ಅಂಕಣ

ಇದು ಎಂಥಾ ಲೋಕವಯ್ಯಾ...!: ದೂರವಿದ್ರೂ ಮನೆಗೆ ಬರಬೇಕು

kumarvrl

ಅಪ್ಪ-ಅಮ್ಮನ ಇಳಿ ವಯಸ್ಸಿನಲ್ಲಿ ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಭಾರತದಲ್ಲಿ ಎಷ್ಟೊಂದು ಕಾಯ್ದೆ-ಕಾನೂನುಗಳು ಈಗೀಗ ಜಾರಿಗೆ ಬರುತ್ತಿವೆ. ಆದರೆ ಚೀನಾದಲ್ಲಿ ಬಹಳ ಹಿಂದಿನಿಂದಲೇ ಈ ಕಾನೂನು ಇದೆ. ಅದೇನೆಂದರೆ ಮನೆಯಿಂದ ದೂರ ಇರುವ ಮಕ್ಕಳು, ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ಪಾಲಕರನ್ನು ನೋಡಲು ಕಡ್ಡಾಯವಾಗಿ ಮನೆಗೆ ಮೇಲಿಂದ ಮೇಲೆ ಹೋಗಲೇಬೇಕು. ಪಾಲಕರೇನಾದರೂ ಮೃತಪಟ್ಟರೆ, ಅವರ ಅಂತಿಮಸಂಸ್ಕಾರಕ್ಕೂ ಹಾಜರಾಗುವುದು ಕಡ್ಡಾಯ. ಇಲ್ಲದೇ ಹೋದರೆ, ಅವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಕಾನೂನು ಇದೆ.

ಸುಚೇತನಾ