ಅಂಕಣ

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಭಾರತ

ವಿಶ್ವದ ನಾಗರಿಕತೆಯ ಮೇಲೆ ಭಾರತದ ವಿಜ್ಞಾನ ತಂತ್ರಜ್ಞಾನದ ಪ್ರಭಾವ ಅಪಾರ. ಭರತ ಖಂಡದ ಸಮಗ್ರ ಇತಿಹಾಸ ಗಮನಿಸಿದರೆ, ಯಾವಾಗ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆಯೋ ಅಂತಹ ಎಲ್ಲ ಸಂದರ್ಭಗಳಲ್ಲಿ ವಿಶ್ವದ ಪ್ರಬಲ, ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಿದ್ದನ್ನು ಕಾಣಬಹುದು. ಲೋಹಶಾಸ್ತ್ರ, ಬಾಹ್ಯಾಕಾಶ, ಗಣಿತ, ಖಗೋಳ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಹಡಗು ನಿರ್ವಣ, ನ್ಯಾವಿಗೇಶನ್, ಸಿವಿಲ್ ಇಂಜಿನಿಯರಿಂಗ್, ನೀರಾವರಿ ನಿರ್ವಹಣೆ, ಔಷಧಿ ಶಾಸ್ತ್ರಗಳ ತವರು ಭಾರತ. 800 ವರ್ಷಗಳ ಇಸ್ಲಾಂ ಆಕ್ರಮಣದ ನಂತರವೂ ಬ್ರಿಟಿಷರು ಭಾರತದಲ್ಲಿ ವಸಾಹತುಗಳನ್ನು ಸ್ಥಾಪಿಸುವ ಮೊದಲು 17ನೇ ಶತಮಾನದಲ್ಲಿ ಭಾರತದ ಜಿಡಿಪಿ ಶೇ 25 - 30ರಷ್ಟು ಇತ್ತು ಎಂಬುದು ನಮ್ಮ ಹಿರಿಮೆಗೆ ಪುರಾವೆ. ಈ ಕುರಿತು ಕಳೆದ 2 ಸಾವಿರ ವರ್ಷಗಳ ಜಾಗತಿಕ ಅರ್ಥಿಕತೆಯನ್ನು ಅಧ್ಯಯನ ನಡೆಸಿರುವ ಬ್ರಿಟಿಶ್ ಅರ್ಥಶಾಸ್ತ್ರಜ್ಞ ಆಂಗುಸ್ಮಾ್ಯಡಿಸನ್, ಎರಡು ಸಾವಿರ ವರ್ಷಗಳ ಜಾಗತಿಕ ಆರ್ಥಿಕ ಇತಿಹಾಸದ ಸಮಗ್ರ ಅಧ್ಯಯನದ ನಂತರ ವಾಸ್ತವಿಕ ಅಂಶಗಳನ್ನು ಜಗತ್ತಿನ ಎದುರು ಇಟ್ಟಿದ್ದು, ಭಾರತದ ಆರ್ಥಿಕತೆ ಇಡೀ ವಿಶ್ವದಲ್ಲಿಯೇ ಉತ್ತುಂಗದಲ್ಲಿತ್ತು ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ್ದಾರೆ. ತುಕ್ಕು ಹಿಡಿಯದಂತಹ ಕಬ್ಬಿಣದ ಉತ್ಪಾದನೆ, ಸಣ್ಣ ಬೆಂಕಿ ಪೊಟ್ಟಣದಲ್ಲಿಯೂ ಕೂಡ ದೊಡ್ಡ ಸೀರೆಗಳನ್ನು ಮಡಿಚಿಡುವ ಕೌಶಲ್ಯ, ಬೃಹದಾಕಾರಾದ ಕಟ್ಟಡ ನಿರ್ಮಾಣ ತಂತ್ರಜ್ಞಾನ, ಗ್ರಾಮಗಳಲ್ಲಿ ಸಮರ್ಪಕ ನೀರಾವರಿ ನಿರ್ವಹಣೆ, ಕೃಷಿ ಕ್ಷೇತ್ರದಲ್ಲಿನ ವಿನೂತನ ವಿಧಾನಗಳು, ಆಯುರ್ವೆದ ಹಾಗೂ ಇತರ ವೈದ್ಯ ಪದ್ಧತಿಗಳಿಂದ ಆರೋಗ್ಯ ನಿರ್ವಹಣೆ, ಗುಡಿ ಕೈಗಾರಿಕೆಗಳು, ವಾಸ್ತುಶಿಲ್ಪ ನಿರ್ವಣ, ಗಣಿಗಾರಿಕೆ ತಂತ್ರಜ್ಞಾನವೂ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧಿಸಿದ್ದ ವೈಜ್ಞಾನಿಕ ಪ್ರಗತಿಯ ಕಾರಣದಿಂದಲೇ ಭಾರತ ಸಮೃದ್ಧ ರಾಷ್ಟ್ರವಾಗಿತ್ತು ಎಂಬುದು ಸ್ಪಷ್ಟ.

ಇಂದು ಚಂದ್ರಯಾನ - 3ರ ಯಶಸ್ಸನ್ನು ಇಡೀ ಸಮಾಜ ಸಂಭ್ರಮಿಸುತ್ತಿರುವ ಪರಿಯನ್ನು ಗಮನಿಸಿದರೆ, ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಪ್ರಾಮುಖ್ಯತೆ, ಸಮಾಜ ಆ ಕ್ಷೇತ್ರದೆಡೆಗೆ ತೋರುತ್ತಿರುವ ಗೌರವವನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದಾಗಿನಿಂದಲೂ ಭಾರತದ ಸಮಗ್ರ ಅಭಿವೃದ್ಧಿಗೆ ಯಾವಾಗಲೂ ಜನರ ಸಹಭಾಗಿತ್ವದ ಅಗತ್ಯತೆ ಕುರಿತು ಹೆಚ್ಚಿನ ಒತ್ತು ನೀಡುತ್ತ ಬಂದಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸಾಮಾನ್ಯ ಜನತೆ ಕೂಡ ದೇಶದ ಸಾಧನೆಗಳನ್ನು ವೈಯುಕ್ತಿಕ ಸಾಧನೆಗಳ ರೀತಿಯಲ್ಲಿ ಸಂಭ್ರಮಿಸುತ್ತಿರುವುದು ಅನುಕರಣೀಯ.

ಭಾರತದ ವಿಶೇಷತೆಯೆಂದರೆ ನಾವು ವಿಜ್ಞಾನವೇ ಬೇರೆ ಧರ್ಮವೇ ಬೇರೆ ಎಂದು ಯಾವತ್ತೂ ಪರಿಭಾವಿಸಿಯೇ ಇಲ್ಲ. ಧರ್ಮವೇ ವೈಜ್ಞಾನಿಕ ಚಿಂತನೆಯ ಆಧಾರದ ಮೇಲೆ ರೂಪುಗೊಂಡಹ ಸಂಸ್ಕೃತಿ ನಮ್ಮದು. ಭರತ ಖಂಡದ ಆಲೋಚನಾ ಲಹರಿಯೇ ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುವಂತಹದ್ದು. ಕಳೆದ ಒಂದು ಸಾವಿರ ವರ್ಷಗಳ ಆಕ್ರಮಣ, ವಸಾಹತೀಕರಣಗಳ ಕಾರಣದಿಂದ ವಿಜ್ಞಾನ ಕ್ಷೇತ್ರ ಸಂಪೂರ್ಣ ಅವಗಣನೆಗೆ ತುತ್ತಾಗಿದ್ದನ್ನು ನಾವು ಕಾಣಬಹುದು. ಯಾವಾಗ ವಿಜ್ಞಾನದ ಪತನವಾಯಿತೋ ಆವಾಗಲೆಲ್ಲ ನಮ್ಮ ದೇಶದ ಹಾಗೂ ಸಂಸ್ಕೃತಿ, ಧರ್ಮದ ಪತನ ಕೂಡ ಅಗಿದೆ. ಒಂದು ಸಾವಿರ ವರ್ಷಗಳ ದಾಸ್ಯದ ಅವಧಿಯಲ್ಲಿನ ವೈಜ್ಞಾನಿಕ ಪ್ರಭಾವಳಿಯಿಂದ ದೂರವಾಗಿ, ಸ್ವಾತಂತ್ರಾ್ಯನಂತರ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದರ ಪರಿಣಾಮ ಇಂದು ನಾವು ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದು ಗಮನಾರ್ಹ.

ಇಂದು ಚಂದ್ರಯಾನ - 3ರ ಯಶಸ್ಸನ್ನು ಇಡೀ ಸಮಾಜ ಸಂಭ್ರಮಿಸುತ್ತಿರುವ ಪರಿಯನ್ನು ಗಮನಿಸಿದರೆ, ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಪ್ರಾಮುಖ್ಯತೆ, ಸಮಾಜ ಆ ಕ್ಷೇತ್ರದೆಡೆಗೆ ತೋರುತ್ತಿರುವ ಗೌರವವನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದಾಗಿನಿಂದಲೂ ಭಾರತದ ಸಮಗ್ರ ಅಭಿವೃದ್ಧಿಗೆ ಯಾವಾಗಲೂ ಜನರ ಸಹಭಾಗಿತ್ವದ ಅಗತ್ಯತೆ ಕುರಿತು ಹೆಚ್ಚಿನ ಒತ್ತು ನೀಡುತ್ತ ಬಂದಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸಾಮಾನ್ಯ ಜನತೆ ಕೂಡ ದೇಶದ ಸಾಧನೆಗಳನ್ನು ವೈಯುಕ್ತಿಕ ಸಾಧನೆಗಳ ರೀತಿಯಲ್ಲಿ ಸಂಭ್ರಮಿಸುತ್ತಿರುವುದು ಅನುಕರಣೀಯ. ಕೇವಲ ಕ್ರಿಕೆಟ್ ಮಾತ್ರ ಈ ದೇಶದಲ್ಲಿ ಪ್ರಾಮುಖ್ಯತೆ ಪಡೆದ ಸಂದರ್ಭದಲ್ಲಿ ಜಾವೆಲಿನ್ ಎಸೆತದಂತಹ ಕ್ರೀಡೆಗಳು ಎಂದೂ ಕೂಡ ಪ್ರಾಮುಖ್ಯತೆ ಪಡೆದಿರಲಿಲ್ಲ. ಆದರೆ ಬದಲಾಗಿರುವ ಸನ್ನಿವೇಶದಲ್ಲಿ ಜಾವೆಲಿನ್ ಎಸೆತದಲ್ಲಿ ನೀರಜ್ ಛೋಪ್ರಾ ಅವರ ಸಾಧನೆಯನ್ನು ದೇಶ ಕೊಂಡಾಡಿದ ಸಂಗತಿ ಹಿಂದಿಗಿಂತಲೂ ಗಮನಾರ್ಹ. ಚೆಸ್ ಎಂದರೆ ಕೇವಲ ಕೆಲವೇ ಜನರ ಪಾಲಿನ ಕ್ರೀಡೆ ಅಂದುಕೊಂಡಿದ್ದ, ಶಾಲಾ-ಕಾಲೇಜುಗಳಲ್ಲಿಯೂ ಕೂಡ ಅಷ್ಟೊಂದು ಮಹತ್ವ ನೀಡದಿದ್ದ ಸಂದರ್ಭದಲ್ಲಿ ಇಂದು ಪ್ರಜ್ಞಾನಂದ ಅವರಂತಹ ಪ್ರತಿಭೆಗಳು ದೇಶದ ಮನೆ ಮಾತಾಗಿರುವುದು, ಕ್ರಿಕೆಟ್ ಹೊರತಾದ ಕ್ರೀಡೆಗಳಿಗೂ ಸಿಗುತ್ತಿರುವ ಪ್ರಾಮುಖ್ಯತೆ ಹಾಗೂ ದೇಶದ ಜನರಲ್ಲಿ ಬದಲಾಗುತ್ತಿರುವ ಅಭಿರುಚಿಗಳಿಗೆ ಸಾಕ್ಷಿ.

ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಹಾಗೂ ದೀಪಾವಳಿ ಆಚರಣೆಗಳನ್ನು ಯಾವ ರೀತಿಯಲ್ಲಿ ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತಿತ್ತೋ ಅದೇ ರೀತಿಯಲ್ಲಿ ಇಸ್ರೋ ಚಂದ್ರಯಾನದ ಯಶಸ್ಸನ್ನೂ ಕೂಡ ಸಂಭ್ರಮಿಸಿದ್ದು ವಿಶೇಷ. ಜನರು ಸ್ವಯಂಪ್ರೇರಿತರಾಗಿ ಸಣ್ಣ ಸಣ್ಣ ಹಳ್ಳಿಗಳು, ಮಹಾನಗರಗಳ ಸರ್ಕಲ್​ಗಳಲ್ಲಿ ವಿಜ್ಞಾನಿಗಳ ಸಾಧನೆಗಳನ್ನು ಕೊಂಡಾಡಿದ್ದನ್ನು ದೇಶ ಹಿಂದೆಂದೂ ಕಂಡಿರಲಿಲ್ಲ. ಶಿಕ್ಷಕ ವೃಂದ ಶಾಲಾ-ಕಾಲೇಜುಗಳಲ್ಲಿ ಚಂದ್ರಯಾನದ ಉಚಿತ ಸ್ಕ್ರೀನಿಂಗ್ ಆಯೋಜನೆಗೊಳಿಸಿ ಮಕ್ಕಳನ್ನು ಹುರಿದುಂಬಿಸಿದ ಪರಿ ಅದ್ಭುತ. ಅಂದು ಸಂಭ್ರಮದಲ್ಲಿ ಭಾಗಿಯಾಗಿದ್ದ ಮಗುವೊಂದು ದೊಡ್ಡವನಾದ ಮೇಲೆ ನೆಪ್ಚೂನ್ ಗ್ರಹಕ್ಕೆ ಹೋಗ್ತೀನಿ ಎಂದು ಹೇಳಿದ್ದು ಮುಂದಿನ ಪೀಳಿಗೆಯಲ್ಲಿ ವಿಜ್ಞಾನದ ಬಗೆಗೆ ಹೆಚ್ಚುತ್ತಿರುವ ಆಸಕ್ತಿ, ಪ್ರೇರಣೆ ಒದಗಿಸುವಂತಹದ್ದು.

ಸಮಾಜದ ಎದುರು ನಾವು ಯಾರನ್ನು ರೋಲ್ ಮಾಡಲ್ ರೀತಿ ಬಿಂಬಿಸುತ್ತೇವೆಯೋ ಮುಂಬರುವ ಪೀಳಿಗೆ ಕೂಡ ಅದೇ ಮಾದರಿ ಅನುಸರಿಸಲು ಪ್ರಾರಂಭಿಸುತ್ತದೆ. ಸಿನಿಮಾ ನಟರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳನ್ನೇ ಹೀರೋಗಳ ರೀತಿ ಬಿಂಬಿಸಿದರೆ ಅವರನ್ನೇ ರೋಲ್ ಮಾಡೆಲ್​ಗಳನ್ನಾಗಿ ಸ್ವೀಕರಿಸಿ, ಹೇಗಾದರೂ ಮಾಡಿ ವಾಮ ಮಾರ್ಗದಲ್ಲಿಯಾದರೂ ಅದನ್ನೇ ಅನುಕರಿಸುವ ಚಾಳಿ ಶುರುವಾಗುವುದು ಆತಂಕಕಾರಿ ಬೆಳವಣಿಗೆ. ಈ ಹಿಂದೆ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಅವರ ಸಾಧನೆಗಳಿಗೆ ಆರಾಧಿಸುತ್ತಿದ್ದ ಭಾರತೀಯರು ಇಂದು ಚಂದ್ರಯಾನದ ಯಶಸ್ಸು ಪ್ರಶಂಸಿಸುತ್ತಿರುವ ಪರಿಯು ಪ್ರಸ್ತುತ ಪ್ರಚಲಿತ ಸಮಾಜದಲ್ಲಿ, ಸಮಕಾಲೀನ ಬೆಳವಣಿಗೆಗಳನ್ನು ಗಮನಿಸಿದರೆ ವಿಜ್ನಾನಿಗಳು, ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಕ್ಕೂ ಪ್ರಾಧಾನ್ಯತೆ ಗ್ಲಾಮರ್ ಸಿಗುತ್ತಿರುವುದರ ಪ್ರತೀಕ. ಮುಂದಿನ ಪೀಳಿಗೆ ಕೂಡ ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕನಸು ಕಾಣಲು ಶುರುವಾಗುತ್ತಿರುವುದು ದೇಶದ ವಿಜ್ಞಾನ ಕ್ಷೇತ್ರದೆಡೆಗೆ ಜನಸಾಮಾನ್ಯರಲ್ಲಿ ಬದಲಾಗುತ್ತಿರುವ ಮನಸ್ಥಿತಿಗೆ ಸಾಕ್ಷಿ. ನಮ್ಮೆಲ್ಲರ ಗಮನಕ್ಕೆ ಬಂದಿರುವಂತೆ, ನಮ್ಮ ಗಲ್ಲಿಯಲ್ಲಿಯೋ, ಊರಲ್ಲಿಯೋ ಇರುತ್ತಿದ್ದ ಇಸ್ರೋ ವಿಜ್ಞಾನಿಗಳನ್ನು ಇತರ ಉದ್ಯೋಗಿಗಳಂತೆಯೇ ಪರಿಗಣಿಸುತ್ತಿದ್ದ ಕಾಲ ಹೊರಟು ಹೋಗಿ ಅವರ ಸಾಧನೆಗಳಿಗೆ ಸಾರ್ವಜನಿಕರಿಂದ ಇಂದು ಸಿಗುತ್ತಿರುವ ವ್ಯಾಪಕ ಸನ್ಮಾನ, ಅಭೂತಪೂರ್ವ ಪ್ರಶಂಸೆ ನಿಜಕ್ಕೂ ಸೋಜಿಗ.

ಮುಂಬರುವ 15-20 ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರವು ಜಗತ್ತನ್ನು ನಿಯಂತ್ರಿಸಲಿದ್ದು, ವಿಶ್ವವು ಆರ್ಟಿಫಿಶಿಯಲ್ ಇಂಟೆಲಿಜನ್ಸ್, ಮಶೀನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ , 6ಜಿ, ಸೆಮಿ ಕಂಡಕ್ಟರ್ ತಂತ್ರಜ್ಞಾನ, ಮಟೀರಿಯಲೈನ್ಸ್, ರೋಬಾಟಿಕ್ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ವೈಜ್ಞಾನಿಕ ಆಗು-ಹೋಗುಗಳಿಗೆ ಸಾಕ್ಷಿಯಾಗಲಿದ್ದು, ಭಾರತವು ಕೂಡ ಸಮಕಾಲೀನ ತಂತ್ರಜ್ಞಾನಗಳಿಗೆ ಪೂರಕ ವಾತಾವರಣ ನಿರ್ವಿುಸದೇ ಹೋದಲ್ಲಿ ದೇಶ ಮುಂದುವೆರೆಯುವುದು ಅಸಾಧ್ಯ. ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳಿಗೆ ಇಂದೇ ವೈಜ್ಞಾನಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ತಂತ್ರಜ್ಞಾನ ಕ್ಷೇತ್ರಕ್ಕೆ, ಫ್ಯೂಚಪೂರ್›ಫ್ ಭಾರತ ನಿರ್ವಣಕ್ಕೆ ಪ್ರಸ್ತುತ ಕೇಂದ್ರ ಸರ್ಕಾರ ಅತೀ ಹೆಚ್ಚಿನ ಆದ್ಯತೆಯನ್ನು ಒದಗಿಸಿರುವುದು ಗಮನಾರ್ಹ.

ಇದನ್ನರಿತೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಹಿಂದಿನ ಯಾವ ಸರ್ಕಾರವೂ ನೀಡಿರದ ಪ್ರಾಮುಖ್ಯತೆಯನ್ನು ಒದಗಿಸಿದ್ದು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರವೊಂದಕ್ಕೇ ಶೇ.130 ರಷ್ಟು ಅಧಿಕ ಅನುದಾನ ನೀಡಿದೆ. ಇಸ್ರೋ ಗೆ ಸಹಕಾರಿಯಾಗಲು ಅನೇಕ ಖಾಸಗಿ ಸಂಸ್ಥೆಗಳಿಗೂ ಭಾರತದ ಬಾಹ್ಯಾಕಾಶ ತಂತ್ರಜ್ನಾನ ಕ್ಷೇತ್ರದಲ್ಲಿ ಅವಕಾಶಗಳನ್ನು ಒದಗಿಸಿದೆ. ಇನ್-ಸ್ಪೇಸ್ ಎಂಬ ಆರ್ಗನೈಸೇಶನ್ ಮೂಲಕ ದೇಶದ ಬಾಹ್ಯಾಕಾಶ ಟೆಕ್ನಾಲಜಿಯಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಕಂಪನಿಗಳು, ಸ್ಟಾರ್ಟ್ ಅಪ್​ಗಳಿಗೆ ಅವಕಾಶ ನೀಡಿ, ಅವುಗಳನ್ನು ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾಗವಹಿಸಲು ಪ್ರೇರೇಪಣೆ ಒದಗಿಸಲಾಗಿದೆ. ಭಾರತದ ರಕ್ಷಣಾ ಕ್ಷೇತ್ರಕ್ಕೆ ಶಕ್ತಿ ತುಂಬಲು, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧಿಸಲು ಐಡೆಕ್ಸ್ ಎಂಬ ವೇದಿಕೆ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿದೆ. ವಿಶ್ವವೇ ಬೆರಗಾಗುವಂತಹ ಯುಪಿಐ ವ್ಯವಸ್ಥೆಯ ಅಭಿವೃದ್ಧಿ, ಕರೋನಾ ಕಾಲದ ವ್ಯಾಕ್ಸಿನೇಶನ್, ನೇರ ನಗದು ಪಾವತಿ, ಡ್ರೋನ್ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಪ್ರಯತ್ನ, ಶಾಲೆಗಳಲ್ಲಿ ವಿಜ್ಞಾನ ಕ್ಷೇತ್ರದೆಡೆಗೆ ಆಸಕ್ತಿ ಬೆಳೆಸಲು ಪೂರಕವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ಸ್ ಅಭಿಯಾನದ ಅಡಿಯಲ್ಲಿ ಅಟಲ್ ಇನ್ನೋವೇಶನ್ ಮೂಲಕ 10 ಸಾವಿರ ಶಾಲೆಗಳಲ್ಲಿ ಅತ್ಯಾಧುನಿಕ ಮೂಲ ಸೌಕರ್ಯ ಹೊಂದಿರುವ ಸೈನ್ಸ್ ಲ್ಯಾಬ್​ಗಳ ಆರಂಭ. ನ್ಯಾಶನಲ್ ರೀಸರ್ಚ್ ಫೌಂಡೇಷನ್ ಕಾನೂನನ್ನು ಅನುಮೋದನೆಗೊಳಿಸಿ ಇಡೀ ದೇಶದಲ್ಲಿ ಸಂಶೋಧನೆ ಅಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಒದಗಿಸುವಿಕೆ, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶ ಹಿಂದುಳಿಯಬಾರದು ಎಂಬ ಉದ್ದೇಶದಿಂದ 6 ಬಿಲಿಯನ್ ಡಾಲರ್​ಗಳಷ್ಟು ಹೂಡಿಕೆ ಮಾಡಿ, ಐ.ಐ.ಎಸ್.ಸಿ ದೇಶದ ಇತರ 4 ಕಡೆಗಳಲ್ಲಿ ಸಂಶೋಧನಾ ಕೇಂದ್ರಗಳ ಆರಂಭ, 5 ಜಿ ತಂತ್ರಜ್ಞಾನದ ವ್ಯಾಪಕ ಅಭಿವೃದ್ದಿಗೆ ಕ್ರಮಗಳೊಂದಿಗೆ ದೇಶದಲ್ಲಿ

ತಂತ್ರಜ್ಞಾನ ಅಭಿವೃದ್ಧಿಗೆ ಪೂರಕ ವಾತಾವರಣ, ಮುಂದಿನ ಪೀಳಿಗೆಗೆ ಭಾರತವನ್ನು ತಯಾರಿಗೊಳಿಸುತ್ತಿರುವ ರೀತಿ, ದೇಶದ ಸಾಧನೆಗಳಿಗೆ ಸಾರ್ವಜನಿಕರ ಬಾಗವಹಿಸುವಿಕೆಯನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಇಡೀ ದೇಶವನ್ನು ಮಾನ್ಯ ಪ್ರದಾನಿಗಳು ಸಜ್ಜುಗೊಳಿಸುತ್ತಿರುವುದು ಅನುಕರಣೀಯ.

ವೇದ- ಉಪನಿಷತ್ತುಗಳಲ್ಲಿ ಮನುಕುಲದ ಸಮಗ್ರ ವಿಕಾಸಕ್ಕೆ ಪೂರಕವಾಗಬಲ್ಲ ಸಾರ್ವಕಾಲಿಕ ವೈಜ್ಞಾನಿಕ ಸತ್ಯಗಳನ್ನೇ ನಮ್ಮ ಪೂರ್ವಜರು ಉಚ್ಛರಿಸಿದ್ದು, ನಮ್ಮ ಧಾರ್ವಿುಕ ಚಿಂತನೆಗಳಲ್ಲಿಯೂ ವೈಜ್ಞಾನಿಕ ತಳಹದಿಗಳನ್ನು ಕಾಣಬಹುದಾಗಿದೆ. ಅನಾದಿ ಕಾಲದಿಂದಲೂ ಭಾರತೀಯರು ಸಾಂಸ್ಕೃತಿಕವಾಗಿ, ಧಾರ್ವಿುಕವಾಗಿ ಜೀವನದ ಭಾಗವಾಗಿ ಪರಿಗಣಿಸುತ್ತಿದ್ದ ವೈಜ್ಞಾನಿಕ ಮನೋಭಾವನೆ

ಮತ್ತೊಮ್ಮೆ ಸಮಾಜದ ಭಾಗವಾಗಿ ಪರಿಗಣನೆಗೆ ಬರುತ್ತಿರುವುದು ನಾವೆಲ್ಲರೂ ಖುಷಿ ಪಡುವ ಸಂಗತಿ. ಭಾರತದ ವೈಜ್ಞಾನಿಕ ಸಾಧನೆಗಳು, ಜನರಲ್ಲಿ ಬದಲಾಗುತ್ತಿರುವ ಮನೋಭಾವಗಳನ್ನು ಗಮನಿಸಿದಲ್ಲಿ, ವಿಜ್ಞಾನ ತಂತ್ರಜ್ಞಾನ ಇತರ ಎಲ್ಲ ಕ್ಷೇತ್ರಗಳಲ್ಲಿ ಭಾರತವು ವಿಶ್ವದ ಅಗ್ರಗಣ್ಯ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಚಂದ್ರಯಾನ ಇತರ ಸಾಧನೆಗಳ ಯಶಸ್ಸು ಇದರ ಆರಂಭ,ಮುನ್ನುಡಿ ಎಂಬುದು ಸ್ಪಷ್ಟ.