್ರಿಯವಾಗಿರುವುದರ ಸ್ಪಷ್ಟ ಸೂಚನೆ ಎಂದು ತನಿಖಾ ಸಂಸ್ಥೆಗಳು ಹೊರಡಿಸಿರುವ ವಿವರಗಳಿಂದ ತಿಳಿಯಲು ಅವಕಾಶವಿದೆ.
ಇನ್ನು ಭಾರತದಲ್ಲಿ ಚೀನಿ ಕೈ ಇರಬಹುದಾದ ಇತರ ಸೂಚನೆಗಳನ್ನು ಪರಿಶೀಲಿಸೋಣ. ಚೀನಾ ಪರವಾದ ನೆವಿಲ್ ರಾಯ್ ಸಿಂಗಂನ ಧನಸಹಾಯದಿಂದ ಮೇಲೆ ಉಲ್ಲೇಖಿಸಿರುವ, ಈಗ ಅಮೆರಿಕಾದ ಹದ್ದುಗಣ್ಣಿಗೆ ಗುರಿಯಾಗಿರುವ ಟಿಐಎಸ್ಆರ್ ಸ್ಥಾಪನೆಯಾದದ್ದು 1917ರಲ್ಲಿ. ‘ಟ್ರೖೆಕಾಂಟಿನೆಂಟಲ್’ ಎಂದು ನಾವು ಕರೆಯಬಹುದಾದ ಈ ಎಡಪಂಥೀಯ ಸಂಘಟನೆಯ ಮುಖ್ಯ ಕಚೇರಿ ಇರುವುದು ಅಮೆರಿಕಾದ ಮೆಸಾಚ್ಯುಸೆಟ್ಸ್ ರಾಜ್ಯದ ನಾರ್ಥ್ ಹ್ಯಾಂಪ್ಟನ್ನಲ್ಲಿ. ಅದರ ಶಾಖೆಗಳು ಬ್ರೆಝಿಲ್ನ ಸವಾ ಪಾಲೋ, ಅರ್ಜೆಂಟೀನಾದ ಬ್ಯೂನಸ್ ಐರ್ಸ್, ಸೌತ್ ಆಫ್ರಿಕಾದ ಜೊಹಾನ್ಸ್ಬರ್ಗ್ ಮತ್ತು ನಮ್ಮ ನವದೆಹಲಿಯಲ್ಲಿವೆ. ಟ್ರೖೆಕಾಂಟಿನೆಂಟಲ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿಜಯ್ ಪ್ರಸಾದ್ ಸಿಪಿಐ-ಎಂ ನಾಯಕಿ ಬೃಂದಾ ಕರಾಟ್ರ ಸಹೋದರಿಯ ಮಗ. ಜತೆಗೆ ವಿಜಯ್ ಪ್ರಸಾದ್ ಚೀನಿ ರಾಜಧಾನಿ ಬೀಜಿಂಗ್ನಲ್ಲಿನ ರೆನ್ವಿುನ್ ಯೂನಿವರ್ಸಿಟಿಯ ಫೆಲೋ. ಇವರ ಟ್ರೖೆಕಾಂಟಿನೆಂಟಲ್ ಜತೆಗೆ ಪೀಪಲ್ಸ್ ಫೋರಂ ಹಾಗೂ ಬ್ರೇಕಿಂಗ್ ನ್ಯೂಸ್ಗಳಿಗೆ ನೆವಿಲ್ ರಾಯ್ ಸಿಂಗಂರ ಎನ್ಜಿಓಗಳಿಂದ ನೂರು ಮಿಲಿಯನ್ ಡಾಲರ್ಗಳಷ್ಟು ಹಣ ಸಂದಾಯವಾಗಿದೆ ಎಂದು ಅಮೆರಿಕಾದ ಕಾಂಗ್ರೆಸ್ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ವೇಯ್್ಸ ಅಂಡ್ ಮೀನ್ಸ್ ಕಮಿಟಿ ತನಿಖೆಯ ಮೂಲಕ ಬಹಿರಂಗಪಡಿಸಿದೆ. ಸಿಂಗಂನ ಆ ಉದಾರಿ ಎನ್ಜಿಓಗಳು ಚೀನಿ ಕಮ್ಯೂನಿಸ್ಟ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿವೆ ಎಂದೂ ಹೇಳಲಾಗುತ್ತದೆ. ಇದರರ್ಥ ಟ್ರೖೆಕಾಂಟಿನೆಂಟಲ್ ಚೀನಿ ಕಮ್ಯೂನಿಸ್ಟ್ ಪಾರ್ಟಿಯ ಒಂದು ಕೈ, ಅದರ ಕೆಲಸ ಚೀನಾ ಪರವಾಗಿ, ಅಮೆರಿಕಾದ ವಿರುದ್ಧವಾಗಿ ಕೆಲಸ ಮಾಡುವುದು, ದುಷ್ಪ›ಚಾರ ನಡೆಸುವುದು ಎನ್ನುವುದು ವೇಯ್್ಸ ಅಂಡ್ ಮೀನ್ಸ್ ಕಮಿಟಿಯ ಇದುವರೆಗಿನ ತನಿಖೆಗಳ ಫಲಿತಾಂಶ. ಚೀನಿ ಕಮ್ಯೂನಿಸ್ಟ್ ಪಾರ್ಟಿ-ನೆವಿಲ್ ರಾಯ್ ಸಿಂಗಂ-ಟ್ರೖೆಕಾಂಟಿನೆಂಟಲ್-ವಿಜಯ್ ಪ್ರಸಾದ್-ಬೃಂದಾ ಕರಾಟ್-ಸಿಪಿಐ-ಎಂ, ಈ ಚುಕ್ಕೆಗಳ ಜತೆಗೆ ರೆನ್ವಿುನ್ ಯೂನಿವರ್ಸಿಟಿಯನ್ನೂ ಸೇರಿಸಿಕೊಂಡರೆ ಏನಾದರೂ ಚಿತ್ರ ಮೂಡಬಹುದೇ ಎಂದು ಈಗ ಭಾರತದಲ್ಲಿ ಹಲವರು ವಿಶ್ಲೇಷಕರು ಹುಡುಕಲು ತೊಡಗಿದ್ದಾರೆ. ಅಂತಿಮ ತೀರ್ಮಾನ ತಕ್ಷಣಕ್ಕೆ ಅಸಾಧ್ಯ. ಜತೆಗೆ ಇಲ್ಲಿನ ಸಿಜೆಪಿ ಆಂದೋಲನದ ಹಿಂದೆ ಟ್ರೖೆಕಾಂಟಿನೆಂಟಲ್, ಪೀಪಲ್ಸ್ ಫೋರಂ ಹಾಗೂ ಬ್ರೇಕಿಂಗ್ ನ್ಯೂಸ್ಗಳೂ ಇದ್ದಿರಬಹುದೇ, ಇದ್ದರೆ ಯಾವ ಬಗೆಯಲ್ಲಿ ಎಂಬ ಪ್ರಶ್ನೆಗಳೂ ಎದ್ದಿವೆ. ಅವುಗಳಿಗೆ ದೊರೆಯಬಹುದಾದ ಉತ್ತರಗಳಿಗಾಗಿ ಕಾಯೋಣ. ಅಮೆರಿಕಾದಲ್ಲಿ ಚೀನಿ ದುಷ್ಪ್ರಚಾರಕ ಕೈಗಳ ಅನಾವರಣಕ್ಕಾಗಿ ಅಲ್ಲಿನ ಸಂಸತ್ನ ಕೆಳಮನೆಯ ವೇಯ್್ಸ ಅಂಡ್ ಮೀನ್ಸ್ ಕಮಿಟಿ ಮತ್ತು ಟ್ರಂಪ್ ಆಡಳಿತದ ಡಿಪಾರ್ಟ್ವೆುಂಟ್ ಆಫ್ ಜಸ್ಟಿಸ್ ಕೈಗೊಂಡಿರುವ ಶೋಧನಾಕಾರ್ಯಗಳು ಇಲ್ಲಿಯ ಸಂಬಂಧಿತ ಸಂಸ್ಥೆಗಳಿಗೆ ದಾರಿ ತೋರಬಹುದೇ ಎನ್ನುವುದೂ ಕುತೂಹಲದ ವಿಷಯ.
ಭಾರತದ ಸಮಾಜೋ-ಆರ್ಥಿಕ ಚಿಂತನೆಯಲ್ಲಿ ನೆವಿಲ್ ರಾಯ್ ಸಿಂಗಂ ಪಾತ್ರವೇನು ಎನ್ನುವುದೂ ಆಸಕ್ತಿಕರ ವಿಷಯ. ಪತ್ರಕರ್ತ, ಅಭಿಪ್ರಾಯನಿರ್ವತೃ, ಉಡಛ್ಟಿಢಚಿಟಛಢ ಔಟಡಛಿಠ ಚ ಎಟಟಛ ಈಟ್ಠಜಜಠಿ ಕೃತಿಯ ಲೇಖಕ ಪಿ. ಸಾಯಿನಾಥ್ ಕನಿಷ್ಠ ಹನ್ನೆರಡು ವರ್ಷಗಳಿಂದ ನೆವಿಲ್ ರಾಯ್ ಸಿಂಗಂನೊಂದಿಗೆ ಸಂಪರ್ಕದಲ್ಲಿದ್ದಾರೆ. ಗ್ರಾಮೀಣ ಭಾರತದ ಸೂಕ್ಷ್ಮ ಚಿತ್ರಣಗಳನ್ನು ದಾಖಲಿಸಿಟ್ಟು ಅಧ್ಯಯನಕಾರರಿಗೆ ಮತ್ತು ನೀತಿನಿರ್ವತೃಗಳಿಗೆ ಲಭ್ಯವಾಗಿಸುವ ಸಾಯಿನಾಥ್ರ ಪೀಪಲ್ಸ್ ಆರ್ಕೆವ್ ಆಫ್ ರೂರಲ್ ಇಂಡಿಯಾ (ಪರಿ) ಬಹುಜನರಿಗೆ ತಿಳಿದ್ದೇ. ಅದನ್ನು ಸಾಯಿನಾಥ್ ಸ್ಥಾಪಿಸಿದ್ದು 2014ರಲ್ಲಿ ಮತ್ತು ಅವರೇ ಹೇಳುವ ಪ್ರಕಾರ ಆ ವಿಚಾರ ಅವರಿಗೆ ಹೊಳೆದದ್ದು ಸಿಂಗಂ ನೀಡಿದ ಸಲಹೆಯಿಂದ. ಜತೆಗೆ ‘ಪರಿ’ಗೆ ಅಗತ್ಯವಾದ ತಾಂತ್ರಿಕ ಸಹಕಾರ ಮತ್ತು ಸವಲತ್ತುಗಳನ್ನು ಒದಗಿಸಿದ್ದು ಸಿಂಗಂ 1988ರಲ್ಲಿ ಷಿಕಾಗೋದಲ್ಲಿ ಸ್ಥಾಪಿಸಿದ್ದ ಥಾಟ್ವರ್ಕ್ಸ್ ಎಂಬ ಸಾಫ್ಟ್ವೇರ್ ಕನ್ಸಲ್ಟೆನ್ಸಿ ಫಮ್ರ್. ಚೀನಿ ಕಮ್ಯೂನಿಸ್ಟ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿರುವ, ಚೀನಾ ಪರವಾಗಿ ಕೆಲಸ ಮಾಡುವ ಸಿಂಗಂ ಇಷ್ಟು ಸಹಕಾರವನ್ನು ಪುಕ್ಕಟೆಯಾಗಿ ನೀಡಿದನೇ? ಪ್ರತಿಫಲವಾಗಿ ಸಾಯಿನಾಥ್ರಿಂದ ಏನನ್ನೂ ಕೇಳಲಿಲ್ಲವೇ? ಥಾಟ್ವರ್ಕ್ಸ್ ಅನ್ನು ಸಿಂಗಂ ಬ್ರಿಟಿಷ್ ಸಂಸ್ಥೆಯೊಂದಕ್ಕೆ 2017ರಲ್ಲಿ 785 ಮಿಲಿಯನ್ ಡಾಲರ್ಗಳಿಗೆ ಮಾರಿದ. ಆ ಹಣ ಈಗ ಚೀನಾ ಪರವಾಗಿ ಕೆಲಸವಾಡುತ್ತಿವೆ ಎಂದು ಹೇಳಲಾಗುವ ಪೀಪಲ್ಸ್ ಫೋರಂ, ಬ್ರೇಕಿಂಗ್ ನ್ಯೂಸ್ ಮತ್ತು ಟ್ರೖೆಕಾಂಟಿನೆಂಟಲ್ಗಳಂತಹ ಸಂಸ್ಥೆಗಳಿಗೆ ದೇಣಿಗೆಯಾಗಿ ಸಿಗುತ್ತಿದೆ. ಅಂದಹಾಗೆ ಪಿ. ಸಾಯಿನಾಥ್ ಟ್ರೖೆಕಾಂಟಿನೆಂಟಲ್ನ ಫೆಲೋ!
ಟ್ರೖೆಕಾಂಟಿನೆಂಟಲ್ ಮತ್ತಿತರ ಎಡಪಂಥೀಯ, ಚೀನಾ ಪರವಾದ ಸಂಘಟನೆಗಳ ಚಟುವಟಿಕೆಗಳನ್ನು ಈಗೇನೋ ಅಮೆರಿಕನ್ ಸಂಸತ್ನ ಕೆಳಮನೆಯ ವೇಯ್್ಸ ಅಂಡ್ ಮೀನ್ಸ್ ಕಮಿಟಿ ತನಿಖೆ ಮಾಡುತ್ತಿದೆ. ಈ ತನಿಖೆ ಎಷ್ಟು ಕಾಲ ನಡೆಯಬಹುದು? ಈ ಲೇಖನ ನಿಮ್ಮ ಕೈಗೆ ಸಿಗುವ ಹೊತ್ತಿಗೆ ಅಮೆರಿಕ ಸಂಸತ್ನ ಮಧ್ಯಾವಧಿ ಚುನಾವಣೆಗಳ ಫಲಿತಾಂಶಗಳು ಹೊರಬರಲಾರಂಭಿಸಿರುತ್ತವೆ. ಅವು ರಿಪಬ್ಲಿಕನ್ ಪಕ್ಷಕ್ಕೆ ಮುಳುವಾಗಿ ಡೆಮೊಕ್ರಾಟಿಕ್ ಪಕ್ಷ ಕೆಳಮನೆಯಲ್ಲಿ ಬಹುಮತ ಗಳಿಸಿದರೆ ವೇಯ್್ಸ ಅಂಡ್ ಮೀನ್ಸ್ ಕಮಿಟಿ ಪುನರ›ಚನೆಯಾಗಬಹುದು, ಹೊಸ ಡೆಮೊಕ್ರಾಟಿಕ್ ಪ್ರಾಬಲ್ಯದ ಕಮಿಟಿ ತನಿಖೆಗಳನ್ನು ನಿಲ್ಲಿಸಿಬಿಡಬಹುದು. ಡೆಮೊಕ್ರಾಟಿಕ್ ಪಕ್ಷ ಎಡಪಂಥೀಯ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಹೀಗಾಗಿ ಈಗಿನ ಕಮಿಟಿ ತೋರಿಸುತ್ತಿರುವ ದಾರಿಯಲ್ಲಿ ನಾವೂ ನಡೆದು ನಮ್ಮ ಸುರಕ್ಷೆಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಇದಕ್ಕೆ ಸಂಬಂಧಿಸಿದಂತೆ ರಾಜಧಾನಿಯಲ್ಲಿ ಘಟಿಸುತ್ತಿರುವ ಬೆಳವಣಿಗೆಗಳ ಜತೆಗೆ ಅರುಣಾಚಲ ಪ್ರದೇಶದಲ್ಲಿ ಅಪ್ಪರ್ ಸಿಯಾಂಗ್ ಮಲ್ಟಿಪರ್ಪಸ್
ಪ್ರಾಜೆಕ್ಟ್ಗೆ ಎದುರಾಗಿರುವ ವಿರೋಧದಲ್ಲಿರಬಹುದಾದ ಚೀನಿ ಸಂಚು, ಸಿಯಾಂಗ್ ಇಂಡೀಜೀನಸ್ ಪೀಪಲ್ಸ್ ಫೋರಂನ ಕಾನೂನು ಸಲಹೆಗಾರ್ತಿ ಭಾನು ತಾತಕ್ರ ದೊಡ್ಡದನಿಯ ವಿರೋಧ ಮತ್ತು ಅವರ ಖಾತೆಯಲ್ಲಿ ಜಮೆಯಾಗಿದೆ ಎನ್ನಲಾದ ವಿದೇಶಿ ಹಣದ ಕುರಿತಾಗಿ ತನಿಖೆ ಅಗತ್ಯ. ಜತೆಗೆ ಜೂನ್ 2007ರಲ್ಲಿ ಚೀನಿ ಕಮ್ಯೂನಿಸ್ಟ್ ಪಾರ್ಟಿಯ ವಿದೇಶಿ ಗುಪ್ತಚರ ವಿಭಾಗ ಎಕ್ಸ್ಟರ್ನಲ್ ಲಿಯಾಸನ್ ಡಿಪಾರ್ಟ್ ಮೆಂಟ್ನೊಂದಿಗೆ ಭಾರತದ ಕಾಂಗ್ರೆಸ್ ಪಕ್ಷ ಮಾಡಿಕೊಂಡ ರಹಸ್ಯ ಒಪ್ಪಂದದ ವಿವರಗಳೂ ಬಹಿರಂಗವಾಗಬೇಕಾದ ಅಗತ್ಯವಿದೆ. ಚುಕ್ಕೆಗಳ ಜೋಡಣೆಯಲ್ಲಿ ಅದೂ ಸಹಾಯಕವಾಗಬಹುದೇನೋ.
-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)