ಅಂಕಣ

ಐಕಾನ್ಸ್ ಆಫ್ ಭಾರತ್ ಟಿವಿ ಶೋ!

ನಮಸ್ಕಾರ ಸ್ನೇಹಿತರೇ, ಈ ವಾರದ ಮನಿ ಮಾತು ಕಾಲಂನಲ್ಲಿ ನಾನು ಒಂದು ವಿಶೇಷವಾದ ವಿಚಾರ ಹಂಚಿಕೊಳ್ಳುವುದಕ್ಕೆ ಇಷ್ಟಪಡ್ತೀನಿ. ನಿಮಗೆ ಗೊತ್ತಿರುವ ಹಾಗೆ ಫ್ರೀಡಂ ಆಪ್ ಮೂಲಕ ನಾವು ನಿಮಗೆ ಜ್ಞಾನ ಮತ್ತು ಅವಕಾಶಗಳನ್ನು ಹಂಚುವ ಕೆಲಸ ಮಾಡ್ತಿದ್ದೇವೆ. ನಾವು ಫ್ರೀಡಂ ಆಪ್ ಮೂಲಕ 780ಕ್ಕೂ ಹೆಚ್ಚು ಕೋರ್ಸ್​ಗಳನ್ನು ಮಾಡಿರಬಹುದು. ಆ ಮೂಲಕ ನಿಮ್ಮ ಆರ್ಥಿಕ ಶಕ್ತಿಯನ್ನು ವೃದ್ಧಿ ಮಾಡುವುದು ಸಾಧ್ಯವಾಗಿರುವುದಕ್ಕೆ ಕಾರಣ ನಮ್ಮ ಹಿಂದೆ ಅಥವಾ ಈ ಕೋರ್ಸ್​ಗಳ ಹಿಂದೆ ಇರುವ ಸಾಧಕರು. ನಮ್ಮ 780 ಕೋರ್ಸ್​ಗಳನ್ನು ಸುಮಾರು 1200 ಸಾಧಕರು ಪಾಠ ಮಾಡಿದ್ದಾರೆ. ಅವರು ಹೇಳಿಕೊಟ್ಟಿದ್ರಿಂದಾನೇ ನಾವು ನಿಮಗೆ ಕೋರ್ಸ್​ಗಳನ್ನು ತಲುಪಿಸೋದಕ್ಕೆ ಸಾಧ್ಯವಾಯಿತು. ಆ ಸಾಧಕರ ಕಥೆ ಬಹಳ ಇನ್ಸೆ್ಪೖರಿಂಗ್ ಆಗಿದೆ. ಅವರು ಬರೀ ಸಾಧನೆ ಮಾಡಿಲ್ಲ, ಶೂನ್ಯದಿಂದ ಸಾಧನೆ ಮಾಡಿದ್ದಾರೆ. ಅದು ನಮ್ಮೆಲ್ಲರಿಗೂ ಪ್ರೇರಣೆ ಕೊಡುವಂತಹ ವಿಚಾರ. ಹಾಗಾಗಿ ಅವರ ಸಾಧನೆಯನ್ನು ರಾಷ್ಟ್ರೀಯ ವೇದಿಕೆ ಮೂಲಕ ಇಡೀ ಭಾರತಕ್ಕೆ ತಲುಪಿಸಬೇಕೆನ್ನುವುದು ನಮ್ಮ ಉದ್ದೇಶ. ಹಾಗಾಗಿ ನಾವು ಐಕಾನ್ಸ್ ಆಫ್ ಭಾರತ್ ಎನ್ನುವ ಒಂದು ರಿಯಾಲಿಟಿ ಶೋ ಪೊ›ಡ್ಯೂಸ್ ಮಾಡ್ತಿದ್ದೇವೆ. ಟಿವಿ ರಿಯಾಲಿಟಿ ಶೋನ ಪೊ›ಡ್ಯೂಸ್ ಮಾಡಿ, ಅದರ ಮೂಲಕ ನಮ್ಮ ಫ್ರೀಡಂ ಆಪ್​ನಲ್ಲಿ ನಿಮ್ಮೆಲ್ಲರಿಗೋಸ್ಕರ ಕೋರ್ಸ್​ಗಳನ್ನ ವಿನ್ಯಾಸ ಮಾಡಿರುವ, ಪಾಠ ಮಾಡಿರುವ ಸಾಧಕರನ್ನು ದೇಶಕ್ಕೆ ಪರಿಚಯ ಮಾಡಿಸುವ ಒಂದು ವಿನೂತನ ಪ್ರಯತ್ನ ಮಾಡ್ತಿದ್ದೇವೆ. ಮೊದಲನೇ ಸೀಸನ್​ಗೆ 60 ಜನ ಸಾಧಕರನ್ನು ಗುರುತಿಸಿ ಆಯ್ತು. ಈ ಶೋ ಅನ್ನು ಎನ್​ಡಿಟಿವಿಯಲ್ಲಿ ಪ್ರಸಾರ ಮಾಡಬೇಕು ಅಂತ ನಿರ್ಧಾರ ಮಾಡಿಯಾಯ್ತು. ದಿಲ್ಲಿಯಲ್ಲಿ ಇದಕ್ಕೋಸ್ಕರ ಒಂದು ಅತ್ಯದ್ಭುತ ಸೆಟ್ ಕೂಡ ಹಾಕಲಾಯ್ತು. ಆ ಸೆಟ್​ನಲ್ಲಿ ಅವರನ್ನು ಒಬ್ಬೊಬ್ಬರಾಗಿ ಕರೆಸಿ ಅವರ ಕಥೆಯನ್ನು ಜ್ಯೂರಿ ಪ್ಯಾನಲ್ ಎದುರು ರೆಕಾರ್ಡ್ ಮಾಡೋದಕ್ಕೆ ಶುರುಮಾಡಿದ್ದೀವಿ. ಲಾಂಚ್ ಎಪಿಸೋಡ್ ಕೂಡ ನಿನ್ನೆಯ ಭಾನುವಾರ ಪ್ರಸಾರವಾಯ್ತು. ನೀವು ಮುಂದಿನ ಭಾನುವಾರ ಅಂದ್ರೆ ಜೂನ್ 5ಕ್ಕೆ ಎನ್​ಡಿವಿಟಿ ಇಂಡಿಯಾದಲ್ಲಿ ಫಸ್ಟ್ ಎಪಿಸೋಡ್ ಕೂಡ ನೋಡಲಿದ್ದೀರಿ. ಅಲ್ಲಿ ಐದು ಜನ ಸಾಧಕರು ಶೂನ್ಯದಿಂದ ಮಾಡಿರುವ ಸಾಧನೆಯ ಕಥೆಯನ್ನು ನಿಮ್ಮ ಮುಂದಿಡ್ತಾರೆ.

ಹಂಗಾದ್ರೆ ಐಕಾನ್ಸ್ ಆಫ್ ಭಾರತ್ ಹೇಗಿರುತ್ತೆ?: ಪ್ರತೀ ಎಪಿಸೋಡ್​ನಲ್ಲಿ ನೀವು ಐದು ಸಾಧಕರ ಕಥೆ ಕೇಳ್ತಿರಿ, ಅವರ ಸಾಧನೆಯ ಕಥೆ ತಿಳಿದುಕೊಳ್ತೀರಿ. ಸಾಧನೆಯ ಸೀಕ್ರೇಟ್​ಗಳನ್ನು ಕಲೀತೀರಿ. ಅದಾದ್ಮೇಲೆ ಪ್ರತೀ ಎಪಿಸೋಡ್​ನಲ್ಲಿ ನಮ್ಮ ಜ್ಯೂರಿ ಮೆಂಬರ್ಸ್ ಒಬ್ಬರನ್ನ ಶ್ರೇಷ್ಠ ಐಕಾನ್ ಆಗಿ ಆಯ್ಕೆ ಮಾಡುತ್ತಾರೆ. ಪ್ರತೀ ಎಪಿಸೋಡ್ ಮುಗಿದ ನಂತರ ಕೊನೆಯಲ್ಲಿ ನೀವು ನಿಮ್ಮ ಫೇವರೇಟ್ ಐಕಾನ್​ಗಳನ್ನ ವೋಟ್ ಮಾಡಬಹುದು. ನಿಮ್ಮ ವೋಟನ್ನು ಕನ್ಸಿಡರ್ ಮಾಡಿ ಕೊನೆಗೆ ನಾವು ಸರ್ವ ಶ್ರೇಷ್ಠ ಐಕಾನ್ ಆಫ್ ಭಾರತ್ ಅಂತ ಹೇಳಿ ಐಡೆಂಟಿಫೈ ಮಾಡ್ತೀವಿ. ಇನ್ಪಾ್ಯಕ್ಟ್, ನಾವು ಮಾಡ್ತಿರುವ ಈ ಕಾರ್ಯವನ್ನು ಶ್ಲಾಘಿಸಿ ಬಹಳಷ್ಟು ಜನ ಸಪೋರ್ಟ್ ಮಾಡ್ತಿದ್ದಾರೆ. ಲಾಂಚ್ ಎಪಿಸೋಡ್​ಗೆ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಚೀಫ್​ಗೆಸ್ಟ್ ಆಗಿ ಬಂದಿದ್ದರು.

ನಿಮಗೂ ಭಾರತದ ಐಕಾನ್ ಆಗುವ ಅವಕಾಶವಿದೆ: ಈಗ ಫ್ರೀಡಂ ಆಪ್ ಮೂಲಕ ಐಕಾನ್ಸ್ ಆಫ್ ಭಾರತ್ ಶೋ ಕೂಡ ವಾಚ್ ಮಾಡಬಹುದು. ನೀವು ಕೂಡ ಸಾಧನೆ ಮಾಡಿದ್ರೆ ಐಕಾನ್ಸ್ ಆಫ್ ಭಾರತ್ ಶೋಗೆ ಬರೋದಕ್ಕೆ ಅಪ್ಲೈ ಮಾಡಬಹುದು. ನಮ್ಮ ಸೆಕೆಂಡ್ ಸೀಸನ್​ಗೆ ಬರೋದಕ್ಕೆ ನೀವೀಗ ಅಪ್ಲೈ ಮಾಡಿದ್ರೆ ನಮ್ಮ ಟೀಂನವರು ನಿಮ್ಮ ಜತೆ ಮಾತಾಡ್ತಾರೆ. ಮುಂದೆಯೂ ನೀವು ಸಾಧನೆ ಮಾಡಿದ್ರೆ ನಿಮ್ಮ ಸಾಧನೆಯನ್ನು ಇಡೀ ಭಾರತಕ್ಕೆ ತಲುಪಿಸಲು ನಾವು ಕೂಡ ಸಿದ್ಧರಾಗಿದ್ದೇವೆ. ನೀವು ನಮ್ಮ https://iconsofbharat.com ವೆಬ್​ಸೈಟ್ ವಿಸಿಟ್ ಮಾಡಿ, ನಿಮ್ಮ ಹೆಸರನ್ನು ನೋಂದಾಯಿಸಿ. ಸಾಧಕರಿಂದ ಕಲಿತು ನೀವು ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕಂದ್ರೆ ಸಾಧಕರು ಮಾಡಿರುವ ಎಲ್ಲ ಕೋರ್ಸ್​ಗಳು ಫ್ರೀಡಂ ಆಪ್​ನಲ್ಲಿದೆ. ಅದನ್ನು ನೋಡಿ ನೀವು ಬದುಕು ಕಟ್ಟಿಕೊಳ್ಳಿ, ಜತೆಗೆ ಸಾಧಕರಿಗೆ ಸಪೋರ್ಟ್ ನೀಡಿ ವೋಟ್ ಮಾಡಿ.

ಐಕಾನ್ಸ್ ಆಫ್ ಭಾರತ್ ಉದ್ದೇಶ: ನಾವು ಈ ಐಕಾನ್ಸ್ ಆಫ್ ಭಾರತ್ ಮಾಡಿರುವ ಉದ್ದೇಶ ಏನಪ್ಪ ಅಂದ್ರೆ, 10 ಲಕ್ಷ ಉದ್ದಿಮೆಗಳನ್ನು ಕ್ರಿಯೇಟ್ ಮಾಡಬೇಕು ಅಂತ. ಉದ್ಯಮ ಅಂದ ತಕ್ಷಣ ಬರೀ ನಾರ್ಮಲ್ ಬಿಸಿನೆಸ್ ಮಾತ್ರವಲ್ಲ ಕೃಷಿ ಉದ್ಯಮ ಕೂಡ. ಹಾಗಾಗಿ ನಮಗೆ ತಿಳಿದಿರುವ ಮಹಿಳೆಯರು, ಉದ್ಯಮಿಗಳು, ಸಣ್ಣ ಉದ್ದಿಮೆದಾರರು, ಕೃಷಿಕರು ಅವರು ಈ ಸಾಧಕರಿಂದ ಕಲಿತು ಅವರು ಕೂಡ ಉದ್ಯಮಿಗಳಾಗಬೇಕು. ಅವರು ಕೂಡ ಬದುಕು ಕಟ್ಟಿಕೊಳ್ಳಬೇಕು ಅನ್ನೋದು ನಮ್ಮ ಉದ್ದೇಶ. ಈ ಕಾರ್ಯಕ್ರಮ ಮುಗಿಯುವಷ್ಟರೊಳಗೆ ಹತ್ತು ಲಕ್ಷ ಹೊಸ ಉದ್ಯಮಿಗಳನ್ನು ಕಟ್ಟೋ ಕನಸು ನಾವು ಇಟ್ಕೊಂಡಿದ್ದೇವೆ. ಈ ಉದ್ದೇಶ ಹತ್ತು ಜನಕ್ಕೆ ತಲುಪಬೇಕು ಅದಕ್ಕೆ ನಿಮ್ಮ ಪೋ›ತ್ಸಾಹ ಬೇಕು, ಸಪೋರ್ಟ್ ಬೇಕು. ನೀವು ಮನಿಮಾತು ಅಂಕಣಕ್ಕೆ ಕಳೆದ ನಾಲ್ಕು ವರ್ಷದಿಂದ ಸಪೋರ್ಟ್ ಮಾಡ್ತಿದ್ದೀರಿ. ಆ ಸಪೋರ್ಟ್ ಹೀಗೆಯೇ ಯಾವಾಗಲು ಇರಲಿ. ನಾನು ಮನಿಮಾತು ಅಂಕಣದಲ್ಲಿ ಕಳೆದ 2 ವರ್ಷದಲ್ಲಿ ಬಹಳಷ್ಟು ಸಾಧಕರನ್ನು ಪರಿಚಯಿಸಿದ್ದೇನೆ. ನೀವು ಕೂಡ ಅವರ ಸಾಧನೆ ಕೇಳಿದ್ದೀರಿ, ಆದ್ರೆ ಆ ಸಾಧನೆ ಹಿಂದಿರುವ ಕಥೆ ಕೇಳಿರಲಿಲ್ಲ. ಆ ಕಥೆಯನ್ನಐಕಾನ್ಸ್ ಆಫ್ ಭಾರತ್​ನಲ್ಲಿ ಅವರೇ ಹೇಳಿದ್ದಾರೆ. ಅವರ ಸಾಧನೆ ಗೊತ್ತಿದ್ದ ನಿಮಗೆ ಈಗ ಆ ಸಾಧನೆ ಹಿಂದಿರುವ ಸ್ಟ್ರಗಲ್, ಸರ್ವೆವಲ್ ಕಥೆ ಹೇಳ್ತಾರೆ. ಅದನ್ನ ಕೇಳ್ತಿದ್ದರೆ ನಿಮಗೂ ಬದುಕಲ್ಲಿ ನಾನೇನಾದರು ಮಾಡಬೇಕು ಅನ್ನೋ ಛಲ ಬರುತ್ತೆ. ಹಾಗಾಗಿಯೇ ಈ ಕಾರ್ಯಕ್ರಮ ಮಾಡ್ತಿದ್ದೇವೆ ನಿಮ್ಮ ಪೋ›ತ್ಸಾಹ ಸದಾ ಇರಲಿ.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸು ವವರಿಗೆ ಫ್ರೀಡಂ ಆಪ್​ನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ. ದೂ.ಸಂ.- 02262116777

ಎನ್​ಡಿಟಿವಿಯಲ್ಲಿ ಕಾರ್ಯಕ್ರಮ

ಪ್ರಸಾರದ ದಿನ ಹಾಗೂ ವೇಳೆ

ಪ್ರತಿ ಭಾನುವಾರ ರಾತ್ರಿ 9:30ರಿಂದ 10:30ಕ್ಕೆ

  • ಮೇ - 29 ಲಾಂಚ್ ಶೋ
  • ಜೂನ್ - 5, 12, 19, 26 ಭಾನುವಾರ
  • ಜುಲೈ- 3, 10 ,17, 24, 31 ಭಾನುವಾರ
  • ಆಗಸ್ಟ್ - 7, 14, 21 ಭಾನುವಾರ