ಅಂಕಣ

ಹಂದಿ ಸಾಕಣೆಯಲ್ಲಿ ಲಾಭ ಗಳಿಸೋದು ಹೇಗೆ?

ಮಾಂಸ ಪ್ರಿಯರು ಕುರಿ, ಕೋಳಿ, ಮೇಕೆ, ಮೀನು ಜತೆಗೆ ಹಂದಿ ಮಾಂಸ ಕೂಡ ಹೆಚ್ಚಾಗಿ ಇಷ್ಟ ಪಡ್ತಾರೆ. ಹಂದಿ ಮಾಂಸ ಬಹಳ ರುಚಿಕರ ಮತ್ತು ಸ್ವಾದಿಷ್ಟಕರ ಕೂಡ. ಹಿಂದೆಲ್ಲ ಹಂದಿ ಮಾಂಸಕ್ಕೆ ಅಷ್ಟೇನೂ ಬೇಡಿಕೆ ಇಲ್ಲದ ಕಾರಣ ಬೆಲೆಯೂ ಜಾಸ್ತಿ ಇರ್ಲಿಲ್ಲ. ಆದರೆ, ಈಗ ಹಂದಿ ಮಾಂಸದ ಅನುಕೂಲಗಳನ್ನು ಜನರು ಅರಿತ ಕಾರಣ ಬೇಡಿಕೆ ಜತೆ

ಬೆಲೆಯೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ನೂರಾರು ಜನರು ಹಂದಿ ಸಾಕಣೆಯನ್ನು ಮುಖ್ಯ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಇನ್ನು ಕೆಲವರು ಇದನ್ನು ಕೃಷಿಯ ಜತೆ ಉಪ ಕಸುಬಾಗಿ ಕೈಗೆತ್ತಿಕೊಂಡಿದ್ದಾರೆ. ಹಂದಿ ಸಾಕಣೆಯನ್ನು ದೊಡ್ಡ ಪ್ರಮಾಣ ಅಥವಾ ಸಣ್ಣ ಪ್ರಮಾಣದಲ್ಲಿ ಮಾಡಿದರೂ ಲಾಭವೇ. ಹಂದಿ ಸಾಕಣೆಗೆ ಹೆಚ್ಚು ಖರ್ಚಿಲ್ಲ, ಆದರೆ ಹಂದಿ ಮಾಂಸಕ್ಕೆ ಬೇಡಿಕೆ ಇದೆ. ಇದನ್ನು ಅರಿತಿರುವ ರೈತರು, ಉದ್ಯಮಿಗಳು ಹಂದಿ ಸಾಕಣೆಯಲ್ಲಿ ತೊಡಗಿ ವರ್ಷಕ್ಕೆ ಕೆಲ ಲಕ್ಷಗಳಿಂದ ಕೋಟಿಗಳವರೆಗೆ ಆದಾಯ ಗಳಿಸುತ್ತಿದ್ದಾರೆ. ಹಾಗಾದ್ರೆ, ನಾನು ಕೂಡ ಹಂದಿ ಸಾಕಣೆ ಮಾಡಿ, ಕೋಟಿ ಗಳಿಸ್ಬೇಕು ಅಂತ ನೀವೂ ಅಂದುಕೊಳ್ತಿದ್ರೆ, ನಿಮಗೆ ಬೇಕಾದ ಮಾಹಿತಿ ಈ ಅಂಕಣದಲ್ಲಿದೆ.

ಹಂದಿ ಮಾಂಸದ ಮಾರುಕಟ್ಟೆ: 2019ರಲ್ಲಿ ಜಾಗತಿಕವಾಗಿ ಸುಮಾರು 20 ಲಕ್ಷ ಕೋಟಿ ರೂ. ಮೌಲ್ಯದ ಹಂದಿ ಮಾಂಸ ಮಾರಾಟವಾಗಿದೆ. ಪ್ರತಿ ವರ್ಷ ಭಾರತದಲ್ಲಿ 12 ಸಾವಿರ ಕೋಟಿ ರೂ. ಮೌಲ್ಯದ ಹಂದಿ ಮಾಂಸ ಮಾರಾಟವಾಗ್ತಿದೆ. ಅಂದ್ರೆ, ನೀವೇ ಲೆಕ್ಕ ಹಾಕಿ, ಹಂದಿ ಮಾಂಸಕ್ಕೆ ಅದೆಷ್ಟು ಬೇಡಿಕೆ ಇದೆ ಅಂತ.

ಬಂಪರ್ ಲಾಭ: ಹಂದಿ ಮಾಂಸದ ಇಂದಿನ ರಿಟೇಲ್ ಬೆಲೆ ಕೆಜಿಗೆ 120 ರಿಂದ 350 ರೂಪಾಯಿಗಳು. ಮತ್ತೊಂದು ವಿಷಯ ಏನಂದ್ರೆ, ಹಂದಿ ಸಾಕಾಣೆಗೆ ನಿಮಗೆ ವಿಶಾಲವಾದ ಜಾಗದ ಅಗತ್ಯ ಇಲ್ಲ. ಕೇವಲ ಅರ್ಧ ಎಕರೆಯಲ್ಲಿ 2,000 ಹಂದಿಗಳನ್ನು ಸಾಕಬಹುದು. ಒಂದು ಆರೋಗ್ಯಕರ ಹಂದಿಯ ತೂಕ 150 ಕೆಜಿಯಷ್ಟಿರುತ್ತೆ. ಒಂದು ಕೆಜಿಗೆ 150 ಅಂದ್ರೂ, 2,000 ಹಂದಿಗಳಿಗೆ ಸುಮಾರು 3 ಕೋಟಿ ಲಾಭ. ನೋಡಿ, ಅರ್ಧ ಎಕರೆ ಜಾಗದಲ್ಲಿ ಎಷ್ಟೆಲ್ಲಾ ಲಾಭ ತಂದು ಕೊಡುತ್ತೆ ಹಂದಿ ಸಾಕಾಣಿಕೆ ಅಂತ.

ಕರ್ನಾಟಕದಲ್ಲಿ ಹಂದಿ ಸಾಕಣೆ: ಹಂದಿ ಸಾಕಾಣಿಕೆ ಪಶುಸಂಗೋಪನೆಯ ಒಂದು ಶಾಖೆಯಾಗಿದ್ದು ಕೃಷಿಯ ಒಂದು ಭಾಗವಾಗಿದೆ. ಹಂದಿಗಳನ್ನು ಮುಖ್ಯವಾಗಿ ಆಹಾರ ಮತ್ತು ಚರ್ಮಕ್ಕಾಗಿ ಸಾಕಲಾಗುತ್ತದೆ. ಭಾರತದಲ್ಲಿ ಹಲವಾರು ಜನರು ಹಂದಿ ಸಾಕಾಣಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಹಂದಿ ಸಾಕಾಣಿಕೆಯಲ್ಲಿ ಏರಿಕೆ ಕಂಡುಬಂದಿದೆ ಎಂಬುದನ್ನು ಇತ್ತೀಚಿನ ವರದಿಗಳು ತಿಳಿಸುತ್ತವೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಕೂಡಾ ಹಂದಿ ಸಾಕಣಿಕೆ ಗಮನಾರ್ಹವಾಗಿ ಹೆಚ್ಚಳವಾಗುತ್ತಿದ್ದು ಹೆಚ್ಚು ರೈತರು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಹಂದಿ ಮಾಂಸದ ಅನುಕೂಲಗಳು: ಹಂದಿ ಮಾಂಸವು ಅತಿ ಹೆಚ್ಚು ಪೋ›ಟೀನ್ ಒಳಗೊಂಡಿದ್ದು ಮಾನವನ ದೇಹಕ್ಕೆ ಬೇಕಾಗುವ ಪ್ರಮುಖ ಜೀವ ಸತ್ವಗಳನ್ನು ಮತ್ತು ಖನಿಜಗಳನ್ನು ಒದಗಿಸುತ್ತದೆ. ಹಂದಿ ಮಾಂಸವು ಥಯಾಮಿನ್, ಸೆಲೆನಿಯಮ್ ಪೋ›ಟೀನ್, ನಿಯಾಸಿನ್, ವಿಟಮಿನ್ ಬಿ -6 ಮತ್ತು ರಂಜಕ, ಸತು, ರಿಬೋಫ್ಲಾವಿನ್ ಮತ್ತು ಪೊಟ್ಯಾಸಿಯಮ್ಂತಹ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಹೀಗಾಗಿಯೇ ಹಂದಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ.

ಹಂದಿ ಸಾಕಣೆಗೆ ಖರ್ಚು ಕಡಿಮೆ: ಹಂದಿಗಳು ಮಿಕ್ಕುಳಿದ ಆಹಾರವನ್ನು ಸೇವಿಸುವುದರಿಂದ ನೀವು ಒಂದಷ್ಟು ಹೋಟೆಲ್​ಗಳ ಸಹಯೋಗದಿಂದ ಆಹಾರವನ್ನು ಪಡೆಯಬಹುದು ಮತ್ತು ಉಳಿದ ಹಣ್ಣು, ತರಕಾರಿಗಳು ಮತ್ತು ಸೊಪ್ಪುಗಳನ್ನೂ ಕೂಡ ಆಹಾರವಾಗಿ ಬಳಸುವುದರಿಂದ ಹಂದಿ ಸಾಕಣೆಗೆ ನೀವು ಬಹಳಷ್ಟು ಬಂಡವಾಳ ಹೂಡಬೇಕಾಗಿಲ್ಲ.

ಸರ್ಕಾರದ ಸವಲತ್ತುಗಳು: ಹಂದಿ ಸಾಕಣೆಗೆ ಸರ್ಕಾರದಿಂದಲೂ ಹಲವಾರು ಸವಲತ್ತುಗಳು ಲಭ್ಯ. ರಾಷ್ಟ್ರೀಯ ಮಿಷನ್(ಎನ್​ಎಮ್​ಎಸ್), ರಾಷ್ಟ್ರೀಯ ಕೃಷಿ ವಿಕಾಸ್ ಯೋಜನಾ ಜತೆಗೆ ನಬಾರ್ಡ್ ಅಡಿಯಲ್ಲೂ ಕೂಡ ಹಲವಾರು ಸೌಲಭ್ಯಗಳು ಲಭ್ಯವಿದೆ.

ಹಂದಿ ತಳಿಗಳು: ಡುರೊಕ್, ಯಾರ್ಕ್ ಶೈರ್, ಹಾಂಪ್ ಶೈರ್, ಲ್ಯಾಂಡ್ರೇಸ್, ಬರ್ಕ್​ಶೈರ್, ಚೆಸ್ಟರ್​ವೈಟ್ ಇತ್ಯಾದಿ. ರಫ್ತು ಮಾರುಕಟ್ಟೆಯಲ್ಲಿ ಹಂದಿಗೆ ಉತ್ತಮ ಬೇಡಿಕೆಯಿದೆ. ಹಂದಿ ಮಾಂಸ ಮಾತ್ರವಲ್ಲದೆ, ಹಂದಿ ಕೊಬ್ಬು, ಚರ್ಮ, ಕೂದಲು, ಮತ್ತು ಮೂಳೆಗಳಂತಹ ಉತ್ಪನ್ನಗಳಿಗೆ ಬೇಡಿಕೆ ಇದೆ. ಇವುಗಳನ್ನು ಕೆಲವು ಐಷಾರಾಮಿ ವಸ್ತುಗಳ ತಯಾರಿಕೆಗೆ ಬಳಸಲಾಗ್ತಿದೆ. ಯಶಸ್ವಿ ಹಂದಿ ಸಾಕಣೆ ಕೃಷಿಕನಾಗಲು, ಸರಿಯಾದ ಬಿಸಿನೆಸ್ ಪ್ಲಾನ್ ಬೇಕು, ಹಂದಿಗಳ ತಳಿಗಳ ಆಯ್ಕೆ ಬಗ್ಗೆ ಗೊತ್ತಿರಬೇಕು, ಹಂದಿಗಳ ನಿರ್ವಹಣೆ ಬಗ್ಗೆ ತಿಳಿದಿರಬೇಕು, ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಪಡೆಯಲು ಏನು ಮಾಡಬೇಕು ಎಂಬ ಅಂದಾಜಿರಬೇಕು, ಹಂದಿ ಸಾಕಣೆಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಗೊತ್ತಿರಬೇಕು ಆದ್ರೆ ಇವೆಲ್ಲವನ್ನೂ ಕಲಿಯುವುದಾದ್ರು ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿದ್ರೆ, ಚಿಂತೆ ಮಾಡ್ಕೋಬೇಡಿ. ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿರುವ ಹಂದಿ ಸಾಕಣೆಯಲ್ಲಿ ಯಶಸ್ಸು ಕಾಣೋದು ಹೇಗೆ? ಎಂಬ ಕೋರ್ಸ್​ನಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಪಕ್ಕಾ ಉತ್ತರ ಸಿಗುತ್ತದೆ. ಹಂದಿ ಸಾಕಣೆಯಲ್ಲಿ ಯಶಸ್ಸು ಗಳಿಸಿ ಲಕ್ಷದಿಂದ ಕೋಟಿಯವರೆಗೆ ಸಂಪಾದಿಸುತ್ತಿರುವವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಹಾಗಾದ್ರೆ ಇನ್ನೇಕೆ ತಡ ಆದಷ್ಟು ಬೇಗ ಫೈನಾನ್ಸಿಯಲ್ ಫ್ರೀಡಂ ಆಪ್​ನ ಡೌನ್​ಲೋಡ್ ಮಾಡಿ ಹಂದಿ ಸಾಕಣೆ ಉದ್ಯಮ ಶುರು ಮಾಡೋಕೆ ನೀವು ರೆಡಿಯಾಗಿ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್​ನ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಹಂದಿ ಸಾಕಾಣೆ ಮತ್ತು ಬಂಡವಾಳ
  • ಹಂದಿ ಸಾಕಾಣೆ ಉದ್ಯಮ ಯಾರಿಗೆ ಸೂಕ್ತ?
  • ಮೂಲ ಸೌಕರ್ಯ ಮತ್ತು ಕಾರ್ವಿುಕರ ಅಗತ್ಯತೆ
  • ನೋಂದಣಿ, ಅನುಮತಿ ಮತ್ತು ಕಾನೂನು ಅನುಸರಣೆ
  • ಹಂದಿ ಸಾಕಾಣೆಯಲ್ಲಿ ಬ್ರೀಡ್​ಗಳ ಆಯ್ಕೆ ಹೇಗೆ?
  • ಹಂದಿ ಸಾಕಾಣೆ ಮತ್ತು ಆಹಾರ ಸರಬರಾಜು
  • ಹಂದಿ ಸಾಕಾಣೆ ಮತ್ತು ರೋಗ ನಿಯಂತ್ರಣ
  • ಹಂದಿ ಸಾಕಾಣೆ ಮತ್ತು ಮಾರುಕಟ್ಟೆ
  • ಹಂದಿ ಸಾಕಾಣೆ ತರಬೇತಿ ಮತ್ತು ಸರ್ಕಾರದ ಸವಲತ್ತುಗಳು
  • ಸವಾಲುಗಳು, ಸುಸ್ಥಿರತೆ, ಬೆಳವಣಿಗೆ ಮತ್ತು ಮುನ್ನೋಟ

ಮಾರ್ಗದರ್ಶಕರ ಪರಿಚಯ

  • ಮೆಲ್ವಿನ್ ಲೂಯಿಸ್ - ಉಡುಪಿ
  • ರವಿ ಕುಮಾರ್- ಮಂಡ್ಯ
  • ಪುಷ್ಪ- ಬೆಂಗಳೂರು
  • ಅಮರ್ ಡಿಸೋಜಾ - ಚಿಕ್ಕಮಗಳೂರು
  • ಸುಚಿತ್ರ ಸುರೇಂದ್ರ- ಮಡಿಕೇರಿ