ಕೇರಳದ ಕಾಂಜಿಕುಝಿಯ ರೈತ ಸುಜಿತ್​(  
ಅಂಕಣ

success story: ತರಕಾರಿ ಮಾರಲು ಐಷಾರಾಮಿ ಆಡಿ ಕಾರಿಲ್ಲಿ ಬರ‍್ತಾನೆ ರೈತ!

ತಿರುವನಂತಪುರ: ಸಾಮಾನ್ಯವಾಗಿ ಸಾಹುಕಾರರು ಐಷಾರಾಮಿ ಕಾರುಗಳನ್ನು ಹೊಂದಿರುತ್ತಾರೆ ಎಂಬುದು ತಿಳಿದ ಸಂಗತಿಯೇ. ಆದರೆ ಬಡವರು, ಕೊಳಕುಬಟ್ಟೆ ಹಾಕಿಕೊಂಡವರೆಂಬ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ರೈತರು ಆಡಿ ಕಾರ್​ನಲ್ಲಿ ಸಂಚರಿಸುವುದು, ಅದರಲ್ಲೂ ತರಕಾರಿ ಮಾರಲಿಕ್ಕೆ ಆಡಿ ಕಾರ್​ನಲ್ಲಿ ಹೋಗುವುದು ಎಂದರೆ ಯಾರ ಕಣ್ಣು ತಾನೆ ಹುಬ್ಬೇರುವುದಿಲ್ಲ? ಹೌದು ಇದು ನಂಬಲೇಬೇಕಾದ ಸಂಗತಿ.

ದೇವರ ನಾಡು ಕೇರಳದಲ್ಲಿ ಕಾಂಜಿಕುಝಿಯ ರೈತ ಸುಜಿತ್​(34) ರಸ್ತೆಬದಿಯಲ್ಲಿ ತರಕಾರಿ ಮಾರಲು ಐಷಾರಾಮಿ ಆಡಿ ಎ4 ಸೆಡಾನ್‌ನಲ್ಲಿ ಹೋಗುತ್ತಾರೆ. ಈ ಯುವ ರೈತನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಜಿತ್ ಆಧುನಿಕ ಮತ್ತು ಸಾವಯವ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆತ ತನ್ನ ತೋಟದಲ್ಲಿ ಬೆಳೆದ ತರಕಾರಿಯನ್ನು ಮಾರಾಟ ಮಾಡಲು ಅಲಪ್ಪುಝಾಗೆ ತನ್ನ ಆಡಿ ಕಾರಲ್ಲಿ ತೆರಳುತ್ತಾರೆ.

ಈ ರೈತ ರಸ್ತೆ ಬದಿ ತರಕಾರಿ, ಸೊಪ್ಪು ಜೋಡಿಸಿಟ್ಟು ಮಾರಾಟ ಮಾಡಿದ ಬಳಿಕ ತನ್ನ ಅದೇ ಆಡಿ ಕಾರಲ್ಲಿ ಮನೆಗೆ ವಾಪಸ್​ ಹೋಗುತ್ತಾರೆ.
ಇತ್ತೀಚೆಗೆ ವೆರೈಟಿ ಫಾರ್ಮರ್​ ಎಂಬ ಇನ್ಸ್ಟಾಗ್ರಾಮ್ ಯೂಸರ್​ ಪೇಜ್​ನಲ್ಲಿ ಸುಜಿತ್​ ಆಡಿ ಕಾರ್​ನಲ್ಲಿ ಅಂಗಡಿಯೊಂದರ ಬಳಿ ಬರುವುದು, ಅಲ್ಲೇ ನಿಂತಿದ್ದ ಆಟೋರಿಕ್ಷಾವೊಂದರ ಬಳಿ ತೆರಳಿ ರಸ್ತೆ ಬದಿ ಪ್ಲಾಸ್ಟಿಕ್​ ಹಾಳೆ ಹಾಸಿ ಅದರ ಮೇಲೆ ತರಕಾರಿ, ಸೊಪ್ಪು ಇಟ್ಟು ಮಾರಾಟ ಮಾಡುವುದು, ಬಳಿಕ ಪ್ಲಾಸ್ಟಿಕ್​ ಹಾಳೆ ಮಡಚಿಕೊಂಡು ತನ್ನ ಆಡಿ ಕಾರು ಹತ್ತಿ ಮನೆ ಕಡೆ ತೆರಳುವ ದೃಶ್ಯ ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ

10ವರ್ಷದಿಂದ ಆಧುನಿಕ ಪದ್ಧತಿಗಳನ್ನು ಅನುಸರಿಸುತ್ತಿರುವುದರ ಜತೆಗೆ ಮತ್ತು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸುಜಿತ್​ ಇತರ ರೈತರಿಗೆ ಮಾದರಿಯಾಗಿ ನಿಲ್ಲುತ್ತಾರೆ.

ಕೃಷಿ ಮಾಡಿ ಕಷ್ಟನಷ್ಟದ ಪಾಲಾಗಿದ್ದೇವೆ ಎಂದು ಹೇಳುವ ರೈತರು ಕೃಷಿ ಜತೆ ರಸ್ತೆಗಿಳಿದು ವ್ಯಾಪಾರ ಮಾಡಿದರೆ ಲಾಭದ ಹಾದಿಯಲ್ಲಿ ಸಾಗಬಹುದು ಎಂಬುದಕ್ಕೆ ನಿದರ್ಶನರಾಗಿದ್ದಾರೆ.