ಅಂಕಣ

ಸಲೂನ್-ಸ್ಪಾ ಬಿಸಿನೆಸ್​ನಲ್ಲಿ ಸಕ್ಸಸ್ ಹೇಗೆ?

‘ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು, ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು’. ಹೌದು, ಹೆಣ್ಣುಮಕ್ಕಳಿಗೆ ಸೌಂದರ್ಯ ಪ್ರಜ್ಞೆ ಜಾಸ್ತಿ. ಆದರೆ, ಈಗ ಕಾಲ ಬದಲಾಗಿದೆ. ಹುಡುಗಿಯರು ಮಾತ್ರವಲ್ಲದೆ ಹುಡುಗರೂ ತಮ್ಮ ಸೌಂದರ್ಯಕ್ಕೆ ತುಂಬಾನೇ ಒತ್ತು ಕೊಡ್ತಿದ್ದಾರೆ. ಮೊದಲೆಲ್ಲ, ಹೇರ್ ಕಟ್ ಮಾಡಿಸ್ಕೊಳ್ಳೋಕೆ ಮಾತ್ರ ಸಲೂನ್​ಗೆ ಹೋಗುತ್ತಿದಂತಹ ಹುಡುಗರು ಈಗ ಸ್ಟೈಲಿಶ್ ಹೇರ್ ಸ್ಟೈಲ್, ಬಿಯರ್ಡ್ ಸ್ಟೈಲ್, ಹೇರ್ ಕಲರಿಂಗ್, ಫೇಷಿಯಲ್, ಪೆಡಿಕ್ಯೂರ್, ಹೆಡ್ ಮಸಾಜ್, ಬಾಡಿ ಮಸಾಜ್... ಹೀಗೆ ಹತ್ತು ಹಲವಾರು ಸೇವೆಗಳನ್ನು ಪಡೆಯೋಕೆ ಮುಂದಾಗುತ್ತಿದ್ದಾರೆ. ಬಾಹ್ಯ ಸೌಂದರ್ಯ ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಅದಕ್ಕಾಗಿಯೇ ಇಂದಿನ ಕಾಲೇಜು ಹುಡುಗರಿಂದ ಹಿಡಿದು, ಅಂಕಲ್-ಆಂಟಿ ಅಜ್ಜ- ಅಜ್ಜಿಯರು ಬ್ಯೂಟಿ ಪಾರ್ಲರ್ ಅಥವಾ ಸ್ಪಾ ಮತ್ತು ಸಲೂನ್ ಮೊರೆ ಹೋಗ್ತಿದ್ದಾರೆ. ಹೀಗಾಗಿಯೇ, ಸ್ಪಾ ಮತ್ತು ಸಲೂನ್​ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಲೂನ್ ಮತ್ತು ಸ್ಪಾ ಬಿಸಿನೆಸ್ ಆರಂಭಿಸಿ ನೂರಾರು ಮಂದಿ ನೆಮದ್ದಿಯ ಜೀವನ ಕಂಡುಕೊಳ್ಳುವ ಜತೆಗೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ತಿಂಗಳಿಗೆ ಖರ್ಚು- ವೆಚ್ಚ ಕಳೆದು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಹೌದಾ! ನಾನೂ ಈ ಬಿಸಿನೆಸ್​ಗೆ ಕೈ ಹಾಕಿದ್ರೆ ಹೇಗೆ ಅಂತ ನಿಮಗೊಂದು ಆಲೋಚನೆ ಬಂದಿದ್ರೆ ಅದಕ್ಕೆ ಉತ್ತರ ಈ ಅಂಕಣದಲ್ಲಿದೆ.

ಸಲೂನ್, ಸ್ಪಾ ಬಿಸಿನೆಸ್​ಗಿದೆ ದೊಡ್ಡ ಮಾರ್ಕೆಟ್: ಭಾರತದಲ್ಲಿ ಸಲೂನ್ ಮತ್ತು ಸ್ಪಾ ಬಿಸಿನೆಸ್ ಅಸಾಧಾರಣ ಬೆಳವಣಿಗೆ ಸಾಧಿಸುತ್ತಿದೆ. ಅಂದಾಜಿನ ಪ್ರಕಾರ ದೇಶದ ಬ್ಯೂಟಿ ಸಲೂನ್ ಉದ್ದಿಮೆಯ ಮಾರುಕಟ್ಟೆ ಮೌಲ್ಯ ಸುಮಾರು 10,000 ಕೋಟಿ ರೂ. ಕಳೆದ ಎರಡು ವರ್ಷಗಳಿಂದ ಈ ವಲಯಕ್ಕೆ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಭಾರತೀಯರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿರುವ ಕಾರಣ ಹಿಂದೆಂದಿಗಿಂತಲೂ ಅವರು ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಸಲೂನ್ ಮತ್ತು ಸ್ಪಾ ಬಿಸಿನೆಸ್ ಸದ್ಯ ಸುಮಾರು 70 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ದೇಶದಲ್ಲಿರುವ ಒಟ್ಟು ಸುಮಾರು 65 ಲಕ್ಷ ಬ್ಯೂಟಿ ಸಲೂನ್​ಗಳ ಪೈಕಿ ಶೇ.30 ಮಾತ್ರ ನೋಂದಣಿಯಾಗಿ ಸಂಘಟಿತ ವಲಯದಲ್ಲಿವೆ. ಸಂಘಟಿತ ವಲಯದಲ್ಲಿರುವ ಸ್ಪಾ ಮತ್ತು ಸಲೂನ್ ಗಳು ವಾರ್ಷಿಕ ಶೇ.20 ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಸದ್ಯ ಬ್ರಾಂಡೆಡ್ ಸಲೂನ್ ಮತ್ತು ಸ್ಪಾಗಳು ವಾರ್ಷಿಕ ಸುಮಾರು 2,500 ಕೋಟಿ ರೂ. ವಹಿವಾಟು ನಡೆಸುತ್ತಿವೆ. 2048ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.70 ಜನರು ಮಧ್ಯಮ ವರ್ಗದವರಾಗಲಿದ್ದಾರೆ ಎಂಬ ಅಂದಾಜಿದೆ. 2027ರ ವೇಳೆಗೆ ಭಾರತದ ತಲಾ ಆದಾಯ 304,719 ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. 2050ರ ವೇಳೆಗೆ ನಗರಗಳಲ್ಲಿ 416 ಮಿಲಿಯನ್ ಜನರು ವಾಸವಾಗಲಿದ್ದಾರೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಇದಲ್ಲದೆ ನಮ್ಮ ದೇಶದಲ್ಲಿ ಯುವಸಮೂಹ ಹೆಚ್ಚಿಗೆ ಇರುವುದು ಸಹ ಸಲೂನ್ ಮತ್ತು ಸ್ಪಾ ಬಿಸಿನೆಸ್ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಅಗ್ರ ಪಂಕ್ತಿಯಲ್ಲಿ ಭಾರತದ ಸಲೂನ್ ಸ್ಪಾ ಬಿಸಿನೆಸ್: ಕಡಿಮೆ ಖರ್ಚಿನಲ್ಲಿ ಉತ್ತಮ ಸಲೂನ್ ಮತ್ತು ಸ್ಪಾ ಸೇವೆ ನೀಡುವ ವಿಚಾರದಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಹೇಳ್ತೀನಿ ಕೇಳಿ, ಭಾರತದಲ್ಲಿನ ಸಲೂನ್ ಮತ್ತು ಸ್ಪಾ ಬಿಸಿನೆಸ್​ನ ಒಟ್ಟು ವಹಿವಾಟಿನಲ್ಲಿ ಶೇ.85 ಪಾಲು ಮಹಿಳೆಯರ ಬ್ಯೂಟಿ ಮತ್ತು ಸ್ಪಾಗಳದ್ದು. ಇನ್ನುಳಿದ ಶೇ.85 ಪಾಲು ಮಾತ್ರ ಪುರುಷರದ್ದು. ಇನ್ನು ಸ್ಪಾಗಳ ವಿಚಾರಕ್ಕೆ ಬಂದರೆ ಭಾರತ ಜಗತ್ತಿನ ಪ್ರಮುಖ 20 ಸ್ಪಾ ಮಾರ್ಕೆಟ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ ಈಗ 20 ಸಾವಿರಕ್ಕೂ ಹೆಚ್ಚು ಸ್ಪಾಗಳಿದ್ದು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುತ್ತಿವೆ.

ಸ್ಪಾ ಮತ್ತು ಸಲೂನ್ ಬಿಸಿನೆಸ್ ಆರಂಭಿಸೋಕೆ ಎಷ್ಟು ಹಣ ಬೇಕು?: ಒಬ್ಬ ವ್ಯಕ್ತಿಯ ಸೌಂದರ್ಯವನ್ನು ವೃದ್ಧಿಸುವ ಕೌಶಲ ನಿಮ್ಮಲ್ಲಿದೆ ಅನ್ನೋದಾದ್ರೆ ಸಣ್ಣ ಹೂಡಿಕೆಯಿಂದಲೇ ಅಂದರೆ 20 ರೂ.ನಿಂದ 5 ಸಾವಿರ ರೂ. ವೆಚ್ಚದಲ್ಲಿ ಈ ಬಿಸಿನೆಸ್ ಆರಂಭಿಸಬಹುದು. ದೊಡ್ಡ ಮಟ್ಟದಲ್ಲಿ ಬಿಸಿನೆಸ್ ನಡೆಸೋದಕ್ಕೆ 5 ಲಕ್ಷದಿಂದ 10 ಲಕ್ಷ ರೂ. ಹೂಡಿಕೆ ಬೇಕಾಗಬಹುದು. ಇದರಿಂದ ತಿಳಿಯೋದೇನಂದ್ರೆ, ಆರ್ಥಿಕ ಶಕ್ತಿಗೆ ಅನುಸಾರವಾಗಿ ಸ್ಪಾ ಮತ್ತು ಸಲೂನ್ ಬಿಸಿನೆಸ್ ಆರಂಭಿಸಬಹುದು. ಇದಕ್ಕಾಗಿ ಮುದ್ರಾ ಲೋನ್ ಅಡಿ ಸಾಲ ಲಭ್ಯವಿದೆ. ಜತೆಗೆ ಸರ್ಕಾರದ ವತಿಯಿಂದ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಅಡಿ ನಿಮಗೆ ಬೇಕಾಗುವ ತರಬೇತಿ ಕೂಡ ಸಿಗುತ್ತೆ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಸಲೂನ್- ಸ್ಪಾ ಕೋರ್ಸ್: ಗ್ರಾಮೀಣ ಪ್ರದೇಶದಲ್ಲಿ ಲಾಭದಾಯಕ ಸ್ಪಾ ಮತ್ತು ಸಲೂನ್ ಆರಂಭಿಸೋದು ಹೇಗೆ? ನಗರ ಪ್ರದೇಶದಲ್ಲಿ ಈ ವ್ಯವಹಾರ ಆರಂಭಿಸೋಕೆ ಯಾವೆಲ್ಲಾ ಲೈಸೆನ್ಸ್ ಬೇಕಾಗುತ್ತೆ? ಈ ಬಿಸಿನೆಸ್​ನ ಸಕ್ಸಸ್ ಸೀಕ್ರೆಟ್​ಗಳೇನು ಸವಾಲುಗಳೇನು ಮತ್ತು ಅದನ್ನೆಲ್ಲ ಎದುರಿಸುವ ಬಗೆ ಹೇಗೆ? ಇವೆಲ್ಲವನ್ನೂ ನೀವು ಓದಿ ತಿಳಿಯೋದಕ್ಕಿಂತಲೂ ನೋಡಿ, ಕೇಳಿ ತಿಳ್ಕೊಂಡ್ರೆ ಉತ್ತಮ ಅಲ್ವಾ? ಆದ್ರೆ, ಯಾರು ನಮಗೆ ಹೇಳಿಕೊಡ್ತಾರೆ? ಚಿಂತೆ ಬಿಡಿ, ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ. ಸ್ಪಾ- ಸಲೂನ್ ಬಿಸಿನೆಸ್​ನಲ್ಲಿ ಸಕ್ಸಸ್ ಆಗೋದು ಹೇಗೆ? ಎಂಬ ಕೋರ್ಸ್​ನ ಅನ್ನು ಕೂಡಲೇ ನೋಡೋಕೆ ಆರಂಭಿಸಿ. ಕೋರ್ಸ್​ನಲ್ಲಿ ಸಲೂನ್ ಸ್ಪಾ ಬಿಸಿನೆಸ್ ಆರಂಭಿಸಿ ಲಕ್ಷಾಂತರ ರೂ. ಗಳಿಸುತ್ತಿರುವ ಯಶಸ್ವಿ ಉದ್ಯಮಿಗಳು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ. ಇನ್ನೇಕೆ ತಡ ಆಪ್ ಡೌನ್​ಲೋಡ್ ಮಾಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಸ್ಪಾ ಮತ್ತು ಸಲೂಸ್ ಬಿಸಿನೆಸ್ ಯಾಕೆ?
  • ಅಗತ್ಯ ಬಂಡವಾಳ
  • ಸರಿಯಾದ ಸ್ಥಳದ ಆಯ್ಕೆ ಹೇಗೆ?
  • ನೋಂದಣಿ ಮತ್ತು ಮಾಲೀಕತ್ವ
  • ಸ್ಪಾ ಮತ್ತು ಸಲೂನ್- ಮೂಲ ಪ್ರಶ್ನೆಗಳು
  • ಕೆಲಸಗಾರರು ಮತ್ತು ನೇಮಕಾತಿ
  • ಇಂಟೀರಿಯರ್ ಡಿಸೈನ್ ಮತ್ತು ಸಲಕರಣೆಗಳು
  • ವಿಶೇಷ ಸೇವೆ ಮತ್ತು ಗ್ರಾಹಕ ಸೇವೆ
  • ಮಾರ್ಕೆಟಿಂಗ್
  • ವಿಸ್ತರಣೆ ಮತ್ತು ಫ್ರಾಂಚೈಸ್
  • ಹಣಕಾಸು ನಿರ್ವಹಣೆ ಮತ್ತು ಲಾಭ ಗಳಿಕೆ
  • ಬಿಸಿನೆಸ್ ಸವಾಲುಗಳು
  • ಭವಿಷ್ಯದ ನೋಟ

ಮಾರ್ಗದರ್ಶಕರ ಪರಿಚಯ

  • ಶ್ಯಾಮ ಸುಂದರ್ ರಾವ್- ಸಿಲೋಟ್ ಸ್ಪಾ ಆಂಡ್ ಸಲೂನ್ 
  • ಸುಮಾ- ಎಸ್ ಸ್ಪಾ ಆಂಡ್ ಸಲೂನ್
  • ಉಮಾ ಜಯಕುಮಾರ್- ಉಮಾ ಬ್ರೖೆಡಲ್ ಸರ್ವಿಸಸ್
  • ನಾಮದೇವ್ ನಾಗರಾಜ್- ಸ್ಪಿನ್ ಸ್ಪಾ ಆಂಡ್ ಸಲೂನ್
  • ಚಂದ್ರಶೇಖರ್ ಬಿ. - ಎನ್ಝೋ ಸ್ಪಾ ಆಂಡ್ ಸಲೂನ್
  • ಗಂಗಾಧರ್ - ಗಂಧರ್ವ ಲೋಕ ಸ್ಪಾ ಆಂಡ್ ಸಲೂನ್