ಜಮ್ಮು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರ ದಾಳಿ, ಹಿಂದುಗಳ ಹತ್ಯೆ ಖಂಡಿಸಿ ಪ್ರತಿಭಟನೆ, ಶ್ರದ್ಧಾಂಜಲಿ ಕೋರಿ ಮುದ್ದೇಬಿಹಾಳದಲ್ಲಿ ಬುಧವಾರ ಸಂಜೆ ನಡೆದ ಮೊಂಬತ್ತಿ ಮೆರವಣಿಗೆಯಲ್ಲಿ ಎ.ಎಸ್​.ಪಾಟೀಲ ನಡಹಳ್ಳಿ ಸೇರಿದಂತೆ ಬಿಜೆಪಿ, ಹಿಂದುಪರ ಸಂಟನೆಗಳ ಪ್ರತಿನಿ-ಗಳು ಪಾಲ್ಗೊಂಡಿದ್ದರು.  
ಅಂಕಣ

ಮೊಂಬತ್ತಿ ಮೆರವಣಿಗೆ ಮೂಲಕ ಮೃತ ಹಿಂದುಗಳಿಗೆ ಶ್ರದ್ಧಾಂಜಲಿ

ಮುದ್ದೇಬಿಹಾಳ: ಬಿಜೆಪಿ ಮಂಡಲ ವತಿಯಿಂದ ರೈತ ಮೋರ್ಚಾ ರಾಜ್ಯಾಧ್ಯ ಎ.ಎಸ್​.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಹಿಂದು ಪರ, ಮಾಜಿ ಸೈನಿಕರ, ದಲಿತಪರ ಸಂಟನೆಗಳ ಸದಸ್ಯರು, ದೇಶಾಭಿಮಾನಿಗಳು ಜಮ್ಮು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಹಿಂದುಗಳನ್ನೇ ಗುರಿಯಾಗಿಸಿಕೊಂಡು ನಡೆದ ಉಗ್ರರ ದಾಳಿ ಖಂಡಿಸಿ ಮತ್ತು ಟನೆಯಲ್ಲಿ ಮೃತರಾದ ಹಿಂದುಗಳಿಗೆ ಶ್ರದ್ಧಾಂಜಲಿ ಕೋರಿ ಪಟ್ಟಣದಲ್ಲಿ ಬುಧವಾರ ಸಂಜೆ ಮೊಂಬತ್ತಿ ಮೆರವಣಿಗೆ ನಡೆಸಿದರು.

ಬಜಾರ್​ನಲ್ಲಿರುವ ಮಾರುತೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ಮುಖಂಡರು ಟನೆಯನ್ನು ಖಂಡಿಸಿ ಮಾರುತೇಶ್ವರನಿಗೆ ಹಚ್ಚಿದ್ದ ದೀಪದಿಂದ ಮೊಂಬತ್ತಿ ಬೆಳಗಿಸಿ ಮುಖ್ಯ ಬಜಾರ್​, ಮಹಾತ್ಮಾಗಾಂಧಿ, ಬಸವೇಶ್ವರ, ರಾಣಿ ಚನ್ನಮ್ಮ, ಅಂಬೇಡ್ಕರ್​ ವೃತ್ತ್ತ ಮಾರ್ಗವಾಗಿ ರಾವೇಂದ್ರ ಸ್ವಾಮಿಗಳ ಮಠದ ವರೆಗೆ ಕ್ಯಾಂಡಲ್​ ಮಾರ್ಚ್​ ನಡೆಸಿದರು.

ಈ ವೇಳೆ ಒಂದಾಗಿ ಒಂದಾಗಿ ಹಿಂದುಗಳೆಲ್ಲ ಒಂದಾಗಿ, ಪ್ರಧಾನಿ ಮೋದಿಜಿ ಮುನ್ನುಗ್ಗಿ ಉಗ್ರರ ಸದೆಬಡಿಯಿರಿ ದೇಶದ ಹಿಂದುಗಳು ನಿಮ್ಮೊಂದಿಗಿದ್ದಾರೆ, ಉಗ್ರರಿಗೆ ಧಿಕ್ಕಾರ, ಉಗ್ರತ್ವ ಬುಡಸಮೇತ ಕಿತ್ತಿಹಾಕಬೇಕು ಇತ್ಯಾದಿ ೂಷಣೆ ಕೂಗಿದರು.

ಮಾರುತೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎ.ಎಸ್​.ಪಾಟೀಲ ನಡಹಳ್ಳಿ ಈ ದೇಶದ ಹಿಂದುಗಳೆಲ್ಲ ಒಂದಾಗಿ ಭಯೋತ್ಪಾದನೆ ಬುಡಸಮೇತ ನಿಮೂರ್ಲನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಬೇಕು.ಹೀಗೆ ಮುಂದುವರೆದರೆ ನಮ್ಮ ಮನೆಗೂ ಉಗ್ರರು ಬರಬಹುದು. ನಮ್ಮ ಸಹನೆಯೇ ನಮ್ಮ ದೌರ್ಬಲ್ಯ ವಾಗಿದೆ ಎಂದರು.

ಇಬ್ಬರು ಕನ್ನಡಿಗರೂ ಸೇರಿ ಮೃತಪಟ್ಟಿರುವ ಎಲ್ಲರ ಆತ್ಮಕ್ಕೂ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಭೆಯಲ್ಲಿ ಆರ್​ಎಸ್​ಎಸ್​ನ ಪ್ರಾಂತ ಕಾರ್ಯವಾಹ ದಾಮೋದರ್​ ಅವರು ಮಾತನಾಡಿ, ಗಡಿಗಿಂತ ಒಳಗಿನ ಸುರತೆ ಭಯಾನಕವಾಗಿದೆ. ಹಿಂದು, ಮುಸಲ್ಮಾನ ಎಂದು ಪ್ರತ್ಯೇಕಿಸಿ ಹಿಂದುಗಳ ಮೇಲೆ ಗುಂಡು ಹಾರಿಸಿರುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಇದನ್ನು ಹಿಂದುಗಳು ಅರಿತುಕೊಳ್ಳಬೇಕು ಎಂದರು.

ಪ್ರಮುಖರಾದ ಬಿ.ಪಿ.ಕುಲಕರ್ಣಿ, ಮುನ್ನಾಧಣಿ ನಾಡಗೌಡ, ಚನ್ನಪ್ಪ ಕಂಠಿ, ಸಿದ್ದರಾಜ ಹೊಳಿ, ಸೋಮನಗೌಡ ಮೇಟಿ, ಸಂಜು ಬಾಗೇವಾಡಿ, ನಾನಪ್ಪ ನಾಯಕ, ಶ್ರೀಶೈಲ ದೊಡಮನಿ, ವಾಸು ಶಾಸ್ತ್ರಿ, ಮಾಣಿಕಚಂದ ದಂಡಾವತಿ, ಎಲ್​.ಎಸ್​.ದೇಶಪಾಂಡೆ, ವಿಲಾಸ ದೇಶಪಾಂಡೆ, ಗೌರಮ್ಮ ಹುನಗುಂದ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಅನೀಲ ರಾಠೋಡ, ಶಿವಾನಂದ ರಾಠೋಡ, ಅಶೋಕ ರಾಠೋಡ, ಹರೀಶ ನಾಟೀಕಾರ, ಗಿರೀಶಗೌಡ ಪಾಟೀಲ ಹಿರೇಮುರಾಳ, ಜಗದೀಶ ಪಂಪಣ್ಣವರ್​, ಲಕ್ಷ$್ಮಣ ಬಿಜ್ಜೂರ, ಸಂಗಮೇಶ ಕರಭಂಟನಾಳ, ರಾಜು ಬಳ್ಳೊಳ್ಳಿ, ಮಲಕೇಂದ್ರಗೌಡ ಪಾಟೀಲ, ಆನಂದ ತುಪ್ಪದ, ರೇಖಾ ಕೊಂಡಗೂಳಿ, ಕಾವೇರಿ ಕಂಬಾರ, ಪ್ರೀತಿ ಕಂಬಾರ, ಸಂತೋಷ ಬಾದರಬಂಡಿ, ಬಸನಗೌಡ ಪಾಟೀಲ ಸರೂರ, ಹಿಂದುಪರ ಸಂಟನೆಗಳ ಸದಸ್ಯರು ಪಾಲ್ಗೊಂಡಿದ್ದರು.